Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ತಾಯಂದಿರೇ, ನೀವು ಈ ವಿಚಾರಗಳಿಗಾಗಿ ಸಾರಿ ಕೇಳುವ ಅವಶ್ಯಕತೆ ಇಲ್ಲ
ಮೇ ತಿಂಗಳ ಎರಡನೇ ವಾರದ ಭಾನುವಾರದಂದು ಪ್ರಪಂಚದಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಇಡೀ ಕುಟುಂಬದ ಕಾಳಜಿ ವಹಿಸುವ ತಾಯಿಯನ್ನು ಸ್ಮರಿಸುವ ದಿನ ಇಂದು. ತಾಯಿಯಾಗುವುದು ತಮ್ಮ ಜೀವನದ ಅಂತಿಮ ಸಂತೋಷ ಎಂದು ಭಾವಿಸುವ ಹೆಣ್ಣು ಮಕ್ಕಳು ಅದರಲ್ಲೇ ಖುಷಿ ಪಟ್ಟುಕೊಳ್ಳುತ್ತಾರೆ. ತಾಯ್ಮನಕ್ಕಾಗಿ ಉದ್ಯೋಗ ಹಾಗೂ ಅಧ್ಯಯನ ಎಲ್ಲವನ್ನೂ ತ್ಯಜಿಸುವವಳು ಈ ತಾಯಿ.
ಮಕ್ಕಳನ್ನು ಪೋಷಿಸಿ ಸಲಹುವ ತಾಯಿಗೆ ತಪ್ಪಾದಾಗ ಮಕ್ಕಳಿಗೆ ಹೊಡೆದು ಬುದ್ಧಿ ಹೇಳುವ ಅಧಿಕಾರವು ಕೂಡ ಇದೆ. ಆದರೆ ಕೆಲವೊಂದು ಸಲ ಸಣ್ಣ-ಪುಟ್ಟ ವಿಚಾರಕ್ಕೆ ತಾಯಿ ನೊಂದುಕೊಳ್ಳುತ್ತಾಳೆ. ತನ್ನಿಂದ ತಪ್ಪಾಯ್ತೋ ಏನೋ ಎಂದು ಮನಸ್ಸಿನಲ್ಲಿ ಮರುಗುತ್ತಾಳೆ. ಅಷ್ಟಕ್ಕು ತಾಯಿ ಯಾವೆಲ್ಲಾ ವಿಚಾರಕ್ಕೆ ಸಾರಿ ಕೇಳುವ ಅವಶ್ಯಕತೆ ಇಲ್ಲ ಅನ್ನೋದನ್ನು ತಿಳಿಯೋಣ.

1. ನಿಮಗಾಗಿ ಸಮಯ ನೀಡಿದಕ್ಕಾಗಿ
ಮಗುವಿಗೆ ಜನ್ಮ ನೀಡಿದ ನಂತರ ಸಂಪೂರ್ಣವಾಗಿ ಮಗುವಿನ ಆರೈಕೆಯಲ್ಲಿ ಸಮಯ ಕಳೆಯ ಬೇಕಾಗುತ್ತದೆ. ಆದರೆ ಒಂಚೂರು ನೀವು ನಿಮಗಾಗಿ ಸಮಯ ಮೀಸಲಿಟ್ಟರೆ ಆಕೆ ಕೆಟ್ಟ ತಾಯಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಅನೇಕ ಜನ ಕಾಮೆಂಟ್ ಮಾಡುತ್ತಾರೆ. ಆದರೆ ಅದಕ್ಕಾಗಿ ನೀವು ನೊಂದುಕೊಳ್ಳಬೇಕಾಗಿಲ್ಲ. ನಿಮಗೊತ್ತಲ್ವಾ? ನೀವು ನಿಮ್ಮ ಮಗುವನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದೀರಿ ಎಂದು. ಅಷ್ಟು ಸಾಕು. ಅದಕ್ಕಾಗಿ ನೀವು ಪಶ್ಚಾತಾಪ ಪಡುವ ಅವಶ್ಯಕತೆ ಇಲ್ಲ.
2. ನಿಮ್ಮ ಮಗುವಿಗೆ ಆಹಾರ ನೀಡುವ ವಿಚಾರಕ್ಕಾಗಿ
ತಾಯಿ ಯಾದವಳಿಗೆ ಮಗುವಿನ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಮಗುವಿಗೆ ಯಾವಾಗ ಸ್ತನಪಾನ, ಆಹಾರ ನೀಡಬೇಕು ಎಂದು. ಇನ್ನೊಬ್ಬರು ಈ ಹೊತ್ತಿನಲ್ಲಿ ಮಗುವಿಗೆ ಹಾಲು ಕುಡಿಸಬೇಕಿತ್ತು. ಆ ಹೊತ್ತಿನಲ್ಲಿ ಆಹಾರ ಕೊಡಬೇಕಿತ್ತು ಅಂತ ಹೇಳುತ್ತಾರೆ. ಹಾಗಂತ ನೀವು ಆ ವಿಚಾರವಾಗಿ ನೋವು ಪಡಬೇಡಿ. ನಿಮ್ಮ ಮಗು ನಿಮ್ಮ ಸ್ವಾತಂತ್ರ. ಮಗುವಿಗೆ ಹಸಿವಾಗಿದೆ ಎಂದು ನಿಮಗೆ ಅನ್ನಿಸಿದಾಗ ಖಂಡಿತ ನೀವು ಸ್ಥನಪಾನ ಮಾಡಬಹುದು. ಸಾರ್ವಜನಿಕ ಸ್ಥಳ ಎಂದು ನೀವು ಹೆದರಿ ಸುಮ್ಮನೆ ಕೂರ ಬೇಕಾದ ಅವಶ್ಯಕತೆ ಇಲ್ಲ.
