Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಗರ್ಭಾವಸ್ಥೆಯಲ್ಲಿ ಮೂಗಿನಿಂದ ರಕ್ತ ಸೋರಿಕೆ ತಡೆಯಲು ಮನೆಮದ್ದುಗಳು
ಗರ್ಭಾವಸ್ಥೆ ಎನ್ನುವುದು ಪ್ರತಿಯೊಂದು ಹೆಣ್ಣಿಗೆ ಅತ್ಯಂತ ಸಂತೋಷದ ಸಂದರ್ಭ, ಅಷ್ಟೇ ಕ್ಲಿಷ್ಟಕರವಾದ ಸಮಯ ಕೂಡ. ತಾಯ್ತನದ ಸುಖವನ್ನು ಅನುಭವಿಸುವ ಮೊಟ್ಟ ಮೊದಲ ಹೆಜ್ಜೆಯೇ ಗರ್ಭಾವಸ್ಥೆ. ಗರ್ಭಿಣಿಯರ ಬೇಕು ಬೇಡಗಳಿಗೆ ಒತ್ತಾಸೆಯಾಗಿ ನಿಲ್ಲುವ ಕುಟುಂಬದ ಮಂದಿ ಒಂದು ಕಡೆಯಾದರೆ, ಗರ್ಭಿಣಿಯನ್ನು ಕಾಡುವ ಕೆಲವೊಂದು ಆರೋಗ್ಯ ಸಮಸ್ಯೆಗಳು ಇನ್ನೊಂದು ಕಡೆ.
ಈ ಸಮಯದಲ್ಲಿ ಎದುರಾಗುವ ಕೆಲವು ಆರೋಗ್ಯ ಸಮಸ್ಯೆಗಳು ಗರ್ಭಾವಸ್ಥೆಯಲ್ಲಿರುವ ಮಹಿಳೆಯ ಮೇಲೆ ಪ್ರಭಾವ ಬೀರಿದರೆ, ಇನ್ನು ಕೆಲವು ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಈ ಸಮಯದಲ್ಲಿ ತಿಳಿದವರಿಂದ ಸಲಹೆ ಸೂಚನೆಗಳು ಬಹಳಷ್ಟು ಅಗತ್ಯವಿರುತ್ತವೆ. ಅದರಲ್ಲೂ ಮೊಟ್ಟ ಮೊದಲನೆಯ ಬಾರಿಗೆ ಗರ್ಭಾವಸ್ಥೆಗೆ ಕಾಲಿಟ್ಟಿರುವ ಮಹಿಳೆಗೆ ಈ ಸಂದರ್ಭ ಒಂದು ಪರೀಕ್ಷೆಯೇ ಸರಿ.

ಗರ್ಭಾವಸ್ಥೆಯ ಸಮಯದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಸರಮಾಲೆಯಲ್ಲಿ ಮೂಗು ಸೋರಿಕೆ ಕೂಡ ಒಂದು. ಬಿಡಿಸಿ ಹೇಳಬೇಕೆಂದರೆ ಗರ್ಭಿಣಿ ಮಹಿಳೆಯರಿಗೆ ಮೂಗಿನಲ್ಲಿ ರಕ್ತ ಸೋರುವುದು. ಇದರಿಂದ ಹುಟ್ಟುವ ಮಗುವಿಗೆ ಯಾವುದೇ ತೊಂದರೆ ಉಂಟಾಗದಿದ್ದರೂ ಗರ್ಭಿಣಿಯರು ಮಾತ್ರ ಇದರ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಸಾಮಾನ್ಯವಾಗಿ ಗರ್ಭಾವಸ್ಥೆಯ ಕೊನೆಯ ವಾರಗಳಲ್ಲಿ ಈ ಸಮಸ್ಯೆ ಕಂಡು ಬರುವುದರಿಂದ ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟ ಅತ್ಯಂತ ತೀವ್ರಗತಿಯಲ್ಲಿ ಕುಸಿತ ಕಾಣುತ್ತದೆ.
