Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಹಿಳೆಯರಲ್ಲಿ ಬಂಜೆತನ ತರುವ ಕೆಲ ಅಚ್ಚರಿಯ ಕಾರಣಗಳು

ಒತ್ತಡದ ಬದುಕು ಈ ರೀತಿಯ ಬಂಜೆತನ ಹೆಚ್ಚಾಗಲು ಒಂದು ಪ್ರಮುಖ ಕಾರಣವಾಗಿದೆ ಎಂದು ಇದರ ಬಗ್ಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ವೈದ್ಯರು ಕೂಡ ಮಗು ಬೇಕೆಂದು ಪ್ಲಾನ್ ಮಾಡುವುದಾದರೆ 2 ವರ್ಷದ ಮುಂಚೆ ಪ್ಲಾನ್ ಮಾಡುವುದು ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ.
ಅನೇಕ ಕಾರಣಗಳಿಂದ ಬಂಜೆತನ ಉಂಟಾಗುತ್ತದೆ. ಆದರೆ ಕೆಲವೊಂದು ಕಾರಣಗಳು ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ, ಆ ಅಚ್ಚರಿಯ ಕಾರಣಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
ಚಾಕಲೇಟ್: ಅನೇಕ ಚಾಕಲೇಟ್ ನಲ್ಲಿ ಕೆಫೀನ್ ಅಂಶವಿದೆ. ಅಲ್ಲದೆ ಚಾಕಲೇಟ್ ಅನ್ನು ಕವರ್ ನಿಂದ ಸುತ್ತುವ ಮೊದಲು ತೆಳುವಾದ ಪ್ಲಾಸ್ಟಿಕ್ ನಿಂದ ಸುತ್ತಲಾಗಿರುತ್ತದೆ. ಅದು ಚಾಕಲೇಟ್ ಗೆ ಅಂಟಿಕೊಂಡಿದ್ದು ಸರಿಯಾಗಿ ಕಿತ್ತು ಬರುವುದಿಲ್ಲ. ಚಾಕಲೇಟ್ ತಿನ್ನುವಾಗ ಅವು ಹೊಟ್ಟೆಯಲ್ಲಿ ಸೇರುತ್ತದೆ. ಮಗು ಬೇಕೆಂದು ಪ್ರಯತ್ನಿಸುತ್ತಿರುವವರು ಅತೀಯಾಗಿ ಚಾಕಲೇಟ್ ತಿನ್ನದಿರುವುದು ಒಳ್ಳೆಯದು.
ದ್ವಿಚಕ್ರ ವಾಹನದಲ್ಲಿ ಪ್ರಯಾಣ: ಮಗುಬೇಕೆಂದು ಬಯಸುವ ಸಮಯದಲ್ಲಿ ದ್ವಿಚಕ್ರವಾಹನದಲ್ಲಿ ಪ್ರಯಾಣ ಮಾಡದಿರುವುದು ಒಳ್ಳೆಯದು.
ಹಲ್ಲಿನ ತೊಂದರೆ: ಕ್ಯಾಲ್ಸಿಯಂ ತೊಂದರೆ ಹಲ್ಲಿನ ತೊಂದರೆ ಕಂಡು ಬರುತ್ತದೆ. ಕ್ಯಾಲ್ಸಿಯಂ ಕೊರತೆಯಿದ್ದರೆ ಗರ್ಭದಾರಣೆಯಲ್ಲೂ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಹಲ್ಲಿನ ಸಮಸ್ಯೆ ಇದ್ದವರು ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿಬೇಕು. ಗರ್ಭಧಾರಣೆಗೆ ನನ್ನ ದೇಹ ಸಿದ್ಧವಿದೆಯೇ ಎಂದು ವೈದ್ಯರನ್ನು ಕಂಡು ಪರೀಕ್ಷಿಸಬೇಕು.
ತಾಯಿಯಲ್ಲಿ ಒಬೆಸಿಟಿ: ಒಬೆಸಿಟಿ ಸಮಸ್ಯೆ ಇದ್ದರೆ ಮಕ್ಕಳಾಗುವುದು ಕಷ್ಟ ಎಂದು ತಿಳಿದಿರುವ ವಿಷಯ. ಆದರೆ ತಾಯಿಗೆ ಒಬೆಸಿಟಿ ಸಮಸ್ಯೆ ಇದ್ದರೆ ಮಗಳಿಗೆ ಗರ್ಭಧಾರಣೆಯಲ್ಲಿ ತೊಂದರೆ ಕಾಣಿಸಬಹುದು ಅನ್ನುವುದು ಅಚ್ಚರಿ ಅನಿಸಬಹುದು. ಆದರೆ ತಾಯಿಯಿಂದ ಕೆಲವೊಂದು ಹಾರ್ಮೋನ್ ಗಳು ಮಗಳಿಗೆ ಬಂದಿರುತ್ತದೆ. ಒಂದು ವೇಳೆ ಇದರಿಂದಾಗಿ ಮಗಳ ದೇಹದಲ್ಲಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಇದ್ದರೆ ಗರ್ಭಧಾರಣೆಯಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
ಸೌಂದರ್ಯಕ್ರೀಮ್ ನಲ್ಲಿ ಅಧಿಕ antioxidants ಅಂಶವಿದ್ದರೆ: antioxidants ತ್ವಚೆಯಲ್ಲಿರುವ ಕಷ್ಮಲಗಳನ್ನು ಹೋಗಲಾಡಿಸಿ ತ್ವಚೆ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಆದರೆ ಇವುಗಳಿಂದ ಅಡ್ಡ ಪರಿಣಾಮ ಉಂಟಾಗಿ ಬಂಜೆತನ ಬರಬಹುದು ಎಂದು PNAS (Proceedings of the National Academy of Science) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.



Click it and Unblock the Notifications
