Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೊಟ್ಟೆಯಲ್ಲಿರುವುದು ಗಂಡು ಮಗು ಎಂದು ತಿಳಿಸುವ ಚಿನ್ಹೆಗಳು!
ಗರ್ಭಿಣಿಯಾದ ಒಡನೆಯೇ ಮನಸ್ಸಿನಲ್ಲಿ ಬರುವ ಸಂದೇಹ ಮಗು ಗಂಡೋ ಅಥವಾ ಹೆಣ್ಣೋ ಎಂದು. ಬಸಿರಾದ ಪ್ರತಿ ಹೆಣ್ಣು ಒಂದಲ್ಲ ಒಂದು ಸಮಯದಲ್ಲಿ ಇದರ ಬಗ್ಗೆ ಕುತೂಹಲ ಪಡುತ್ತಾಳೆ. ಯಾರೋ ಹೇಳಿದ, ಅಜ್ಜಿ ಮಾತನಾಡುವ ಮಾತುಗಳಲ್ಲಿ ತನಗೆ ಇರುವ ಲಕ್ಷಣಗಳನ್ನು ನೋಡಿಕೊಂಡು ತನ್ನ ಕುತೂಹಲ ತಣಿಸಿಕೊಳ್ಳಲು ಯತ್ನಿಸುತ್ತಾಳೆ.
ಈಗಿನ ಕಾಲದಲ್ಲಿ ಗಂಡು ಮಕ್ಕಳೇ ಬೇಕೆಂದು ಆಲೋಚಿಸುವರು ಕಡಿಮೆ. ಹೆಣ್ಣು ಮಕ್ಕಳಿಗಾಗಿ ಪರಿತಪಿಸುವರು ಬಹಳಷ್ಟು ಮಂದಿ. ಗಂಡು ಹೆಣ್ಣು ಎಂಬ ಬೇಧ ಭಾವ ಮಾಡುವ ಆಲೋಚನೆಯಿಂದ ಅಲ್ಲದಿದ್ದರೂ, ಏನೋ ಒಂದು ಕುತೂಹಲದಿಂದ ತಿಳಿಯಲು ಪ್ರಯತ್ನಿಸುತ್ತಾರೆ.
ಗರ್ಭಿಣಿಯನ್ನು ನೋಡಿದ ಒಡನೆ ಅಥವಾ ಸೀಮಂತಕ್ಕೆ ಬಂದವರು ಗಂಡು ಮಗು ಆಗಬಹುದು ಅಥವಾ ಹೆಣ್ಣು ಆಗಬಹುದು ಎಂದು ಊಹಿಸುತ್ತಾರೆ. ಇದಕ್ಕೆ ಅನೇಕ ಅಂಶಗಳನ್ನು ನೋಡಿ ಹೇಳುತ್ತಾರೆ. ಹಿಂದಿನ ತಲೆಮಾರಿನವರು ಹೇಳುವಂತೆ ಹೊಟ್ಟೆ ಚಿಕ್ಕದಾದರೆ ಗಂಡು ಮಗು, ದೊಡ್ಡದಾಗಿ ಕಂಡರೆ ಹೆಣ್ಣು ಮಗು ಎಂದು. ಹಾಗೆಯೇ ಹೊಕ್ಕುಳಿನ ಆಕಾರ, ಹೊಟ್ಟೆಯ ಮಧ್ಯ ಭಾಗದಲ್ಲಿ ಮೂಡುವ ಕಪ್ಪು ಅಥವಾ ಕಂಡು ಬಣ್ಣದ ಗೆರೆ ಇವುಗಳನ್ನು ನೋಡಿ ಕೂಡ ಬಹಳಷ್ಟು ಜನ ಮಗುವಿನ ಲಿಂಗವನ್ನು ತರ್ಕಿಸುತ್ತಾರೆ. ಈ ಕೆಳಗೆ ನಾವು ಕೂಡ ನೋಡೋಣ ಇನ್ನೂ ಅನೇಕ ವಿಧಾನಗಳನ್ನು. ನಿಮ್ಮ ಒಳಗಿರುವ ಪುಟ್ಟ ಕಂದಮ್ಮ ಗಂಡೋ ಹೆಣ್ಣೋ ತಿಳಿಯುವ ಈ ವಿಧಾನಗಳು ವೈಜ್ಞಾನಿಕವಾಗಿ ನಿರೂಪಿತ ಅಲ್ಲ ಆದರೆ ಎಷ್ಟೋ ಸಂದರ್ಭಗಳಲ್ಲಿ ನಿಖರವಾಗಿ ನಿರೂಪಿತವಾಗಿವೆ.

