Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಬಾಯಲ್ಲಿ ನೀರು ತರಿಸುವ ಆಲೂ ಮಂಚೂರಿ ಮಾಡಿ.! ಮಳೆಗಾಲಕ್ಕೆ ಇದು ಸೂಪರ್ ಟೇಸ್ಟ್!
ಮಳೆಗಾಲದ ಈ ದಿನಗಳಲ್ಲಿ ರುಚಿ ರುಚಿಯಾಗಿ ಬಾಯಿಯಲ್ಲಿ ನೀರು ತರಿಸುಂತಹ ಖಾದ್ಯಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹೀಗಾಗಿಯೇ ಸಂಜೆ ಸಮಯದಲ್ಲಿ ಫಾಸ್ಟ್ ಫುಡ್ ಅಂಗಡಿಗಳು ಜನರಿಂದ ತುಂಬಿರುತ್ತವೆ. ಅದರಲ್ಲೂ ಮಳೆಯ ಸಮಯದಲ್ಲಿ ಪಾನಿಪೂರಿ, ಬಿಸಿ ಬಿಸಿ ಬೋಂಡಾ ಬಜ್ಜಿ, ಗೋಬಿ ಮಂಚೂರಿ, ಮಸಾಲ ಪೂರಿ, ಪಾವ್ ಬಾಜಿ ಹೀಗೆ ಹತ್ತಾರು ಬಗೆಯ ರುಚಿ ರುಚಿಯ ಖಾದ್ಯಗಳ ಸವಿಯಲು ಮುಂದಾಗುವುದು ನೋಡಬಹುದು. ಹಾಗೆ ನಾವು ಕೂಡ ಮನೆಯಲ್ಲಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೇವೆ.
ಇನ್ನು ವಿಶೇಷ ಖಾದ್ಯಗಳ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಕೆಲಸ, ಅದ್ರಲ್ಲೂ ನಾವಿಂದು ಆಲೂಗಡ್ಡೆಯಿಂದ ಮಾಡಲಾಗುವ ಮಂಚೂರಿಯನ್ ಕುರಿತಾಗಿ ತಿಳಿದುಕೊಳ್ಳೋಣ. ಆಲೂ ಮಂಚೂರಿಯನ್ ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುತ್ತೀರಿ. ಸಾಮಾನ್ಯ ಗೋಬಿಗಿಂತಲೂ ರುಚಿಕರವಾದ ಈ ಸ್ನ್ಯಾಕ್ಸ್ ಮಾಡೋದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ಆಲೂಗಡ್ಡೆಯಿಂದ ಮಾಡುವ ಈ ಮಂಚೂರಿಯನ್ ಬಾಯಲ್ಲಿ ನೀರು ತರಿಸಲಿದೆ. ಹಾಗೆ ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತೆ. ಹಾಗಾದ್ರೆ ಈ ಮಂಚೂರಿಯನ್ ಮಾಡುವುದು ಹೇಗೆ?, ಆಲೂ ಮಂಚೂರಿಯನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂಗಡ್ಡೆ ಮಂಚೂರಿಯನ್ ಮಾಡಲು ಬೇಕಾಗುವ ವಸ್ತುಗಳು
- ಆಲೂಗಡ್ಡೆ
- ಈರುಳ್ಳಿ
- ಶುಂಠಿ
- ಹಸಿ ಮೆಣಸು
- ಬೆಳ್ಳುಳ್ಳಿ
- ಸೋಯಾ ಸಾಸ್
- ಚಿಲ್ಲಿ ಸಾಸ್
- ವಿನಿಗರ್
- ಖಾರದ ಪುಡಿ
- ಮೈದಾ ಹಿಟ್ಟು
- ಅಕ್ಕಿ ಹಿಟ್ಟು
- ಉಪ್ಪು
- ಕ್ಯಾಪ್ಸಿಕಂ
- ಕಾರ್ನ್ ಫ್ಲೋರ್
ಆಲೂಗಡ್ಡೆ ಮಂಚೂರಿಯನ್ ಮಾಡುವುದು ಹೇಗೆ?
