Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಕ್ಟೋಪಿಕ್ ಪ್ರೆಗ್ನೆನ್ಸಿಯಾದರೆ ಕೂಡಲೇ ತುರ್ತು ಚಿಕಿತ್ಸೆ ಸಿಗದಿದ್ದರೆ ಪ್ರಾಣಕ್ಕೇ ಅಪಾಯಕಾರಿ!
ಕೆಲವರಿಗೆ ಎಕ್ಟೋಪಿಕ್ ಪ್ರೆಗ್ನಿನ್ಸಿ ಎಂದು ಮೊದಲ ತ್ರೈ ಮಾಸಿಕದಲ್ಲಿ ತಿಳಿದು ಬರುತ್ತದೆ. ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗಿದ್ದರೆ ಕೂಡಲೇ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ, ಒಂದಿಷ್ಟು ತಡವಾದರೂ ಗರ್ಭಿಣಿಯ ಪ್ರಾಣಕ್ಕೆ ಹಾನಿಯುಂಟಾಗಿರುವ ಸಾಧ್ಯತೆ ಇರುವುದರಿಂದ ಒಂದಿಷ್ಟು ತಡಮಾಡದೆ ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.
ಎಕ್ಟೋಪಿಕ್ ಪ್ರೆಗ್ನೆನ್ಸಿ ಏಕೆ ಅಪಾಯಕಾರಿ , ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾದರೆ ಭ್ರೂಣವನ್ನು ತೆಗಿಸಬೇಕು ಏಕೆ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ...

ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೇನು?
ಮುಟ್ಟಾಗದಿದ್ದಾಗ ಪ್ರೆಗ್ನೆನ್ಸಿ ಕಿಟ್ ತಂದು ಪರೀಕ್ಷಿಸಿದಾಗ ಗರ್ಭಿಣಿ ಎಂದು ಗೊತ್ತಾದಾಗ ತುಂಬಾನೇ ಖುಷಿಯಾಗುವುದು, ಆಸ್ಪತ್ರೆಯಲ್ಲಿ ಹೋಗಿ ಪರೀಕ್ಷಿಸಿದಾಗಲೂ ಗರ್ಭಿಣಿಯೆಂಬುವುದು ಖಾತರಿಯಾಗುವುದು. ಆದರೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಬಗ್ಗೆ ತಿಳಿಯುವುದು ಸ್ಕ್ಯಾನಿಂಗ್ ಮಾಡಿದಾಗಲೇ.

ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೇನು?
ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೆ ಗರ್ಭದ ಹೊರಗಡೆ ಭ್ರೂಣ ರೂಪುಗೊಳ್ಳುವುದು. ಕೆಲವರಲ್ಲಿ ಎರಡು ಫಾಲೋಪಿಯನ್ ಟ್ಯೂಬ್‌ನಲ್ಲಿ ಒಂದರಲ್ಲಿ ಭ್ರೂಣ ರೂಪುಗೊಳ್ಳುವುದು. ಹೀಗಾದಾಗ ಬೇಗನೆ ಗುರುತಿಸದಿದ್ದರೆ ಇಂಟರ್ನಲ್ ಬ್ಲೀಡಿಂಗ್(ಒಳ ಭಾಗದಲ್ಲಿಯೇ ರಕ್ತಸ್ರಾವ) ಉಂಟಾಗುವುದು. ಹೀಗಾದರೆ ತುಂಬಾನೇ ಅಪಾಯ, ಕೂಡಲೇ ತುರ್ತು ಚಿಕಿತ್ಸೆ ಅವಶ್ಯಕ. ಆದರೆ ಈ ರೀತಿ ಗರ್ಭಧಾರಣೆಯಾದಾಗ ಫಲವತ್ತತೆಯಾದ ಅಂಡಾಣುವನ್ನು ತೆಗೆದು ಗರ್ಭದ ಒಳಗಡೆ ಹಾಕಲು ಸಾಧ್ಯವಾಗಲ್ಲ.
ಎಕ್ಟೋಪಿಕ್ ಗರ್ಭಧಾರಣೆಯಾದರೆ ತೊಂದರೆಯೇನು?
ಎಕ್ಟೋಪಿಕ್ ಗರ್ಭವಾದಾಗ ಫಲವತ್ತತೆ ಅಂಡಾಣು ಫಾಲೋಪಿಯನ್ ಟ್ಯೂಬ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವುದು, ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಫಾಲೋಫಿಯನ್ ಟ್ಯೂಬ್‌ನಲ್ಲಿಯೇ ಭ್ರೂಣ ಒಡೆದು ಇಂಟರ್ನಲ್ ಬ್ಲೀಡಿಂಗ್ ಶುರುವಾಗುವುದು. ಒಂದು ವೇಳೆ ಫಾಲೋಪಿಯನ್ ಟ್ಯೂಬ್‌ಗೆ ಹಾನಿಯಾದರೆ ಭವಿಷ್ಯದಲ್ಲಿ ಗರ್ಭಧಾರಣೆಯಾಗಲು ಕಷ್ಟವಾಗುವುದು.

