For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿ-ಟೊಮೆಟೊ ಚಟ್ನಿ ರೆಸಿಪಿ: ಬೆಳಗ್ಗೆ ದೋಸೆ ಜೊತೆ ಸವಿಯಲು ಈ ಚಟ್ನಿ ಸೂಪರ್ ಆಗಿರುತ್ತೆ

Posted By:
|

ಗೃಹಿಣಿಯರಿಗೆ ನಾಳೆ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಏನು ಮಾಡುವುದು ಎಂಬ ಚಿಂತೆ ರಾತ್ರಿಯೇ ಶುರುವಾಗುವುದು. ಮಲಗುವ ಮುಂಚೆಯೇ ಪ್ಲ್ಯಾನ್‌ ಮಾಡಿಕೊಂಡರೆ ಸ್ವಲ್ಪ ಸಮಧಾನ, ಇಲ್ಲದಿದ್ದರೆ ಏನು ಮಾಡುವುದು ಎಂಬುವುದೇ ದೊಡ್ಡ ಚಿಂತೆ. ನೀವು ನಾಳೆ ದೋಸೆ ಮಾಡ್ತಾ ಇದ್ದೀರಾ.. ಅದಕ್ಕೆ ನೆಚ್ಚಿಕೊಳ್ಳುವುದಕ್ಕೆ ಏನು ಎಂದು ಯೋಚಿಸುತ್ತಿದ್ದರೆ ಟೆನ್ಷನ್ ಬಿಡಿ, ಈ ಚಟ್ನಿ ಮಾಡಿ, ಮನೆಯವರು ಒಂದು ದೋಸೆ ಎಕ್ಟ್ರಾ ಕೇಳದಿದ್ದರೆ ಮತ್ತೆ ಕೇಳಿ.

Garlic Tomato chutney Recipe

ಇನ್ನು ಇದು ಚಳಿಗಾಲ, ಚಳಿಗಾಲದಲ್ಲಿ ಬೆಳ್ಳುಳ್ಳಿ, ಒಣ ಮೆಣಸು, ಟೊಮೆಟೊ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಆ ದೃಷ್ಟಿಯಿಂದಲೂ ಈ ರೆಸಿಪಿ ಬೊಂಬಾಟ್ ಅಲ್ವಾ? ಬನ್ನಿ ಈ ಸರಳ ರೆಸಿಪಿ ತಿಳಿಯೋಣ:

ಬೇಕಾಗುವ ಸಾಮಗ್ರಿ

ಬೆಳ್ಳುಳ್ಳಿ 5 ಎಸಳು
ಒಣ ಮೆಣಸು 5(ನಿಮ್ಮ ಖಾರಕ್ಕೆ ತಕ್ಕಂತೆ)
2 ಟೊಮೆಟೊ
ರುಚಿಗೆ ತಕ್ಕ ಉಪ್ಪು
2 ಚಮಚ ಸಾಸಿವೆ ಎಣ್ಣೆ
1/4 ಚಮಚ ಸಾಸಿವೆ
ಕರಿಬೇವು

ಮಾಡುವ ವಿಧಾನ
* ಟೊಮೆಟೊ ಕತ್ತರಿಸಿಕೊಳ್ಳಿ, ಬೆಳ್ಳುಳ್ಳಿ ಸಿಪ್ಪೆ ಸುಲಿಯಿರಿ
* ಈಗ ಟೊಮೆಟೊ, ಬೆಳ್ಳುಳ್ಳಿ, ಒಣಮೆಣಸು ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ
* ಈಗ ಪ್ಯಾನ್ ಬಿಸಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್‌ ಮಾಡುವಾಗ ಕರಿಬೇವು ಹಾಕಿ, ರುಬ್ಬಿದ ಚಟ್ನಿ ಹಾಕಿ ಮಿಕ್ಸ್ ಮಾಡಿ, ಉರಿಯಿಂದ ಇಳಿಸಿದರೆ ದೋಸೆ ಜೊತೆ ನೆಚ್ಚಿಕೊಂಡು ತಿನ್ನಲು ಸೂಪರ್ ಚಟ್ನಿ ರೆಡಿ.

[ of 5 - Users]
Story first published: Wednesday, December 7, 2022, 21:05 [IST]
X
Desktop Bottom Promotion