Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ರುಚಿಗೆ ಬೆಲೆ ಕಟ್ಟಲಾಗದು! ಈ ಟೊಮೆಟೊ ಚಟ್ನಿ ತಿಂದ್ರೆ ಅಜ್ಜಿ ನೆನಪಾಗ್ತಾರೆ.. ರುಚಿ ಮಾತ್ರ ಸೂಪರ್
ಬೆಳಗಿನ ಉಪಾಹಾರಕ್ಕೆ ಇಡ್ಲಿ, ದೋಸೆಗೆ ಏನು ಮಾಡೋದು ಅಂತ ತಲೆ ಕೆಡಿಸಿಕೊಂಡಿದ್ದೀರಾ? ಚಿಂತೆ ಬೇಡ.. ಕೇವಲ 10 ನಿಮಿಷದಲ್ಲಿ ಬಾಯಲ್ಲಿ ನೀರೂರಿಸುವ ಟೊಮೆಟೊ ಚಟ್ನಿ (Tomato Chutney) ಮಾಡೋದು ಹೇಗೆ ಅಂತ ನಾವು ತಿಳಿಸಿಕೊಡುತ್ತೇವೆ. ಹೌದು, ಇದು ಅಜ್ಜಿಯ ಶೈಲಿಯ ಟೊಮೆಟೊ ರೊಟ್ಟಿ ಚಟ್ನಿ. ರುಚಿ ಮಾತ್ರ ಅದ್ಭುತ. ಈ ಲೇಖನದಲ್ಲಿ ಸರಳ ಮತ್ತು ರುಚಿಕರವಾದ ಟೊಮೆಟೊ ಚಟ್ನಿಯನ್ನು (Tomato Chutney Recipe) ಮನೆಯಲ್ಲಿಯೇ ಹೇಗೆ ತಯಾರಿಸಬೇಕು ಎಂದು ಹಂತ ಹಂತವಾಗಿ ತಿಳಿಸಿದ್ದೇವೆ. ಇದನ್ನು ಒಮ್ಮೆ ಮಾಡಿದರೆ ಮತ್ತೆ ಮತ್ತೆ ಇದನ್ನೇ ಮಾಡ್ತೀರಾ. ಈ ಚಟ್ನಿಯನ್ನು ರುಬ್ಬುವಾಗ ಮಿಕ್ಸರ್ ಬದಲಿಗೆ ಒರಳುಕಲ್ಲು (ಕಲ್ಲು ಒನಕೆ) ಬಳಸಿದರೆ ರುಚಿ ಇನ್ನೂ ಹೆಚ್ಚುತ್ತದೆ.
ತಲೆಮಾರುಗಳಿಂದ ನಮ್ಮೆಲ್ಲರ ನಾಲಿಗೆಯ ಮೇಲೆ ಅಳಿಸಲಾಗದ ಮುದ್ರೆ ಹೊತ್ತಿರುವ ಹಳೆಯ ಕಾಲದ ಅಡುಗೆಗಳು ಬಹಳಷ್ಟಿವೆ. ಅದರಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ರೊಟ್ಟಿ ಚಟ್ನಿ. ಆಧುನಿಕ ಕಾಲದಲ್ಲಿ ಮಿಕ್ಸಿಗಳ ಬಳಕೆ ಹೆಚ್ಚಾದರು, ಕಲ್ಲು ಒನಕೆ ರುಬ್ಬಿದ ಚಟ್ನಿಯ ರುಚಿಗೆ ಸರಿಸಾಟಿಯಿಲ್ಲ. ಯಾವುದೇ ಮಸಾಲೆಗಳಿಲ್ಲದೆ, ಕೇವಲ ನೈಸರ್ಗಿಕ ರುಚಿಗಳೊಂದಿಗೆ, ನಮ್ಮ ಅಜ್ಜಿ, ಮುತ್ತಜ್ಜಿಯರು ಮಾಡುತ್ತಿದ್ದ ಹಳೆಯ ಕಾಲದ ಟೊಮೆಟೊ ರೊಟ್ಟಿ ಚಟ್ನಿಯನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ. ಇದು ಅನ್ನದಲ್ಲಿ ತುಪ್ಪದೊಂದಿಗೆ ಬೆರೆಸಿ ತಿಂದರೆ ಆ ರುಚಿಯೇ ಬೇರೆ.

ಟೊಮೆಟೊ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಟೊಮೆಟೊ (ಚೆನ್ನಾಗಿ ಹಣ್ಣಾದವು)
• ಹಸಿ ಮೆಣಸಿನಕಾಯಿ
• ಹುಣಸೆಹಣ್ಣು
• ರುಚಿಗೆ ತಕ್ಕಷ್ಟು ಉಪ್ಪು
• ಬೆಳ್ಳುಳ್ಳಿ ಎಸಳು
• ಈರುಳ್ಳಿ
• ಒಗ್ಗರಣೆ ಸಾಮಾನು - ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು, ಇಂಗು,
ಅರಿಶಿನ ಪುಡಿ
• ಎಣ್ಣೆ
ಟೊಮೆಟೊ ಚಟ್ನಿ ತಯಾರಿಸುವ ವಿಧಾನ
ಮೊದಲಿಗೆ ಟೊಮೆಟೊ, ಹಸಿ ಮೆಣಸಿನಕಾಯಿ ಹುರಿಯಬೇಕು. ಟೊಮೆಟೊಗಳನ್ನು ಸ್ವಚ್ಛವಾಗಿ ತೊಳೆದು ದೊಡ್ಡ ಹೋಳುಗಳಾಗಿ ಕತ್ತರಿಸಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಅದು ಬಿಸಿಯಾದ ಬಳಿಕ ಹಸಿ ಮೆಣಸಿನಕಾಯಿ ಹಾಕಿ. ಸ್ವಲ್ಪ ಬಣ್ಣ ಬರುವವರೆಗೆ ಹುರಿದು ಪಕ್ಕದಲ್ಲಿ ಇಡಿ. ಅದೇ ಬಾಣಲೆಯಲ್ಲಿ ಟೊಮೆಟೊ, ಹುಣಸೆಹಣ್ಣು ಮೆತ್ತಗಾಗುವವರೆಗೆ, ನೀರು ಹಿಂಗುವವರೆಗೆ ಬೇಯಿಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಬಹುದು.

