Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ದೋಸೆ ರೆಸಿಪಿ
ಬೆಳಗಿನ ಉಪಾಹಾರಕ್ಕೇನು ಮಾಡಿದ್ದೀರಿ ಎಂಬ ಪ್ರಶ್ನೆಯನ್ನು ಕಚೇರಿಗೆ ಬಂದವರ ಹತ್ತಿರ ಕೇಳಿದರೆ ಅರ್ಧದಷ್ಟು ಜನರು ನೀಡುವ ಉತ್ತರ-ಉಪ್ಪಿಟ್ಟು. ಏಕೆಂದರೆ ಇದನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇನ್ನುಳಿದವರಲ್ಲಿ ಅರ್ಧದಷ್ಟು ಜನ ಸಿದ್ಧರೂಪದ ಬ್ರೆಡ್ ಜಾಮ್ ಅಥವಾ ಹೋಟೆಲಿನ ಯಾವುದಾದರೂ ತಿಂಡಿಯನ್ನು ತಿಂದು ಬಂದಿದ್ದರೆ ಕೆಲವರು ಮಾತ್ರ ಮನೆಯಲ್ಲಿ ತಯಾರಿಸಿದ ಇಡ್ಲಿ ಅಥವಾ ದೋಸೆಯನ್ನು ತಿಂದು ಬಂದಿರುತ್ತಾರೆ.
ವಾಸ್ತವವಾಗಿ ನಮ್ಮ ಮೂರೂ ಹೊತ್ತಿನ ಆಹಾರಗಳಲ್ಲಿ ಬೆಳಗಿನ ಉಪಾಹಾರದ ಪ್ರಮಾಣ ಮಾತ್ರ ಸರ್ವಥಾ ಕಡಿಮೆಯಾಗಕೂಡದು. ಏಕೆಂದರೆ ರಾತ್ರಿಯ ಉಪವಾಸದ ಬಳಿಕ ಬೆಳಗೆ ಹೆಚ್ಚಿನ ಪೌಷ್ಟಿಕಾಂಶವಿರುವ ಅಹಾರ ಬೇಕಾಗಿದ್ದು ಮಹ್ನದವರೆಗೂ ದೇಹಕ್ಕೆ ನಿರಂತರವಾಗಿ ಶಕ್ತಿಯನ್ನು ನೀಡುವಂತಿರಬೇಕು. ಅವಸರದಲ್ಲಿ ತಿಂದ ಒಂದು ಚಿಕ್ಕ ತಟ್ಟೆ ಉಪ್ಪಿಟ್ಟು, ಎರಡು ಇಡ್ಲಿ ಮೊದಲಾದವು ಏನೇನೂ ಸಾಲದು.

ಶಾಲೆಗೆ ಹೋಗುವ ಮಕ್ಕಳಿದ್ದರೆ ಗೃಹಿಣಿಯರೂ ಇದೇ ತೊಂದರೆಯನ್ನು ಎದುರಿಸುತ್ತಾರೆ. ಬೆಳಗ್ಗಿನ ಉಪಾಹಾರ ಕೊಂಚ ಸಮಯ ಕಬಳಿಸಿದರೂ ಮಕ್ಕಳಿಗೆ ಮದ್ಯಾಹ್ನದವರೆಗೂ ಹಸಿವಾಗದಂತೆ ಇರಿಸುವ ಮತ್ತು ಶಕ್ತಿಯನ್ನು ನೀಡುವ ಉಪಾಹಾರದ ಆಯ್ಕೆ ಮಾಡುವುದು ಕೊಂಚ ಕಷ್ಟವೇ ಸರಿ. ಈ ಸಂದರ್ಭದಲ್ಲಿ ಗೋಧಿಹಿಟ್ಟಿನ ದೋಸೆ ಅತ್ಯಂತ ಸಮರ್ಪಕದಾವ ತಿಂಡಿಯಾಗಿದೆ.
