For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸ್ಪೆಷಲ್ ರೆಸಿಪಿ: ಆಹಾ ಎಷ್ಟೊಂದು ರುಚಿ ಈ ಆ್ಯಪಲ್ ರಾಬ್ದಿ

Posted By:
|

ರಾಬ್ದಿ ಇದೊಂದು ಉತ್ತರ ಭಾರತದ ಕಡೆ ಜನಪ್ರಿಯವಾಗಿರುವ ಸಿಹಿ ಪದಾರ್ಥವಾಗಿದೆ. ಇದರ ರುಚಿಗೆ ಮನಸ್ಸು ಕರಗದವರೇ ಇರಲ್ಲ ಅಷ್ಟೊಂದು, ಅಲ್ಲದೆ ನೀವು ಅಂಗಡಿಯಿಂದ ಕೊಳ್ಳುವುದಾದರೆ ಒಂದು ಚಿಕ್ಕ ಕಪ್‌ಗೆ ನೂರು ರುಪಾಯಿಗೂ ಅಧಿಕ ಬೆಲೆ ಇರುತ್ತದೆ.

apple rabdi recipe

ಈ ರಾಬ್ದಿ ನೀವು ಮನೆಯಲ್ಲಿಯೂ ಮಾಡಿ ಸವೆಯಬಹುದು. ನಾವಿಲ್ಲಿ ಸೇಬಿನಿಂದ ಮಾಡುವ ರಾಬ್ದಿ ರೆಸಿಪಿ ನೀಡಿದ್ದೇವೆ.

ಇದನ್ನು ಹಬ್ಬಗಳ ಸಮಯದಲ್ಲಿಯೂ ಮಾಡಬಹುದು. ಈ ದೀಪಾವಳಿ ಹಬ್ಬದಲ್ಲಿ ರಾಬ್ದಿ ಸವಿಯಲು ಇಷ್ಟಪಡುವುದಾದರೆ ಇದನ್ನು ಟ್ರೈ ಮಾಡಿ.

Apple Rabdi Recipe , ಆ್ಯಪಲ್ ರಾಬ್ದಿ ರೆಸಿಪಿ
Apple Rabdi Recipe , ಆ್ಯಪಲ್ ರಾಬ್ದಿ ರೆಸಿಪಿ
Prep Time
10 Mins
Cook Time
40M
Total Time
50 Mins

Recipe By: Reena TK

Recipe Type: Sweet

Serves: Depends

Ingredients
  • ಬೇಕಾಗುವ ಸಾಮಗ್ರಿ

    3 ಕಪ್ ಮಂದವಾದ ಹಾಲು

    ಎರಡೂವರೆ ಚಮಚ ಸಕ್ಕರೆ (ದೊಡ್ಡ ಚಮಚ)

    ಮುಕ್ಕಾಲು ಕಪ್ ಸಿಪ್ಪೆ ಸುಲಿದು ತುರಿದ ಸೇಬು

    3 ಚಮಚ ಪುಡಿ ಮಾಡಿದ ಬಾದಾಮಿ

    1/2 ಚಮಚ ಏಲಕ್ಕಿ

Red Rice Kanda Poha
How to Prepare
  • ಮಾಡುವ ವಿಧಾನ

    * ದಪ್ಪ ತಳವಿರುವ ಪಾತ್ರೆಗೆ ಹಾಲು ಹಾ,ಕಿ 30 ನಿಮಿಷ ಸಾಧಾರಣ ಉರಿಯಲ್ಲಿ ಕುದಿಸಿ (ಹಾಲು ಉಕ್ಕಿ ಹೋಗದಂತೆ ನೋಡಿಕೊಳ್ಳಿ).

    * 3 ಕಪ್ ಹಾಲು ಒಂದೂವರೆ ಕಪ್ ಆಗುವಷ್ಟು ಹೊತ್ತು ಕುದಿಸಿ.

    * ಈಗ ಸಕ್ಕರೆ, ಸೇಬು ಹಾಕಿ (ಸಕ್ಕರೆಯನ್ನು ನಿಮ್ಮ ಸಿಹಿಗೆ ತಕ್ಕಂತೆ ಹಾಕಿ) 3-4 ನಿಮಿಷ ಕುದಿಸಿ.

    * ಈಗ ಬಾದಾಮಿ ಪುಡಿ ಹಾಗೂ ಏಲಕ್ಕಿಯನ್ನು ಹಾಕಿ ಮಿಶ್ರ ಮಾಡಿ, ಗ್ಯಾಸ್‌ ಆಫ್‌ ಮಾಡಿ.

    * ನಂತರ ಮಿಶ್ರಣ ತಣ್ಣಗಾಗಲು ಬಿಡಿ.

    * ತಣ್ಣಗಾದ ನಂತರ ಕಡಿಮೆಯೆಂದರೆ 2 ಗಂಟೆ ಕಾಲ ಫ್ರಿಡ್ಜ್‌ನಲ್ಲಿಡಿ, ನಂತರ ಸರ್ವ್ ಮಾಡಿ.

Instructions
  • ರಾಬ್ದಿ ಮಾಡುವ ಮುಂಚೆ ಅಂದರೆ ಹಾಲು ಕುದಿಯುತ್ತಿರುವಾಗ ಸೇಬಿನ ಸಿಪ್ಪೆ ತೆಗೆದು ತುರಿಯಿರಿ, ಇಲ್ಲದಿದ್ದರೆ ಸೇಬು ಕಪ್ಪು ಬಣ್ಣಕ್ಕೆ ತಿರುಗುವುದು
Nutritional Information
  • ಕ್ಯಾಲೋರಿ - 299ಕ್ಯಾ
  • ಕೊಬ್ಬು - 16ಗ್ರಾಂ
  • ಪ್ರೊಟೀನ್ - 8ಗ್ರಾಂ
[ 4.5 of 5 - 84 Users]
X
Desktop Bottom Promotion