Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಮಕ್ಕಳಿಗೆ ಮೆದುಳು ಜ್ವರಕ್ಕೆ ಲಸಿಕೆ ಹಾಕಿಸಲೇಬೇಕೆ? ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಡಾ. ರಾಜು ಕೃಷ್ಣಮೂರ್ತಿ ಟಿಪ್ಸ್
ಕರ್ನಾಟಕ ಆರೋಗ್ಯ ಇಲಾಖೆಯು 5 ವರ್ಷದ ಕೆಳಗಿನ ಮಕ್ಕಳಿಗೆ ಮೆದುಳು ಜ್ವರಕ್ಕೆ ಲಸಿಕೆ ನೀಡುತ್ತಿದೆ, ಇದಕ್ಕೆ JE ಲಸಿಕೆ (Japanese encephalitis) ಎಂದು ಕರೆಯಲಾಗುವುದು.
ಈ ಲಸಿಕೆ ಮಕ್ಕಳಿಗೆ ಕಡ್ಡಾಯವಾಗಿ ಕೊಡಿಸಬೇಕು?ಈ ಲಸಿಕೆ ಅಡ್ಡಪರಿಣಾಮ ಬೀರುವುದೇ ಎಂಬೆಲ್ಲಾ ಮಾಹಿತಿಯನ್ನು ಡಾ. ರಾಜು ಕೃಷ್ಣಮೂರ್ತಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ, ಈ ಲಸಿಕೆ ಕುರಿತ ಮಾಹಿತಿ ಇಲ್ಲಿದೆ:

ಮೆದುಳು ಜ್ವರ ಹೇಗೆ ಹರಡುತ್ತದೆ?
* ಏಷ್ಯಾ, ಪಶ್ಚಿಮ ಫೆಸಿಫಿಕ್‌ನ ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
* ಮೆದುಳು ಜ್ವರ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಇದು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ.
* ಮೆದುಳು ಜ್ವರ ಸೋಂಕು ಇರುವ ಹಂದಿಗಳಿಗೆ ಸೊಳ್ಳೆ ಕಚ್ಚಿ, ಆ ಸೊಳ್ಳೆ ಮನುಷ್ಯರಿಗೆ ಕಚ್ಚುವುದರಿಂದ ಹರಡುವುದು.

ಮೆದುಳು ಜ್ವರದ ಲಕ್ಷಣಗಳೇನು?
* ತುಂಬಾ ಜನರಿಗೆ ಈ ಸೋಂಕು ಬಂದರೂ ಏನೂ ಲಕ್ಷಣಗಳು ಕಂಡು ಬರುವುದಿಲ್ಲ.
* ಕೆಲವರಲ್ಲಿ ಚಿಕ್ಕದಾಗಿ ಜ್ವರ, ತಲೆನೋವು ಈ ಬಗೆಯ ಸಮಸ್ಯೆ ಕಂಡು ಬರಬಹುದು.
* ಕುತ್ತಿಗೆ ಬಿಗಿಯಾದ ಅನುಭವ ಉಂಟಾಗುವುದು.
* ರೋಗ ಲಕ್ಷಣಗಳು ತುಂಬಾ ಗಂಭೀರವಾಗಿದ್ದರೆ ಮೆದುಳಿನಲ್ಲಿ ಊತ ಕಂಡು ಬರುವುದು.
* ಈ ಮೆದುಳು ಜ್ವರ ಗರ್ಭಿಣಿಗೆ ಬಂದರೆ ಹೊಟ್ಟೆಯಲ್ಲಿರುವ ಮಗುವಿಗೆ ಹಾನಿಯುಂಟು ಮಾಡಬಹುದು.

JE ಲಸಿಕೆ ಯಾರು ಪಡೆಯಬೇಕು?
* 2 ತಿಂಗಳ ಮಗುವಿನಿಂದ ಹಿಡಿದು ದೊಡ್ಡವರವರೆಗೆ ಈ ಲಸಿಕೆ ಪಡೆಯಬಹುದು.
* ಮೆದುಳು ಜ್ವರ ಅಧಿಕವಾಗಿ ಪತ್ತೆಯಾಗುತ್ತಿರುವ ಕಡೆಗೆ ಆಗಾಗ ಪ್ರಯಾಣ ಮಾಡುವವರಾದರೆ ಈ ಲಸಿಕೆ ಪಡೆಯಬೇಕು.
* ಮೆದುಳು ಜ್ವರ ಅಧಿಕವಾಗಿ ಕಂಡು ಬರುತ್ತಿರುವ ಸ್ಥಳಗಳಲ್ಲಿ ವಾಸಿಸುತ್ತಿದ್ದರೆ ಈ ಲಸಿಕೆ ಪಡೆಯಬೇಕು.
* ನೀವು ವಾಸಿಸುವ ಸ್ಥಳಗಳ ಸುತ್ತ-ಮುತ್ತ ಹಂದಿ ಫಾರಂ ಇದ್ದರೆ ಈ ಲಸಿಕೆ ಹಾಕಿಸುವುದು ಒಳ್ಳೆಯದು.