3. ನಿಮ್ಮ ಮನೆ ಅಸ್ತವ್ಯಸ್ತವಾಗಿದ್ದರೆ
ಮಕ್ಕಳಿದ್ದ ಮನೆ ಹೇಗಿರುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಚೆನ್ನಾಗಿ ಗೊತ್ತಿರುತ್ತದೆ. ಮನೆಯ ತುಂಬಾ ಆಟಿಕೆಗಳು ಬಿದ್ದಿರುತ್ತದೆ. ಅಡುಗೆ ಮನೆಯೆಲ್ಲಾ ಅಸ್ಥವ್ಯಸ್ಥವಾಗಿರುತ್ತದೆ. ಕೋಣೆಯ ತುಂಬಾ ಬಟ್ಟೆಗಳು ಹರಡಿಕೊಂಡಿರುತ್ತದೆ. ಮಗುವಿನ ಪೋಷಣೆಯಲ್ಲಿ ನಿಮಗೆ ಇದನ್ನೆಲ್ಲಾ ಸ್ವಚ್ಛ ಮಾಡೋದಕ್ಕೆ ಸಮಯ ಸಿಕ್ಕಿರೋದಿಲ್ಲ. ಇದಕ್ಕಾಗಿ ನೀವು ನಿಮ್ಮನ್ನು ಧೂಷಿಸಿಕೊಳ್ಳಬೇಡಿ. ಸಯಮ ಸಿಕ್ಕಾಗ ನಿಮ್ಮ ಮನೆಯ ಸ್ವಚ್ಛತೆಯನ್ನು ನೀವು ಮಾಡಿ.
4. ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರೋದಕ್ಕಾಗಿ
ನಮ್ಮದು ಪಿತೃಪ್ರಧಾನ ದೇಶ. ಇಲ್ಲಿ ಪುರುಷರು ಏನು ಮಾಡಿದರೂ ಕೂಡ ಅದನ್ನು ಜನ ಒಕ್ಕೊರಲಿನಿಂದ ಒಪ್ಪಿಕೊಳ್ಳುತ್ತಾರೆ. ಆದರೆ ಮಹಿಳೆಯರು ಏನೇ ಮಾಡಿದರೂ ಕೂಡ ಜನ ಅದನ್ನು ಒಪ್ಪಿಕೊಳ್ಳೋದಿಲ್ಲ. ಗಂಡ ಸತ್ತ ಮೇಲೆ ಒರ್ವ ಮಹಿಳೆ ಮಕ್ಕಳ ಆರೈಕೆಯಲ್ಲಿ ಸಮಯ ಕಳೆಯ ಬೇಕಾಗಿಲ್ಲ. ಆಕೆಗೂ ಕೂಡ ಯಾರಾದರೂ ಒಬ್ಬರ ಮೇಲೆ ಪ್ರೀತಿ ಆಗಬಹುದು. ಅವರ ಜೊತೆಗೆ ಆಕೆ ಜೀವನ ಕಳೆಯೋದಕ್ಕೆ ಇಚ್ಚಿಸೋದ್ರಲ್ಲಿ ತಪ್ಪಿಲ್ಲ. ಇದಕ್ಕಾಗಿ ನೀವು ನಿಮ್ಮನ್ನು ದೂಷಿಸಿಕೊಳ್ಳಬೇಡಿ.
5. ಗರ್ಭಧಾರಣೆಯ ನಂತರ ತೂಕ ಹೆಚ್ಚಿಸಿಕೊಂಡಾಗ
ಒಂದು ಮಗುವಾದ ನಂತರ ಹೆಣ್ಣಿನ ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ. ಆಕೆ ಖಂಡಿತವಾಗಿ ಈ ಸಮಯದಲ್ಲಿ ತೂಕ ಹೆಚ್ಚಿಸಿಕೊಳ್ಳುತ್ತಾಳೆ. ಅದಕ್ಕಾಗಿ ನೀವು ನೊಂದುಕೊಳ್ಳೋದು ಬೇಡ. ನೀವು ಹಿಂದಿನ ಆಹಾರಕ್ಕೆ ಮರಳದೇ ಇರಬಹುದು. ಅಥವಾ ಹಿಂದಿಗಿಂತ ನೀವು ಸುಂದರವಾಗಿ ಕಾಣೋದಿಲ್ಲ ಎಂದು ಅನೇಕರು ಕಮೆಂಟ್ ಮಾಡಬಹುದು. ಅದಕ್ಕೆಲ್ಲಾ ನೀವು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ನೀವು ನಿಮ್ಮ ತಾಯ್ಮನದಲ್ಲಿ ಖುಷಿ ಪಟ್ಟುಕೊಳ್ಳಿ. ಹಾಗೂ ಲೋಕದ ಚಿಂತೆ ನಿಮಗೆ ಬೇಡ.
ತಾಯಿ ಆದ ನಂತರ ನಿಮ್ಮಲ್ಲಿ ಅನೇಕ ಬದಲಾವಣೆಗಳು ಆಗಿರಬಹುದು. ನಿಮ್ಮಿಂದ ಸಣ್ಣ- ಪುಟ್ಟ ತಪ್ಪುಗಳು ಆಗಿರಬಹುದು. ಅದಕ್ಕಾಗಿ ನೀವು ನೊಂದುಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ತನವನ್ನು ನೀವು ಉಳಿಸಿಕೊಂಡು ಹೋಗಿ ಸಾಕು.



Click it and Unblock the Notifications
