Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ಈ ಆಪಂ ರುಚಿ ನೋಡಿದವರು ಹೇಳುವರು ' ಆಹಾ...ಎಷ್ಟೊಂದು ಟೇಸ್ಟಿ'
ನೀವು ಕೇರಳ ಕಡೆ ಟ್ರಿಪ್ ಹೋದಾಗ ಅಲ್ಲಿಯ ಸ್ಪೆಷಲ್ ಫುಡ್ ಏನು ಎಂದು ನೀವು ನೋಡುವಾಗ ನಿಮಗೆ ಆಪಂ ಬಗ್ಗೆ ತಿಳಿಯುವುದು. ಇದರ ರುಚಿ ಒಮ್ಮೆ ನೋಡಿದರೆ ಆಹಾ... ಎಷ್ಟೊಂದು ಟೇಸ್ಟಿ ಎಂದು ಹೇಳದೆ ಇರಲ್ಲ.

ಇದನ್ನು ಟೇಸ್ಟ್ ಮಾಡಿದವರು ಮನೆಗೆ ಬಂದ ನಾವೂ ಒಮ್ಮೆ ಟ್ರೈ ಮಾಡಬೇಕು ಎಂದು ಅಂದುಕೊಳ್ಳುವುದು ಗ್ಯಾರಂಟಿ. ಈ ಆಪಂ ರೆಸಿಪಿಯ ಹಿಟ್ಟು ನೋಡಲು ದೋಸೆ ಹಿಟ್ಟಿನಂತೆ ಕಂಡರೂ ಇದನ್ನು ಮಾಡುವ ವಿಧಾನ ಭಿನ್ನವಾಗಿದೆ. ಇಲ್ಲಿ ನಾವು ಆಪಂ ರೆಸಿಪಿ ನೀಡಿದ್ದೇವೆ, ನೀವೂ ಟ್ರೈ ಮಾಡಿ.
Recipe By: Reena TK
Recipe Type: Breakfast
Serves: 4
-
ಬೇಕಾಗುವ ಸಾಮಗ್ರಿ
1 ಕಪ್ ಕುಚಲಕ್ಕಿ
1 ಕಪ್ ಅನ್ನ(1/2 ಕಪ್ ಬೆಳ್ತಕ್ಕಿ)
2 ಕಪ್ ನೀರು
1 ಚಮಚ ಯೀಸ್ಟ್
1 ಕಪ್ ತುರಿದ ತೆಂಗಿನಕಾಯಿ
1 ಚಮಚ ಸಕ್ಕರೆ
-
ಮಾಡುವ ವಿಧಾನ:
* ಕುಚಲಕ್ಕಿಯನ್ನು 8-10 ಗಂಟೆಗಳ ನೆನೆಹಾಕಿ.
* ಈಗ ಅರ್ಧ ಕಪ್ ಬೆಳ್ತಕ್ಕಿಯನ್ನು 20 ನಿಮಿಷ ನೀರಿನಲ್ಲಿ ನೆನೆಹಾಕಿ ನಂತರ ಎರಡು ವಿಶಲ್ ಬೇಯಿಸಿ.
* ಈಗ ಕುಚಲಕ್ಕಿಯನ್ನು ನುಣ್ಣನೆ ರುಬ್ಬಿ, ತೆಂಗಿನಕಾಯಿ ಹಾಗೂ ಅನ್ನವನ್ನು ಚೆನ್ನಾಗಿ ರುಬ್ಬಿ, ಈ ಎಲ್ಲಾ ಮಿಶ್ರಣವನ್ನು ಮಿಕ್ಸ್ ಮಾಡಿ ಒಂದು ಗಂಟೆ ಹಾಗೇ ಇಡಿ.
* ಈಗ ರುಬ್ಬಿದ ಹಿಟ್ಟಿಗೆ ಬಿಸಿ ನೀರು, ಯೀಸ್ಟ್, ಸಕ್ಕರೆ ಹಾಕಿ, ರುಚಿಗೆ ತಕ್ಕ ಉಪ್ಪು ಮಿಶ್ರ ಮಾಡಿ 8 ಗಂಟೆಗಳ ಇಡಿ.
* ನಂತರ ಚಿಕ್ಕ ಬಾಣಲೆ ತೆಗೆದು ಅದಕ್ಕೆ ಎಣ್ಣೆ ಸವರಿ ಬಿಸಿ ಮಾಡಿ, ಒಂದು ಸೌಟ್ ಹಿಟ್ಟು ಹಾಕಿ ಬಾಣಲೆಯನ್ನು ಎತ್ತಿ ಒಮ್ಮೆ ತಿರುಗಿಸಿ ಇಡಿ, ನಂತರ ಅದರ ಬಾಯಿ ಮುಚ್ಚಿ 2 ನಿಮಿಷ ಬೇಯಿಸಿ. ಇಷ್ಟು ಮಾಡಿದರೆ ಆಪಂ ರೆಡಿ. (ಆಪಂ ಮಧ್ಯದಲ್ಲಿ ಸ್ವಲ್ಪ ತಪ್ಪವಿದ್ದು ಸುತ್ತ ತೆಳುವಿರುತ್ತದೆ)
- * ಆಪಂಗೆ ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದದಲ್ಲಿರಲಿ. ತುಂಬಾ ನೀರಾಗಬಾರದು. * ಆಪಂಗೆ ಗೋಡಂಬಿಯೆಲ್ಲಾ ಹಾಕಿ ಮಾಡಿದ ಪನ್ನೀರ್ ಗ್ರೇವಿ ಅಥವಾ ಚಿಕನ್ ಗ್ರೇವಿ ಬೆಸ್ಟ್ ಕಾಂಬಿನೇಷನ್.
- ಸರ್ವ್ - 1
- ಕ್ಯಾಲೋರಿ - 99ಕ್ಯಾ
- ಕೊಬ್ಬು - 1.8ಗ್ರಾಂ
- ಪ್ರೊಟೀನ್ - 1.6ಗ್ರಾಂ
- ಕಾರ್ಬ್ಸ್ - 19.2 ಗ್ರಾಂ
- ನಾರಿನಂಶ - 0.9ಗ್ರಾಂ



Click it and Unblock the Notifications
