Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಊಟದೊಂದಿಗೆ ಬೀನ್ಸ್ ಫ್ರೈ ಬೊಂಬಾಟ್ ಟೇಸ್ಟ್! ತಿಂಡಿ ಜೊತೆಗೂ ಸೂಪರ್!
ನೀವು ಊಟದೊಂದಿಗೆ ಸವಿಯಲು ಹಲವು ರುಚಿಯ ಹಲವು ಬಗೆಯ ಖಾದ್ಯ ಮಾಡಿರುತ್ತೀರಿ. ಅದ್ರಲ್ಲೂ ತರಕಾರಿ ಪಲ್ಯ ಮಾಡುವುದು ಸಾಮಾನ್ಯ. ಎಲ್ಲರ ಮನೆಯಲ್ಲು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ಸಾಂಬಾರ್ ಸಾರಿನೊಂದಿಗೆ ಪಲ್ಯ ಇಲ್ಲವೆ ಯಾವುದಾದರು ಸೈಡ್ಸ್ ಮಾಡಿಯೇ ಮಾಡುತ್ತಾರೆ. ಹಾಗೆ ಹೋಟೆಲ್‌ಗೆಳಿಗೆ ತೆರಳಿದ್ದಾಗಲು ವಿವಿಧ ಬಗೆ ಪಲ್ಯಗಳು ನೀಡುವುದು ನೋಡಬಹುದು.
ಹೀಗೆ ನೀಡುವಂತಹ ಪಲ್ಯಗಳ ಪೈಕಿ ಬೀನ್ಸ್ ಪಲ್ಯ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಹೋಟೆಲ್‌ನಲ್ಲಿ ನೀಡಿರುವ ರುಚಿ ರುಚಿಯಾದ ಈ ಪಲ್ಯವನ್ನು ಮನೆಯಲ್ಲೂ ನೀವು ಮಾಡಿ ಸವಿಯಲು ಮುಂದಾಗೋದು ನೋಡಬಹುದು. ಹಾಗೆ ತರಕಾರಿಗಳಲ್ಲಿ ಮಾಡುವ ಎಲ್ಲಾ ಪಲ್ಯಗಳು ರುಚಿಯಾಗಿರಲಿವೆ. ಹಾಗೆ ಊಟಕ್ಕೆ ಮತ್ತಷ್ಟು ರುಚಿ ನೀಡಲಿದೆ.

ಹೀಗಾಗಿ ನಾವಿಂದು ಬೀನ್ಸ್‌ನಿಂದ ಮಾಡುವಂತಹ ವಿಶೇಷ ರುಚಿ ನೀಡುವ ಈ ಬೀನ್ಸ್ ಫ್ರೈ ಕುರಿತು ತಿಳಿಯೋಣ. ಪಲ್ಯಕ್ಕಿಂತ ಸ್ವಲ್ಪ ವಿಭಿನ್ನವಾಗಿ ಈ ಬೀನ್ಸ್ ಫ್ರೈ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳಿ. ಈ ರೀತಿ ಫ್ರೈ ಮಾಡಿದ್ರೆ ಮನೆ ಮಂದಿ ಎಲ್ಲರೂ ಸವಿಯಲು ಇಷ್ಟಪಡುತ್ತಾರೆ. ಹಾಗಾದ್ರೆ ಊಟಕ್ಕೆ ಸವಿಯಲು ಬೀನ್ಸ್ ಫ್ರೈ ಮಾಡೋದು ಹೇಗೆ ಅನ್ನೋದನ್ನು ನೋಡೋಣ.
ಬೀನ್ಸ್ ಫ್ರೈ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀನ್ಸ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು?
- ಬೀನ್ಸ್
- ಕಡಲೆ ಬೇಳೆ
- ಕಡಲೆ ಬೀಜ
- ಒಣ ಮೆಣಸು
- ಹಸಿ ತೆಂಗಿನಕಾಯಿ
- ಕೊತ್ತಂಬರಿ ಕಾಳು
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಇಂಗು
- ಬೆಳ್ಳುಳ್ಳಿ
- ಈರುಳ್ಳಿ
- ಕರಿಬೇವಿನ ಸೊಪ್ಪು
- ಹಸಿ ಮೆಣಸು
- ಅರಶಿಣ ಪುಡಿ
- ಉಪ್ಪು
- ಎಣ್ಣೆ
ಬೀನ್ಸ್ ಫ್ರೈ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಕಡಲೆ ಬೀಜ ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ. ನಂತರ 2 ಸ್ಪೂನ್ ಕೊತ್ತಂಬರಿ ಕಾಳು, ಒಣ ಮೆಣಸು, ಹಸಿ ತೆಂಗಿನಕಾಯಿ ಕತ್ತರಿಸಿ ಇದಕ್ಕೆ ಹಾಕಿ ನಂತರ 1 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಒಲೆ ಇಂದ ಇಳಿಸಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಹಾಕಿ ಬಳಿಕ ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆ, ಸಾಸಿವೆ ಹಾಕಿಕೊಂಡು ಒಗ್ಗರಣೆ ಮಾಡಬೇಕು. ಇದಕ್ಕೆ ಇಂಗು, ಬೆಳ್ಳುಳ್ಳಿ, 2 ಈರುಳ್ಳಿ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಕರಿಬೇವಿನ ಸೊಪ್ಪು, ಹಸಿ ಮೆಣಸು ಸಹ ಹಾಕಿ ಫ್ರೈ ಮಾಡಿ. ನಂತರ ಅರಶಿಣ ಪುಡಿ, ಉಪ್ಪು, ಹಾಗೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಬೀನ್ಸ್ ಅನ್ನು ಇದಕ್ಕೆ ಹಾಕಿಕೊಳ್ಳಿ.
ಈಗ ಚೆನ್ನಾಗಿ ಬೀನ್ಸ್ ಬೇಯುವವರೆಗೂ ಫ್ರೈ ಮಾಡಿ. 5ರಿಂದ 6 ನಿಮಿಷ ಬೇಯಿಸಿಕೊಳ್ಳಿ. ಬೇಯಿಸುವಾಗ 3ರಿಂದ 4 ಸ್ಪೂನ್ ನೀರು ಸಹ ಹಾಕಿ. ಇದು ಬೇಗ ಬೇಯಲು ಮುಚ್ಚಳ ಮುಚ್ಚಿ ಬಿಡಿ. ಆಗಾಗ ತಿರುಗಿಸುತ್ತಾ ಇರಿ. ಹೀಗೆ ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಮೊದಲು ಫ್ರೈ ಮಾಡಿ ಇಟ್ಟಿದ್ದ ಮಸಾಲೆಗಳನ್ನು ಮಿಕ್ಸಿ ಜಾರ್‌ನಲ್ಲಿ ತರಿ ತರಿಯಾಗಿ ನೀರು ಹಾಕದೆ ರುಬ್ಬಿಕೊಂಡು ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಹಾಕಿ ಮತ್ತೆ 5 ನಿಮಿಷ ಪ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಫ್ರೈ ಮಾಡಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಬೀನ್ಸ್ ಫ್ರೈ ರೆಡಿಯಾಗುತ್ತೆ.



Click it and Unblock the Notifications