ಎಕ್ಟೋಪಿಕ್ ಗರ್ಭಕ್ಕೆ ಕಾರಣವೇನು?
* ವಯಸ್ಸಾಗಿ ಗರ್ಭಧಾರಣೆಯಾದಾಗ
* ಲೈಂಗಿಕ ಸೋಂಕು
* ಸರ್ಜರಿ
* ಫಾಲೋಪಿಯನ್ ಟ್ಯೂಬ್‌ಗೆ ಹಾನಿಯಾಗಿದ್ದರೆ
* ಫಾಲೋಪಿಯನ್ ಟ್ಯೂಬ್ ಆಕಾರದಲ್ಲಿ ವ್ಯತ್ಯಾಸವಿದ್ದರೆ ಈ ರೀತಿ ಉಂಟಾಗುವ ಸಾಧ್ಯತೆ ಇದೆ. ಬೇಗನೆ ಚಿಕಿತ್ಸೆ ಕೊಡಿಸಿದಷ್ಟೂ ಮಹಿಳೆಯ ಆರೋಗ್ಯ ಸ್ಥಿತಿ ದುರ್ಬಲವಾಗುವುದನ್ನು ತಡೆಯಬಹುದು.

ಎಕ್ಟೋಪಿಕ್ ಗರ್ಭಧಾರಣೆಯ ಲಕ್ಷಣಗಳೇನು
* ಅಸಹಜ ರಕ್ತಸ್ರಾವ
* ಕೆಳಹೊಟ್ಟೆಯಲ್ಲಿ ಅಸಾಧ್ಯ ನೋವು
* ಪೆಲ್ವಿಕ್ ಭಾಗದಲ್ಲಿ ಸೆಳೆತ
* ಸುಸ್ತು, ತಲೆಸುತ್ತು
ನಂತರ ಏನಾಗುವುದು?
ಎಕ್ಟೋಪಿಕ್ ಗರ್ಭಧಾರಣೆಯಾದರೆ ಮಗುವನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಆದರೆ ಬೇಗನೆ ಚಿಕಿತ್ಸೆ ನೀಡಿದರೆ ತಾಯಿಯನ್ನು ಉಳಿಸಬಹುದು. ಕೆಲವರಿಗೆ ಲ್ಯಾಪ್ರೋಸ್ಕೋಪಿ ಮೂಲಕ ಭ್ರೂಣವನ್ನು ತೆಗೆದರೆ ಇನ್ನು ಕೆಲವರಿಗೆ ಸರ್ಜರಿ ಬೇಕಾಗುವುದು.
ಎಕ್ಟೋಪಿಕ್ ಪ್ರೆಗ್ನೆನ್ಸಿ ಅಂತ ಗೊತ್ತಾದರೆ ಒಂದು ದಿನ ಕೂಡ ತಡಮಾಡಬಾರದು, ಆ ಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ.
ಗರ್ಭಿಣಿ ಅಂತ ತಿಳಿದ ತಕ್ಷಣವೇ ಸ್ಕ್ಯಾನಿಂಗ್ ಮಾಡಿಸಿದರೆ ಈ ಎಕ್ಟೋಪಿಕ್ ಗರ್ಭಧಾರಣೆ ಬಗ್ಗೆ ಬೇಗನೆ ತಿಳಿಯಬಹುದು.
