ಗರ್ಭಾವಸ್ಥೆಯಲ್ಲಿ ದೇಹದ ತೂಕ ಎಷ್ಟಿರಬೇಕು?

ಗರ್ಭಿಣಿ ಮಹಿಳೆಯರಿಗೆ ತಮ್ಮ ಆರೋಗ್ಯದ ಕಾಳಜಿ ಬಹಳ ಮುಖ್ಯ. ಗರ್ಭಿಣಿಯರನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬ ಹಿರಿಯರಿದ್ದರೆ ಇನ್ನೂ ಒಳ್ಳೆಯದು. ಮೊದಲ ಬಾರಿಗೆ ಗರ್ಭಾವಸ್ಥೆಗೆ ಕಾಲಿಡುತ್ತಿರುವ ಮಹಿಳೆಯರಿಗೆ ಆತಂಕ, ಭಯ, ಗೊಂದಲ ಎಲ್ಲವೂ ಇರುತ್ತದೆ. ಕೆಲವು ಮಹಿಳೆಯರು ಇದರಿಂದ ಮಾನಸಿಕ ಖಿನ್ನತೆಗೆ ಗುರಿಯಾಗುವುದೂ ಇದೆ.

How To Know If You Are Gaining Too Much Weight During Pregnancy

ಆದರೆ ಇದ್ದಕ್ಕಿದ್ದಂತೆ ಎದುರಾಗುವ ಮನಸಿಕ ಖಿನ್ನತೆ ಬೆಳೆಯುವ ಮಗುವಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ಮಾತಿದೆ. ಅದರಂತೆ ಗರ್ಭಾವಸ್ಥೆಯ ಸಮಯದಲ್ಲಿ ಮಾಡುವ ಆಹಾರ ಸೇವನೆ ಕೂಡ ಮಗುವಿನ ಬೆಳವಣಿಗೆ ಮೇಲೆ ನೇರವಾದ ಪರಿಣಾಮ ಬೀರುವುದು ಮಾತ್ರವಲ್ಲದೆ ಗರ್ಭಾವಸ್ಥೆಯಲ್ಲಿರುವ ತಾಯಿಯ ಆರೋಗ್ಯಕ್ಕೂ ತನ್ನ ಪ್ರಭಾವ ಉಂಟುಮಾಡುತ್ತದೆ. ಆದ್ದರಿಂದ ಗರ್ಭಿಣಿಯರು ತಮ್ಮ ದೇಹದ ತೂಕದ ಬಗ್ಗೆ ಒಂದು ಕಣ್ಣಿಟ್ಟಿದ್ದರೆ ಒಳ್ಳೆಯದು.

ಗರ್ಭಿಣಿ ಸಮಯದಲ್ಲಿ ನಿಮಗೆ ದೇಹದ ತೂಕ ಹೆಚ್ಚಾಗುತ್ತಿದೆ, ಅಲ್ಲವೇ?

ಗರ್ಭಿಣಿ ಸಮಯದಲ್ಲಿ ನಿಮಗೆ ದೇಹದ ತೂಕ ಹೆಚ್ಚಾಗುತ್ತಿದೆ, ಅಲ್ಲವೇ?

ಗರ್ಭಿಣಿಯರಿಗೆ ತಮ್ಮ ದೇಹದ ತೂಕದ ವಿಚಾರದಲ್ಲಿ ಸಾಕಷ್ಟು ಗಮನ ಇರಬೇಕು. ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರಗಳನ್ನು ಸೇವಿಸುವುದು ಒಂದು ನಿಯಮ. ಏಕೆಂದರೆ ಗರ್ಭಿಣಿ ಅಂದರೆ ಎರಡು ಜೀವಗಳು. ಹಾಗಾಗಿ ಸೇವಿಸುವ ಆಹಾರದಲ್ಲಿ ತನ್ನ ಹಾಗೂ ತನ್ನ ಮಗುವಿನ ದೇಹಕ್ಕೆ ಅಗತ್ಯವಾದ ಪೌಷ್ಟಿಕ ಸತ್ವಗಳನ್ನು ಕಾಯ್ದುಕೊಳ್ಳುವಲ್ಲಿ ತುಂಬಾ ಜಾಗ್ರತೆ ವಹಿಸಬೇಕು.

