Latest Updates
-
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್
ಚಳಿಗಾಲದಲ್ಲಿ ಗಟ್ಟಿ ಮೊಸರು ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ
ನೀವು ಹಲವು ಅಡುಗೆಗಳಿಗೆ ಮೊಸರು ಬಳಸುತ್ತೀರಿ, ಅದ್ರಲ್ಲೂ ಗಟ್ಟಿ ಮೊಸರು ಬಳಸುವುದು ಕಾಮನ್, ಊಟದೊಂದಿಗೆ ಗಟ್ಟಿ ಮೊಸರು ಇದ್ದರೆ ಅದರೊಂದಿಗೆ ಊಟ ರುಚಿಯಾಗಿರಲಿದೆ. ಇನ್ನು ಊಟಕ್ಕೆ ಮಾತ್ರವಲ್ಲ ಗಟ್ಟಿ ಮೊಸರು ಬಳಸಿ ಹಲವು ರೀತಿ ಖಾದ್ಯ ತಯಾರಿಸಬಹುದು. ಆದ್ರೆ ನೀವು ಅಂಗಡಿಯಿಂದ ಖರೀದಿಸಿ ತರುವ ಮೊಸರು ಗಟ್ಟಿಯಾಗಿರದೆ ತೆಳುವಾಗಿರಬಹುದು. ಹಾಗೆ ಮನೆಯಲ್ಲಿ ಹಾಲು ಬಳಸಿ ನೀವಾಗಿಯೇ ಮೊಸರು ಮಾಡಿಕೊಂಡಿದ್ದರು ಕೂಡ ಅದು ಹೆಚ್ಚು ದಪ್ಪವಾಗಿ ಬರುವುದಿಲ್ಲ.
ಅದ್ರಲ್ಲೂ ಚಳಿಗಾಲದ ಸಮಯದಲ್ಲಿ ನೀವು ಹೇಗೆ ಗಟ್ಟಿ ಮೊಸರನ್ನು ಮನೆಯಲ್ಲೇ ಮಾಡಿಕೊಳ್ಳಬಹುದು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ. ಗಟ್ಟಿ ಮೊಸರು ಮಾಡಿಕೊಂಡು ಜೊತೆಗೆ ಪಲ್ಯ ಇಲ್ಲವೆ ಉಪ್ಪನಕಾಯಿಯ ಬಳಸಿ ಊಟ ಮಾಡುವುದು ದೇಹಕ್ಕೂ ಉತ್ತಮ. ಹಾಗೆ ಮೊಸರಿನಲ್ಲಿನ ಉತ್ತಮ ಅಂಶಗಳು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲಿದೆ.

ಮೊಸರು ಜೀರ್ಣಕ್ರಿಯೆಗೆ ಅಗತ್ಯವಾಗಿ ಬೇಕಾಗುವ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಇದು ನೆರವಾಗಲಿದೆ. ಹಾಗಾದ್ರೆ ಚಳಿಗಾಲದಲ್ಲಿ ನಾವು ಮನೆಯಲ್ಲಿಯೇ ಗಟ್ಟಿಯಾದ ದಪ್ಪ ಮೊಸರು ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ದಪ್ಪ ಮೊಸರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಗಟ್ಟಿ ಮೊಸರು ಮಾಡುವ ವಿಧಾನವೇನು? ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ದಪ್ಪ ಮೊಸರು ಮಾಡಿಕೊಳ್ಳಲು ಬೇಕಾಗುವ ಪದಾರ್ಥಗಳು
- ಹಾಲು
- ಮಜ್ಜಿಗೆ ಅಥವಾ ಮೊಸರು
- ನೀರು
ದಪ್ಪ ಮೊಸರು ಮಾಡಿಕೊಳ್ಳುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಅರ್ಧ ಗ್ಲಾಸ್ ನೀರು ಹಾಕಿಕೊಂಡು ಅದಕ್ಕೆ ಅರ್ಧ ಲೀಟರ್ ನೀರು ಹಾಕಿಕೊಳ್ಳಿ. ಅಂಗಡಿ ಹಾಲು ಅಥವಾ ಮನೆ ಹಾಲು ಇದ್ದರೂ ನಡೆಯುತ್ತೆ. ಹಾಲು ಚೆನ್ನಾಗಿ ಕುದಿಬರಲು ಬಿಡಿ. ಕುದಿಬರಲು ಆರಂಭವಾದಾಗ ಉರಿ ಸಣ್ಣಗೆ ಇಟ್ಟು ಮತ್ತೆ 10 ನಿಮಿಷ ಕುದಿಬರಲು ಬಿಡಿ.
10 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣದಾದ ಹಾಲನ್ನು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಒಂದು ಚಮಚದಷ್ಟು ಮಜ್ಜಿಗೆ ಅಥವಾ ಮೊಸರು ಹಾಕಿಕೊಳ್ಳಿ. ನಂತರ ಒಂದು ತಟ್ಟೆ ಮುಚ್ಚಿ ಅದರ ಮೇಲೆ ಗಾಳಿ ಆಡದಂತೆ ಮಾಡಲು ಒಂದು ಕಾಟನ್ ಬಟ್ಟೆ ಹಾಕಿ ಮುಚ್ಚಿಡಿ. ಒಂದು ಸ್ಥಳದಲ್ಲಿ ಇಟ್ಟು 7ರಿಂದ 8 ಗಂಟೆ ಇಡಬೇಕು.
ರಾತ್ರಿ ಕಳೆದ ಬಳಿಕ ಮಾರನೆ ದಿನ ಬೆಳಗ್ಗೆ ಇದನ್ನು ತೆಗೆದು ಫ್ರಿಡ್ಜ್ನಲ್ಲಿ ಇಡಬಹುದು. ಅಥವಾ ತಣ್ಣೀರಿನಲ್ಲಿಟ್ಟರೆ ಅದು ಗಟ್ಟಿಯಾಗುತ್ತದೆ. ಇಷ್ಟಾದರೆ ಸಾಕು ನಿಮ್ಮ ಮುಂದೆ ಗಟ್ಟಿ ಮೊಸರು ಸಿದ್ದವಾಗುತ್ತೆ. ಇದನ್ನು ಊಟದೊಂದಿಗೆ ಸವಿಯಲು ನೀವು ಬಳಸಿಕೊಳ್ಳಬಹುದು. ಹಾಗೆ ಇದರಿಂದ ನಿಮ್ಮ ಮೊಸರು ತೆಳುವಾಗಿರದೆ ದಪ್ಪವಾಗಿ ಬರಲಿದೆ. ಊಟಕ್ಕೆ ಇದು ಬಹಳ ರುಚಿ ನೀಡಲಿದೆ. ನೀವು ಸಹ ಮನೆಯಲ್ಲೇ ಅದ್ರಲ್ಲೂ ಈ ಚಳಿಗಾಲದಲ್ಲಿ ಹೀಗೆ ಗಟ್ಟಿ ಮೊಸರನ್ನು ಮನೆಯಲ್ಲಿ ಮಾಡಿ ನೊಡಿ.



Click it and Unblock the Notifications
