Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಗರ್ಭಾವಸ್ಥೆಯಲ್ಲಿ ಇಂತಹ ಆಹಾರಗಳನ್ನು ಆದಷ್ಟು ಪಕ್ಕಕ್ಕೆ ಸರಿಸಿ
ಗರ್ಭಧಾರಣೆ ಬಳಿಕ ತಾಯಿಯಾಗುವ ಅನುಭವವು ಮಹಿಳೆಯರಿಗೆ ತುಂಬಾ ವಿಶೇಷವಾಗಿರುವಂತದ್ದಾಗಿದೆ. ಗರ್ಭಧಾರಣೆ ವೇಳೆ ಕೆಲವೊಂದು ಸಮಸ್ಯೆಗಳನ್ನು ಸಾಮಾನ್ಯವಾಗಿ ಎದುರಿಸಬೇಕಾಗುತ್ತದೆ. ಇದು ಪ್ರತಿಯೊಬ್ಬರನ್ನೂ ಕಾಡುವುದಿಲ್ಲವಾದರೂ ಇದರ ಬಗ್ಗೆ ಗಮನಹರಿಸಬೇಕು.
ಅದರಲ್ಲೂ ತಾಯಿಯಾಗಲಿರುವ ಮಹಿಳೆಯರು ತಾವು ಸೇವಿಸುವಂತಹ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಮನಸ್ಸು ಹಾಗೂ ದೇಹವು ಮಗುವಿನ ಜನನಕ್ಕೆ ತಯಾರಾಗಿರುವ ಕಾರಣದಿಂದಾಗಿ ಆರೋಗ್ಯಕರ ಆಹಾರ ಕ್ರಮವು ತುಂಬಾ ಮುಖ್ಯ. ಮಹಿಳೆಯರ ಜೀವನದಲ್ಲಿ ಗರ್ಭಧಾರಣೆ ಎನ್ನುವುದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಗರ್ಭಿಣಿಯರ ಆರೋಗ್ಯಕ್ಕೆ 'ಬಲ ನೀಡುವ' ಆಹಾರಗಳಿವು...
ಈ ವೇಳೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆರೋಗ್ಯವಾಗಿದ್ದರೆ ಗರ್ಭಧಾರಣೆ ಮತ್ತು ಹೆರಿಗೆ ವೇಳೆ ಬರುವಂತಹ ಹಲವಾರು ಸಮಸ್ಯೆಗಳನ್ನು ನಿಭಾಯಿಸಬಹುದಾಗಿದೆ. ಆರೋಗ್ಯಕರವಾದ ಆಹಾರಕ್ರಮವನ್ನು ಅನುಸರಿಸಿಕೊಂಡು ಹೋದರೆ ಗರ್ಭಧಾರಣೆ ವೇಳೆ ಆರೋಗ್ಯವಾಗಿರಬಹುದು. ಗರ್ಭಾವಸ್ಥೆ: 'ಆಹಾರ ಪಥ್ಯ' ಕಡ್ಡಾಯವಾಗಿ ಪಾಲಿಸಲೇಬೇಕು....

ತಾಯಿಯು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುತ್ತಲಿದ್ದರೆ ಹುಟ್ಟುವ ಮಗು ಕೂಡ ಆರೋಗ್ಯವಾಗಿರುತ್ತದೆ. ಗರ್ಭಧಾರಣೆ ವೇಳೆ ಕಡೆಗಣಿಸಬೇಕಾದ ಕೆಲವೊಂದು ಆಹಾರ ಕ್ರಮಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಇದನ್ನು ತಿಳಿಯಿರಿ. ಸಂಸ್ಕರಿತ
ಮಾಂಸ ಸೇವನೆ ಬೇಡ...
ಗರ್ಭಧಾರಣೆ ವೇಳೆ ಮಹಿಳೆಯರು ಪಾಲಿಸಬೇಕಾದ ಮೊದಲ ಕ್ರಮವೆಂದರೆ ಸಂಸ್ಕರಿತ ಮಾಂಸವನ್ನು ತ್ಯಜಿಸಬೇಕು. ಸಂಸ್ಕರಿತ ಮಾಂಸದಲ್ಲಿ ಹಲವಾರು ರೀತಿಯ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳು ಇವೆ.
ಸಲಾಡ್
ಸಲಾಡ್ ತಿನ್ನುವುದನ್ನು ಕಡೆಗಣಿಸಿ. ಯಾಕೆಂದರೆ ಸಲಾಡ್‌ನಲ್ಲಿ ಹಲವಾರು ರೀತಿಯ ಹಾನಿಕಾರಕ ಸೂಕ್ಷ್ಮಾಣು ಜೀವಿಗಳು ಇರುತ್ತದೆ. ಇದು ರೋಗಗಳನ್ನು ಉಂಟುಮಾಡುತ್ತದೆ. ಇದಕ್ಕಾಗಿ ತರಕಾರಿಗಳನ್ನು ಬೇಯಿಸಿ ತಿನ್ನಿ.
ತಂಪಾದ ಜ್ಯೂಸ್ ಕುಡಿಯಬೇಡಿ
ತಂಪಾದ ಜ್ಯೂಸ್ ಅನ್ನು ಕುಡಿಯಬೇಡಿ. ತಂಪಾದ ಜ್ಯೂಸ್ ಕುಡಿಯುವುದರಿಂದ ಗರ್ಭಿಣಿ ಮಹಿಳೆಯರಲ್ಲಿ ಜ್ವರ ಹಾಗೂ ಶೀತ ಕಾಣಿಸಿಕೊಳ್ಳಬಹುದು. ಇದು ತಾಯಿ ಹಾಗೂ ಮಗುವಿಗೆ ಒಳ್ಳೆಯದಲ್ಲ.
ಮೊಟ್ಟೆ
ಅರ್ಧಬೇಯಿಸಿದ ಮೊಟ್ಟೆಗಳನ್ನು ಗರ್ಭಿಣಿ ಮಹಿಳೆಯರು ತಿನ್ನಲೇಬಾರದು. ಸೂಕ್ಷ್ಮಾಣುಜೀವಿಗಳ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಾದರೆ ಅರೆಬೆಂದ ಮೊಟ್ಟೆಗಳನ್ನು ಕಡೆಗಣಿಸಿ.
ಕಾಫಿ ಕಡಿಮೆ ಮಾಡಿ....
ಕಾಫಿ ಕಡಿಮೆ ಸೇವಿಸುವುದು ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಪಾಲಿಸಬೇಕಾದ ಮತ್ತೊಂದು ಕ್ರಮ. ಅತಿಯಾದ ಕೆಫಿನ್ ಸೇವನೆಯಿಂದ ಗರ್ಭಪಾತವಾಗಬಹುದು. ಕಾಫಿಯನ್ನು ಗರ್ಭಿಣಿ ಮಹಿಳೆಯರು ಕಡೆಗಣಿಸಬೇಕು.



Click it and Unblock the Notifications


