Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಾಂಸಪ್ರಿಯ ಕುಟ್ಟಿಗಳ ಬಾಯಿಗೆ ಓಣಂ ಬೀಗ

ಕೇರಳ ರಾಜ್ಯದಲ್ಲಿ ಕೇರಳದಲ್ಲಿ ಶೇಕಡಾ 80 ರಷ್ಟು ಮಾಂಸಾಹಾರಿಗಳೇ ಇದ್ದು, ಪ್ರತಿ ದಿನ 5,034.96 ಟನ್ ಮಾಂಸಾಹಾರ ಮಾರಾಟವಾಗುತ್ತಿರುವುದಾಗಿ ಕೇರಳ ರಾಜ್ಯ ಪಶು ಸಂಗೋಪನಾ ನಿರ್ದೇಶಕ ಆರ್. ವಿಜಯ ಕುಮಾರ್ ಅವರು ಹೇಳಿದ್ದಾರೆ.
ಕುರಿ, ಕೋಳಿ, ದನ ಸೇರಿದಂತೆ ರಾಜ್ಯದಲ್ಲಿ ಸೇವಿಸುತ್ತಿರುವ ಒಟ್ಟಾರೆ ಮಾಂಸಾಹಾರದಲ್ಲಿ 264.31 ಟನ್‌ಗಳನ್ನು ಮಾತ್ರ ರಾಜ್ಯದಿಂದ ಉತ್ಪಾದಿಸಲಾಗುತ್ತಿದ್ದು, ಉಳಿದ ಮಾಂಸವನ್ನು ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದಲೇ ತರಿಸಲಾಗುತ್ತಿದೆ ಎಂದು ವಿಜಯ ಕುಮಾರ್ ಹೇಳುತ್ತಾರೆ.
ರಾಜ್ಯದ ಪ್ರಮುಖ ನಗರಗಳಲ್ಲಿರುವ ಮಾಹಿತಿ ತಂತ್ರಜ್ಞಾನ, ಬಯೋಟೆಕ್ನಾಲಜಿ ಕೇಂದ್ರಗಳ ನೌಕರರು ಅಲ್ಲದೆ, ನರ್ಸಿಂಗ್ ಕಾಲೇಜುಗಳಲ್ಲೂ ಹೆಚ್ಚಾಗಿ ಮಾಂಸಹಾರಿ ಫಾಸ್ಟ್ ಫುಡ್‌ನ್ನೇ ಸೇವಿಸುತ್ತಿರುವುದರಿಂದ ರಾಜ್ಯದಲ್ಲಿ ಹೆಚ್ಚಾಗಿ ಮಾಂಸಾಹಾರ ಪದ್ದತಿ ಹೆಚ್ಚಾಗಿ ಬಳಕೆಯಲ್ಲಿದೆ.
ಓಣಂ ದಿನ ನೋ ಮಾಂಸ: ಸೆ.9 ರಂದು ರೈತರ ಸಂಮೃದ್ಧಿಯ ದ್ಯೋತಕವಾದ ತಿರುಓಣಂ ಹಬ್ಬದ ಅಂಗವಾಗಿ ನಡೆಯುವ ಹೂ ಹಾಸು ವಿನ್ಯಾಸ, ಸಂಗೀತ, ನೃತ್ಯ ಕಾರ್ಯಕ್ರಮದಂತೆ ಇನ್ನೊಂದು ಪ್ರಮುಖ ಅಂಶ ಎಂದರೆ, 'ಸದ್ಯ'- ಹಬ್ಬದ ಅಂಗವಾಗಿ ಪ್ರತಿ ಕೇರಳಿಗರು ಕೂಡಾ ಸಸ್ಯಾಹಾರಿ ಊಟವನ್ನೇ ತಯಾರಿಸಿ ಸಂಭ್ರಮದಿಂದ ತಿನ್ನುತ್ತಾರೆ.
ಮಹಾಬಲಿ ಆಗಮನದಂದು ನಾಡಿನ ಜನರೆಲ್ಲ ಸುಖ ಸಂತೋಷಗಳಿಂದ ಕೂಡಿದ್ದು, ಎಲ್ಲೆಡೆ ಹರುಷದ ವಾತಾವರಣ ಇರಬೇಕು. ಹಿಂದೂ ಹಬ್ಬಗಳ ಆಚರಣೆಯ ದಿನಗಳಂದು ಸಾಮಾನ್ಯವಾಗಿ ಮಾಂಸಹಾರ ನಿಷಿದ್ಧ ಎಂದು ಗಣೇಶ್ ಚಂದ್ರಶೇಖರನ್ ಪಿಳ್ಳೈ ಹೇಳುತ್ತಾರೆ.
ಉಳಿದಂತೆ ಸುಮಾರು 33 ಮಿಲಿಯನ್ ಕೇರಳಿಗರಿಗೆ ದಿನನಿತ್ಯ ಮಾಂಸಹಾರ ಇರಬೇಕು ಅದರಲ್ಲೂ ಕನಿಷ್ಠ ಮೀನು ಸಾರಿನ ಊಟವಾದರೂ ಇರದಿದ್ದರೆ, ಪತ್ನಿಯನ್ನು ಅಲ್ಲಿನ ಪತಿರಾಯರು ಹುರಿದು ಮುಗ್ಗಿಬಿಡುತ್ತಾರೆ. ಹೆಚ್ಚೆಚ್ಚು ಮಾಂಸಹಾರ ಸೇವಿಸಿಯೂ ಕೂಡಾ ಕೇರಳಿಗರು ಹೆಚ್ಚು ಜೀವಿತಾವಧಿ(life expectancy) ಹೊಂದಿರುವುದು ಸೋಜಿಗವೇ ಸರಿ.



Click it and Unblock the Notifications
