For Quick Alerts
ALLOW NOTIFICATIONS  
For Daily Alerts

ಆಟಿ ತಿಂಗಳ ಸ್ಪೆಷಲ್: ಮಂಗಳೂರು ಕುಡುತ ಚಟ್ನಿ ರೆಸಿಪಿ

Posted By:
|

ಮಳೆಗಾಲದಲ್ಲಿ ದೇಹ ತಂಪಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಕಾಲದಲ್ಲಿ ಕುಡುತ ಚಟ್ನಿ ಮಾಡುತ್ತಾರೆ. ಹುರುಳಿ ಚಟ್ನಿಯನ್ನೇ ತುಳುವಿನಲ್ಲಿ ಕುಡುತ ಚಟ್ನಿ ಎಂದು ಕರೆಯಲಾಗಿದ್ದು, ಇದು ದೇಹವನ್ನು ಬೆಚ್ಚಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು, ಗರ್ಭಿಣಿಯರಿಗೆ ಬಹಳ ಮುಖ್ಯವಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಕುಡುತ ಚಟ್ನಿ ಮಾಡುವ ವಿಧಾನವನ್ನು ಇಂದು ನೋಡೋಣ.

Kudutha Chutney Recipe | Hurali Kalu Chutney Recipe | Horse gram Chutney Recipe in Kannada
ಆಟಿ ತಿಂಗಳ ಸ್ಪೆಷಲ್: ಮಂಗಳೂರು ಕುಡುತ ಚಟ್ನಿ ರೆಸಿಪಿ
ಆಟಿ ತಿಂಗಳ ಸ್ಪೆಷಲ್: ಮಂಗಳೂರು ಕುಡುತ ಚಟ್ನಿ ರೆಸಿಪಿ
Prep Time
10 Mins
Cook Time
10M
Total Time
20 Mins

Recipe By: Shreeraksha

Recipe Type: Vegetarian

Serves: 4

Ingredients
  • ಬೇಕಾಗುವ ಪದಾರ್ಥಗಳು:

    1/2 ಕಪ್ ಹುರುಳಿ ಕಾಳು

    1 ಕಪ್ ಈರುಳ್ಳಿ

    2 ಲವಂಗ ಬೆಳ್ಳುಳ್ಳಿ

    ಕರಿಬೇವಿನ ಎಲೆಗಳು

    4 ಒಣ ಕೆಂಪು ಮೆಣಸಿನಕಾಯಿ

    2 ಚಮಚ ಜೀರಿಗೆ

    1/2 ಚಮಚ ಕೊತ್ತಂಬರಿ ಬೀಜ

    1/2 ಚಮಚ ಬೆಲ್ಲ

    2 ಚಮಚ ತಾಜಾ ತೆಂಗಿನಕಾಯಿ

    1 ಚಮಚ ಹುಣಸೆ ನೀರು

    2 ಟೀಸ್ಪೂನ್ ಎಣ್ಣೆ

    ಇಂಗು

    ಉಪ್ಪು , ರುಚಿಗೆ

    ಒಗ್ಗರಣೆಗೆ- ಸಾಸಿವೆ, ಉದ್ದಿನ ಬೇಳೆ

Red Rice Kanda Poha
How to Prepare
  • ಹುರಳಿ ಕಲು ಚಟ್ನಿ ರೆಸಿಪಿ ಮಾಡುವುದು ಹೇಗೆ:

    • ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕರಿಬೇವಿನ ಎಲೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜಗಳ್ನು ಸೇರಿಸಿ, ಕೈಯಾಡಿಸಿ.
    • ನಂತರ, ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ.
    • ಅದು ಮುಗಿದ ನಂತರ ಅದಕ್ಕೆ ಹುರುಳಿ ಕಾಳು ಸೇರಿಸಿ, ಅದು ಉಬ್ಬುವವರೆಗೆ ಫ್ರೈ ಮಾಡಿ. ಒಮ್ಮೆ ಮಾಡಿದ ನಂತರ ಸ್ಟವ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
    • ನಂತರ ಮಿಕ್ಸಿ ಜಾರ್ ಗೆ ಈ ಹುರಿದ ಮಿಶ್ರಣ ಹಾಕಿ ಅದಕ್ಕೆ ಬೆಲ್ಲ, ತೆಂಗಿನಕಾಯಿ ಮತ್ತು ಹುಣಸೆಹಣ್ಣು ಸೇರಿಸಿ, ನಯವಾದ ಪೇಸ್ಟ್ ಮಾಡಿ. ಒಂದು ತಟ್ಟೆಗೆ ಹಾಕಿಕೊಳ್ಳಿ.
    • ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನಬೇಳೆ ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಕರಿಬೇವಿನ ಎಲೆಗಳು, ಒಣ ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ. ಸ್ಟವ್ ಆಫ್ ಮಾಡಿ. ಇದನ್ನು ಹುರಳಿ ಕಾಳು ಚಟ್ನಿಯ ಮೇಲೆ ನಿಧಾನವಾಗಿ ಸೇರಿಸಿ ಬಡಿಸಿ.
    • ಇದನ್ನು ಇಡ್ಲಿ, ದೋಸೆ, ಗಂಜಿ ಮೊದಲಾದವುಗಳೊಂದಿಗೆ ಸೇರಿಸಿ ತಿನ್ನಬಹುದು.
Instructions
Nutritional Information
  • People - 4 ಜನ
  • ಎನರ್ಜಿ - 27 ಕ್ಯಾ
  • ಕೊಬ್ಬು - 1.3ಗ್ರಾ
  • ಪ್ರೋಟೀನ್ - 1.1ಗ್ರಾ
  • ಕಾರ್ಬೋಹೈಡ್ರೇಟ್ - 2.8 ಗ್ರಾ
  • ಫೈಬರ್ - 0.4ಗ್ರಾ
[ 5 of 5 - 107 Users]
Story first published: Monday, July 26, 2021, 18:33 [IST]
X
Desktop Bottom Promotion