ಮೊದಲು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ನೀರಿನಲ್ಲಿ ತೊಳೆದು ಕೊಬ್ಬರಿ ತುರಿಯಂತೆ ತುರಿದು ಇಟ್ಟುಕೊಳ್ಳಿ. ನಂತರ ಈ ತುರಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. 3 ಬಾರಿ ಆದರು ಇದನ್ನು ತೊಳೆದು ಇಟ್ಟುಕೊಳ್ಳಿ. ನಂತರ ನೀರಿನಿಂದ ಹಿಂಡಿಕೊಂಡು ಆಲೂ ತುರಿಯನ್ನು ಮತ್ತೊಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಇದಕ್ಕೆ ಖಾರದ ಪುಡಿ ಹಾಕಿ, 3 ಚಮಚ ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟು ಸಹ ಹಾಕಿಕೊಳ್ಳಿ.
ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಕೈಯಲ್ಲಿ ಅಂಟಾಗಿ ಹಾಗೆ ಉಂಡೆ ಕಟ್ಟಲು ಬರುವಂತೆ ಮಾಡಬೇಕು. ಉಂಡೆ ಕಟ್ಟಲು ಬಾರದೆ ಇದ್ದರೆ ಮತ್ತೆ ಅಕ್ಕಿ ಹಿಟ್ಟು ಮೈದಾ ಹಿಟ್ಟು ಹಾಕಿಕೊಂಡು ಮತ್ತೆ ಚೆನ್ನಾಗಿ ಹಿಟ್ಟು ಹದ ಮಾಡಿಕೊಳ್ಳಿ. ಈಗ ಹಿಟ್ಟನ್ನು ಉಂಡೆ ಕಟ್ಟಿಕೊಳ್ಳಿ.
ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಉಂಡೆ ಕಟ್ಟಿಕೊಂಡ ಈ ಆಲೂಗಡ್ಡೆ ಹಿಟ್ಟನ್ನು ಹಾಕಿಕೊಂಡು ಕರಿದುಕೊಳ್ಳಬೇಕು. ಈ ಉಂಡೆಗಳು ಚೆನ್ನಾಗಿ ಫ್ರೈ ಆಗಬೇಕು. ಹೀಗೆ ಫ್ರೈ ಮಾಡಿಕೊಂಡ ಬಳಿಕ ತೆಗೆದು ಎಣ್ಣೆ ಇಳಿಯಲು ಜರಡಿಯಲ್ಲಿ ಹಾಕಿ ಇಟ್ಟುಕೊಳ್ಳಿ, ಇದು ಗರಿ ಗರಿಯಾಗಿ ಬರಬೇಕು.
ಈಗ ಮತ್ತೊಂದು ಬಾಣಲೆಗೆ ಎಣ್ಣೆ ಹಾಕಿ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಕ್ಯಾಪ್ಸಿಕಂ ಫ್ರೈ ಮಾಡಿಕೊಂಡು ರೆಡ್ ಚಿಲ್ಲಿ, ಸೋಯಾ ಸಾಸ್, ಟೊಮೆಟೋ ಸಾಸ್, ವಿನೆಗರ್ ಹಾಕಿಕೊಂಡು ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ನೀರು ಸಹ ಹಾಕಿ ಕುದಿಬರಲು ಬಿಡಿ. ಈಗ ಒಂದು ಬೌಲ್ಗೆ ಕಾರ್ನ್ ಫ್ಲೋರ್ ನೀರು ಹಾಕಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿ ಬಾಣಲೆಗೆ ಹಾಕಿ. ಈಗ ಫ್ರೈ ಮಾಡಿಕೊಂಡಿರುವ ಆಲೂಗಡ್ಡೆಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಕರಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಆಲೂ ಮಂಚೂರಿಯನ್ ರೆಡಿಯಾಗುತ್ತದೆ.



Click it and Unblock the Notifications