Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಹಸಿರು ಮೆಣಸಿನಕಾಯಿ ಚಟ್ನಿ

ಬೇಕಾದ ಸಾಮಗ್ರಿಗಳು:
* ಹೆಚ್ಚು ಖಾರವಿಲ್ಲದ ಹಸಿರು ಮೆಣಸಿನ ಕಾಯಿಗಳು: 10-15
* ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು: ಹಸಿರು ಮೆಣಸಿನ ಕಾಯಿಯ ಪ್ರಮಾಣದಷ್ಟೇ ಇದ್ದರೆ ಒಳ್ಳೆಯದು. 10-15 ಮೆಣಸಿನ ಕಾಯಿಗಳಿಗೆ 30-40 ಬೆಳ್ಳುಳ್ಳಿ ಎಸಳುಗಳು.
* ಹಸಿ ಕೊತ್ತಂಬರಿ ಸೊಪ್ಪು: ಒಂದು ಹಿಡಿಯಷ್ಟು
* ಜೀರಿಗೆ: ಒಂದು ಸಣ್ಣ ಚಮಚ
* ಮೆಂತ್ಯ: ಒಂದು ಸಣ್ಣ ಚಮಚ
* (ಕಡಲೆ ಕಾಯಿ) ಎಣ್ಣೆ : ಒಂದು ಸಣ್ಣ ಬಟ್ಟಲು
* ಪುಡಿ ಉಪ್ಪು: ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮೆಂತ್ಯ, ಜೀರಿಗೆ ಹಾಕಿ ಘಮ್ಮೆನ್ನುವಂತೆ ಕರಿದು ಅದಕ್ಕೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಬೇಕು. ಬೆಳ್ಳುಳ್ಳಿ ಎಸಳುಗಳು ಕೆಂಬಣ್ಣಕ್ಕೆ ಬಂದ ಮೇಲೆ ಹಸಿರು ಮೆಣಸಿನ ಕಾಯಿಗಳನ್ನು ಹಾಕಿ ಒಮ್ಮೆ ತಿರುವಿ, ಬಾಣಲೆಯ ಮೇಲೆ ತಟ್ಟೆ ಮುಚ್ಚಿ ಮಂದ ಉರಿಯಲ್ಲಿ ಎಣ್ಣೆಯಲ್ಲೇ ಬೇಯಲು ಬಿಡಬೇಕು. ಹಸಿರುಮೆಣಸಿನ ಕಾಯಿ ಬೆಂದ ಮೇಲೆ ಹೆಚ್ಚಿಟ್ಟುಕೊಂಡ ಕೊತ್ತಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ತಟ್ಟೆ ಮುಚ್ಚಿ ಮಂದ ಉರಿಯಲ್ಲಿ ಬಿಡಬೇಕು. ಐದು ನಿಮಿಷದ ನಂತರ ಬಾಣಲೆಯನ್ನು ಒಲೆಯ ಮೇಲಿಂದ ಇಳಿಸಿ ಆರಿಕೊಳ್ಳಲು ಬಿಡಬೇಕು.
ಪೂರ್ತಿ ತಣ್ಣಗಾದ ಮೇಲೆ ಸ್ವಲ್ಪ ಹಸಿ ಎಣ್ಣೆಯನ್ನು ಹಾಕಿ ಬಾಣಲೆಯಲ್ಲಿರುವ ಪದಾರ್ಥಗಳನ್ನು ಸಾಧ್ಯವಿದ್ದಲ್ಲಿ ಹಸೆ ಕಲ್ಲಿನ ಮೇಲೆ ಅರೆ ಬರೆ ಅರೆಯಬೇಕು. ಕಲ್ಲು ಲಭ್ಯವಿಲ್ಲದಿದ್ದಲ್ಲಿ ಮಿಕ್ಸಿಯಲ್ಲಿ ಹಾಕಿ ಒಂದು ಸುತ್ತು ತಿರುವಬೇಕು. ಪೂರ್ತಿ ನುಣ್ಣಗೆ ಮಾಡಬಾರದು. ಕುಟ್ಟಾಣಿಯ ಕುಟ್ಟುವ ಕಲ್ಲಿನ ಸಹಾಯದಿಂದಲೂ ಬಾಣಲೆಯಲ್ಲೇ ಮೆಣಸಿನಾಕಾಯಿ, ಬೆಳ್ಳುಳ್ಳಿಗಳು ಅರೆಬರೆ ನುಣ್ಣಗಾಗುವಂತೆ ಮಾಡಬಹುದು.
ಬೆಣ್ಣೆ, ಖಾರದ ಮೆಣಸಿನ ಕಾಯಿ ಚಟ್ನಿ, ರೊಟ್ಟಿ, ಚಪಾತಿಯ ಜೊತೆ ಹೇಳಿ ಮಾಡಿಸಿದ ಜೋಡಿ. ಮೆಣಸಿನ ಕಾಯಿ ಚಟ್ನಿ ತಿಂದ ಮೇಲೆ ಮೊಸರು ತಿನ್ನುವುದು ಮರೆಯಬಾರದು ಅಷ್ಟೆ. ಇಲ್ಲದಿದ್ದಲ್ಲಿ ಕೆಲವರಿಗೆ ಹೊಟ್ಟೆ ಉರಿ ಹತ್ತಿಕೊಳ್ಳಬಹುದು. ದಾವಣಗೆರೆಯ ಕಡೆ ಜೋಳದ ರೊಟ್ಟಿಯ ಜೊತೆ ಈ ಚಟ್ನಿ ಮಾಡುತ್ತಾರೆ (ಮೆಂತ್ಯ, ಜೀರಿಗೆ ಹಾಕುವುದಿಲ್ಲ). ಸುಟ್ಟ ಬದನೆ ಕಾಯಿಯನ್ನು ಇದರ ಜೊತೆ ಬೆರೆಸಿದರೂ ಚೆನ್ನಾಗಿರುತ್ತದೆ. ಮಹಾರಾಷ್ಟ್ರದಲ್ಲೂ ಚಪಾತಿ, ಜೋಳದ ರೊಟ್ಟಿಗಳ ಜೊತೆ ಉಪಯೋಗಿಸುತ್ತಾರೆ. ತಂಗಳು ಪೆಟ್ಟಿಗೆಯಲ್ಲಿಟ್ಟರೆ, ವಾರ, ಹದಿನೈದು ದಿವಸ ಕೆಡುವುದಿಲ್ಲ.



Click it and Unblock the Notifications
