Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಸಿ ಅರಿಶಿನ ಕೊಂಬಿನ ಚಟ್ನಿ.

*ತೇಜಸ್ವಿನಿ ಹೆಗಡೆ, ಬೆಂಗಳೂರು
ನಂಜನ್ನು ತೆಗೆಯಲು ಹಾಗೂ ಆರೋಗ್ಯವನ್ನು ವರ್ಧಿಸಲು ಹಸಿ ಅರಿಶಿನ ಕೊಂಬಿನ ಚಟ್ನಿಯನ್ನು ವಿಶೇಷವಾಗಿ ಬಾಣಂತಿಯರಿಗೆ ಮಾಡಿಕೊಡುತ್ತಾರೆ. ಮಾಡಲೂ ಬಲು ಸುಲಭ. ಹೆಚ್ಚಿನ ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ. ಮಾತ್ರವಲ್ಲ ಒಣಗಿದ ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೂ ಕೆಡದು. ಈ ಚಟ್ನಿಯ ತಯಾರಿಕೆಗೆ ಹಸಿ ಕೊಂಬನ್ನೇ ಉಪಯೋಗಿಸಬೇಕು. ಒಣಗಿದ ಅರಿಶಿನ ಕೊಂಬನ್ನಾಗಲೀ, ಅರಿಶಿನದ ಪುಡಿಯನ್ನಾಗಲೀ ಬಳಸಿದರೆ ರುಚಿ ಬರದು.
ಬೇಕಾಗುವ ಸಾಮಗ್ರಿಗಳು
* ಹಸಿ ಅರಿಶಿನದ ಕೊಂಬು - ಎರಡು ಹೆಬ್ಬೆರಳಿನ ಗಾತ್ರದಷ್ಟು
* ತೆಂಗಿನ ಕಾಯಿ - 1/2 ಭಾಗ.
ವಿ.ಸೂ : ಬಾಣಂತಿಯರಿಗಾಗಿ ಈ ಚಟ್ನಿಯನ್ನು ತಯಾರಿಸುವಾಗ ಒಣ ಕೊಬ್ಬರಿಯನ್ನು ಹಾಕಿದರೆ ಉತ್ತಮ. ಹಸಿ ತೆಂಗಿನ ತುರಿಯನ್ನು ಬಳಸುವುದು ಅಷ್ಟು ಸೂಕ್ತವಲ್ಲ.
* ಸಾಸಿವೆ -1/4 ಚಮಚ
* ತೆಂಗಿನೆಣ್ಣೆ - 2 ಚಮಚ
* ಕಡ್ಡಿಮೆಣಸು - ಖಾರಕ್ಕೆ ತಕ್ಕಂತೆ
* ಉಪ್ಪು - ರುಚಿಗೆ ತಕ್ಕಷ್ಟು
* ಬೆಲ್ಲ - ಸಿಹಿ ನಮಗೆ ಬೇಕಾಗುವಷ್ಟು
* ಹುಣಸೇ ಹಣ್ಣು - ಎರಡು ದೊಡ್ಡ ಕಡಲೇಕಾಳಿನ ಗಾತ್ರದಷ್ಟು.
ಮಾಡುವ ವಿಧಾನ
* ಮೊದಲಿಗೆ ಹಸಿ ಅರಿಶಿನದ ಕೊಂಬನ್ನು ಚೆನ್ನಾಗಿ ತೊಳೆದು ಬಿಲ್ಲೆಯಾಕಾರದಲ್ಲಿ ಹೆಚ್ಚಿಟ್ಟುಕೊಳ್ಳಬೇಕು.
* ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಸಾಸಿವೆ ಹಾಗೂ ಕಡ್ಡಿಮೆಣಸನ್ನು ಹಾಕಿ ಹುರಿಯಬೇಕು.
* ಸಾಸಿವೆ ಚಟಪಟವೆನ್ನಲು ಅದಕ್ಕೆ ಬಿಲ್ಲೆಯಾಕಾರದ ಅರಿಶಿನದ ಕೊಂಬಿನ ಚೂರುಗಳನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಹುರಿಯಬೇಕು.
* ನಂತರ ಅದನ್ನು ತಣಿಸಿ ಕಾಯಿತುರಿ, ಉಪ್ಪು ಹಾಗೂ ಹುಳಿಯನ್ನು ಹಾಕಿ ನುಣ್ಣಗೆ ರುಬ್ಬಬೇಕು.
* ರುಬ್ಬಿದ ಮಿಶ್ರಣಕ್ಕೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಇದರೊಳಗಿನ ನೀರಿನಾಂಶಗಳು ಆರಿ, ಗಟ್ಟಿ ಚಟ್ನಿಯಂತೇ ಆಗುವವರೆಗೆ ಅಂದರೆ ಲೇಹದ ತರ ಆದಾಗ ಆರಿಸಿ ತಣಿಸಿ ಒಣಗಿದ ಗಾಳಿಯಾಡದ ಡಬ್ಬದಲ್ಲಿ ತುಂಬಿಡಬೇಕು.
* ತಿನ್ನಲು ಬಲು ರುಚಿಕರ ಹಗೂ ಆರೋಗ್ಯಕರ ಈ ಚಟ್ನಿಯನ್ನು ಫ್ರಿಜ್‌ನಲ್ಲಿಟ್ಟು ಬೇಕಾದಾಗ ಬಳಸಿದರೆ ವಾರದವರೆಗೂ ರುಚಿಕೆಡದು.



Click it and Unblock the Notifications