ಈಗ ಟೊಮೆಟೊ ಮಿಶ್ರಣ ತಣ್ಣಗಾದ ನಂತರ, ಮೊದಲಿಗೆ ಮಿಕ್ಸಿಯಲ್ಲಿ ಹುರಿದ ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿ. ಈಗ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಒಮ್ಮೆ ರುಬ್ಬಿ. ಆ ನಂತರ ಬೇಯಿಸಿದ ಟೊಮೆಟೊ, ಹುಣಸೆಹಣ್ಣಿನ ಮಿಶ್ರಣವನ್ನು ಹಾಕಿ. ಸ್ವಲ್ಪ ತರಿತರಿಯಾಗಿ ರುಬ್ಬಿ. ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬಹುದು. ಆದರೆ, ರೊಟ್ಟಿ ಪಚ್ಚಡಿಯ ರುಚಿ ಮಿಸ್ ಆಗುತ್ತದೆ.
ಈ ಒಗ್ಗರಣೆ ಹಾಕಬೇಕು. ಸಣ್ಣ ಬಾಣಲೆಯಲ್ಲಿ ಉಳಿದ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಹುರಿಯಿರಿ. ಬಳಿಕ, ರುಬ್ಬಿಕೊಂಡ ಪಚ್ಚಡಿಯನ್ನು ಹಾಕಿ ಚೆನ್ನಾಗಿ ಕಲಸಿ. ಇಷ್ಟು ಮಾಡಿದರೆ, ಮಸಾಲೆಗಳಿಲ್ಲದ ಹಳೆಯ ಕಾಲದ ಟೊಮೆಟೊ ಚಟ್ನಿ ಸಿದ್ಧ. ಇದನ್ನು ಬಿಸಿ ಬಿಸಿ ಅನ್ನ, ತುಪ್ಪದೊಂದಿಗೆ ಬೆರೆಸಿ ತಿಂದರೆ ರುಚಿ ಅದ್ಭುತ. ಇಡ್ಲಿ, ದೋಸೆಯಲ್ಲಿ ಕೂಡ ಚೆನ್ನಾಗಿರುತ್ತದೆ. ಈ ಚಟ್ನಿಯಲ್ಲಿ ಯಾವುದೇ ಮಸಾಲೆಗಳನ್ನು ಬಳಸದಿರುವುದರಿಂದ ಟೊಮೆಟೊ ನೈಸರ್ಗಿಕ ರುಚಿ, ಹಸಿ ಮೆಣಸಿನಕಾಯಿ ಘಾಟು, ಹುಣಸೆಹಣ್ಣಿನ ಹುಳಿ ಬಹಳ ಅದ್ಭುತ ರುಚಿಯನ್ನು ನೀಡುತ್ತದೆ.

ಸೋಶಿಯಲ್ ಮೀಡಿಯಾಗಳ ರೆಸಿಪಿಗಳ ಪ್ರಭಾವ
ಒಟ್ಟಾರೆ, ಹಳೆಯ ಕಾಲದ ಟೊಮೆಟೊ ಚಟ್ನಿ ಎಂದರೆ ವಿಶೇಷವಾದ ಮಸಾಲೆಗಳಿಲ್ಲದೆ, ಕೇವಲ ನೈಸರ್ಗಿಕ ರುಚಿಗಳೊಂದಿಗೆ ಮಾಡುವ ಚಟ್ನಿ. ಇದನ್ನು ತಯಾರಿಸುವುದು ತುಂಬಾ ಸುಲಭ, ರುಚಿ ಮಾತ್ರ ಅದ್ಭುತ. ಈಗಿನ ಚಟ್ನಿಗಳ ಮೇಲೆ ಸೋಶಿಯಲ್ ಮೀಡಿಯಾಗಳ ರೆಸಿಪಿಗಳ ಪ್ರಭಾವವಿರುವುದರಿಂದ ಅಸಲಿಯಾದ ಟೊಮೆಟೊ ಚಟ್ನಿಯ ರುಚಿಯನ್ನು ನಾವು ಎಂದೋ ಮರೆತುಬಿಟ್ಟಿದ್ದೇವೆ. ಹಾಗಾಗಿ, ಸರಳ ಪದಾರ್ಥಗಳೊಂದಿಗೆ ಚಟ್ನಿಯ ರುಚಿ ತಿಳಿಯಲು ಒಮ್ಮೆ ಪ್ರಯತ್ನಿಸಿ.
ಟೊಮೆಟೊ ಚಟ್ನಿಯ ಉಪಯೋಗಗಳು
ಟೊಮೆಟೊ ಚಟ್ನಿ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಟೊಮೆಟೊದಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ, ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ಆಂಟಿಆಕ್ಸಿಡೆಂಟ್ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.



Click it and Unblock the Notifications