Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಫ್ರೈ ಮಾಡಿದ ಇಡ್ಲಿ ಮತ್ತು ಪಲ್ಯ ಟ್ರೈ ಮಾಡಿ
ಕರಿದ ಇಡ್ಲಿಗಳೊಂದಿಗೆ ವಿವಿಧ ತರಕಾರಿ ಹಾಕಿದ ಪಲ್ಯ ಮಾಡಿದರೆ ಎಂಥ ಡೆಡ್ಲಿ ಕಾಂಬಿನೇಷನ್ ಆಗತ್ತೆ ಗೊತ್ತಾ? ಫ್ರೈ ಮಾಡಿದ ಇಡ್ಲಿ ಈರುಳ್ಳಿ ಚಟ್ನಿಯೊಂದಿಗೆ ಅಥವಾ ಶುಂಠಿ ಚಟ್ನಿಯೊಂದಿಗೆ ಕೂಡ ಸೂಪರಾಗಿರುತ್ತದೆ. ತಣ್ಣಗಿನ ಇಡ್ಲಿ ತಿನ್ನಲು ತಕರಾರು ಮಾಡುವ ಮಕ್ಕಳಿಗೆ ಇದು ಹೇಳಿ ಮಾಡಿಸಿದ ತಿಂಡಿ. ಮಕ್ಕಳೂ ಖಷ್, ತಂಗಳು ಎಂದು ಚೆಲ್ಲಬೇಕಾಗೂ ಇಲ್ಲ. ಒಮ್ಮೆ ಪ್ರಯೋಗಿಸಿ ನೋಡಿ.
ಬೇಕಾಗುವ ಪದಾರ್ಥಗಳು : ಅಕ್ಕಿ ಇಡ್ಲಿ | ಕ್ಯಾರೆಟ್, ಕ್ಯಾಬೇಜ್, ಬೀನ್ಸ್ ಮೂರೂ ಸೇರಿ ಎರಡು ಬಟ್ಟಲು | ಈರುಳ್ಳಿ ಎರಡು | ಹಸಿ ಮೆಣಸಿನಕಾಯಿ ನಾಲ್ಕಾರು | ಕರಿಬೇವು, ಕೋತಂಬರಿ | ಹಸಿ ಶುಂಠಿ ತುಣುಕು | ತುರಿದ ತೆಂಗಿನಕಾಯಿ ಅರ್ಧ ಬಟ್ಟಲು | ನಿಂಬೆಹಣ್ಣು | ಒಗ್ಗರಣೆ ಮತ್ತು ಕರಿಯಲು ಎಣ್ಣೆ.
ತಯಾರಿ:
* ಮೊದಲಿಗೆ ಬಿಳಿಬಳಿ ಇಡ್ಲಿಗಳನ್ನು ಎರಡು ಅಥವಾ ನಾಲ್ಕು ಭಾಗಗಳಲ್ಲಿ ಕತ್ತರಿಸಿಕೊಂಡು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಕಂದು ಬಣ್ಣ ಬರುವವರೆಗೆ ಕರಿದಿಡಿ. ಕರಿದ ಇಡ್ಲಿಗಳನ್ನು ಎಣ್ಣೆ ಹೀರಿಕೊಳ್ಳಲು ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರಿನ ಮೇಲೆ ಹರಿಡಿರಿ.
* ಇದಾದ ನಂತರ ಪಲ್ಯ ತಯಾರಿಸಲು ಶುರು ಹಚ್ಚಿಕೊಳ್ಳಿ. ಒಂದೆಡೆ ತರಕಾರಿಗಳನ್ನು ಬೇಯಿಸಿಡಿ.
* ಒಗ್ಗರಣೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ ಸಾಸಿವೆ ಚಟಚಟ ಅನ್ನಿಸಿ ಅರಿಷಿಣ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಈರುಳ್ಳಿ, ಶುಂಠಿ, ಕರಿಬೇವು, ಕೊತಂಬರಿಗಳನ್ನು ಒಂದೊಂದಾಗಿ ಬಾಣಲೆಗೆ ತಳ್ಳುತ್ತಾ ಬನ್ನಿ. ಬೇಕಿದ್ದರೆ ತೆಂಗಿನ ತುರಿ ಈಗಲೇ ಸೇರಿಸಿ.
* ಐದಾರು ನಿಮಿಷ ಬಾಡಿಸಿದ ನಂತರ ಬೇಯಿಸಿಟ್ಟುಕೊಂಡ ತರಕಾರಿಯನ್ನು ಬಾಣಲೆಗೆ ಧುಮುಕಿಸಿ ಕೈಯಾಡಿಸಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ. ಉಪ್ಪು ಹಾಕಿ ಸ್ಟೌವನ್ನು ಸಿಮ್ ಮಾಡಿ ಕೆಲ ಹೊತ್ತು ಪ್ಲೇಟನ್ನು ಮುಚ್ಚಿಟ್ಟುಬಿಡಿ.
* ಬೆಂದು ಬಂದ ಪಲ್ಯವನ್ನು ಫ್ರೈ ಮಾಡಿದ ಇಡ್ಲಿಯೊಂದಿಗೆ ತಿನ್ನಲು ನೀಡಿ. ನೆನಪಿಡಿ ಈ ಕರಿದ ಇಡ್ಲಿಗಳು ಮತ್ತೂ ಒಂದು ದಿನ ಕೆಡುವುದಿಲ್ಲ. ಸೋ, ಹೇಗಿದೆ ಉಪಾಯ? ಜಸ್ಟ್ ಟ್ರೈ ಇಟ್.



Click it and Unblock the Notifications

