Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಾಯಲ್ಲಿ ನೀರು ತರಿಸುವ ಬೆಟ್ಟದ ನಲ್ಲಿಕಾಯಿ ರಸಂ ಮಾಡಿ..! ಇಲ್ಲಿದೆ ವಿಧಾನ!
ನೀವು ಊಟಕ್ಕೆ ರಸಂ ಸವಿಯುವ ಅಭ್ಯಾಸ ಇಟ್ಟುಕೊಂಡಿರುವಬಹುದು ಅದರಲ್ಲೂ ಈ ರಸಂ ಎಲ್ಲರ ಇಷ್ಟದ ಖಾದ್ಯದಲ್ಲಿ ಒಂದು. ಮಸಾಲೆ ಭರಿತ ಘಮ ಘಮ ಎನ್ನುವ ರಸ ಊಟದ ಜೊತೆಗೆ ಇದ್ದರೆ ಆ ದಿನದ ಊಟ ಅದ್ಭುತವಾಗಿರುತ್ತೆ. ಹಾಗೆ ರಸಂ ಹಲವು ಬಗೆಯಲ್ಲಿ ಮಾಡುವುದನ್ನು ಕೂಡ ನೋಡಬಹುದು. ಹಾಗೆ ಒಂದೊಂದು ಬಗೆಯ ಒಂದೊಂದು ರುಚಿಯಲ್ಲಿ ಸವಿಯಯುವುದು ಸಹ ನೋಡಬಹುದು.
ಹೆಚ್ಛಾಗಿ ನಾವು ರಸಂ ಅನ್ನು ಟೊಮಟೋ ಬಳಸಿ ಬಹಳ ಸುಲಭವಾಗಿ ಮಾಡಿ ಸಾವಿಯುವುದು ಹೆಚ್ಚು. ಆದ್ರೆ ನಾವಿಂದು ನಲ್ಲಿಕಾಯಿಯ ಬಳಸಿಕೊಂಡು ಅದ್ಭುತ ರುಚಿಯ ರಸಂ ಮಾಡುವ ಕುರಿತು ತಿಳಿಯೋಣ. ಬೆಟ್ಟದ ನಲ್ಲಿಕಾಯಿಯ ರುಚಿಯಲ್ಲಿ ಈ ರಸಂ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಆರೋಗ್ಯದ ದೃಷ್ಟಿಯಲ್ಲಿ ಈ ಬೆಟ್ಟದ ನಲ್ಲಿಕಾಯಿ ಎದಷ್ಟು ಉತ್ತಮ ಎಂಬುದು ಕೂಡ ನೀವು ತಿಳಿದಿರಬಹುದು.

ಹಾಗಾದ್ರೆ ಈ ಬೆಟ್ಟದ ನಲ್ಲಿಕಾಯಿಯಲ್ಲಿ ಅದ್ಭುತ ರುಚಿಯ ರಸಂ ಮಾಡುವುದು ಹೇಗೆ? ಈ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ರಸಂ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಟ್ಟದ ನಲ್ಲಿಕಾಯಿ ರಸಂ ಮಾಡಲು ಬೇಕಾಗುವ ವಸ್ತುಗಳು
- ಬೆಟ್ಟದ ನೆಲ್ಲಿಕಾಯಿ
- ಟೊಮೊಟೋ - 2
- ತೊಗರಿ ಬೇಳೆ
- ಸಾಸಿವೆ
- ಜೀರಿಗೆ
- ಇಂಗು
- ಒಣ ಮೆಣಸು
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ಬೆಟ್ಟದ ನಲ್ಲಿಕಾಯಿ ರಸಂ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತೊಳೆದುಕೊಂಡಿರುವ ತತೊಗರಿ ಬೇಳೆ ಹಾಕಿ ಬೇಳೆಯಿಂದ ಮೇಲೆ ಇರುವಂತೆ ನೀರು ಹಾಕಿ ಎಣ್ಣೆ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ನಂತರ ಕುಕ್ಕರ್ ತಣ್ಣಗಾಗಲು, ಈ ನಡುವೆ ಒಂದು ಮಿಕ್ಸಿ ಜಾರ್ಗೆ ಕಾಳು ಮೆಣಸು, ಜೀರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಈಗ ಬೆಟ್ಟದ ನಲ್ಲಿಕಾಯಿಯನ್ನು ತೊಳೆದು ಕತ್ತರಿಸಿಕೊಂಡು ಅದರ ಬೀಜ ತೆಗೆದು ಎಸೆದು ಈ ನಲ್ಲಿಕಾಯಿಯನ್ನು ಜೀರಿಗೆ, ಕಾಳು ಮೆಣಸಿನ ಪುಡಿಯ ಜೊತೆಗೆ ಹಾಕಿ, 2 ಟೊಮೆಟೋ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದು ಚಟ್ನಿಯ ಹದದಂತೆ ಬರಬೇಕು. ಈಗ ತಣ್ಣಗಾದ ಕುಕ್ಕರ್ ಅನ್ನು ತೆಗೆದು ಅದರ ಬೇಳೆಯನ್ನು ಸ್ವಲ್ಪ ಪುಡಿ ಮಾಡಿಕೊಳ್ಳಿ. ನುಣ್ಣಗೆ ಮಾಡಿಕೊಳ್ಳಬೇಕು.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಇಂಗು, ಜಜ್ಜಿರುವ ಬೆಳುಳ್ಳಿ, ಒಣ ಮೆಣಸು, ಕರಿಬೇವು ಹಾಕಿ ಅರ್ಧ ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡಿದ್ದ ನಲ್ಲಿಕಾಯಿ ಟೊಮೆಟೋ ಪೇಸ್ಟ್ ಹಾಕಿಕೊಳ್ಳಿ. ಹಾಕಿ ಕುಕ್ಕರ್ನಲ್ಲಿನ ಬೇಳೆಯನ್ನು ನೀರಿನ ಸಮೇತ ಇದಕ್ಕೆ ಹಾಕಿಕೊಳ್ಳಿ. ನಂತರ ಅರಶಿಣ, ಉಪ್ಪು, ಸ್ವಲ್ಪ ನೀರು ಹಾಕಿ ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಿ.
ಇದಾದ ಬಳಿಕ 10 ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಬೆಟ್ಟದ ನಲ್ಲಿಕಾಯಿ ರಸಂ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ರಸಂ ಮಾಡಿದ್ರೆ ನಿತ್ಯ ನೀವು ಮಾಡಿ ಸವಿಯಲು ಮುಂದಾಗೋದು ಪಕ್ಕ. ಇದನ್ನು ಊಟದ ಜೊತೆಗೆ ಸವಿಯುವುದರ ಜೊತೆಗೆ ಲೋಟಕ್ಕೆ ಹಾಕಿಕೊಂಡು ಸಹ ಇದನ್ನು ಸವಿಯಬಹುದು.



Click it and Unblock the Notifications