ಯಾರು ಈ ಲಸಿಕೆ ಹಾಕಿಸಬಾರದು?
* ಗರ್ಭಿಣಿಯರು ಈ ಲಸಿಕೆ ಹಾಕಿಸಬಾರದು
* ನಿಮಗೆ ಏನಾದರೂ ಅಲರ್ಜಿ ಸಮಸ್ಯೆ ಇದ್ದರೆ ಈ ಲಸಿಕೆ ಹಾಕಿಸಬೇಡಿ.
* ನೀವು ನಗರ ಪ್ರದೇಶಗಳಿಗೆ ಮಾತ್ರ ಪ್ರಯಾಣ ಮಾಡುವುದಾದರೆ ಈ ಲಸಿಕೆ ಹಾಕಿಸಬೇಕಾಗಿಲ್ಲ.
* ತುಂಬಾ ಜ್ವರ ಇರುವ ಸಂದರ್ಭದಲ್ಲಿ ಈ ಲಸಿಕೆ ಹಾಕಿಸಬಾರದು, ಜ್ವರ ಕಡಿಮೆಯಾದ ಮೇಲೆ ಬೇಕಾದರೆ ಹಾಕಿಸಬಹುದು.
ಮಕ್ಕಳಿಗೆ ಈ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕೆ?
ಮಕ್ಕಳಿಗೆ JE ಲಸಿಕೆ ಹಾಕಿಸಿದರೆ ಅವರ ದೇಹದಲ್ಲಿ Japanese encephalitis ವಿರುದ್ಧ ಹೋರಾಡುವ ಆ್ಯಂಟಿಬಾಡಿ ಉತ್ಪತ್ತಿ ಮಾಡುತ್ತದೆ, ಆದ್ದರಿಂದ ಈ ಲಸಿಕೆ ನೀಡಿದರೆ ಮೆದುಳು ಜ್ವರದ ವಿರುದ್ಧ ಹೋರಾಡುವ ಸಾಮರ್ಥ್ಯ ದೇಹದಲ್ಲಿರುತ್ತದೆ.

ಈ ಲಸಿಕೆಯನ್ನು ಮಕ್ಕಳಿಗೆ ಕಡ್ಡಾಯವಾಗಿ ಕೊಡಬೇಕೆ?
ಈ ಲಸಿಕೆಯನ್ನು ನಿಮ್ಮ ಮಕ್ಕಳಿಗೆ ಕೊಡಿಸಬೇಕೆ ಅಥವಾ ಬೇಡ್ವೆ ಎಂಬುವುದು ಪೋಷಕರ ನಿರ್ಧಾರಕ್ಕೆ ಬಿಟ್ಟಿದ್ದು.
ಲಸಿಕೆಯ ಅಡ್ಡಪರಿಣಾಮವೇನು?
* ಚುಚ್ಚಿದ ಭಾಗದಲ್ಲಿ ತುಂಬಾ ನೋವು ಕಂಡು ಬರುವುದು.
* ಜ್ವರ ಕಂಡು ಬರುವುದು (ಮಕ್ಕಳಲ್ಲಿ ಕಂಡು ಬರುವುದು)
* ತಲೆ ನೋವು , ಮೈಕೈ ನೋವು ಕಂಡು ಬರುವುದು (ದೊಡ್ಡವರಲ್ಲಿ)
ಇದರಿಂದ ದೊಡ್ಡ ಅಡ್ಡಪರಿಣಾಮ ತುಂಬಾನೇ ಕಡಿಮೆ. ಆದರೆ ಕೆಲವರಿಗೆ ಅಲರ್ಜಿ ಸಮಸ್ಯೆ ಉಂಟಾಗಬಹುದು.

ಲಸಿಕೆ ಬಳಿಕ ಈ ಲಸಿಕೆ ಕಂಡು ಬಂದರೆ ತುರ್ತು ಚಿಕಿತ್ಸೆ ಪಡೆಯಿರಿ
* ಒಂದು ವೇಳೆ ಲಸಿಕೆ ಪಡೆದ ಮೇಲೆ ಗಂಟಲು, ಮುಖದ ಭಾಗದಲ್ಲಿ ಊತ, ಉಸಿರಾಟದ ತೊಂದರೆ, ಜೋರಾದ ಎದೆಬಡಿತ, ಸುಸ್ತು ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ತುರ್ತು ಚಿಕಿತ್ಸೆ ಪಡೆಯಿರಿ.
ಡಾ. ರಾಜು ಅವರ ಸಲಹೆಯೇನು?
ಲಕ್ಷಾಂತರ ವೈರಸ್‌ಗಳಿವೆ, ಅದರಲ್ಲಿ 209 ವೈರಸ್‌ಗಳನ್ನು ಪತ್ತೆ ಮಾಡಲಾಗಿದೆ, ಎಲ್ಲಾ ವೈರಸ್‌ಗಳ ವಿರುದ್ಧ ರಕ್ಷಣೆ ಪಡೆಯಬೇಕೆಂದರೆ ವೈರಸ್ ವಿರುದ್ಧ ರಕ್ಷಣೆ ಪಡೆಯಲು ತುಂಬಾ ಲಸಿಕೆ ಪಡೆಯಬೇಕು. ಆದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಗಮನ ಕೊಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ?
ಡಾ. ರಾಜು ಅವರ ಪ್ರಕಾರ ರೋಗ ನಿರೋಧಕ ಶಕ್ತಿ ಹೆಚ್ಚಿಸದೇ ಹೋದರೆ ಯಾವುದೇ ಲಸಿಕೆ ಪಡೆದರೂ ಪ್ರಯೋಜನವಿಲ್ಲ.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು?
* 6 ಬಗೆಯ ಹಣ್ಣುಗಳನ್ನು ತಿನ್ನಬೇಕು
* ಪ್ರತಿದಿನ ಒಂದೊಂದು ಬಗೆಯ ಸೊಪ್ಪು ಬಳಸಿ
* ಮಕ್ಕಳಿಗೆ ಯೋಗ ಅಭ್ಯಾಸ ಮಾಡಿಸಿ
* ಮಕ್ಕಳನ್ನು ಅರ್ಧ ಗಂಟೆ ಬಿಸಿಲಿನಲ್ಲಿ ಆಟ ಆಡಲು ಬಿಡಿ
ಇಷ್ಟು ಮಾಡಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಹೇಳಿದ್ದಾರೆ.



Click it and Unblock the Notifications