ಇದರ ಜೊತೆಗೆ ತನ್ನ ದೇಹದ ಆರೋಗ್ಯದ ಬಗ್ಗೆ ಕೂಡ ಅಷ್ಟೇ ಕಾಳಜಿ ವಹಿಸಿ ಸೇವಿಸುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣವನ್ನು ನಿಯಮಿತವಾಗಿ ಕಾಪಾಡಿಕೊಂಡು ಯಾವುದೇ ಕಾರಣಕ್ಕೂ ತನ್ನ ದೇಹದ ತೂಕ ಮಿತಿ ಮೀರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಗರ್ಭಾಶಯದಲ್ಲಿ ಅವಳಿ ಜವಳಿ ಮಕ್ಕಳಿದ್ದರೆ ಮೇಲೆ ತಿಳಿಸಿದ ಎಲ್ಲಾ ವಿಚಾರಗಳಲ್ಲಿ ಗರ್ಭಿಣಿಯ ಜಾಗರೂಕತೆ ದುಪ್ಪಟ್ಟಾಗುತ್ತದೆ.

ದೇಹದ ತೂಕ ಹೆಚ್ಚಾದರೆ ಇದೊಂದು ಸಮಸ್ಯೆ : -

ದೇಹದ ತೂಕ ಹೆಚ್ಚಾದರೆ ಇದೊಂದು ಸಮಸ್ಯೆ : -

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರಿಗೆ ದೇಹದ ತೂಕ ಹೆಚ್ಚು ಮಾಡಿಕೊಳ್ಳುವುದು ಅಷ್ಟೇನೂ ಪ್ರಯಾಸದ ಕೆಲಸವಲ್ಲ. ಆದರೆ ತಮ್ಮ ಬಾಣಂತನದ ನಂತರದ ದಿನಗಳಲ್ಲಿ ಹೆಚ್ಚಿರುವ ತೂಕವನ್ನು ಇಳಿಸುವುದೇ ದೊಡ್ಡ ಸವಾಲಿನ ಕೆಲಸ. ಜೊತೆಗೆ ಗರ್ಭಾವಸ್ಥೆಯಲ್ಲಿ ದೇಹದ ತೂಕ ಹೆಚ್ಚಾದಂತೆ ಗರ್ಭದೊಳಗಿನ ಮಗುವಿಗೆ ಸಿಗಬೇಕಾಗಿರುವ ಪೌಷ್ಟಿಕ ಸತ್ವಗಳು ಕಡಿಮೆಯಾಗಿ ಮಗುವಿನ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.

ದೇಹದ ತೂಕ ಹೆಚ್ಚಾದ ತಾಯಂದಿರಲ್ಲಿ ಜನಿಸಿದ ಮಕ್ಕಳು ಅತಿಯಾದ ರಕ್ತದ ಒತ್ತಡ, ಮಧುಮೇಹ ಸಮಸ್ಯೆಗಳನ್ನು ನಂತರದ ದಿನಗಳಲ್ಲಿ ಬೆಳೆಸಿಕೊಳ್ಳುತ್ತಾರೆ. ಇದರ ಜೊತೆಗೆ ತಾಯಂದಿರಿಗೂ ಕೂಡ ಅವಧಿಗೆ ಮುನ್ನ ಹೆರಿಗೆ, C- Sec ಸಂಬಂಧಿತ ಆರೋಗ್ಯ ತೊಂದರೆ ಎದುರಾಗುತ್ತದೆ ಎಂದು ಹೇಳಬಹುದು. ಇದರ ಜೊತೆಗೆ ಸಂಶೋಧಕರು ಕಂಡು ಹಿಡಿದಿರುವ ಹಾಗೆ ತೂಕ ಹೆಚ್ಚು ಮಾಡಿಕೊಂಡ ತಾಯಿಯ ಗರ್ಭಾವಸ್ಥೆಯಲ್ಲಿ ಜನನವಾದ ಮಕ್ಕಳಿಗೆ ತುಂಬಾ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಭವಿಷ್ಯದ ದಿನಗಳಲ್ಲಿ ಕಾಡುತ್ತವೆ ಎಂದು ಹೇಳುತ್ತಾರೆ.

ಗರ್ಭಿಣಿಯರಿಗೆ ತಮ್ಮ ದೇಹದ ತೂಕ ಎಷ್ಟಿರಬಹುದು ?

ಗರ್ಭಿಣಿಯರಿಗೆ ತಮ್ಮ ದೇಹದ ತೂಕ ಎಷ್ಟಿರಬಹುದು ?