ಇದರಿಂದ ಗರ್ಭಿಣಿ ಮಹಿಳೆಯ ಆರೋಗ್ಯದ ಮೇಲೆ ಅನಿಮಿಯಾ ಎಂಬ ಸಮಸ್ಯೆ ಎದುರಾಗಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮೂಗಿನಿಂದ ರಕ್ತ ಸೋರುವುದು ಹೆಚ್ಚಾದರೆ ಗರ್ಭಿಣಿ ಮಹಿಳೆಯರು ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ಸೂಚನೆಗಳನ್ನು ಪಡೆದುಕೊಳ್ಳುವುದು ಉತ್ತಮ. ಕಡಿಮೆ ಸೋರುವಿಕೆಯನ್ನು ಈ ಕೆಳಗಿನ ತಂತ್ರಗಳಿಂದ ಬಗೆಹರಿಸಿಕೊಳ್ಳಬಹುದು.

ಮೂಗನ್ನು ಹಿಸುಕಿ ಹಿಡಿಯಿರಿ : -
ಮೂಗಿನಲ್ಲಿ ರಕ್ತ ಸೋರುವುದನ್ನು ತಡೆಯಲು ಇದೊಂದು ಸುಲಭ ಉಪಾಯ. ಮೂಗನ್ನು ಭದ್ರವಾಗಿ ಎರಡು ಬೆರಳುಗಳಿಂದ ಹಿಸುಕಿ ಹಿಡಿದುಕೊಳ್ಳುವುದರಿಂದ ಮೂಗಿನ ಹೊಳ್ಳೆಗಳಲ್ಲಿ ಗಾಳಿ ಆಡುವಿಕೆ ಇಲ್ಲದಂತಾಗುತ್ತದೆ. ಇದರಿಂದ ದೇಹದಿಂದ ಹೊರಬರಬೇಕಾದ ಗಾಳಿಗೆ ಮೂಗಿನಲ್ಲಿ ಒತ್ತಡ ಉಂಟಾಗುತ್ತದೆ. ಈ ಒತ್ತಡ ಮೂಗಿನ ಒಳಗೆ ರಕ್ತ ಹೊರಬರುತ್ತಿರುವ ಜಾಗದ ಮೇಲೆ ತಟ್ಟುತ್ತದೆ. ಇದರಿಂದ ಸುಲಭವಾಗಿ ಹರಿಯುತ್ತಿರುವ ರಕ್ತ ನಿಂತು ಹೋಗುತ್ತದೆ. ಇದನ್ನು ಮಾಡುವ ವಿಧಾನವನ್ನು ನೋಡುವುದಾದರೆ....
* ಮೊದಲು ಒಂದು ಚೇರ್ ಮೇಲೆ ನೇರವಾಗಿ ಕುಳಿತು ಸ್ವಲ್ಪ ಮುಂದಕ್ಕೆ ಬಾಗಿ. ಈ ಸಮಯದಲ್ಲಿ ನಿಮ್ಮ ತಲೆ ಹೃದಯದಿಂದ ಸ್ವಲ್ಪ ಎತ್ತರದಲ್ಲಿರಲಿ.
* ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳನ್ನು ಬಳಸಿ ಮೂಗಿನ ನಯವಾದ ಭಾಗವನ್ನು ಹತ್ತು ನಿಮಿಷಗಳ ತನಕ ಒತ್ತಿ ಹಿಡಿದುಕೊಳ್ಳಿ. ಈ ಸಮಯದಲ್ಲಿ ಉಸಿರಾಡಲು ಕಷ್ಟವಾಗುವುದರಿಂದ ಬಾಯಿಯ ಮುಖಾಂತರವೇ ಉಸಿರಾಡಿ.
* 10 ನಿಮಿಷಗಳ ನಂತರ ಬೆರಳುಗಳ ಹಿಡಿತವನ್ನು ನಿಧಾನವಾಗಿ ಕಡಿಮೆ ಮಾಡಿ ಸಂಪೂರ್ಣವಾಗಿ ಬಿಟ್ಟು ಬಿಡಿ.
