Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಂಧ್ರ ಶೈಲಿಯ ದಾಲ್ ಪಪ್ಪು ಮಾಡಿ ನೋಡಿ..! ಅನ್ನಕ್ಕೆ ಸೂಪರ್ ಟೇಸ್ಟಿ..!
ಊಟದ ಬಗೆಯಲ್ಲಿ ಆಂಧ್ರ ಶೈಲಿಯ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆಂಧ್ರ ಶೈಲಿಯ ಹಲವು ಅಡುಗೆ ವಿಧಾನಗಳು ಎಲ್ಲ ಕಡೆಯಲ್ಲೂ ತುಂಬಾನೆ ಫೇಮಸ್, ಖಾರ, ಮಸಾಲೆ, ರುಚಿಗೆ ಆಂಧ್ರ ಶೈಲಿ ನಂಬರ್ ಒನ್. ಅದರಲ್ಲೂ ಆಂಧ್ರ ಶೈಲಿಯ ಊಟ ಎಲ್ಲರೂ ಇಷ್ಟಪಡುವ ಖಾದ್ಯ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಆದ್ರೆ ಆಂಧ್ರ ಶೈಲಿಯಲ್ಲಿ ಎಷ್ಟೊಂದು ವಿಧಗಳಿವೆ ಎಂಬುದು ನಿಮಗೆ ಗೊತ್ತಾ?
ಆಂಧ್ರದ ಹತ್ತು ಹಲವು ಶೈಲಿಯ ಖಾದ್ಯಗಳು ನಮ್ಮ ರಾಜ್ಯದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಅದರಲ್ಲಿ ಮುಖ್ಯವಾಗಿ ಆಂಧ್ರ ಚಟ್ನಿ, ಆಂಧ್ರ ಇಡ್ಲಿ, ಆಂಧ್ರ ಬಿರಿಯಾನಿ, ಆಂಧ್ರದ ಬೇಳೆ ಸಾರು, ಟೊಮೆಟೋ ಕರಿ, ಬೇಳೆ ಪಪ್ಪು ಕೂಡ ತುಂಬಾನೆ ಫೇಮಸ್ ಆಗಿದೆ. ಹಾಗಾದ್ರೆ ಈ ಆಂಧ್ರ ಶೈಲಿಯ ದಾಲ್ ಪಪ್ಪು ಮಾಡುವ ಕುರಿತಂತೆ ತಿಳಿದುಕೊಳ್ಳೋಣ.

ಆಂಧ್ರ ಶೈಲಿಯ ಈ ದಾಲ್ ಪಪ್ಪು ಮಾಡಿದರೆ ಊಟಕ್ಕೆ ಫಸ್ಟ್ ಕ್ಲಾಸ್. ಊಟದ ಜೊತೆಗ ಒಂದಿಷ್ಟು ಪಪ್ಪು ಇದ್ದರೆ ಊಟದ ರುಚಿ ದುಪ್ಪಟ್ಟಾಗೋದು ಪಕ್ಕ. ಹೀಗಾಗಿಯೇ ಆಂಧ್ರದಲ್ಲಿ ಪಪ್ಪು ಬಹಳ ಫೇಮಸ್ ಖಾದ್ಯ. ನಾವಿಂದು ಈ ದಾಲ್ ಪಪ್ಪು ಮಾಡುವ ಕುರಿತು ತಿಳಿದುಕೊಳ್ಳೋಣ. ಆಂಧ್ರ ಶೈಲಿಯಲ್ಲಿ ಈ ದಾಲ್ ಪಪ್ಪು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ದಾಲ್ ಪಪ್ಪು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಮಾಡಲು ಯಾವೆಲ್ಲಾ ವಸ್ತುಗಳು ಬೇಕು.? ಯಾವ ವಿಧಾನದಲ್ಲಿ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಆಂಧ್ರ ಶೈಲಿಯ ದಾಲ್ ಪಪ್ಪು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೇಳೆ
- ಈರುಳ್ಳಿ
- ಟೊಮೆಟೋ
- ಬೆಳ್ಳುಳ್ಳಿ
- ಒಣಮೆಣಸು
- ಕೊತ್ತಂಬರಿ ಕಾಳು
- ಜೀರಿಗೆ
- ಅರಶಿಣ
- ಸಾಸಿವೆ
- ಕರಿವೇವು
- ಕೊತ್ತಂಬರಿ
- ಉಪ್ಪು
- ಎಣ್ಣೆ
- ಕಡಲೆ ಬೇಳೆ
- ಉದ್ದಿನ ಬೇಳೆ
ಆಂಧ್ರ ಶೈಲಿಯ ದಾಲ್ ಪಪ್ಪು ಮಾಡುವ ವಿಧಾನವೇನು?
ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಚೆನ್ನಾಗಿ ತೊಳೆದುಕೊಂಡಿರುವ ಬೇಳೆಯನ್ನು ಹಾಕಿಕೊಂಡು ಬೇಳೆ ಮುಳುಗುವಷ್ಟು ನೀರನ್ನು ಹಾಕಿಕೊಳ್ಳಿ. ಅನಂತರ ಇದಕ್ಕೆ ಬೆಳ್ಳುಳ್ಳಿ ಎಸಳು, ಒಣ ಮೆಣಸು, ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಿ, ಹಾಗೆ ಟೊಮೆಟೋ, ಕೊತ್ತಂಬರಿ ಕಾಳು, ಜೀರಿಗೆ, ಅರಶಿಣ, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ.
ಮೂರು ಸೀಟಿ ಹೊಡೆದ ಬಳಿಕ ಕುಕ್ಕರ್ ಇಳಿಸಿಕೊಂಡು ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಸ್ಮ್ಯಾಶ್ ಮಾಡಿಕೊಳ್ಳಿ, ತದನಂತರ ಮತ್ತೆ ಗ್ಯಾಸ್ ಮೇಲೆ ಇಟ್ಟು ಮತ್ತೆ ಬೇಯಿಸಿಕೊಳ್ಳಿ. ಉಪ್ಪು ಹಾಕಿಕೊಂಡು 5 ನಿಮಿಷ ಬೇಯಿಸಿಕೊಳ್ಳಿ. ಈಗ ಒಗ್ಗರಣೆ ಮಾಡಿಕೊಳ್ಳಿ. ಇನ್ನೊಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಈರುಳ್ಳಿ, ಒಣ ಮೆಣಸು ಹಾಕಿ ಫ್ರೈ ಮಾಡಿ ಇದನ್ನು ಒಲೆ ಮೇಲೆ ಇಟ್ಟಿರುವ ಪಪ್ಪುವಿನ ಮೇಲೆ ಹಾಕಿಕೊಳ್ಳಿ. ಹಾಗೆ ತಿರುಗಿಸಿಕೊಳ್ಳಿ.
ಅನಂತರ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಬಿಸಿ ಮಾಡಿಕೊಂಡರೆ ನಿಮ್ಮ ಮುಂದೆ ಆಂಧ್ರ ಶೈಲಿಯ ದಾಲ್ ಪಪ್ಪು ರೆಡಿಯಾಗುತ್ತದೆ. ಅನ್ನದ ಜೊತೆಗೆ ಈ ಪಪ್ಪು ಸವಿಯಲು ಬಹಳ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಈ ಪಪ್ಪು ಮಾಡಿ ನೋಡಿ.



Click it and Unblock the Notifications