ಇತ್ತೀಚೆಗೆ ಬಹಳ ಗರ್ಭಿಣಿಯರು ಕೇವಲ ತಮ್ಮ ದೇಹದ ತೂಕದ ನಿರ್ವಹಣೆ ಕಷ್ಟವಾಗಿ ಸಾಕಷ್ಟು ಆರೋಗ್ಯದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ಸಂಶೋಧಕರು ದೇಹದ ತೂಕ ಹೆಚ್ಚಾದ ಕೆಲವು ತಾಯಂದಿರನ್ನು ಸಂಶೋಧನೆಗೆ ಗುರಿ ಪಡಿಸಿಕೊಂಡು 9 ತಿಂಗಳ ನಂತರ ಒಬ್ಬ ಗರ್ಭಿಣಿ ತಾಯಿ ತನ್ನ ದೇಹದ ತೂಕವನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚು ಮಾಡಿಕೊಂಡರೆ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಸತ್ಯವನ್ನು ಕಂಡು ಹಿಡಿದು ಇತರರಿಗೆ ಇದು ಮಾರ್ಗದರ್ಶನವಾಗಲೀ ಎಂಬ ಕಾರಣಕ್ಕೆ ಬಹಿರಂಗಪಡಿಸಿದ್ದಾರೆ.

ಅವರ ಪ್ರಕಾರ ಗರ್ಭಿಣಿ ಮಹಿಳೆ ತನ್ನ ಸಾಮಾನ್ಯ ದೇಹದ ತೂಕದ ಹೊರತು 11 ರಿಂದ 16 ಕೆಜಿ ಗಳು ಹೆಚ್ಚಾದರೂ ತನ್ನ ಆರೋಗ್ಯಕರ ಜೀವನಕ್ಕೆ ಯಾವುದೇ ತೊಂದರೆ ಇಲ್ಲ ಮತ್ತು ಇಷ್ಟು ಪ್ರಮಾಣದ ದೇಹದ ತೂಕವನ್ನು ಸಾಮಾನ್ಯ ದೈಹಿಕ ತೂಕ ಎಂದೇ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೆಲವು ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ಇತರ ಮಹಿಳೆಯರಿಗೆ ಹೋಲಿಸಿದರೆ ತುಂಬಾ ಕಡಿಮೆ ದೇಹದ ತೂಕವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಗರ್ಭಾವಸ್ಥೆಗೆ ಮುಂಚೆಯೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ದೇಹದ ತೂಕವನ್ನು ಹೊಂದಿರುತ್ತಾರೆ.

ಕೆಲವು ಮಹಿಳೆಯರು ತಮ್ಮ ಗರ್ಭಾವಸ್ಥೆಯ ಅವಧಿಯ ಮೊದಲ ಮೂರು ತಿಂಗಳಲ್ಲಿ ಹೆಚ್ಚಿನ ತೂಕ ಹೊಂದಿದ್ದರೆ, ಇನ್ನು ಕೆಲವರು ತಮ್ಮ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ದೇಹದ ತೂಕವನ್ನು ಜಾಸ್ತಿ ಮಾಡಿಕೊಂಡಿರುತ್ತಾರೆ. ಆದ್ದರಿಂದ ದೇಹದ ತೂಕ ಎನ್ನುವುದು ಒಬ್ಬ ಮಹಿಳೆಯಿಂದ ಇನ್ನೊಬ್ಬ ಮಹಿಳೆಗೆ ಬದಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಗರ್ಭಿಣಿ ಮಹಿಳೆಯರು ತಮ್ಮ ಸಂಪೂರ್ಣ 9 ತಿಂಗಳ ಗರ್ಭಾವಸ್ಥೆಯಲ್ಲಿ ಒಂದೇ ಬಗೆಯ ದೈಹಿಕ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಮತ್ತು ಇದನ್ನು ಆರೋಗ್ಯಕರ ಬೆಳವಣಿಗೆ ಎಂದು ಪರಿಗಣಿಸಬಹುದು.

ದೇಹದ ತೂಕ vs ಮಗುವಿನ ಲಿಂಗ : -

ದೇಹದ ತೂಕ vs ಮಗುವಿನ ಲಿಂಗ : -

ಆರೋಗ್ಯಕ್ಕೆ ಸಂಬಂಧಪಟ್ಟ ಕೆಲವು ಪುಸ್ತಕಗಳಲ್ಲಿ ತಿಳಿಸಿರುವ ಹಾಗೆ ಒಬ್ಬ ಮಹಿಳೆ ತನ್ನ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ದೇಹದ ತೂಕವನ್ನು ಹೆಚ್ಚಾಗಿಸಿಕೊಂಡರೆ ಆಕೆ ಹೆಣ್ಣು ಮಗುವಿಗೆ ಜನನ ನೀಡುತ್ತಾಳೆ ಎಂದು ಹೇಳಲಾಗಿದೆ. ಅದೇ ಒಬ್ಬ ಗರ್ಭಿಣಿ ಮಹಿಳೆ ತನ್ನ ಗರ್ಭಾವಸ್ಥೆಯ ಸಮಯದಲ್ಲಿ ದೇಹದ ತೂಕ ಹೆಚ್ಚಾಗಿಸಿಕೊಂಡರೆ ಗಂಡು ಮಗುವಿಗೆ ಜನನ ನೀಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇವುಗಳಿಗೆ ವೈಜ್ಞಾನಿಕ ಪುರಾವೆ ಇದುವರೆಗೂ ದೊರೆತಿಲ್ಲ. ಹಲವಾರು ಮಹಿಳೆಯರನ್ನು ಅವರ ಗರ್ಭಾವಸ್ಥೆಯ ಸಮಯದಲ್ಲಿ ಸಂಶೋಧನೆಗೆ ಒಳಪಡಿಸಿದ ವೈದ್ಯರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಅಷ್ಟೇ.