* 5 ನಿಮಿಷಗಳ ಕಾಲ ಹಾಗೇ ಸುಮ್ಮನೆ ಕುಳಿತುಕೊಳ್ಳಿ.
* ಮೂಗಿನಿಂದ ರಕ್ತ ಸೋರುವುದು ನಿಲ್ಲುವವರೆಗೂ ಇದೇ ರೀತಿ ಮಾಡುತ್ತಿರಿ.

ಕೋಲ್ಡ್ ಕಂಪ್ರೆಸ್ :
ರಕ್ತವನ್ನು ಹೆಪ್ಪುಗಟ್ಟಿಸುವ ಸಾಮರ್ಥ್ಯ ಐಸ್ ಗಿದೆ. ಅಂದ ಮೇಲೆ ಮೂಗಿನಿಂದ ರಕ್ತ ಸೋರುವುದನ್ನು ಐಸ್ ಪ್ಯಾಕ್ ಯಶಸ್ವಿಯಾಗಿ ತಡೆಯಬಲ್ಲದು. ನಮ್ಮ ದೇಹದ ತಾಪಮಾನಕ್ಕೆ ಹೊರ ಭಾಗದಿಂದ ಇದ್ದಕ್ಕಿದ್ದಂತೆ ಅತ್ಯಂತ ತಂಪಾದ ತಾಪಮಾನ ಎದುರಾದರೆ ದೇಹದಲ್ಲಿರುವ ರಕ್ತ ನಾಳಗಳು ಗಾತ್ರದಲ್ಲಿ ತಗ್ಗಿದಂತೆ ಆಗಿ ರಕ್ತ ಸಂಚಾರವನ್ನು ನಿಯಂತ್ರಣ ಮಾಡುತ್ತವೆ. ಮೂಗಿನ ಬಳಿ ಐಸ್ ಪ್ಯಾಕ್ ಇಟ್ಟರೆ ಕೇವಲ ಕೆಲವೇ ನಿಮಿಷಗಳಲ್ಲಿ ಈ ತೊಂದರೆಯಿಂದ ಪಾರಾಗಬಹುದು.
ಇದನ್ನು ಮಾಡಬೇಕಾದ ವಿಧಾನ ಹೀಗಿದೆ : -
* ಮೊದಲಿಗೆ ಒಂದು ತೆಳ್ಳಗಿನ ಟವೆಲ್ ತೆಗೆದುಕೊಂಡು ಅದರಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಹಾಕಿ ಟವಲ್ ಸುತ್ತಿ.
* ಚೇರ್ ಮೇಲೆ ನೇರವಾಗಿ ಕುಳಿತುಕೊಳ್ಳಿ.
* ಐಸ್ ಕ್ಯೂಬ್ ಗಳನ್ನು ಸುತ್ತಿ ಹಿಡಿದ ಟವಲನ್ನು ಮೂಗಿನ ಹೊಳ್ಳೆಗಳ ಬಳಿ 5 ರಿಂದ 10 ನಿಮಿಷಗಳ ತನಕ ಇಟ್ಟುಕೊಳ್ಳುತ್ತಿರಿ.
* ಮೂಗಿನಿಂದ ರಕ್ತ ಸೋರುವುದು ನಿಯಂತ್ರಣಕ್ಕೆ ಬರುವವರೆಗೂ ಈ ತಂತ್ರವನ್ನು ಮುಂದುವರೆಸಿ.

