ಇಡ್ಲಿ, ದೋಸೆಗೆ ತಯಾರಿಸಿ, ಈ ತೆಂಗಿನಕಾಯಿ ಬಳಸದ ಚಟ್ನಿ ರೆಸಿಪಿಗಳನ್ನ

Posted By:

ಪ್ರತಿದಿನ ಉಪಹಾರಕ್ಕೆ ಇಡ್ಲಿ, ದೋಸೆ ಸವಿಯಲು ಚಟ್ನಿ ಬೇಕೇ ಬೇಕು. ಆದರೆ, ಪ್ರತಿದಿನ ಅದೇ ತೆಂಗಿನಕಾಯಿ ಚಟ್ನಿ ತಿಂದು ಬೇಜಾರಾಗಿರೋದು ಸಾಮಾನ್ಯ. ಅದಕ್ಕಾಗಿ ನಾವಿಂದು, ತೆಂಗಿನಕಾಯಿ ಹಾಕದೇ, ಎರಡು ಬಗೆಯ ಚಟ್ನಿ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡಲಿದ್ದೇವೆ. ಈ ರೆಸಿಪಿಗಳನ್ನು ಟ್ರೈ ಮಾಡಿ, ಹೊಸ ರುಚಿ ಅನುಭವಿಸಿ.

Chutney Recipes Without Coconut for Idli & Dosa
ಇಡ್ಲಿ, ದೋಸೆಗೆ ತಯಾರಿಸಿ, ಈ ತೆಂಗಿನಕಾಯಿ ಬಳಸದ ಚಟ್ನಿ ರೆಸಿಪಿಗಳನ್ನ
ಇಡ್ಲಿ, ದೋಸೆಗೆ ತಯಾರಿಸಿ, ಈ ತೆಂಗಿನಕಾಯಿ ಬಳಸದ ಚಟ್ನಿ ರೆಸಿಪಿಗಳನ್ನ
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಪದಾರ್ಥಗಳು:

    ಕಡಲೆಕಾಯಿ ಚಟ್ನಿಗಾಗಿ:

    ½ ಕಪ್ ಶೇಂಗ ಕಡಲೆಕಾಯಿ

    ½ ಕಪ್ ಪುಟಾಣಿ/ ಹುರಿದ ಬೇಳೆ

    4 ಮೆಣಸಿನಕಾಯಿ

    ಸಣ್ಣ ಗಾತ್ರದ ಹುಣಸೆಹಣ್ಣು

    ½ ಟೀಸ್ಪೂನ್ ಉಪ್ಪು

    ಕಪ್ ನೀರು

    ಈರುಳ್ಳಿ ಟೊಮೆಟೊ ಚಟ್ನಿಗಾಗಿ:

    3 ಚಮಚ ಎಣ್ಣೆ

    1 ಟೀಸ್ಪೂನ್ ಉದ್ದಿನ ಬೇಳೆ

    ▢1 ಚಮಚ ಕಡಲೆಬೇಳೆ

    4 ಒಣ ಮೆಣಸಿನಕಾಯಿ

    ½ ಈರುಳ್ಳಿ

    1 ಇಂಚಿನ ಶುಂಠಿ

    2 ಲವಂಗ ಬೆಳ್ಳುಳ್ಳಿ

    1½ ಕಪ್ ಟೊಮೆಟೊ

    ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು

    ½ ಟೀಸ್ಪೂನ್ ಉಪ್ಪು

    ½ ಕಪ್ ನೀರು

    ಒಗ್ಗರಣೆಗೆ:

    3 ಚಮಚ ಎಣ್ಣೆ

    ½ ಚಮಚ ಸಾಸಿವೆ

    ½ ಚಮಚ ಉದ್ದಿನ ಬೇಳೆ

    1 ಒಣ ಮೆಣಸಿನಕಾಯಿ

    ಕರಿಬೇವಿನ ಎಲೆಗಳು

Red Rice Kanda Poha
How to Prepare
  • ಕಡಲೆಕಾಯಿ ಚಟ್ಟಿ ಮಾಡುವ ವಿಧಾನ:

