Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಟಾಣಿ ಅಕ್ಕಿ ರೊಟ್ಟಿ, ಫಳಾರಕ್ಕೆ ಬೆಸ್ಟ್ ಬೆಟ್

ಹಾಗಾದರೆ ಬಟಾಣಿ ಅಕ್ಕಿ ರೊಟ್ಟಿ ಮಾಡೋದು ಹೇಗೆ ಎಂದು ಈಗಲೇ ತಿಳಿದುಕೊಳ್ಳಿ. ಇದು ತುಂಬಾ ಸುಲಭ.
ಬಟಾಣಿ ಅಕ್ಕಿ ರೊಟ್ಟಿಗೆ ಏನೇನು ಬೇಕು?
* 1 ಕಪ್ ಬೇಯಿಸಿದ ಬಟಾಣಿ
* 2 ಕಪ್ ಅಕ್ಕಿ ಹಿಟ್ಟು
* 1 ಕಪ್ ತುರಿದ ಕ್ಯಾರೆಟ್
* 1 ಕಪ್ ಚಿಕ್ಕದಾಗಿ ಕತ್ತರಿಸಿದ ದುಂಡು ಮೆಣಸಿನ ಕಾಯಿ (ಕ್ಯಾಪ್ಸಿಕಂ)
* 1 ಕಪ್ ಕಾಯಿತುರಿ
* 1 ಚಮಚ ಶುಂಠಿ ಪೇಸ್ಟ್
* 1 ಚಮಚ ಜೀರಿಗೆ
* ಕೊತ್ತಂಬರಿ ಸೊಪ್ಪು
* ಉಪ್ಪು, ಎಣ್ಣೆ, ಬೆಣ್ಣೆ
ಬಟಾಣಿ ಅಕ್ಕಿ ರೊಟ್ಟಿ ತಯಾರಿಸೋದು ಹೇಗೆ?
* ನೀರನ್ನು ಚೆನ್ನಾಗಿ ಕಾಯಿಸಿ, ಕುದಿಯುತ್ತಿರುವ ನೀರಿಗೆ ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಂ, ಕಾಯಿತುರಿ, ಶುಂಠಿ ಪೇಸ್ಟ್, ಜೀರಿಗೆ, ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಬೆರೆಸಬೇಕು.
* ಅಕ್ಕಿ ಹಿಟ್ಟಿಗೆ ಇದನ್ನು ಬೆರೆಸಿ ಚೆನ್ನಾಗಿ ತಿರುಗಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿದ್ದು ತಣ್ಣಗಾಗಲು ಬಿಡಬೇಕು.
* ಈಗ ಇದನ್ನು ಉಂಡೆ ಮಾಡಿಕೊಂಡು ಅಂಚಿನ ಮೇಲೆ ಸಮತಟ್ಟಾಗಿ ಮತ್ತು ಅಗಲವಾಗಿ ತಟ್ಟಬೇಕು.
* ಸುತ್ತಲೂ ಒಂದು ಚಮಚ ಎಣ್ಣೆ ಹಾಕಿ ರೊಟ್ಟಿ ಕೆಂಪಗಾದ ಮೇಲೆ ಮಗುಚಿ ಬೇಯಿಸಬೇಕು.
ಈಗ ರುಚಿಯಾದ ಬಟಾಣಿ ಅಕ್ಕಿ ರೊಟ್ಟಿ ತಿನ್ನಲು ತಯಾರಾಗಿದೆ. ಅದರ ಮೇಲೆ ಬೆಣ್ಣೆ ಹಾಕಿ, ಯಾವುದಾದರೂ ಗೊಜ್ಜು ಅಥವಾ ಪಲ್ಯದೊಂದಿಗೆ ಬೆರೆಸಿ ತಿಂದರೆ ರುಚಿ ಎಂದರೆ ಹೀಗಿರಬೇಕು ಎನ್ನುವಂತಿರುತ್ತೆ. ಇದನ್ನು ಹಾಗೆಯೇ ತಿಂದರೂ ಚೆಂದ.



Click it and Unblock the Notifications
