For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ತಪ್ಪದೇ ಅನುಸರಿಸಬೇಕಾದ ವೈಯಕ್ತಿಕ ಕಾಳಜಿಗಳಿವು

By Manu
|

ಗರ್ಭಿಣಿಯರ ಪ್ರತಿ ನಡೆಯು ಬಹಳ ಎಚ್ಚರಿಕೆಯಿಂದ ಇರಬೇಕು. ಉದಾಹರಣೆಗೆ ಕ್ರಮಬದ್ಧವಾದ ಆಹಾರ ಸೇವನೆ, ದೇಹದ ಸ್ವಚ್ಛತೆ, ನಿರ್ಮಲವಾದ ಪರಿಸರ, ಆರೋಗ್ಯ ಪೂರ್ಣ ಹವಾಮಾನ ಇರುವಂತೆ ನೋಡಿಕೊಳ್ಳಬೇಕಾಗುವುದು. ಇಲ್ಲವಾದರೆ ಸೋಂಕುಗಳು ಹಾಗೂ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಕಾಡಬಹುದು. ಗರ್ಭಾವಸ್ಥೆಯಲ್ಲಿರುವಾಗ ದೇಹದಲ್ಲಾಗುವ ಕೆಲವು ಬದಲಾವಣೆಗಳು ಮೂತ್ರದ ಸೋಂಕು, ಹೊಟ್ಟೆ ಸೋಂಕು, ಚರ್ಮದ ಸೋಂಕು ಹೀಗೆ ಅನೇಕ ಸಮಸ್ಯೆಗಳನ್ನು ಹುಟ್ಟಿಸಬಹುದು. ಹಾಗಾಗಿ ವೈಯಕ್ತಿಕವಾಗಿ ಆದಷ್ಟು ಕಾಳಜಿ ವಹಿಸಬೇಕು.

ಗರ್ಭಿಣಿಯರ ಆರೋಗ್ಯಕ್ಕೆ 'ಬಲ ನೀಡುವ' ಆಹಾರಗಳಿವು...

ಕೆಲವೊಂದು ವಿಚಾರ ಸಾಮಾನ್ಯ ಎನಿಸಬಹುದು. ಆದರೆ ಅವುಗಳ ಬಗ್ಗೆಯೇ ಹೆಚ್ಚು ಗಮನ ನೀಡಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಇರುವಾಗ ದೇಹವು ಬಹಳ ಸೂಕ್ಷ್ಮವಾಗಿರುವುದರಿಂದ ಅನೇಕ ತೊಂದರೆಗಳುಂಟಾಗುವ ಸಾಧ್ಯತೆ ಇರುತ್ತದೆ. ಬನ್ನಿ ಗರ್ಭಿಣಿಯರು ಯಾವೆಲ್ಲಾ ವಿಚಾರಕ್ಕೆ ಸೂಕ್ತ ಗಮನ ನೀಡಬೇಕು? ಎನ್ನುವ ಬಗ್ಗೆ ಸರಳ ವಿವರಣೆಯನ್ನು ಅರಿಯೋಣ....

ಪ್ರತಿದಿನ ತೊಳೆದ ಬಟ್ಟೆಯನ್ನೇ ತೊಡಬೇಕು

ಪ್ರತಿದಿನ ತೊಳೆದ ಬಟ್ಟೆಯನ್ನೇ ತೊಡಬೇಕು

ಗರ್ಭಿಣಿಯರು ಪ್ರತಿದಿನ ತೊಳೆದ ಬಟ್ಟೆಯನ್ನೇ ತೊಡಬೇಕು. ಹತ್ತಿ ಬಟ್ಟೆಯಾಗಿದ್ದರೆ ದೇಹಕ್ಕೆ ಆರಾಮದಾಯಕ ಅನುಭವ ಆಗುವುದು. ಹತ್ತಿ ಬಟ್ಟೆಯು ತೇವಾಂಶವನ್ನು ಹೀರಿಕೊಂಡು ಬಹಳ ಬೇಗ ಒಣಗುವ ಸಾಮಥ್ರ್ಯ ಹೊಂದಿರುತ್ತದೆ. ಹಾಗಾಗಿ ಸೋಂಕುಗಳುಂಟಾಗುವುದನ್ನು ತಡೆಯಬಹುದು.

