Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೇಷನ್ ಅಕ್ಕಿಯ ಮಲ್ಲಿಗೆಯಂತ ಮೃದುವಾದ ಆಪಂ ಮಾಡಿ: ಸುಲಭದ ತಿಂಡಿಗೆ 2 ಪದಾರ್ಥ ಸಾಕು!
ಬೆಳಗ್ಗೆ ತಿಂಡಿಯ ಸಮಯಕ್ಕೆ ವಿಶೇಷ ತಿಂಡಿಯನ್ನು ಮಾಡಿ ಸವಿಯುವ ನಿಮ್ಮ ಬಯಕೆಯನ್ನು ಆಗಾಗ ಈಡೇರಿಸಿಕೊಳ್ಳುತ್ತೀರಿ. ಅದ್ರಲ್ಲೂ ಸುಲಭದ ತಿಂಡಿ ರೆಸಿಪಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ದೋಸೆ, ಇಡ್ಲಿ, ಪರೋಟ, ಪಡ್ಡು ಸೇರಿ ಹಲವು ವಿಶೇಷ ಖಾದ್ಯಗಳ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಮಾಡುವಂತಹ ರುಚಿ ರುಚಿಯಾದ ತಿನಿಸುಗಳು ಎಲ್ಲರಿಗೂ ಇಷ್ಟವಾಗೋದು ನೋಡಬಹುದು.
ಇಲ್ಲಿನ ನೀರ್ ದೋಸೆ, ಪುಂಡಿ, ಆಪಂ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತವೆ. ಅದ್ರಲ್ಲೂ ಕೇರಳ ಮೂಲದ ಈ ಆಪಂ ಅದ್ರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಈ ತಿಂಡಿ ಮಾಡುವುದು ನೋಡಬಹುದು. ಆಪಂ ದೋಸೆಯಂತೆ ಕಾಣುವ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿಯಾಗಿದೆ. ನೀವು ಕೂಡ ಈ ತಿಂಡಿಯನ್ನು ಮಾಡಿದ್ರೆ ಮತ್ತೆ ಮತ್ತೆ ಮಾಡಲು ಮನಸಾಗುತ್ತೆ.
ಆಪಂ ಮಾಡುವುದು ಬಹಳ ಸುಲಭ. ದೋಸೆಯಂತೆಯೇ ವಿಧಾನ ಬಳಸಿ ಮಾಡಬಹುದು. ಹಾಗೆ ಎಲ್ಲರು ಬಹಳ ಇಷ್ಟಪಟ್ಟು ಇದನ್ನು ಸವಿಯುತ್ತಾರೆ. ನಾವಿಂದು ಕೇರಳ ಶೈಲಿಯ ಆಪಂ ಅನ್ನು ಮನೆಯಲ್ಲಿ ಮಾಡುವ ಕುರಿತು ತಿಳಿಯೋಣ. ಅದ್ರಲ್ಲೂ ಮಲ್ಲಿಗೆಯಂತೆ ಮೃದುವಾದ ಆಪಂ ಮಾಡಿ ಸವಿಯುವ ಕುರಿತು ತಿಳಿಯೋಣ. ಬಹಳ ಮೃದುವಾದ ಹಾಗೆ ಎಲ್ಲರು ಇಷ್ಟಪಡುವಂತಹ ಆಪಂ ನಾವಿಂದು ಮಾಡೋಣ.
ಆಪಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಆಪಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ರೇಷನ್ ಅಕ್ಕಿ
- ಅವಲಕ್ಕಿ
- ತೆಂಗಿನಕಾಯಿ ತುರಿ
- ಉಪ್ಪು
ಆಪಂ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ಗೆ 2 ಕಪ್ ರೇಷನ್ ಅಕ್ಕಿಯನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಅವಲಕ್ಕಿ ಸೇರಿಸಿಕೊಂಡು 5 ರಿಂದ 6 ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಮುಳುಗುವಷ್ಟು ನೀರು ಹಾಕಿ 6 ಗಂಟೆ ನೆನೆಯಲು ಬಿಡಿ.
6 ಗಂಟೆಯ ಬಳಿಕ ಈಗ 1 ಕಪ್ ತೆಂಗಿನಕಾಯಿ ತುರಿಯನ್ನು ತೆಗೆದುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ಅವಲಕ್ಕಿ, ಅಕ್ಕಿ, ತೆಂಗಿನಕಾಯಿ ತುರಿಯನ್ನು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಒಂದೇ ಬಾರಿ ಆಗದೆ ಇದ್ದಾಗ ಹಲವು ಸುತ್ತು ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.
ಈ ಹಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ಬರಬೇಕು. ಈ ಹಿಟ್ಟನ್ನು ಮುಚ್ಚಿ ಒಂದು ರಾತ್ರಿ ಬಿಡಬೇಕು. ಈಗ ಬೆಳಗ್ಗೆ ಇದನ್ನು ಮತ್ತೆ ಮಿಕ್ಸ್ ಮಾಡಿಕೊಂಡು ಇದಕ್ಕೆ ಉಪ್ಪು ಸಹ ಸೇರಿಸಿಕೊಳ್ಳಿ. ಇದಕ್ಕೆ ಸೋಡಾ ಬಳಸುವ ಅಗತ್ಯವಿಲ್ಲ.
ಈಗ ಒಲೆ ಮೇಲೆ ದೋಸೆ ಕಾವಲಿಯ ಬದಲಾಗಿ ನಾನ್ ಸ್ಟಿಕ್ ಕಾವಲಿಯನ್ನು ಇಟ್ಟುಕೊಳ್ಳಬೇಕು. ಇದು ಚೆನ್ನಾಗಿ ಬಿಸಿಯಾಗಬೇಕು. ನಂತರ ಮಧ್ಯದಲ್ಲಿ ಹಿಟ್ಟು ಹಾಕಿ ಸುತ್ತಲು ಆಪಂ ಹರಡುವಂತೆ ಮಾಡಿಕೊಳ್ಳಬೇಕು. ನಂತರ ಮುಚ್ಚಳ ಮುಚ್ಚಿ 2ರಿಂದ 3 ನಿಮಿಷ ಬಿಡಬೇಕು. ಇದನ್ನು ಒಂದು ಕಡೆ ಮಾತ್ರ ಬೇಯಿಸಿಕೊಳ್ಳಬೇಕು.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಆಪಂ ಸಿದ್ದವಾಗುತ್ತೆ. ಇದರ ಜೊತೆಗೆ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗಲಿದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಒಂದು ದಿನ ಮಾಡಿ ಸವಿದರೆ ನೀವು ಪದೇ ಪದೇ ಮಾಡಿ ಸವಿಯೋದು ಖಚಿತ.



Click it and Unblock the Notifications

