ಗರ್ಭಿಣಿಯರು ಮಾಡಬೇಕಾದ 4 ಉಸಿರಾಟದ ವ್ಯಾಯಾಮಗಳು

By Super

ಗರ್ಭಾವಸ್ಥೆಯಲ್ಲಿ ಸರಿಯಾದ ಉಸಿರಾಟ ಬಹಳ ಅವಶ್ಯಕವಾಗಿದೆ. ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಅಗತ್ಯಗಳನ್ನು ಪೂರೈಸಲು ಆಮ್ಲಜನಕದ ನಿರಂತರ ಸರಬರಾಜಿನ ಅಗತ್ಯವಿದೆ. ಅಲ್ಲದೆ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆಮ್ಲಜನಕದ ನಿರಂತರ ಸರಬರಾಜಿನ ಅಗತ್ಯವಿದೆ ಮತ್ತು ಇದು ಭ್ರೂಣಕ್ಕೆ ಪೋಷಣೆಯನ್ನು ಒದಗಿಸುತ್ತದೆ.

ಆದ್ದರಿಂದ ಗರ್ಭಿಣಿಯರು ಉಸಿರಾಟದ ವಿಧಾನಗಳು ಮತ್ತು ಮಾದರಿಗಳನ್ನು ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ. ನೀವು ದೇಹದಲ್ಲಿ ಸಾಕಷ್ಟು ಆಮ್ಲಜನಕವನ್ನು ಪುನಃಸ್ಥಾಪಿಸಿಕೊಳ್ಳಲು ಸಹಾಯವಾದ ನಾಲ್ಕು ಸರಳ ಉಸಿರಾಟದ ವ್ಯಾಯಾಮಗಳನ್ನು ಹೇಳಲಾಗಿದೆ.

4 breathing exercises every pregnant woman should do

ಹೊಟ್ಟೆಯಿಂದ ಉಸಿರಾಟ
ಇದನ್ನು ಹೊಟ್ಟೆ ಉಸಿರಾಟ ಎಂದು ಕರೆಯಲಾಗುತ್ತದೆ. ನಿಮ್ಮ ಕಾಲುಗಳನ್ನು ಮಡಚಿ ಒಂದು ಅನುಕೂಲಕರವಾದ ಸ್ಥಳದಲ್ಲಿ ಕುಳಿತುಕೊಳ್ಳಿ. ನಿಮ್ಮ ದವಡೆಗಳು, ಭುಜದ ಮತ್ತು ನಿತಂಬ ಸೇರಿದಂತೆ ನಿಮ್ಮ ಇಡೀ ದೇಹದಕ್ಕೆ ವಿಶ್ರಾಂತಿಯನ್ನು ನೀಡಿ. ನಿಮ್ಮ ಹೊಟ್ಟೆಯ ಮೇಲೆ ಮತ್ತು ಅಡಿಯಲ್ಲಿ ನಿಮ್ಮ ಕೈಗಳನ್ನು ಇರಿಸಿ. ನಂತರ 8 ಅಥವಾ ನಿಮಗೆ ಬೇಕಾಗುವಷ್ಟು ಸಂಖ್ಯೆಗಳನ್ನು ಎಣಿಸುತ್ತಾ ಹೊಟ್ಟೆಯ ಕೆಳಭಾಗದಿಂದ ಆಳವಾಗಿ ಉಸಿರಾಡಿ. ನಿಧಾನವಾಗಿ ಅದೇ ಸಂಖ್ಯೆಯನ್ನು ಎಣಿಸುತ್ತಾ ಉಸಿರನ್ನು ಬಿಡಿ. ಈ ಉಸಿರಾಟದ ವಿಧಾನ ನಿಮಗೆ ಸ್ವಾಭಾವಿಕವಾಗಿ ಬರುವ ತನಕ ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಈ ವಿಧಾನವನ್ನು ಅನುಸರಿಸಿ. ನಿಮ್ಮ ಹೊಟ್ಟೆ ದೊಡ್ಡದಾಗಿಲ್ಲದಿದ್ದರೆ (ಮೂರು-ನಾಲ್ಕು ತಿಂಗಳ ಗರ್ಭಾವಸ್ಥೆಯಲ್ಲಿ) ನಿಮ್ಮ ಮಂಡಿಯೂರಿ ನಿಮ್ಮ ಅಂಗೈಗೆ ವಿಶ್ರಾಂತಿ ನೀಡಲು ಸಹ ಇದೇ ವಿಧಾನವನ್ನು ಅನುಸರಿಸಬಹುದು.