ನೀರು ಮತ್ತು ಇತರ ಪಾನೀಯಗಳಿಂದ ಉಪಯೋಗ : -
ಮನುಷ್ಯ ಹೆಚ್ಚಾಗಿ ನೀರು ಕುಡಿಯಬೇಕೆಂದು ವೈದ್ಯರು ಹೇಳುತ್ತಾರೆ. ಇನ್ನು ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ನೀರನ್ನು ಸ್ವಲ್ಪ ಹೆಚ್ಚಾಗಿ ಕುಡಿಯಲೇಬೇಕು. ಇದು ಅವರ ದೇಹಕ್ಕೆ ಮತ್ತು ಗರ್ಭದಲ್ಲಿ ಬೆಳವಣಿಗೆ ಕಾಣುತ್ತಿರುವ ಮಗುವಿಗೆ ಅತ್ಯವಶ್ಯಕ.
ಗರ್ಭಿಣಿ ಮಹಿಳೆಯರು ನೀರನ್ನು ಹೆಚ್ಚು ಕುಡಿಯುವುದರಿಂದ ಅವರ ದೇಹದಲ್ಲಿನ ಲೋಳೆಯ ಪೊರೆಗಳು ತೇವಗೊಳ್ಳುತ್ತವೆ. ಅತಿ ಮುಖ್ಯವಾಗಿ ಮೂಗಿನ ಹೊಳ್ಳೆಗಳಲ್ಲಿ ತೇವಾಂಶ ಉಂಟಾಗುವುದರಿಂದ ಮೂಗಿನ ಒಳ ಭಾಗ ಒಣಗುವುದು ಕಮ್ಮಿಯಾಗಿ ರಕ್ತ ಸೋರುವಿಕೆ ಅಷ್ಟಾಗಿ ಉಂಟಾಗುವುದಿಲ್ಲ.
ಒಂದು ದಿನಕ್ಕೆ ಸರಿಸುಮಾರು 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ನೀರಿನ ಜೊತೆಗೆ ಎಲೆಕ್ಟ್ರೋಲೈಟ್ ಪಾನೀಯಗಳು, ಖನಿಜಾಂಶಗಳನ್ನು ತುಂಬಿರುವ ನೀರು, ಗಿಡಮೂಲಿಕೆಗಳ ಚಹ, ಸಾವಯುವ ಹಣ್ಣಿನ ರಸಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿದರೆ ಒಳ್ಳೆಯದು.
ಯಾವುದೇ ಬಗೆಯ ಕೆಫೀನ್ ಅಂಶವಿರುವ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಇದು ದೇಹದಲ್ಲಿನ ನೀರಿನ ಅಂಶವನ್ನು ತಗ್ಗಿಸುತ್ತದೆ. ಈ ಸಮಯದಲ್ಲಿ ಪ್ರತಿ ದಿನ ಚಹ ಕುಡಿಯುವ ಅಭ್ಯಾಸ ಬೇಡ. ಇದರಿಂದ ಮೂಗಿನ ಹೊಳ್ಳೆಯಲ್ಲಿ ರಕ್ತ ಸೋರುವ ಸಂಭವ ಹೆಚ್ಚಿರುತ್ತದೆ.

ಉಪ್ಪು ನೀರಿನ ಸ್ಪ್ರೇ : -
ಗರ್ಭಿಣಿಯರಿಗೆ ಮೂಗಿನ ಒಳ ಭಾಗದಲ್ಲಿ ಒಣಗುವಿಕೆಯಿಂದ ಉಂಟಾಗುವ ರಕ್ತ ಸೋರಿಕೆ ಉಪ್ಪಿನ ದ್ರಾವಣದ ಸ್ಪ್ರೇ ಮಾಡುವುದರಿಂದ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಉಪ್ಪಿನ ನೀರು ಮೂಗಿನ ಹೊಳ್ಳೆಗಳಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಜೊತೆಗೆ ಮೂಗಿನ ಹೊಳ್ಳೆಗಳಲ್ಲಿ ಕಿರಿಕಿರಿ ಉಂಟು ಮಾಡುವ ಅಂಶಗಳನ್ನು ಹೊರ ದಬ್ಬುತ್ತದೆ.
* ಮೊದಲಿಗೆ ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ ತಣ್ಣಗಾಗಿಸಿ.
