Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಉಲ್ಲಾಸದ ಮನಸ್ಸಿಗೆ ಮುದವನ್ನು ನೀಡುವ ಸೇಮಿಗೆ ಉಪ್ಪಿಟ್ಟು!
ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ. ಆದರೆ ಈ ಸರಳ ಆಹಾರ ಪದ್ಧತಿಯನ್ನು ತಯಾರಿಸುವುದು ಕೂಡ ತುಸು ಸವಾಲಿನ ವಿಚಾರವೇ. ಏಕೆಂದರೆ ದಿನವೂ ಒಂದೇ ಬಗೆಯ ರುಚಿಯಿಲ್ಲದ ಪಥ್ಯದ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ದೃಷ್ಟಿ ಜಂಕ್ ಫುಡ್‌ಗಳತ್ತ ವಾಲುವುದು ಸಾಮಾನ್ಯ.
ಆದರೂ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಮತ್ತು ಆರೋಗ್ಯ ರುಚಿಯನ್ನು ಒದಗಿಸುವ ಒಂದು ಸರಳ ಉಪಹಾರ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಅಂತಹುದೇ ವಿಶೇಷ ಉಪಹಾರವಾದ ಸೇಮಿಗೆ ಉಪ್ಪಿಟ್ಟಿನೊಂದಿಗೆ ನಿಮ್ಮ ಬಳಿ ನಾವು ಬಂದಿರುವೆವು. ಉಪ್ಪಿಟ್ಟು ತಯಾರಿಸುವಾಗ ರವೆ ಬಳಸುವುದು ಸಾಮಾನ್ಯ ಆದರೆ ಇಂದಿನ ಉಪ್ಪಿಟ್ಟು ತಯಾರಿಯಲ್ಲಿ ರವೆಯ ಬದಲಿಗೆ ನಾವು ಸೇಮಿಗೆಯನ್ನು ಬಳಸುತ್ತಿದ್ದೇವೆ.

ನೀವು ಯಾವಾಗಲೂ ತಯಾರಿಸುವ ರವೆ ಉಪ್ಪಿಟ್ಟಿನಂತೆ ಈ ಸೇಮಿಗೆ ಉಪ್ಪಿಟ್ಟನ್ನು ಕೂಡ ತಯಾರಿಸಬಹುದು. ತರಕಾರಿಯನ್ನು ಸೇರಿಸಿ ಇದನ್ನು ಸಿದ್ಧಪಡಿಸಿದಾಗ ಇದು ನೀಡುವ ರುಚಿ ಮಾತ್ರ ಮರೆಯಲಾಗದ್ದು. ಆರೋಗ್ಯದ ಜೊತೆಗೆ ಒಂದೇ ಬಗೆಯ ಸವಿಯನ್ನು ನಾಲಿಗೆಗೆ ರಸಗವಳವನ್ನು ಇದು ನೀಡುವುದು ಖಂಡಿತ. ಹಾಗಿದ್ದರೆ ಹೆಚ್ಚು ತಡ ಮಾಡದೇ ಸರಳವಾಗಿ ತಯಾರಿಸಬಹುದಾದ ಸೇಮಿಗೆ ಉಪ್ಪಿಟ್ಟಿನ ಪಾಕ ವಿಧಾನವನ್ನು ಇಲ್ಲಿ ನೋಡಿಕೊಳ್ಳಿ ಮತ್ತು ತಯಾರಿಸಿ. ಉಪಹಾರವನ್ನು ಕಳೆಗಟ್ಟಿಸುವ ರುಚಿಯಾದ ಮೊಸರು ವಡೆ
ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು
*ಸೇಮಿಗೆ (ವರ್ಮಿಸಿಲಿ) - 2 ಕಪ್
*ನೀರು - 1 ½ ಕಪ್
*ಈರುಳ್ಳಿ - 1 ಕತ್ತರಿಸಿದ್ದು
