Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಬ್ರೇಕ್ ಫಾಸ್ಟ್ ಗೆ ಸ್ವಾದಿಷ್ಟ ಹೆಸರು ಕಾಳಿನ ಉಪ್ಪಿಟ್ಟಿರಲಿ

ಉಪ್ಪಿಟ್ಟಿಗೆ ಬೇಕಾಗುವ ಸಾಮಾನು: ಒಂದು ಕಪ್ ಮೊಳಕೆಒಡೆದ ಹೆಸರು ಕಾಳು, 1 1/2 ಕಪ್ ಹುರಿದ ರವೆ, 3 ಕಪ್ ನೀರು, ಸಾಸಿವೆ, ಎಣ್ಣೆ, 1/2 ಚಮಚ ಜೀರಿಗೆ, 1/2 ಚಮಚ ಉದ್ದಿನ ಬೇಳೆ, 1/2 ಚಮಚ ಕಡಲಡ ಬೇಳೆ, 1/2 ಚಮಚ ಮೆಣಸಿನ ಪುಡಿ, 3 ಹಸಿರು ಮೆಣಸಿನಕಾಯಿ, 1/2 ಕಪ್ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ನಿಂಬೆರಸ, ತೆಂಗಿನ ತುರಿ, ಕೊತ್ತಂಬರಿ
ಹೆಸರು ಕಾಳಿನ ಉಪ್ಪಿಟ್ಟು ಮಾಡುವುದು ಹೇಗೆ?
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು ಎಲ್ಲವನ್ನೂ ಹಾಕಿ ಕೆಲ ಸೆಕೆಂಡುಗಳ ಕಾಲ ಹುರಿದುಕೊಳ್ಳಬೇಕು.
* ಅದಕ್ಕೆ 3 ಕಪ್ ನೀರು ಬೆರೆಸಿ ಕುದಿಯಲು ಬಿಡಬೇಕು.
* ಪಾತ್ರೆಯೊಂದರಲ್ಲಿ 10 ನಿಮಿಷ ಮೊಳಕೆ ಒಡೆದ ಹೆಸರು ಕಾಳನ್ನು ಬೇಯಿಸಿ ಬಾಣಲೆಯ ಮಿಶ್ರಣಕ್ಕೆ ಬೆರೆಸಬೇಕು.
* ಈ ಮಿಶ್ರಣ ಕುದಿಯಲು ಆರಂಭಿಸುತ್ತಿದ್ದಂತೆ ರವೆಯನ್ನು ನಿಧಾನವಾಗಿ ಹಾಕಬೇಕು. ಹಾಗೆಯೇ ಸಣ್ಣ ಉರಿಯಲ್ಲಿ 5 ನಿಮಿಷ ಬಿಟ್ಟು ಉರಿಯನ್ನು ಆರಿಸಬೇಕು.
* ಕೊನೆಗೆ ಕೆಲವು ಹನಿ ನಿಂಬೆರಸ ಹಾಕಿ ಅದರ ಮೇಲೆ ಕೊತ್ತಂಬರಿ, ತೆಂಗಿನ ತುರಿ ಬೆರೆಸಿ ತಿರುಗಿಸಿದರೆ ರುಚಿರುಚಿಯಾದ ಹೆಸರು ಕಾಳಿನ ಉಪ್ಪಿಟ್ಟು ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications
