Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ರೆಸಿಪಿ: ಕೂರ್ಗ್ ಶೈಲಿಯಲ್ಲಿ ಪಂದಿ ಕರಿ
ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಜಿಲ್ಲೆ ಕೊಡಗು. ಇಲ್ಲಿಯ ಆಹಾರಶೈಲಿ, ಉಡುಗೆ-ತೊಡುಗೆ ಎಲ್ಲದರಲ್ಲೂ ಒಂದು ವಿಶೇಷ ಇದೆ. ಕೂರ್ಗ್ ಬಂದು ಇಲ್ಲಿಯ ವಿಶೇಷ ಆಹಾರ ಏನು ಎಂದು ಕೇಳಿದರೆ ಪಂದಿಕರಿ ಎಂದೇ ಎಲ್ಲರೂ ಹೇಳುವುದು. ಇಲ್ಲಿ ಪ್ರಮುಖ ಹಬ್ಬ ಕೈಲ್ ಮುಹೂರ್ತದಲ್ಲಿ ಪಂದಿ ಕರಿ ಇದ್ದೇ ಇರುತ್ತದೆ. ಇನ್ನು ಮದುವೆ, ಇತರ ಸಂಭ್ರಗಳಲ್ಲಿನ ವಿಶೇಷ ಅಡುಗೆಗಳಲ್ಲಿ ಪಂದಿ ಕರಿ ಇದ್ದೇ ಇರುತ್ತದೆ.

ಪೋರ್ಕ್ ಪ್ರಿಯರಿಗೆ ಕೊಡಗಿನ ಪಂದಿಕರಿ ತುಂಬಾನೇ ರುಚಿ ಅನಿಸುವುದು, ಇತರ ಕಡೆ ಮಾಡುವುದಕ್ಕಿಂತ ಸ್ವಲ್ಪ ವಿಭಿನ್ನವಾಗಿ ಇಲ್ಲಿ ಪಂದಿ ಕರಿ ಮಾಡಲಾಗುವುದು. ಕೂರ್ಗ್ ಪಂದಿ ಕರಿಯ ಒಂದು ಸರಳವಾದ ರೆಸಿಪಿ ಇಲ್ಲಿದೆ ನೋಡಿ:
Recipe By: Reena
Recipe Type: Type Coorg style
Serves: 3
-
ಬೇಕಾಗುವ ಸಾಮಗ್ರಿ
ಪೋರ್ಕ್ (ಹಂದಿ ಮಾಂಸ) 1 ಕೆಜಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಅರಿಶಿಣ ಪುಡಿ 1/2 ಚಮಚ
2 ಚಮಚ ಖಾರದ ಪುಡಿ
4 ಚಮಚ ಕೊತ್ತಂಬರಿ ಪುಡಿ
(ಪೋರ್ಕ್ ಮಸಾಲ ಬಳಸುವುದಾದರೆ ಖಾರದ ಪುಡಿ, ಕೊತ್ತಂಬರಿ 1/2 ಚಮಚದಷ್ಟೂ ಬಳಸಿದರೂ ನಡೆಯುತ್ತೆ)
ಉಪ್ಪು 1 ಚಮಚ (ರುಚಿಗೆ ತಕ್ಕಷ್ಟು)
ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು
ಬೆಳುಳ್ಳಿ ಎಸಳು 4-5
1/3 ಚಮಚ ಜೀರಿಗೆ ಪುಡಿ
ಚಿಟಿಕೆಯಷ್ಟು ಮೆಂತೆ ಪುಡಿ (optional)
ಒಂದು ಇಂಚಿನಷ್ಟು ದೊಡ್ಡ ಇರುವ ಶುಂಠಿ
ಈರುಳ್ಳಿ 1
ಹಸಿ ಮೆಣಸು 1-2 (ನಿಮ್ಮ ಖಾರಕ್ಕೆ ತಕ್ಕಷ್ಟು)
ಕಾಳು ಮೆಣಸಿನ ಪುಡಿ 1ಚಮಚ
ಕಾಚಂ ಪುಳಿ ಅಥವಾ ನಿಂಬೆ ರಸ 1 ಚಮಚ
-
ಮಾಡುವುದು ಹೇಗೆ?
ಪೋರ್ಕ್ ಕರಿ ಮಾಡುವುದು ಬಲು ಸುಲಭ.
* ನೀವು ಪೋರ್ಕ್ ಮಸಾಲ ಬಳಸುವುದಾದರೆ ಅದನ್ನು ಸ್ವಲ್ಪ ಹುರಿಯಿರಿ (1-2 ನಿಮಿಷ ಹುರಿದರೆ ಸಾಕು)
* ಪೋರ್ಕ್ ಮಸಾಲ ಇಲ್ಲದಿದ್ದರೆ ಕೊತ್ತಂಬರಿ ಪುಡಿ ಹಾಗೂ ಖಾರದ ಪುಡಿ ಸ್ವಲ್ಪ ಕಾಫಿ ಹುಡಿ ಬಣ್ಣಕ್ಕೆ ಬರುವಷ್ಟು ಹೊತ್ತು ಕಡಿಮೆ ಉರಿಯಲ್ಲಿ ಹುರಿಯಿರಿ.
* ಈಗ ಬೇಯಿಸುವ ಪಾತ್ರೆಗೆ ಪೋರ್ಕ್ ತೊಳೆದು ಹಾಕಿ, ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ, ನೀರು ಕಾಲು ಲೋಟ ಹಾಕಿದರೆ ಸಾಕು. (ಕಾಚಂಪುಳಿ ಅಥವಾ ನಿಂಬೆರಸ ಹಾಕಿ)
* ಈಗ ಬೇಯಿಸಿ, ಸಾಧಾರಣ ಉರಿಯಲ್ಲಿ 45-50 ನಿಮಿಷ ಬೇಯಿಸಿ. ಆಗಾಗ ತಿರುಗಿಸುತ್ತಲೇ ಇರಿ, ಇಲ್ಲದಿದ್ದರೆ ತಳ ಹಿಡಿಯಬಹುದು. ನಂತರ ಉರಿಯಿಂದ ಇಳಿಸುವ 2-3 ನಿಮಿಷ ಮೊದಲು 4 ಹನಿ ಕಾಚಂ ಪುಳಿ ಹಾಕಿ ಅಥವಾ 1 ಚಮಚ ನಿಂಬೆರಸ ಸೇರಿಸಿದರೆ ಕಡಬು ಅಥವಾ ಇಡ್ಲಿ ಜೊತೆ ಸವಿಯಲು ಪಂದಿಕರಿ ರೆಡಿ.
- ಚುಟ್ಟಿ ಅಧಿಕವಿದ್ದರೆ ನೀರು ಕೂಡ ಸೇರಿಸಬೇಕಾಗಿಲ್ಲ, ಅದರ ಎಣ್ಣೆಯಲ್ಲೇ ಬೇಯುವುದು.
- People - 3
- Calories - 297.
- Fat - 20.8 grams.
- Protein - 25.7 grams.
- Carbs - 0 grams.
- Sugar - 0 grams.
- Fiber - 0 grams.



Click it and Unblock the Notifications