ಆರೋಗ್ಯಕರ ಮತ್ತು ಸಕ್ರಿಯ ಗರ್ಭಾವಸ್ಥೆಗೆ ಕೆಲವು ಟಿಪ್ಸ್ : -

ಆರೋಗ್ಯಕರ ಮತ್ತು ಸಕ್ರಿಯ ಗರ್ಭಾವಸ್ಥೆಗೆ ಕೆಲವು ಟಿಪ್ಸ್ : -

ಗರ್ಭಾವಸ್ಥೆ ಎನ್ನುವುದು ಒಬ್ಬ ಮಹಿಳೆಗೆ ತುಂಬಾ ಸೂಕ್ಷ್ಮವಾದ ಸಮಯ. ಹಾಗಾಗಿ ಅದನ್ನು ತುಂಬಾ ಜಾಗರೂಕತೆಯಿಂದ ಕಾಳಜಿ ವಹಿಸಿ ಪ್ರತಿ ಕ್ಷಣಗಳನ್ನು ಆನಂದವಾಗಿ ಕಳೆಯಬೇಕಾದದ್ದು ಒಬ್ಬ ಗರ್ಭಿಣಿಯ ಪ್ರತಿ ದಿನದ ಜೀವನ ಆಗಬೇಕು. ಆದರೂ ಕೆಲವೊಮ್ಮೆ ನಿಮ್ಮ ಲೆಕ್ಕಾಚಾರಗಳನ್ನು ಮೀರಿ ಒಂದು ವೇಳೆ ನಿಮ್ಮ ದೇಹದ ತೂಕ ಹೆಚ್ಚಾಗಿದ್ದರೆ, ಈ ಕೆಳಗಿನ ಕೆಲವೊಂದು ಟಿಪ್ಸ್ ಅನುಸರಿಸಿ

ಮೊದಲು ನಿಮ್ಮ ಮನಸ್ಸಿನಿಂದ ನಿಮಗಾಗಿ ಮತ್ತು ನಿಮ್ಮ ಮಗುವಿಗಾಗಿ ಪ್ರತಿ ದಿನ ದುಪ್ಪಟ್ಟು ಆಹಾರ ಸೇವಿಸಬೇಕು ಎನ್ನುವ ಆಲೋಚನೆಯನ್ನು ತೆಗೆದುಹಾಕಿ. ಬಲವಂತವಾಗಿ ಹೆಚ್ಚಾದ ಆಹಾರ ಸೇವನೆ ಮಾಡಬೇಡಿ. ನಿಮಗೆ ಹಿತ ಎನಿಸುವಷ್ಟು ಮಾತ್ರ ಆಹಾರ ಸೇವನೆ ಮಾಡಿ.

ಗರ್ಭಾವಸ್ಥೆಯ ಸಮಯದಲ್ಲಿ ಯಾವುದೇ ಡಯಟ್ ಮಾಡಲು ಮುಂದಾಗಬೇಡಿ. ಕೇವಲ ನಿಮ್ಮ ದೇಹಕ್ಕೆ ಲಭ್ಯವಾಗ ಬೇಕಾದ ಪೌಷ್ಟಿಕ ಸತ್ವಗಳ ಕಡೆಗೆ ಮಾತ್ರ ಗಮನ ಹರಿಸಿ ಮತ್ತು ನಿಮ್ಮ ದೇಹದ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಿ

ನಿಮ್ಮ ಸಂಪೂರ್ಣ ಗರ್ಭಾವಸ್ಥೆಯ ಸಮಯದಲ್ಲಿ ಸ್ತ್ರೀ ರೋಗ ತಜ್ಞರ ಜೊತೆ ಅಥವಾ ಆಹಾರ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿರಿ. ಅವರು ಕಾಲಕಾಲಕ್ಕೆ ಸೂಚಿಸಿದ ಆಹಾರಗಳನ್ನು ತಪ್ಪದೇ ಸೇವಿಸಿ.

English summary

How To Know If You Are Gaining Too Much Weight During Pregnancy

Weight gain in pregnancy is normal, but too much weight gain is not good, here is how to know if you are gaining too much weight?
X
Desktop Bottom Promotion