Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ದಾವಣಗೆರೆಯಲ್ಲಿ ರುಚಿ ಅಭಿರುಚಿ ಪಾಕ ಸ್ಪರ್ಧೆ

ಪ್ರತಿ ಜಿಲ್ಲೆಯ ವಿಶೇಷ ಅಡುಗೆಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತಮ ಹಾಗೂ ವಿಶೇಷ ಪ್ರಕಾರದ ತಿಂಡಿ ತಿನಿಸುಗಳ ತಯಾರಿಕೆಯ ಬಗ್ಗೆ ರಾಜ್ಯದ ಜನತೆಗೆ ಪರಿಚಿಯಿಸುವುದೇ ರುಚಿ ಅಭಿರುಚಿ-ಡಿಸ್ಟ್ರಿಕ್ಟ್ ಚಾಲೆಂಜ್ ಸರಣಿಯ ಉದ್ದೇಶ. 29 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ಪ್ರತಿ ಜಿಲ್ಲೆಯಲ್ಲಿಯೂ 5 ಜನರನ್ನು ಆಯ್ಕೆ ಮಾಡಿ ಅವರಲ್ಲಿ ಪುನಃ ಸ್ಪರ್ಧೆ ನಡೆಸಿ ಒಬ್ಬರನ್ನು ಆ ಜಿಲ್ಲೆಯ ವಿಜೇತರೆಂದು ಘೋಷಿಸಲಾಗುವುದು. ಈ ಬಾರಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತಿಗಳಿಸಿರುವ ದಾವಣಗೆರೆ ಜಿಲ್ಲೆಗೆ ರುಚಿ ಅಭಿರುಚಿ ತಂಡ ಬರಲಿದೆ.
ದಿನಾಂಕ 4.12.2009ರ ಶುಕ್ರವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ದಾವಣಗೆರೆಯ ಪಿ.ಜೆ. ಬಡಾವಣೆಯ, ಎ.ವಿ.ಕೆ ಕಾಲೇಜು ರಸ್ತೆಯಲ್ಲಿರುವ ಜಿಲ್ಲಾ ಗುರುಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು 18ರಿಂದ 40 ವರ್ಷ ವಯೋಮಾನದೊಳಗಿದ್ದು ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಯಾವುದಾದರೂ ವಿಶೇಷ ತಿನಿಸೊಂದನ್ನು ಸ್ಥಳದಲ್ಲಿಯೇ ಐದು ನಿಮಿಷದ ಅವಧಿಯಲ್ಲಿ ತಯಾರಿಸುವ ಸಾಮರ್ಥ್ಯ ಹೊಂದಿರಬೇಕು ಹಾಗೂ ತಿನಿಸು ತಯಾರಿಕೆಗೆ ಅಗತ್ಯವಿರುವ ಪದಾರ್ಥಗಳನ್ನು ಆಕಾಂಕ್ಷಿಗಳೇ ಖುದ್ದಾಗಿ ತರಬೇಕು.
ಜೀ ಕನ್ನಡ ವಾಹಿನಿ ಅಪರೂಪದ ಅವಕಾಶವೊಂದನ್ನು ನಿಮ್ಮ ಬಳಿಗೆ ತಂದಿದ್ದು ಉತ್ತಮ ತಿಂಡಿ ತಿನಿಸುಗಳನ್ನು ತಯಾರಿಸುವ ಮಹಿಳೆಯರು ಈ ಅವಕಾಶವನ್ನು ಸದುಪಯೋಗ ಮಾಡಿಸಿಕೊಳ್ಳಬಹುದಾಗಿದೆ. ಜೊತೆಗೆ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 97411 58120, 97411 58124 ಹಾಗೂ 99001 49970 ಸಂಚಾರಿವಾಣಿಗಳನ್ನು ಮತ್ತು (080)26860292 ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.
ಸೂಚನೆ:
ಮುಂದೆ ಆಯ್ಕೆ ಪ್ರಕ್ರಿಯೆ ನಡೆಯಬಹುದಾದ ತಾತ್ಕಾಲಿಕ ಪಟ್ಟಿ. (ಇನ್ನು ಸ್ಥಳ ನಿಗದಿಯಾಗಿಲ್ಲ)
ದಿನಾಂಕ 12.12.09ರ ಶನಿವಾರ ಮಂಗಳೂರು.
ದಿನಾಂಕ 14.12.09ರ ಸೋಮವಾರ ಉಡುಪಿ.
ದಿನಾಂಕ 19.12.09ರ ಶನಿವಾರ ಮಡಿಕೇರಿ.
ದಿನಾಂಕ 04.01.10ರ ಸೋಮವಾರ ಹಾಸನ.
ಮಾಧ್ಯಮ ಸಂಪರ್ಕ:
ಮಧುಸೂಧನ್.ವಿ
99002 89844



Click it and Unblock the Notifications