ಎದೆಯಿಂದ ಉಸಿರಾಟ
ನೆಟ್ಟಗೆ ನಿಂತು ಪರಸ್ಪರ ಸಮಾನಾಂತರ ನಿಮ್ಮ ಪಾದಗಳನ್ನು ಚಾಚಿ. ನಿಮ್ಮ ಬಾಯಿಯನ್ನು ಮುಚ್ಚಿ 10ರ ಸಂಖ್ಯೆಗಳನ್ನು ಎಣಿಸುತ್ತಾ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ಕೈಗಳನ್ನು ನಿಮ್ಮ ಎದೆಯ ಮೇಲಿಡಿ. ಆದರೆ ನಿಮ್ಮ ಎದೆಯನ್ನು ತುಂಬಾ ಗಟ್ಟಿಯಾಗಿ ಒತ್ತಿಹಿಡಿಯದಂತೆ ಜಾಗ್ರತೆವಹಿಸಿ. ನೀವು ಉಸಿರಾಡುವಂತೆ, ನಿಮ್ಮ ಶ್ವಾಸಕೋಶವನ್ನು ಹಿಗ್ಗಿಸುವಿಕೆ ನಿಮ್ಮ ಕೈ ಹೊರಭಾಗಕ್ಕೆ ಅನುಭವವಾಗುವುದನ್ನು ಗಮನಿಸಿ. ಕೆಲವು ಸೆಕೆಂಡುಗಳ ನಿಮ್ಮ ಉಸಿರನ್ನು ಬಿಗಿ ಹಿಡಿದುಕೊಂಡು ನಂತರ ನಿಧಾನವಾಗಿ ಬಿಡಿ. ತಾಜಾ ಗಾಳಿಯನ್ನು ಸೇವಿಸಲು ನಿಮ್ಮ ಬಳಿ ಎಷ್ಟು ಹೆಚ್ಚು ಸಮಯವನ್ನು ತೆಗೆದುಕೊಳ್ಳಲಾಗುತ್ತದೆಯೋ ಅಷ್ಟು ಕಾಲ ಈ ಪ್ರಕ್ರಿಯೆಯನ್ನು ಮಾಡಿ. ಇದನ್ನು ಮಾಡಲು ಒಂದು ಸರಳ ರೀತಿಯೆಂದರೆ ಉಸಿರು ಎಳೆದುಕೊಳ್ಳುವಾಗ ಮಾಡಿದಂತೆ ಈಗಲೂ ಅದೇ ಸಂಖ್ಯೆಗಳನ್ನು ಎಣಿಸಿ. ಹೆಚ್ಚಿನ ಪರಿಣಾಮಕ್ಕಾಗಿ ಈ ಪ್ರಕ್ರಿಯೆಯನ್ನು ಪ್ರಯೋಜನಕ್ಕಾಗಿ ಹತ್ತು ಬಾರಿ ಸಂಪೂರ್ಣ ವ್ಯಾಯಾಮವನ್ನು ಪುನರಾವರ್ತಿಸಿ. ಆದರೆ, ನಿಮ್ಮ ಏಳನೇ ತಿಂಗಳಿನ ನಂತರ ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡಲು ನಿಮಗೆ ಕಷ್ಟವಾಗಬಹುದು ಆದಾಗ್ಯೂ ನಿಮ್ಮ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ವ್ಯಾಯಾಮವನ್ನು ಮಾಡಿ. ಗರ್ಭಧಾರಣೆಯ ಸುಖವನ್ನು ಸವಿಯಲು ಹಲವು ಕಾರಣಗಳು