ಅಪ್ಪಟ ಸಸ್ಯಾಹಾರಿಯಾದ ಈ ದೋಸೆಯನ್ನು ಮಾಡಲು ಕೊಂಚ ಹೆಚ್ಚು ಸಮಯ ಬೇಕಾದರೂ, ಬೇಯಲು ತೆಗೆದುಕೊಳ್ಳುವ ಸಮಯದ ನಡುವಿನಲ್ಲಿ ದಿನದ ಇತರ ಕೆಲಸಗಳನ್ನು ನಡುವೆ ಮಾಡಬಹುದಾದುದರಿಂದ ನಿಮ್ಮ ಬೆಳಗ್ಗಿನ ಚಟುವಟಿಕೆಗಳು ಏನೂ ಬಾಧೆಗೊಳಗಾಗುವುದಿಲ್ಲ. ಬನ್ನಿ, ರುಚಿಕರ ಮತ್ತು ಆರೋಗ್ಯಕರ ಗೋಧಿಹಿಟ್ಟಿನ ದೋಸೆಯನ್ನು ಹೇಗೆ ಮಾಡುವುದು ಎಂಬ ವಿಧಾನವನ್ನು ನೋಡೋಣ: ಗರಿ-ಗರಿಯಾದ ಟೊಮೆಟೊ ದೋಸೆ
ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತೈದು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಇಡಿಯ ಗೋಧಿ- ಎರಡು ಕಪ್
*ಕಾಯಿತುರಿ: ಎರಡು ದೊಡ್ಡಚಮಚ
*ನೀರು -ಒಂದು ಕಪ್
*ಉಪ್ಪು ರುಚಿಗನುಸಾರ
ವಿಧಾನ:
1) ಗೋಧಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಾಲ್ಕಾರು ಬಾರಿ ನೀರು ಬಸಿದು ತೆಗೆದ ಬಳಿಕ ಒಂದು ತಟ್ಟೆಯಲ್ಲಿ ಹರಡಿ ಅರ್ಧ ಗಂಟೆ ಒಣಗಲು ಬಿಡಿ. ನಡುನಡುವೆ ಗೋಧಿಯನ್ನು ಬೆರಳುಗಳಿಂದ ಮೇಲೆಕೆಳಗೆ ಮಾಡಿ ಎಲ್ಲಾ ಧಾನ್ಯಗಳು ಸರಿಯಾಗಿ ಒಣಗುವಂತೆ ಮಾಡಿ. ಬಳಿಕ ಮಿಕ್ಸಿಯ ಜಾರಿನಲ್ಲಿ ಹಾಕಿ ತೀರ ನುಣ್ಣಗಾಗದಂತೆ (ಸ್ವಲ್ಪ ರವೆರವೆಯಾಗಿರುವಂತೆ) ರುಬ್ಬಿಕೊಳ್ಳಿ.
2) ಇದಕ್ಕೆ ಕೊಂಚ ನೀರು ಮತ್ತು ಕಾಯಿತುರಿಯನ್ನು ಹಾಕಿ ಮಿಶ್ರಣ ಮಾಡಿ ಮಿಕ್ಸಿಯಲ್ಲಿ ರುಬ್ಬುವುದನ್ನು ಮುಂದುವರೆಸಿ. ನೀರು ಅತಿ ಹೆಚ್ಚು ಇರದಂತೆ ಎಚ್ಚರಿಕೆ ವಹಿಸಿ. ಕೊಂಚ ಉಪ್ಪು ಹಾಕಿ ದೋಸೆಯ ಹಿಟ್ಟು ತಯಾರಿಸಿ.
3) ದೋಸೆಯ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಕಾವಲಿ ಬಿಸಿಯಾದ ಬಳಿಕ ಒಂದು ಸೌಟು ದೋಸೆಹಿಟ್ಟನ್ನು ಕಾವಲಿಯ ನಡುವೆ ಸುರುವಿ, ಕೂಡಲೇ ಕಾವಲಿಯನ್ನು ವೃತ್ತಾಕಾರದಲ್ಲಿ ವಾಲಿಸಿ ದೋಸೆಹಿಟ್ಟು ಕಾವಲಿಯಿಡೀ ಹರಡುವಂತೆ ಮಾಡಿ ಸುಮಾರು ಕಂದುಬಣ್ಣ ಬರುವಷ್ಟು ಹೊತ್ತು ಕಾವಲಿಯಲ್ಲಿರಿಸಿ.
4) ದೋಸೆಯನ್ನು ಕಾವಲಿಯಿಂದ ಎಬ್ಬಿಸಿ ಬಿಸಿಬಿಸಿಯಿರುವಂತೆಯೇ ಕಾಯಿಚಟ್ನಿಯೊಂದಿಗೆ ಮಕ್ಕಳಿಗೆ ಮತ್ತು ಹಿರಿಯರಿಗೆ ಬಡಿಸಿ.
ಸಲಹೆ:
1) ನೀರು ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ. ಏಕೆಂದರೆ ನೀರು ಹೆಚ್ಚಾದರೆ ಸರಿಯಾಗಿ ಬೇಯುವುದಿಲ್ಲ, ಮತ್ತು ಕಾವಲಿಯಿಂದ ಸುಲಭವಾಗಿ ಏಳುವುದಿಲ್ಲ.
2) ಬೇವಿನ ಎಲೆಯ ಚಟ್ನಿ ಈ ದೋಸೆಗೆ ಹೆಚ್ಚು ಸೂಕ್ತ. ಆದರೆ ಯಾವುದೇ ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯಬಹುದು.
3) ಸಮಯ ಉಳಿಸಲು ರಾತ್ರಿ ದೋಸೆಹಿಟ್ಟನ್ನು ಮಾಡಿ ಫ್ರಿಜ್ಜಿನಲ್ಲಿಟ್ಟು ಬೆಳಿಗ್ಗೆ ಬಳಸಬಹುದು. ಆದರೆ ಬಳಸುವ ಮೊದಲು ಫ್ರಿಜ್ಜಿನಿಂದ ಕನಿಷ್ಠ ಅರ್ಧ ಗಂಟೆ ಮೊದಲು ಹೊರಗೆ ತೆಗೆದಿಡಿ.



Click it and Unblock the Notifications