* ಕಾಯಿಸಿ ಆರಿಸಿದ ಈ ನೀರಿಗೆ ಅರ್ಧ ಟೀ ಚಮಚದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಡ್ರಾಪರ್ ಉಪಯೋಗಿಸಿ ನಿಮ್ಮ ತಲೆಯನ್ನು ಹಿಂದಕ್ಕೆ ಬಾಗಿಸಿ ಮೂಗಿನ ಒಂದು ಹೊಳ್ಳೆಯಲ್ಲಿ ಈ ದ್ರಾವಣದ ಕೆಲವು ಹನಿಗಳಷ್ಟು ಹಾಕಿ.
* ಈ ಸಮಯದಲ್ಲಿ ಬಹಳಷ್ಟು ನಿಧಾನವಾಗಿ ಉಸಿರು ತೆಗೆದುಕೊಳ್ಳುವುದರಿಂದ ಉಪ್ಪಿನ ದ್ರಾವಣ ಮೂಗಿನ ಹೊಳ್ಳೆಗಳಲ್ಲಿ ಇನ್ನಷ್ಟು ಒಳ ಹೋಗುತ್ತದೆ.
* ನಂತರ ಅಷ್ಟೇ ನಿಧಾನವಾಗಿ ತೆಗೆದುಕೊಂಡು ಉಸಿರನ್ನು ಮೂಗಿನ ಮುಖಾಂತರ ಹೊರಬಿಡಿ.
* ಇನ್ನೊಂದು ಮೂಗಿನ ಹೊಳ್ಳೆಯಲ್ಲಿ ಸಹ ಇದೇ ರೀತಿ ಮಾಡಿ.
* ಪ್ರತಿ ದಿನ ಎರಡು ಬಾರಿ ಈ ತಂತ್ರ ಅನುಸರಿಸಿ.

ಹ್ಯುಮಿಡಿಫೈಯರ್ ಬಳಕೆ ಮಾಡಿ : -
ಮೂಗಿನ ಒಳ ಭಾಗ ಒಣಗಿದಷ್ಟು ಅಲ್ಲಿನ ಚರ್ಮದ ಮೇಲಿನ ಪದರಗಳು ಒಡೆದುಕೊಳ್ಳುವಂತೆ ಆಗುವುದರಿಂದ ಹೆಚ್ಚಾಗಿ ರಕ್ತ ಸೋರಿಕೆ ಉಂಟಾಗುತ್ತದೆ. ಹಾಗಾಗಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಇನ್ನೊಂದು ತಂತ್ರವೆಂದರೆ ಗರ್ಭಿಣಿಯರು ಮಲಗುವ ಕೋಣೆಯಲ್ಲಿ ಹ್ಯುಮಿಡಿಫೈಯರ್ ಬಳಕೆ ಮಾಡುವುದು.
ನೀವು ಮಲಗುವ ಬೆಡ್ ಕೆಳಗೆ ಒಂದು ಬಟ್ಟಲು ನೀರನ್ನು ಇಟ್ಟುಕೊಳ್ಳುವುದರಿಂದ ನೀವು ಉಸಿರಾಡುವ ಗಾಳಿ ತೇವಾಂಶದಿಂದ ಕೂಡಿಕೊಳ್ಳುತ್ತದೆ. ಇಲ್ಲಿ ಕಮರ್ಷಿಯಲ್ ಹ್ಯುಮಿಡಿಫೈಯರ್ ಸಹ ಬಳಸಬಹುದು. ಆದರೆ ಆಗಾಗ ನೀರನ್ನು ಬದಲಿಸುವುದು ಒಳ್ಳೆಯದು. ಇಲ್ಲವೆಂದರೆ ನಿಮ್ಮ ದೇಹಕ್ಕೆ ಮಾರಕವಾಗುವಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೀವೇ ಸಹಕಾರ ಮಾಡಿಕೊಟ್ಟಂತಾಗುತ್ತದೆ.



Click it and Unblock the Notifications











