Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮ್ಮ-ಮಗುವಿನ ಆರೋಗ್ಯಕ್ಕೆ ಅತಿ ಅವಶ್ಯಕ ಆಹಾರ

ಗರ್ಭಿಣಿಯರಿಗೆ ಅವಶ್ಯಕವಾದ ವಿಟಮಿನ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಇವುಗಳ ಸೇವನೆ ಮಾಡಿದರೆ ಮಗು ಮತ್ತು ತಾಯಿ ಇಬ್ಬರಿಗೂ ಕ್ಷೇಮ.
* ಫೋಲಿಕ್ ಆಸಿಡ್ ಅಥವಾ ಬಿ ಕಾಂಪ್ಲೆಕ್ಸ್: ಫೊಲೇಟ್ ಅಥವಾ ಬಿಕಾಂಪ್ಲೆಕ್ಸ್ ಇರುವ ಆಹಾರ ಸೇವನೆ ಜೀವಕಣಗಳ ಅಭಿವೃದ್ದಿಗೆ ಮಾತ್ರವಲ್ಲ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ, ಅಷ್ಟೇ ಅಲ್ಲ, ಹುಟ್ಟಲಿರುವ ಮಗುವಿಗೆ ಮೆದುಳು ಸಂಬಂಧಿ ಕಾಯಿಲೆ ಬರುವುದನ್ನು ತಡೆಗಟ್ಟುತ್ತದೆ. ಹೃದಯದ ತೊಂದರೆ, ನರಗಳ ಸೆಳೆತ ಮತ್ತು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಅನ್ನು ಸಹ ದೂರವಿಡುತ್ತದೆ. ಆದ್ದರಿಂದ ದಿನನಿತ್ಯ 400 ಗ್ರಾಂ ಫೋಲಿಕ್ ಆಸಿಡ್ ಸೇವಿಸಿದರೆ ಮಗು ಮತ್ತು ತಾಯಿ ಇಬ್ಬರಿಗೂ ಒಳ್ಳೆಯದು.
ಆಹಾರ: ಪಾಲಾಕ್, ಬೀಟ್ರೂಟ್, ಹೂಕೋಸು, ಮೊಟ್ಟೆ, ಎಲೆಕೋಸು, ಧಾನ್ಯಗಳು ಮತ್ತು ಹಸಿರು ಕಾಳುಗಳನ್ನು ಸೇವಿಸಬಹುದು. ಬಾಳೆಹಣ್ಣು, ಕಿತ್ತಳೆ, ಬಾದಾಮಿಗಳಲ್ಲಿ ಫೋಲಿಕ್ ಆಸಿಡ್ ಹೆಚ್ಚಿದೆ.
* ಕ್ಯಾಲ್ಸಿಯಂ: ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವನೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ಮೂಳೆಗಳ ಬೆಳವಣಿಗೆ ಮತ್ತು ಬಲಕ್ಕೆ ಅವಶ್ಯಕ. ಕ್ಯಾಲ್ಸಿಯಂ ಅಭಾವ ಕಂಡುಬಂದಲ್ಲಿ ಅದು ಹೃದಯದ ಮತ್ತು ಮೂಳೆಗಳ ತೊಂದರೆಯನ್ನೂ ತಂದೊಡ್ಡಬಹುದು.
ಆಹಾರ: ಹಾಲು, ಹಾಲಿನ ಉತ್ಪನ್ನಗಳು, ಧಾನ್ಯಗಳು, ಮೀನು, ಹಸಿರು ಎಲೆಯುಳ್ಳ ತರಕಾರಿ, ಈರುಳ್ಳಿ ಎಲೆ, ನುಗ್ಗೇಕಾಯಿ, ಮೆಂತ್ಯೆ ಸೊಪ್ಪು, ಜೀರಿಗೆ, ಕೊತ್ತಂಬರಿ, ಚೆಕ್ಕೆ, ಮೆಣಸು, ಇಂಗು ಮುಂತಾದುವಲ್ಲಿ ಕ್ಯಾಲ್ಸಿಯಂ ಹೆಚ್ಚಿದೆ.
* ಕಬ್ಬಿಣಾಂಶ: ಗರ್ಭಧಾರಣೆಯ ಮೊದಲು ಮತ್ತು ನಂತರ ದೇಹಕ್ಕೆ ಕಬ್ಬಿಣಾಂಶ ಹೆಚ್ಚು ಮುಖ್ಯ. ಇದು ರಕ್ತದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ. ಮಗುವು ಮೊದಲಿನಿಂದಲೇ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಆಹಾರ: ರಾಗಿ, ಸೊಯಾ ಕಾಳು, ದ್ವಿದಳ ಧಾನ್ಯ, ಕ್ಯಾರೆಟ್, ಆಲೂಗಡ್ಡೆ, ಕಡಲೆಕಾಳು, ಗೋಧಿ, ಒಣದ್ರಾಕ್ಷಿ, ಬಾದಾಮಿ, ಖರ್ಜೂರ ಮುಂತಾದುವು ಹೆಚ್ಚು ಉಪಕಾರಿ.



Click it and Unblock the Notifications
