Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದಾಲ್ ಬಾಟಿ -ರಾಜಸ್ಥಾನಿ ರೆಸಿಪಿ

ಬಾಟಿ ಮಾಡಲು ಬೇಕಾಗುವ ಸಾಮಾಗ್ರಿಗಳು:
* ಗೋಧಿ ಹಿಟ್ಟು 2 ಕಪ್
* ಒಂದೂವರೆ ಕಪ್ ರವೆ
* 2 ಚಮಚ ಜೀರಿಗೆ
* 5 ಚಮಚ ತುಪ್ಪ
ದಾಲ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಬೇಳೆ
* 1 ಚಮಚ ಸಾಸಿವೆ
* 1/2 ಚಮಚ ಜೀರಿಗೆ
* 1/2 ಚಮಚ ಅರಿಶಿಣ
* 2 ಚಮಚ ಕೊತ್ತಂಬರಿ ಪುಡಿ
* ಸ್ವಲ್ಪ ಕರಿ ಬೇವಿನ ಎಲೆ
* ಬೆಳ್ಳುಳ್ಳಿ 6-7 ಎಸಳು
* 1 ತುಂಡು ಡಾಲ್ಚಿನಿ (ಚಕ್ಕೆ)
* 1 ಚಿಟಿಕೆಯಷ್ಟು ಇಂಗು
* ರುಚಿಗೆ ತಕ್ಕ ಉಪ್ಪು
* 2 ಹಸಿ ಮೆಣಸಿನ ಕಾಯಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
* 1/4 ಕಪ್ ಹುಣಸೆ ಹಣ್ಣಿನ ರಸ
* 1 ಚಮಚ ತುಪ್ಪ
ಬಾಟಿ ತಯಾರಿಸುವ ವಿಧಾನ
1. ಗೋಧಿ ಹಿಟ್ಟು, ರವೆ ಮತ್ತು ತುಪ್ಪ, ಜೀರಿಗೆ, ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಕಲೆಸಬೇಕು.
2. ಆ ಮಿಶ್ರಣದಿಂದ ಚಿಕ್ಕ ಉಂಡೆ ಮಾಡಿ ಅದನ್ನು ಕೈಯಿಂದ ತಟ್ಟಿ, ನಂತ ತವಾವನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಸವರಿ ಎರಡೂ ಬದಿ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಬೇಕು. ಈ ರೀತಿ ಮಾಡಿದರೆ ಬಾಟಿ ರೆಡಿ.
ದಾಲ್ ಸಾರು ಮಾಡುವ ವಿಧಾನ:
1. ಬೇಳೆಯನ್ನು 1/2 ಗಂಟೆ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ಅದಕ್ಕೆ ಉಪ್ಪು ಮತ್ತು ಅರಿಶಿಣ, ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಬೇಕು.
3. ಚಕ್ಕೆ ಮತ್ತು ಬೆಳ್ಳುಳ್ಳಿಯನ್ನು ಜಜ್ಜಬೇಕು.
4. ಹಸಿಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಬೇಕು.
5. ಸಾರು ಪಾತ್ರೆಯನ್ನು ಬಿಸಿಮಾಡಿ ತುಪ್ಪ ಹಾಕಿ ಅದಕ್ಕೆ ಇಂಗು, ಜೀರಿಗೆ ಮತ್ತು ಸಾಸಿವೆಯನ್ನು ಹಾಕಬೇಕು.
6. ಸಾಸಿವೆ ಚಿಟಪಟ ಶಬ್ದ ಮಾಡುವಾಗ ಕರಿಬೇವಿನ ಎಲೆಯನ್ನು ಹಾಕಬೇಕು.
7. ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಪುಡಿ ಹಾಕಿ ಮಿಶ್ರ ಮಾಡಿ.
8. ಈಗ ಜಜ್ಜಿದ ಬೆಳ್ಳುಳ್ಳಿ, ಚಕ್ಕೆಮತ್ತು ಬೇಯಿಸಿದ ಬೇಳೆಯನ್ನು ಸೇರಿಸಿ.
9. ಸ್ವಲ್ಪ ಹೊತ್ತು (5 ನಿಮಿಷ) ಕುದಿಸಿದ ನಂತರ ಹುಣಸೆ ಹಣ್ಣಿನ ರಸ ಹಾಗೂ ಸ್ವಲ್ಪ ಸಕ್ಕರೆ ಸೇರಿಸಿ 5 ನಿಮಿಷ ಕುದಿಸಿ. (ಉಪ್ಪು ಸಾಲದಿದ್ದರೆ ಇನ್ನೂ ಸ್ವಲ್ಪ ಹಾಕಿ).
10. ಈಗ ಕುದಿಯುತ್ತಿರುವ ಬೇಳೆ ಸಾರಿಗೆ ಕೊತ್ತಂಬರಿ ಸೊಪ್ಪು ಹಾಕಿದರೆ ದಾಲ್ ಕರಿ ರೆಡಿ.



Click it and Unblock the Notifications