*ಬಟಾಣಿ - ½ ಕಪ್
*ಕ್ಯಾರೇಟ್ - 1 (ಕತ್ತರಿಸಿದ್ದು)
*ಟೊಮೇಟೊ - 1 (ಕತ್ತರಿಸಿದ್ದು)
*ಹಸಿಮೆಣಸು - 2 ಸಣ್ಣಗೆ ಹೆಚ್ಚಿದ್ದು
*ಅರಶಿನ ಪುಡಿ -¼ ಚಮಚ
*ಸಾಸಿವೆ - 1 ಚಮಚ
*ಉದ್ದಿನ ಬೇಳೆ - 1 ಚಮಚ
*ಕಡ್ಲೆ ಬೇಳೆ - ½ ಚಮಚ
*ಕರಿಬೇವಿನ ಎಲೆ - 6-7
*ಒಣಮೆಣಸು - 1
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 2 ಚಮಚ
ಮಾಡುವ ವಿಧಾನ
1. ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಸೇಮಿಗೆಯನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
2. ಚೆನ್ನಾಗಿ ಹುರಿದ ನಂತರ, ಇದನ್ನು ತಟ್ಟೆಗೆ ವರ್ಗಾಯಿಸಿಕೊಳ್ಳಿ
3. ತದನಂತರ ಬಾಣಲೆಗೆ ಒಂದು ಚಮಚದಷ್ಟು ಎಣ್ಣೆಯನ್ನು ಹಾಕಿ ಬಿಸಿಯಾದೊಡನೆ ಇದಕ್ಕೆ ಸಾಸಿವೆ, ಒಣಮೆಣಸು, ಉದ್ದಿನ ಬೇಳೆ, ಕಡ್ಲೆ ಬೇಳೆ ಮತ್ತು ಕರಿಬೇವಿನೆಲೆಯನ್ನು ಸೇರಿಸಿ ಸ್ವಲ್ಪ ನಿಮಿಷ ಹುರಿದುಕೊಳ್ಳಿ.
4. ಇದಕ್ಕೆ ಈರುಳ್ಳಿಯನ್ನು ಸೇರಿಸಿ ಮತ್ತು 4-5 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹುರಿದುಕೊಳ್ಳಿ
5. ಇನ್ನು ಇದಕ್ಕೆ ಅರಶಿನ, ಕತ್ತರಿಸಿದ ಕ್ಯಾರೇಟ್, ಹಸಿರು ಬಟಾಣಿ, ಹಸಿಮೆಣಸು, ಉಪ್ಪು ಮತ್ತು ನೀರನ್ನು ಸೇರಿಸಿಕೊಳ್ಳಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6. ಇದಕ್ಕೆ ಈಗ ಹುರಿದ ಸೇಮಿಗೆಯನ್ನು ಸೇರಿಸಿ ಮತ್ತು 8-10 ನಿಮಿಷಗಳ ಕಾಲ ಬೇಯಲು ಬಿಡಿ.
7. ಪೂರ್ತಿ ಆದ ನಂತರ, ಮುಚ್ಚಳವನ್ನು ತೆಗೆದು ನೀರು ಚೆನ್ನಾಗಿ ಆರುವವರೆಗೆ ಬೇಯಲು ಬಿಡಿ.
8. ನೀರು ಪೂರ್ತಿ ಆರಿದ ನಂತರ, ಗ್ಯಾಸ್ ಆಫ್ ಮಾಡಿ
ಸ್ವಾದಿಷ್ಟ ಸೇಮಿಗೆ ಉಪ್ಪಿಟ್ಟು ಸವಿಯಲು ಸಿದ್ಧವಾಗಿದೆ. ಇದನ್ನು ನಿಮಗೆ ಹಾಗೆಯೇ ತಿನ್ನಬಹುದು ಅಥವಾ ಚಟ್ನಿಯೊಂದಿಗೆ ಕೂಡ ಸೇವಿಸಬಹುದಾಗಿದೆ.



Click it and Unblock the Notifications