ಒಮ್ಮೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಆದರೆ ಹಲವು ರೀತಿಯ ಪ್ರಶ್ನೆ ಕಾಡುವುದು. ಮತ್ತೆ ಗರ್ಭಧಾರಣೆಯಾಗುವುದೇ, ಒಂದು ವೇಳೆ ಗರ್ಭಧಾರಣೆಯಾಗದೇ ಹೋದರೆ ಮಕ್ಕಳನ್ನು ಪಡೆಯಲು ಬೇರೆ ಏನಾದರೂ ಚಿಕಿತ್ಸೆ ಮಾಡಿಸಬೇಕೆ? ಎಕ್ಟೋಪಿಕ್ ಬಳಿಕ ಗರ್ಭಧಾರಣೆಯಾದರೆ ಆರೈಕೆ ಹೇಗಿರಬೇಕು? ಹೀಗೆ ಹಲವು ಪ್ರಶ್ನೆಗಳು ಕಾಡುವುದು.
ಎಕ್ಟೋಪಿಕ್ ಪ್ರೆಗ್ನೆನ್ಸಿ ಬಳಿಕ ಮತ್ತೆ ಗರ್ಭಧಾರಣೆಯಾಗುವುದೇ?
ಫಾಲೋಫಿಯನ್ ಟ್ಯೂಬ್‌ಗೆ ಹಾನಿಯಾಗದಿದ್ದರೆ ಮತ್ತೆ ಗರ್ಭಧಾರಣೆಯಾಗಬಹುದು, ಆದರೆ ವೈದ್ಯರು ಒಮ್ಮೆ ಎಕ್ಟೋಪಿಕ್ ಆದರೆ ಮತ್ತೊಮ್ಮೆ ಗರ್ಭಧರಿಸಿದಾಗ ಎಕ್ಟೋಪಿಕ್ ಆಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.
ಕೆಲವರಿಗೆ ಗರ್ಭಧಾರಣೆ ಕಷ್ಟವಾಗಬಹುದು
ಒಮ್ಮೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಆದರೆ ಫಾಲೋಪಿಯನ್ ಟ್ಯೂಬ್‌ಗೆ ಹಾನಿಯಾಗಿದ್ದರೆ ಮತ್ತೆ ಗರ್ಭಧಾರಣೆ ಕಷ್ಟವಾಗುವುದು. ಆದರೆ ಐವಿಎಫ್ ಮುಂತಾದ ಚಿಕಿತ್ಸೆ ಮೂಲಕ ಗರ್ಭಧಾರಣೆಯಾಗಬಹುದು. ಆರೋಗ್ಯಕರ ಮಗುವಿಗೆ ಜನ್ಮ ನೀಡಬಹುದು.
ಸೂಚನೆ: ಎಕ್ಟೋಪಿಕ್ ಪ್ರೆಗ್ನೆನ್ಸಿ ತಡಮಾಡಿದಷ್ಟೂ ಅಪಾಯಕಾರಿ, ಆದ್ದರಿಂದ ಗರ್ಭಿಣಿ ಅಂತ ತಿಳಿದ ಕೂಡಲೇ ಸ್ಕ್ಯಾನಿಂಗ್ ಮಾಡಿ ಏನಾದರೂ ತೊಂದರೆ ಇದೆಯೇ ಎಂದು ತಿಳಿಯುವುದು ಒಳ್ಳೆಯದು.



Click it and Unblock the Notifications