ಮೇಲು ಹೊಟ್ಟೆ ಹಾಗೂ ಕೆಳ ಹೊಟ್ಟೆ
ಇದಂತೂ ಅಜ್ಜಿ ಕಾಲದ ಮಾತು. ಗಂಡು ಮಗು ಹೊಟ್ಟೆಯಲ್ಲಿ ಇದ್ದರೆ ಹೊಟ್ಟೆಯು ಕೆಲ ಭಾಗದಲ್ಲಿ ಕಂಡುಬರುತ್ತದೆ. ಅದೇ ಹೆಣ್ಣು ಮಗುವಾದರೆ ಹೊಟ್ಟೆಯು ಮೇಲು ಭಾಗದಲ್ಲಿ ಉಬ್ಬಿದಂತೆ ಕಾಣುತ್ತದೆ. ಎಷ್ಟೋ ಬಾರಿ ಮನೆಗೆ ಬಂದ ಹಿರಿಯರು ಗರ್ಭಿಣಿಯನ್ನು ನೋಡಿದ ಒಡನೆ ಈ ಅಂಶವನ್ನು ನೋಡಿಯೇ ಗಂಡು ಮಗುವಾ ಅಥವಾ ಹೆಣ್ಣು ಮಗುವಾ ಎಂದು ಊಹೆ ಮಾಡುತ್ತಾರೆ.

ಕಪ್ಪು ಅಥವಾ ಕಂದು ಬಣ್ಣದ ಗೆರೆ
ಬಸುರಿಯ ಹೊಟ್ಟೆ ಒಬ್ಬುತ್ತಾ ಬಂದಂತೆ ಹೊಟ್ಟೆಯ ಮೇಲೆ ಕಪ್ಪು ಅಥವಾ ಕಂಡು ಬಣ್ಣದ ಗೆರೆ ಮೂಡುತ್ತದೆ. ಕೆಲವರಿಗೆ ಮೇಲೂ ಹೊಟ್ಟೆಯಿಂದ ಹೊಕ್ಕುಳವರೆಗೂ ಅಥವಾ ಹೊಕ್ಕುಳಿನ ಕೆಳಭಾಗದಲ್ಲೂ ಈ ಗೆರೆ ಮೂಡುವ ಸಾಧ್ಯತೆಗಳು ಇವೆ. ಹೊಕ್ಕುಳಿನಿಂದ ಕೆಳಗೆ ಈ ಗೆರೆ ಮೂಡಿದಲ್ಲಿ ಮಗು ಹೆಣ್ಣು ಎಂದು ಹೇಳಲಾಗುತ್ತದೆ. ಆದರೆ ಈ ಗೆರೆ ತಿಂಗಳು ಕಳೆಯುತ್ತಾ ಬಂದಂತೆ ಮಾಸುತ್ತಾ ಹೋದರೆ ಗಂಡು ಮಗು ಎಂದೂ ಹೇಳಲಾಗುತ್ತದೆ. ಇನ್ನೂ ಒಂದು ನಂಬಿಕೆ ಎಂದರೆ, ಈ ಗೆರೆ ಹೊಕ್ಕುಳಿನ ಮೇಲೆ ಕೂಡ ಹೋಗಿ ನಿಮ್ಮ ಎದೆಭಾಗದ ವರೆಗೂ ಹಬ್ಬಿದಲ್ಲಿ ಗಂಡು ಮಗು ಖಚಿತ ಎಂದು ಹೇಳಲಾಗುತ್ತದೆ.

ಹೊಟ್ಟೆಯ ಮೇಲೆ ಲೋಲಕದ ಉಪಾಯ
ಇದು ಒಂದು ಆಟದ ರೀತಿಯ ಟ್ರಿಕ್ ಎಂದುಕೊಳ್ಳಿ. ನಿಮ್ಮ ಮದುವೆಯ ಉಂಗುರವನ್ನು ತೆಗೆದು ಅದಕ್ಕೆ ನಿಮ್ಮದೊಂದು ಉದ್ದ ಕೂದಲು ಹಾಕಿ ಗಂಟು ಹಾಕಿ ಅದು ತೂಗುವಂತೆ ಮಾಡಿ. ನೀವು ಮಲಗಿ ನಿಮ್ಮ ಹೊಟ್ಟೆಯ ಮೇಲೆ ಆ ಕೂದಲನ್ನು ತೂಗಿಸಿ. ಆ ಉಂಗುರ ವೃತ್ತಾಕಾರದಲ್ಲಿ ತೂಗಲು ಆರಂಭಿಸಿದರೆ ನಿಮಗೆ ಗಂಡು ಮಗು. ಅದೇ ಉಂಗುರ ಉಧ್ಧ ಉಧ್ಧ ತೂಗಲು ಆರಂಭಿಸಿದರೆ ಹೆಣ್ಣು ಮಗು ಎಂದೂ ನಂಬಲಾಗುತ್ತದೆ.

