Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಡುಗೆ ,ಆರೋಗ್ಯ :ಶುಂಠಿ ಕಷಾಯವಲ್ಲ. ಸೂಪ್
ಅಡುಗೆ ಮನೆಯ ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಶುಂಠಿ ಹಾಗೂ ಮೆಣಸು ಸೇರಿಸಿ ಗರಮಾಗರಂ ಸೂಪ್ ಮಾಡೋಣ ಬನ್ನಿ, ಸಣ್ಣ ಪುಟ್ಟ ಕಾಯಿಲೆಗಳನ್ನು ದೂರಾಗಿಸಲು ಆರೋಗ್ಯ ವೃದ್ಧಿಗಾಗಿ ಈ ಸೂಪ್ ಆಗಾಗ ಕುಡಿಯುವುದು ಒಳ್ಳೆಯದು. ನೆಗಡಿಗಂತೂ ಉತ್ತಮ ಔಷಧಿ
ಮನಸ್ವಿನಿ. ನಾರಾವಿ
ಬೇಕಾಗುವ ಪದಾರ್ಥಗಳು:
ಒಣ ಶುಂಠಿ : 1 ಅಂಗುಲದಷ್ಟು ಉದ್ದದ ತುಂಡು
ಕರಿ ಮೆಣಸು: 1ಟೀ ಚಮಚ
ಜೀರಿಗೆ : 1 ಟೀ ಚಮಚ
ಕೊತ್ತಂಬರಿ ಬೀಜ (ಧನಿಯ): 1ಟೀ ಚಮಚ
ನಿಂಬೆ ಹಣ್ಣು : 1
ರುಚಿಗೆ ತಕ್ಕಷ್ಟು ಅಡುಗೆ ಉಪ್ಪು, ಬೆಲ್ಲ
ತಯಾರಿಸುವ ವಿಧಾನ: ಒಣ ಶುಂಠಿಯನ್ನು ತುಂಡು ಮಾಡಿ. ಕರಿಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ನಂತರ ಎಲ್ಲಾ ಮಿಶ್ರಣವನ್ನು ಚೂರ್ಣದ ಹದಕ್ಕೆ ನುಣ್ಣಗೆ ಮಾಡಿಕೊಳ್ಳಿ, ಹುರಳು ಕಲ್ಲಿನಲ್ಲಿ ಅಥವಾ ಕುಟ್ಟಾಣಿಯಲ್ಲಿ ಮಾಡಿದರೆ ಉತ್ತಮ. ಮಿಕ್ಸಿಗೆ ಹಾಕಿದರೆ ಚೂರ್ಣದ ಸ್ವರೂಪ ಹೋಗಿ ನಯವಾದ ಹಿಟ್ಟಾಗುವುದು ಖಂಡಿತ.
ನಾಲ್ಕು ಕಪ್ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿರುವಾಗ ನಿಂಬೆರಸ, ಉಪ್ಪು, ಪುಡಿಮಾಡಿದ ಬೆಲ್ಲ ಮತ್ತು ಮೇಲೆ ತಿಳಿಸಿದ ಚೂರ್ಣ ಮಿಶ್ರಣವನ್ನು ಹಾಕಿ. ಐದು ನಿಮಿಷ ಚೆನ್ನಾಗಿ ಕುದಿದ ನಂತರ ಕೆಳಕ್ಕಿಳಿಸಿ. ಬಿಸಿಯ ಹದವರಿತು ಕುಡಿಯಿರಿ. ಅಗತ್ಯವಿದ್ದರೆ ಹಾಲು ಬೆರೆಸಿ ಕುಡಿಯಬಹುದು. ಶೀತ, ಕೆಮ್ಮು, ದೇಹಾಲಸ್ಯ ದೂರಾಗಿಸಲು ದಿನಕ್ಕೊಂದು ಕಪ್ ನಂತೆ ಮೂರು ದಿನ ಸೇವಿಸಿದರೆ ಸಾಕು.



Click it and Unblock the Notifications
