Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಜೋಳದ ರೊಟ್ಟಿ

ಇತ್ತೀಚೆಗೆ ದಕ್ಷಿಣ ಕರ್ನಾಟಕ ಭಾಗದಲ್ಲೂ ಜೋಳದ ರೊಟ್ಟಿ ಖ್ಯಾತಿ ಪಡೆಯುತ್ತಿದೆ. ಜೋಳದ ರೊಟ್ಟಿ ತಿನ್ನಲು ಎಷ್ಟು ಸೊಗಸೋ ಮಾಡುವುದೂ ಅಷ್ಟೇ ಸುಲಭ. ಬನ್ನಿ ಜೋಳದ ರೊಟ್ಟಿ ರೆಡಿ ಮಾಡೇ ಬಿಡೋಣ...
ಬೇಕಾಗುವ ಪದಾರ್ಥ :
3 ಕಪ್ ಜೋಳದ ಹಿಟ್ಟು. 100 ಗ್ರಾಂನಷ್ಟು ಎಳ್ಳು, ರುಚಿಗೆ ಬೇಕಾದಷ್ಟು ಹದವಾಗಿ ಉಪ್ಪು, ಇಂಗು, ಅಚ್ಚ ಮೆಣಸಿನಪುಡಿ ಹಾಗೂ ಒಂದು ಕಪ್ ಎಣ್ಣೆ.
ಮಾಡುವ ವಿಧಾನ :
ಅಗಲವಾದ ಬಾಯಿಯ ಪಾತ್ರೆಗೆ ಮೊದಲು ಜೋಳದ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ 1 ಕಪ್ ಬಿಸಿ ನೀರು ಹಾಕಿ ಒಂದರ್ಧ ಗಂಟೆ ಬಿಡಿ. ಹಿಟ್ಟು ಚೆನ್ನಾಗಿ ನೆನೆಯುತ್ತದೆ. ಆನಂತರ ಹುರಿದ ಎಳ್ಳು, ಉಪ್ಪು, ಖಾರ ಬೆರೆಸಿ. ಚಪಾತಿ ಹಿಟ್ಟಿನ ರೀತಿ ಹದವಾಗಿ ಕಲೆಸಿ. ಇದಕ್ಕೆ ಸ್ವಲ್ಪ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಟ್ಟುಕೊಳ್ಳಿ.
ಒಂದು ಗಂಟೆ ಕಳೆದ ಬಳಿಕ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಚಪಾತಿ ಮಣೆಯ ಮೇಲೆ ತುಸು ಹಿಟ್ಟು ಹಾಕಿ ಚಪಾತಿಯಂತೆಯೇ ಹಾಳೆಗಳನ್ನು ತಯಾರಿಸಿ. ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನ ಹಾಳೆಯನ್ನು ಹಾಕಿ ಬೇಯಿಸಿ. ಹದವಾಗಿ ಬೆಂದ ಬಳಿಕ ಮತ್ತೊಮ್ಮೆ ಕಾವಲಿಯಲ್ಲಿ ರೊಟ್ಟಿಯನ್ನು ಮಗುಚಿ ಬೇಯಿಸಿ.
ರೊಟ್ಟಿಯೊಂದಿಗೆ ಉಪ್ಪಿನಕಾಯಿ, ಎಣ್ಣೆಗಾಯಿ, ಚಟ್ನಿಪುಡಿ ಗುರೆಳ್ಳು, ಕುರೆಸಾಣಿ ಪುಡಿ, ಒಳ್ಳೆ ಎಳ್ಳೆಣ್ಣೆ ಇದ್ದರಂತೂ ರೊಟ್ಟಿಯ ಗಮ್ಮತ್ತೇ ಗಮ್ಮತ್ತು.



Click it and Unblock the Notifications