ಆದಷ್ಟು ಸ್ವಚ್ಛತೆಗೆ ಆದ್ಯತೆ ನೀಡಿ

ಆದಷ್ಟು ಸ್ವಚ್ಛತೆಗೆ ಆದ್ಯತೆ ನೀಡಿ

ಆಹಾರ ಸೇವಿಸುವಾಗ ಕೈ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಸೇವಿಸುವ ತರಕಾರಿ ಹಾಗೂ ಪಾತ್ರೆಗಳು ಸಹ ಸ್ವಚ್ಛವಾಗಿರಲಿ. ಇಲ್ಲವಾದರೆ ಸೋಂಕು ಹೊಟ್ಟೆಯೊಳಗೆ ಹೋಗುವ ಸಾಧ್ಯತೆ ಇರುತ್ತದೆ.

ಹಲ್ಲಿನ ಕಾಳಜಿ

ಹಲ್ಲಿನ ಕಾಳಜಿ

ಗರ್ಭಾವಸ್ಥೆಯಲ್ಲಿ ಈಸ್ಟ್ರೋಜನ್ ವ್ಯತ್ಯಾಸವಾಗುವುದರಿಂದ ಹಲ್ಲಿನ ಸಮಸ್ಯೆ ಕಾಡಬಹುದು. ವಸಡಲ್ಲಿ ಊತಗಳುಂಟಾಗಬಹುದು. ಈ ಸಂದರ್ಭದಲ್ಲಿ ಬೇರಾವುದೇ ಔಷಧಗಳನ್ನು ನೀಡುವುದಿಲ್ಲ. ಆ ಕಾರಣಕ್ಕೆ ದಿನಕ್ಕೆರಡು ಬಾರಿ ಬ್ರೆಶ್ ಮಾಡುವುದರ ಮೂಲಕ ದಂತ ನೈರ್ಮಲ್ಯ ಕಾಪಾಡಿಕೊಳ್ಳಬೇಕು.

ಜನನಾಂಗಗಳ ಸ್ವಚ್ಛತೆ

ಜನನಾಂಗಗಳ ಸ್ವಚ್ಛತೆ

ಗರ್ಭಿಣಿಯರು ಜನನಾಂಗಕ್ಕೆ ಸೋಂಕು ತಾಗದಂತೆ ನೋಡಿಕೊಳ್ಳಬೇಕು. ಪಬ್ಲಿಕ್ ಶೌಚಾಲಯ ಬಳಸಬಾರದು. ಮನೆಯ ಶೌಚಾಲಯ, ಸ್ನಾನದ ಕೋಣೆ, ತಂಬಿಗೆ, ಬಕೆಟ್ ಎಲ್ಲವೂ ಸ್ವಚ್ಛವಾಗಿರಲಿ. ಇಲ್ಲವಾದರೆ ಸೋಂಕು ತಗಲುವುದು.

ಸ್ತನಗಳ ಕಾಳಜಿ

ಸ್ತನಗಳ ಕಾಳಜಿ

ಗರ್ಭಾವಸ್ಥೆಯಲ್ಲಿರುವಾಗ ಸ್ತನಗಳ ಸ್ವಚ್ಛತೆಯೂ ಅಗತ್ಯ. ಬೆವರುವಿಕೆ ಹಾಗೂ ಕೊಳೆಯಿಂದ ಸ್ತನದ ತೊಟ್ಟುಗಳಲ್ಲಿ ತುರಿಕೆ ಉಂಟಾಗಬಹುದು. ಇದನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಂಡರೆ ಸಮಸ್ಯೆ ಉಂಟಾಗದು.

ಒಳ ಉಡುಪುಗಳ ಕಾಳಜಿ

ಒಳ ಉಡುಪುಗಳ ಕಾಳಜಿ

ಹತ್ತಿ ಒಳ ಉಡುಪನ್ನು ಧರಿಸುವುದರಿಂದ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬಹುದು. ಇವು ಆರಾಮದಾಯಕ ಅನುಭವ ನೀಡುವವು. ಗರ್ಭಿಣಿಯರು ವೈಯಕ್ತಿಕವಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿಯಿಂದ ಸ್ವಚ್ಛತೆಯನ್ನು ಅನುಸರಿಸಿದರೆ ಯಾವ ತೊಂದರೆಯೂ ಉಂಟಾಗದು.

English summary

Personal Hygiene Tips During Pregnancy

During pregnancy, every move needs to be very careful. Pregnant women for example needs to maintain a lot of hygiene as a small mistake can lead to infections. So, it is very important to maintain personal hygiene during pregnancy.A pregnant woman can suffer from several infections like urine infection, stomach infection and skin infection to name a few. Thus maintaining personal hygiene is very important. Here are a few tips to maintain personal hygiene during pregnancy.
X
Desktop Bottom Promotion