ಆಳವಿಲ್ಲದ ಉಸಿರಾಟ
ನಿಮ್ಮ ಮಗುವಿಗೆ ಆಮ್ಲಜನಕದ ಸೇವನೆ ಮತ್ತು ಆಮ್ಲಜನಕ ಪೂರೈಕೆಯನ್ನು ನಿರ್ಬಂಧಿಸಬಹುದಾದ ಈ ಉಸಿರಾಟದ ವ್ಯಾಯಾಮ ದಿನದ ಎಲ್ಲಾ ಸಮಯದಲ್ಲಿಯೂ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಆದರೆ ಕೆಲವು ನಿಮಿಷಗಳ ಕಾಲ ಮಾಡುವ ಆಳವಿಲ್ಲದ ಉಸಿರಾಟದ ಅಭ್ಯಾಸ ನಿಮ್ಮ ಶ್ವಾಸಕೋಶಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡುವುದು ಮತ್ತು ಆರೋಗ್ಯಕರವಾಗಿ ಇರಲೂ ಸಹಾಯಮಾಡುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಮಾಡಲು, ಮಂಡಿಗಳನ್ನು ಬಾಗಿಸಿ ನಿಮ್ಮ ಹಿಂಬಾಗದ ಮೇಲೆ (ಬೆನ್ನಿನ ಮೇಲೆ) ಮಲಗಿ. ಅಥವಾ ಪಾದಗಳಗನ್ನು ನೇರವಾಗಿ ಸಮಾಂತರವಾಗಿರುವಂತೆ ನೆಟ್ಟಗೆ ಕುಳಿತುಕೊಳ್ಳಿ. ನಂತರ ವಿಶಾಲವಾಗಿ ಬಾಯಿ ತೆರೆದು ತ್ವರಿತವಾಗಿ, ಆಳವಿಲ್ಲದ ಉಸಿರಾಟವನ್ನು ಮಾಡಿ. ಈ ನಿಮ್ಮ ಶ್ವಾಸಕೋಶಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ದಿನದಲ್ಲಿ ಕನಿಷ್ಠ ಐದು ನಿಮಿಷಗಳ ಕಾಲ ಈ ವ್ಯಾಯಾಮವನ್ನು ಅಭ್ಯಾಸ ಮಾಡಿ. ಹೆರಿಗೆಯ ನಂತರ ಆಹಾರಕ್ರಮ ಹೀಗಿರಲಿ

ಪರ್ಯಾಯ ಆಳವಾದ ಮತ್ತು ಆಳವಿಲ್ಲದ ಉಸಿರಾಟ
ನಿಮಗೆ ಅನುಕೂಲಕರ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಒಂದೋ ನಿಮ್ಮ ಕಾಲುಗಳನ್ನು ಮಡಿಸಿ ಕುಳಿತುಕೊಳ್ಳಿ ಅಥವಾ ಪರಸ್ಪರ ಸಮಾನಾಂತರವಾಗಿ ನಿಮ್ಮ ಪಾದಗಳನ್ನಿಟ್ಟು ನೆಟ್ಟಗೆ ನಿಂತುಕೊಳ್ಳಿ. ನಿಮ್ಮ ಇಡೀ ದೇಹ, ದವಡೆ, ಕೈಗಳು, ಮಂಡಿ, ಸೊಂಟ ಮತ್ತು ಭುಜಗಳನ್ನು ವಿಶ್ರಾಂತಿ ಸ್ಥಿತಿಗೆ ತನ್ನಿ. ನಂತರ ಆಳವಾಗಿ ಉಸಿರು ತೆಗೆದುಕೊಂಡು ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಹಿಡಿದಿಟ್ಟುಕೊಳ್ಳಿ. ನಂತರ ಬಾಯಿಯನ್ನು ತೆರೆದು ತಾಜಾ ಗಾಳಿಯನ್ನು ಎಳೆದುಕೊಳ್ಳುತ್ತಾ ಐದರವರೆಗೆ ಸಂಖ್ಯೆಗಳನ್ನು ಎಣಿಸಿ ಉಸಿರು ಬಿಡಿ. ನಿಧಾನವಾಗಿ ಈ ಕ್ರಿಯೆಯನ್ನು ಪುನರ್ರಾವರ್ತಿಸಿ. ಒಂದು ಸಲಕ್ಕೆ ಕನಿಷ್ಟ ಐದು ಬಾರಿ ಈ ವ್ಯಾಯಾಮವನ್ನು ಮಾಡಿ.
ಈ ಉಸಿರಾಟದ ವ್ಯಾಯಾಮಗಳು, ಆಮ್ಲಜನಕವನ್ನು ತೆಗೆದುಕೊಳ್ಳಲು ಸಹಾಯ ಮಾಡುವುದರ ಜೊತೆಗೆ ನಿಮ್ಮ ಪ್ರಸರಣ ಸುಧಾರಿಸಲು ಮತ್ತು ನಿಮ್ಮ ದೇಹದ ಕಾರ್ಯವನ್ನು ಉತ್ತಮಗೊಳಿಸಲು, ಸಾಕಷ್ಟು ಪೌಷ್ಟಿಕಾಂಶ ಮತ್ತು ಆಮ್ಲಜನಕದೊಂದಿಗೆ ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯ ಮಾಡಬಹುದು. ಆದರೆ, ಈ ಉಸಿರಾಟದ ವ್ಯಾಯಾಮಗಳ ಜೊತೆಗೆ ಪ್ರಾಣಾಯಾಮ ಮತ್ತು ಯೋಗ ಗಳನ್ನೂ ಮಾಡಿದರೆ ಇನ್ನೂ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

X
Desktop Bottom Promotion