    • ಮೊದಲನೆಯದಾಗಿ, ಬಾಣಲೆಯಲ್ಲಿ ½ ಕಪ್ ಶೇಂಗವನ್ನು ಕಡಿಮೆ ಉರಿಯಲ್ಲಿ ಹುರಿದು, ಸಿಪ್ಪೆ ತೆಗೆದುಕೊಳ್ಳಿ.
    • ಅದಕ್ಕೆ ½ ಕಪ್ ಹುರಿಗಡಲೆ (ಪುಟಾಣಿ) ಸೇರಿಸಿ, ಹುರಿಯುವುದನ್ನು ಮುಂದುವರಿಸಿ.
    • ಅದನ್ನು ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಮಿಕ್ಸಿ ಜಾರ್‌ಗೆ ವರ್ಗಾಯಿಸಿ.
    • ಅದಕ್ಕೆ 4 ಮೆಣಸಿನಕಾಯಿ, ಸಣ್ಣ ಗಾತ್ರದ ಹುಣಸೆಹಣ್ಣು ಮತ್ತು ½ ಟೀಸ್ಪೂನ್ ಉಪ್ಪು, ½ ಕಪ್ ನೀರು ಸೇರಿಸಿ, ನಯವಾದ ಪೇಸ್ಟ್‌ ತಯಾರಿಸಿ.
    • ಈ ಚಟ್ನಿಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, ಅಗತ್ಯವಿರುವಂತೆ ನೀರು ಸ್ಥಿರತೆಯನ್ನು ಸರಿಹೊಂದಿಸಿ.
    • ಕೊನೆಯದಾಗಿ, ಎಣ್ಣೆ, ಸಾಸಿವೆ, ಕರಿಬೇವು, ಉದ್ದಿನ ಬೇಳೆ ಸೇರಿಸಿ, ತಯಾರಿಸಿದ ಒಗ್ಗರಣೆಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ, ಇಡ್ಲಿ, ದೋಸೆ ಜೊತೆ ಸವಿಯಲು ಚಟ್ನ ಸಿದ್ಧ.

    ಈರುಳ್ಳಿ ಟೊಮೆಟೊ ಚಟ್ನಿ ಮಾಡುವ ವಿಧಾನ:

    • ಮೊದಲನೆಯದಾಗಿ, 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ 1 ಟೀಸ್ಪೂನ್ ಉದ್ದಿನ ಬೇಳೆ, 1 ಚಮಚ ಕಡಲೆಬೇಳೆ ಮತ್ತು 4 ಒಣಗಿದ ಕೆಂಪು ಮೆಣಸಿನಕಾಯಿಯನ್ನು ಸೇರಿ ಕಡಿಮೆ ಉರಿಯಲ್ಲಿ ಹುರಿಯಿರಿ.
    • ಈಗ ಅದಕ್ಕೆ ½ ಈರುಳ್ಳಿ, 1 ಇಂಚಿನ ಶುಂಠಿ ಮತ್ತು 2 ಲವಂಗ ಬೆಳ್ಳುಳ್ಳಿ ಸೇರಿಸಿ, ಹುರಿಯಿರಿ.
    • ಮುಂದೆ, 1½ ಕಪ್ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಹುರಿದು, ತಣ್ಣಗಾಗಿಸಿ, ಮಿಕ್ಸಿಗೆ ವರ್ಗಾಯಿಸಿ.
    • ಅದಕ್ಕೆ ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು, ½ ಚಮಚ ಉಪ್ಪು ಮತ್ತು ½ ಕಪ್ ನೀರು ಸೇರಿಸಿ, ನಯವಾದ ಪೇಸ್ಟ್‌ ತಯಾರಿಸಿ.
    • ಈ ಚಟ್ನಿಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ ಮತ್ತು ಅಗತ್ಯವಿರುವಂತೆ ನೀರು ಸ್ಥಿರತೆಯನ್ನು ಸರಿಹೊಂದಿಸಿ.
    • ಕೊನೆಯದಾಗಿ, ಎಣ್ಣೆ, ಸಾಸಿವೆ, ಕರಿಬೇವು, ಉದ್ದಿನ ಬೇಳೆ ಸೇರಿಸಿ, ತಯಾರಿಸಿದ ಒಗ್ಗರಣೆಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ, ಇಡ್ಲಿ, ದೋಸೆ ಜೊತೆ ಸವಿಯಲು ಚಟ್ನ ಸಿದ್ಧ.
Instructions
Nutritional Information
  • People - 2
  • ಕ್ಯಾಲೋರಿಗಳು - 304 ಕೆ.ಸಿ.ಎಲ್
  • ಕೊಬ್ಬು - 22 ಗ್ರಾಂ
  • ಪ್ರೋಟೀನ್ - 11 ಗ್ರಾಂ
  • ಕಾರ್ಬೋಹೈಡ್ರೇಟ್ಗಳು - 21 ಗ್ರಾಂ
  • ಫೈಬರ್ - 7 ಗ್ರಾಂ
[ 4 of 5 - 69 Users]
X
Desktop Bottom Promotion