Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಾಳಿಂಬೆ ಸಿಪ್ಪೆ ಬಿಸಾಡುವ ಮುನ್ನ ಯೋಚಿಸಿ!
ದಾಳಿಂಬೆಯ ಆಕರ್ಷಕ ಬಣ್ಣವನ್ನು ನೋಡಿದಾಗಲೆ ಬಾಯಲ್ಲಿ ನೀರೂರುತ್ತದೆ. ಅಲ್ಲದೆ ದಾಳಿಂಬೆಯನ್ನು ತಿನ್ನುವುದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.ದಾಳಿಂಬೆ ಕೊಂಡು ದಾಳಿಂಬೆಯ ಬೀಜಗಳನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುವವರೆ ಹೆಚ್ಚು. ಇನ್ನು ಮುಂದೆ ಹಾಗೆ ಬಿಸಾಡಬೇಡಿ! ಏಕೆಂದರೆ ಇದರಲ್ಲಿ ತಿರುಳಿಗಿಂತ ಸಿಪ್ಪೆಯಲ್ಲಿ ಪೋಷಕಾಂಶಗಳು ಅಧಿಕವಿರುತ್ತದೆ. ಆದ್ದರಿಂದ ಸಿಪ್ಪೆಯನ್ನು ಒಣಗಿಸಿ ಇಡಬೇಕು. ಹೀಗೆ ಒಣಗಿಸಿಟ್ಟ ದಾಳಿಂಬೆ ಸಿಪ್ಪೆಯಿಂದ ತಂಬುಳಿ ಮಾಡಿ ಕುಡಿದರೆ ಬಾಯಿಗೆ ರುಚಿ ಮತ್ತು ಸೆಕೆಯಲ್ಲಿ ದೇಹದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು:
* ದಾಳಿಂಬೆ ಸಿಪ್ಪೆ
* ತೆಂಗಿನ ತುರಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಳ್ಳಬೇಕು.
2. ತಂಬುಳಿ ಮಾಡುವಾಗ ಸಿಪ್ಪೆಯನ್ನು ತುಪ್ಪದಲ್ಲಿ ಹುರಿಯಬೇಕು.
3. ನಂತರ ಇದನ್ನು ತುರಿಯ ಜೊತೆ ರುಬ್ಬಬೇಕು (ಗಮನಿಸಬೇಕಾದ ಅಂಶವೆಂದರೆ ದಾಳಿಂಬೆ ಸಿಪ್ಪೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಸಬೇಕು, ಇಲ್ಲದಿದ್ದರೆ ಒಗರಾಗುತ್ತದೆ).
4. ಈಗ ಇದಕ್ಕೆ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್‌ನಿಂದ ತಿರುಗಿಸಬೇಕು. ಈಗ ಬಾಯಾರಿಕೆಯಾದಾಗ ಕುಡಿಯಲು ರುಚಿಕರ ಮತ್ತು ಆರೋಗ್ಯಕರವಾದ ತಂಬುಳಿ ರೆಡಿ.
ಈ ರೀತಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಕೂಡ ತಯಾರಿಸಬಹುದು. ಇತರ ತಂಪು ಪಾನೀಯ ಕುಡಿಯುವ ಬದಲು ಈ ರೀತಿ ಮಾಡಿ ಕುಡಿದರೆ ರುಚಿಯ ಜೊತೆ ಆರೋಗ್ಯಕ್ಕೆ ಒಳ್ಳೆಯದು. ರೋಗ ನಿರೋಧಕ ಸಾಮರ್ಥ್ಯ ಕೂಡ ಹೆಚ್ಚಾಗುವುದು.



Click it and Unblock the Notifications