ಹೊಟ್ಟೆಯ ಒಳಗೆ ಮಗುವಿನ ಚಲನೆ
ಗರ್ಭಿಣಿಯರಲ್ಲಿ ಮಗುವಿನ ಚಲನೆ ಒಬ್ಬಬ್ಬರಿಗೆ ಒಂದೊಂದು ರೀತಿಯಲ್ಲಿ ಇರುತ್ತದೆ. ಒಂದೊಂದು ಸಮಯದಲ್ಲಿ ಒಬ್ಬೊಬ್ಬರಿಗೆ ಚಲನೆ ಹೆಚ್ಚು ಕಾಣುತ್ತದೆ. ಕೆಲವರಿಗೆ ರಾತ್ರಿ ಚಲನೆ ಹೆಚ್ಚು ಕೆಲವರಿಗೆ ಹಗಲು ಹೆಚ್ಚು. ಆದರೆ ಈ ಕೆಳಗಿನ ಒಂದು ನಂಬಿಕೆ ಬಹಳ ಪ್ರಸಿದ್ದವಾದುದು. ಹೊಟ್ಟೆಯಲ್ಲಿನ ಮಗುವಿನ ಚಲನೆ ಕಡಿಮೆ ಇದ್ದರೆ ಅದು ಗಂಡು ಮಗು ಎಂದು ಚಲನೆ ಹೆಚ್ಚು ಇದ್ದರೆ ಹೆಣ್ಣು ಮಗು ಎಂದು ನಂಬುತ್ತಾರೆ. ಹೆಣ್ಣು ಮಗುವು ಚುರುಕಾಗಿ ಓಡಾಡುತ್ತಾ ನಿಮ್ಮ ಹೊಟ್ಟೆಯಲ್ಲಿ ಕಚಗುಳಿ ಇಡುತ್ತದೆ.

ಹೊಟ್ಟೆಯು ಹೇಗೆ ಕಾಣುತ್ತದೆ
ನಿಮ್ಮ ಹೊಟ್ಟೆ ಹೇಗೆ ಕಾಣುತ್ತಿದೆ. ಬ್ಯಾಸ್ಕೆಟ್ ಬಾಲ್ ರೀತಿಯ ಅಥವಾ ಕಲ್ಲಂಗಡಿ ಹಣ್ಣಿನ ರೀತಿಯ? ಕೇಳಲು ತಮಾಷೆಯಾಗಿ ಇದೆಯಲ್ಲವೆ. ನಿಜ. ಹೇಗಿದೆಯೋ ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಬಾಸ್ಕೆಟ್ ಬಾಲ್ ರೀತಿ ಇದ್ದರೆ ಗಂಡು ಮಗು ಎಂದು ಕಲ್ಲಂಗಡಿ ಹಣ್ಣಿನ ಆಕಾರದಲ್ಲಿ ಇದ್ದರೆ ಹೆಣ್ಣು ಮಗು ಎಂದು ಹೇಳಲಾಗುತ್ತದೆ.

ಮಗುವಿನ ತೂಕ
ಮಗುವಿನ ತೂಕ ನಮ್ಮ ಹೊಟ್ಟೆಯ ಮುಂಭಾಗದಲ್ಲಿ ಹೆಚ್ಚು ಬೀಳುತ್ತಿದ್ದರೆ ಅದು ಗಂಡು ಮಗು ಎಂದು ಹೇಳಲಾಗುತ್ತದೆ. ಅದೇ ನಿಮ್ಮ ಹೊಟ್ಟೆಯ ಎಲ್ಲ ಭಾಗದಲ್ಲೂ ತೂಕ ಸಮಾನವಾಗಿ ಬೀಳುತ್ತಿದ್ದರೆ, ಹೆಣ್ಣು ಮಗು ಎಂದೂ ಹೇಳಲಾಗುತ್ತದೆ. ಗಂಡು ಮಗು ಆದರೆ ಏನು ಹೆಸರು ಇಡಬೇಕೋ, ಹೆಣ್ಣು ಆದರೆ ಏನು ಹೆಸರು ಇಡಬೇಕೋ ಆಲೋಚಿಸುವ ಹಾಗೆ ಹೊಟ್ಟೆಯಲ್ಲಿರುವ ಪುಟ್ಟ ಕಂದ ಗಂಡೋ ಹೆಣ್ಣೋ ಎಂಬ ಕುತೂಹಲ ಇಲ್ಲದಿಲ್ಲ. ಈ ಮೇಲೆ ಹೇಳಿರುವ ಎಲ್ಲ ಅಂಶಗಳನ್ನು ನೋಡಿ ನೀವು ತಿಳಿಯಿರಿ ನಿಮ್ಮ ಕಂದನ ಬಗ್ಗೆ.



Click it and Unblock the Notifications
