Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಂದನ ಕರೆಯೇ ಕೇಳದಿರಬಹುದು ಜೋಪಾನ!

ಮಕ್ಕಳಾಗದ ಸಾಧ್ಯತೆಯನ್ನು ತಂದೊಡ್ಡುವ ಅನೇಕ ಕಾರಣಗಳು ಈಗಿನ ಜೀವನಶೈಲಿಯಲ್ಲಿ ಸೇರಿಕೊಂಡಿದೆ. ಆದರೆ ಅವುಗಳಿಂದ ದೂರವಿದ್ದು, ಕೆಲವು ಸಲಹೆಗಳನ್ನು ಪಾಲಿಸಿದರೆ ಮುಂದೆ ಈ ತೊಂದರೆಯಿಂದ ದೂರ ಉಳಿಯಬಹುದು.
* ಒತ್ತಡದಿಂದ ದೂರಾಗಿ: ಕೆಲಸದ ಒತ್ತಡವನ್ನು ಆದಷ್ಟು ತಗ್ಗಿಸಿಕೊಳ್ಳಿ, ಮನಸ್ಸು ಆರಾಮವಿದ್ದಷ್ಟು ಜೀವನ ಪ್ರೀತಿ ಹೆಚ್ಚುತ್ತದೆ. ಒತ್ತಡ ಹೆಚ್ಚಿದ್ದಷ್ಟೂ ಆರೋಗ್ಯದ ಮೇಲೆ ಪರಿಣಾಮ ಬೀರಿ ಅನೇಕ ಕಾಯಿಲೆಗಳನ್ನು ತಂದೊಡ್ಡುತ್ತದೆ. ಇದು ಗರ್ಭಧಾರಣೆಯ ಮೇಲೂ ಪರಿಣಾಮ ಬೀರಬಹುದು.
;* ಸಧೃಡ ದೇಹಕ್ಕೆ ಪ್ರಯತ್ನಿಸಿ: ತುಂಬಾ ದಪ್ಪಗಾದರೆ ಮಕ್ಕಳಾಗುವ ಅವಕಾಶವನ್ನು ಕಡಿಮೆಗೊಳಿಸುತ್ತದೆ ಎಂಬುದು ವೈದ್ಯರ ಸಲಹೆ. ಆದ್ದರಿಂದ ಆದಷ್ಟು ಸೂಕ್ತ ಆಹಾರ ಪದ್ದತಿ ಅನುಸರಿಸಬೇಕು. ನಿಮ್ಮ ಎತ್ತರಕ್ಕೆ ತಕ್ಕಂತೆ ನಿಮ್ಮ ತೂಕ ಇದ್ದಲ್ಲಿ ನೀವು ಕಂದನನ್ನು ಹಡೆಯಲು ಸೂಕ್ತ. ದಪ್ಪಗಿದ್ದ ಮಾತ್ರಕ್ಕೆ ಚಿಂತಿಸುವ ಅವಶ್ಯಕತೆಯೂ ಇಲ್ಲ. ಆದರೆ ಪ್ರಯತ್ನ ಪಡುವುದನ್ನು ಮಾತ್ರ ಮರೆಯಬಾರದು.
;* ಕಷ್ಟಕರ ವ್ಯಾಯಾಮ ಬೇಡ: ಅತಿಯಾದರೆ ಯಾವುದೂ ತೊಂದರೆಯೇ ಎಂಬಂತೆ ಅತಿಯಾಗಿ ವ್ಯಾಯಾಮ ಮಾಡದೆ ತಮಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಮಾಡಬೇಕು. ಶಕ್ತಿ ಮೀರಿದ ವ್ಯಾಯಾಮ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಸುಲಭವೆನಿಸುವ ವ್ಯಾಯಾಮ ಸಾಕು.
;* ಕಾಫಿ ಕಡಿಮೆಗೊಳಿಸಿ: ಕಾಫಿಯ ಚಟ ಅಂಟಿಸಿಕೊಂಡಿದ್ದರೆ ಆದಷ್ಟು ಸೇವನೆ ಕಡಿಮೆಗೊಳಿಸಿದರೆ ಉತ್ತಮ. ಕಾಫಿ ಚೇತೋಹಾರಿಯಾಗಲು ಸಹಾಯ ಮಾಡುತ್ತದೆ ಎಂಬ ಅಂಶ ಎಲ್ಲರಿಗೂ ಗೊತ್ತು. ಆದರೆ ಎರಡು ಕಪ್ ಗಿಂತ ಹೆಚ್ಚು ಕಾಫಿ ಸೇವನೆ ಇನ್ನಿತರ ಹೆರಿಗೆ ಸಂಬಂಧಿ ತೊಂದರೆಗಳನ್ನೂ ತಂದೊಡ್ಡಬಹುದು.
;


Click it and Unblock the Notifications
