Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಇಡೀ ಹೀರೇಕಾಯಿ ಚಟ್ನಿ

ಬೇಕಾಗುವ ಪದಾರ್ಥಗಳು
ಸಿಪ್ಪೆ ತೆಗೆಯದ ಹೀರೇಕಾಯಿ 1 ಅಥವಾ 2
ಹಸಿಮೆಣಸಿನಕಾಯಿ 5
ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಕಡಲೆಬೇಳೆ
ತುಂಡು ಬೆಲ್ಲ, ಹುಣಸೆಹಣ್ಣು
ರುಚಿಗೆ ಉಪ್ಪು
ಮಾಡುವ ವಿಧಾನ
ಹೀರೇಕಾಯಿ ಚೆನ್ನಾಗಿ ತೊಳೆದು ಪೀಲರ್ ನಲ್ಲಿ ಹೀರೆಕಾಯಿಯ ಚೂಪಾದ ತುದಿಗಳನ್ನು ಮಾತ್ರ ಹೆರೆದುಕೊಳ್ಳಬೇಕು. ಆನಂತರ ಸಣ್ಣ ಹೋಳುಗಳನ್ನಾಗಿ ಹೆಚ್ಚಿಕೊಂಡು, ಕಾಯಿ ಬಲಿತಿದ್ದರೆ ಮಾತ್ರ ಬೀಜ ಮತ್ತು ಬಿಳಿಯಾದ ಅಂಶವನ್ನು ತೆಗೆದುಹಾಕಬೇಕು. ಸಿಪ್ಪೆ ಚಟ್ನಿಗೆ ಒಣಮೆಣಸಿನಕಾಯಿ ಹಾಕಿ ಮಾಡಿದರೆ, ಇಡೀ ಹೀರೇಕಾಯಿ ಚಟ್ನಿಗೆ ಹಸಿಮೆಣಸಿನಕಾಯಿ ಹಾಕಿ ಮಾಡಬೇಕು.
ಸ್ಟೌವ್ ಮೇಲೆ ಪಾತ್ರೆ ಇಟ್ಟು ನಾಕು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಹಸಿಮೆಣಸಿನಕಾಯಿ, ಕರಿಬೇವು, ಕಡಲೆಬೇಳೆ ಒಗ್ಗರಣೆ ಆದ ನಂತರ ಹೆಚ್ಚಿಕೊಂಡ ತರಕಾರಿಯನ್ನು ಬಾಣಲೆಗೆಹಾಕಿ ಚೂರು ನೀರು ಚಿಮುಕಿಸಿ ಬೇಯಿಸಿ. ಇನ್ನೇನು ಬೆಂದಾಯಿತು ಎನ್ನುವಾಗ ತುಂಡು ಬೆಲ್ಲ, ಸ್ವಲ್ಪ ಹುಣಿಸೆ ಹಣ್ಣು ಹಾಕಿ ಕುದಿಸಿರಿ.
ಇದಕ್ಕೆ ಉಪ್ಪು ಬೆರೆಸಿ ಕರೆಂಟು ಹೋಗುವ ಮುಂಚೆ ಮಿಕ್ಸಿಗೆ ಹಾಕಿ ಚಟ್ನಿ ರುಬ್ಬಿಕೊಳ್ಳಿರಿ. ರುಬ್ಬುವಾಗ ಕೊತ್ತಂಬರಿ ಸೊಪ್ಪು ಹಾಕಿದರೆ ಚಟ್ನಿಗೆ ಪರಿಮಳ ಮತ್ತು ಹಸುರು ಹಸುರು ಬಣ್ಣ ಬರತ್ತೆ. ಅನ್ನದ ಜತೆ ಕಲಸಿಕೊಳ್ಳಲು ಇದು ತುಂಬಾ ಚೆನ್ನ. ಚಟ್ನಿ ಅನ್ನಕ್ಕೆ ತುಪ್ಪ ಹಾಕಿಕೊಳ್ಳುವುದನ್ನು ಮರೆಯಬೇಡಿ!



Click it and Unblock the Notifications
