For Quick Alerts
ALLOW NOTIFICATIONS  
For Daily Alerts

ಮಕ್ಕಳೇ! ಊಟದ ವಿಷಯದಲ್ಲಿ ಗಡಿಬಿಡಿ ಪಡಬಾರದು..!

By Arshad
|

ಇಂದಿನ ಆಧುನಿಕ ಜೀವನ ಪದ್ಧತಿ ಅಂತೆಯೇ ಆಹಾರ ಪದ್ಧತಿ ಕೂಡ ಮಕ್ಕಳಲ್ಲಿ ಅನಾರೋಗ್ಯಕರ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಜಂಕ್ ಆಹಾರಗಳಿಗೆ ಮಕ್ಕಳು ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳು ಮಕ್ಕಳಿಗೆ ಈಗೀಗ ರುಚಿಸುವುದೇ ಇಲ್ಲ ಎಂಬಂತಾಗಿದೆ. ಪಿಜಾ, ಬರ್ಗರ್‎ನಂತಹ ಆಹಾರಗಳೇ ಅವರುಗಳ ಹೊಟ್ಟೆ ತುಂಬಿಸುತ್ತಿದೆ. ಆದರೆ ಇವರುಗಳ ಆಹಾರ ಅಭ್ಯಾಸವನ್ನು ನಾವು ಬದಲಾಯಿಸಿದರೆ ಮಕ್ಕಳೂ ಕೂಡ ಆರೋಗ್ಯಪೂರ್ಣ ಆಹಾರವನ್ನೇ ತಮ್ಮ ದೈನಂದಿನ ಜೀವನದಲ್ಲಿ ಸೇವಿಸುವುದು ಖಂಡಿತ.

How Mindful Eating Helps Kids

ಮಕ್ಕಳು ಸಾವಧಾನದಿಂದ ಅಸ್ಥೆಯಿಂದ ಊಟ ತಿಂಡಿಗಳನ್ನು ಮಾಡಿದಲ್ಲಿ ಆರೋಗ್ಯಪೂರ್ಣ ಆಹಾರ ಸೇವನೆಯತ್ತ ಅವರು ಆಕರ್ಷಿತರಾಗುತ್ತಾರೆ ಮತ್ತು ಆರೋಗ್ಯಪೂರ್ಣ ತೂಕದಿಂದ ಅವರು ನಳನಳಿಸುವುದು ಖಂಡಿತ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ರಸ್ತೆಬದಿಯ ಆಹಾರಕ್ಕೆ ಮುಗಿಬೀಳುವ ಮುನ್ನ ಇರಲಿ ಕಟ್ಟೆಚ್ಚರ
ಈ ಅಧ್ಯಯನದ ಪ್ರಕಾರ ಆರೋಗ್ಯ ತಜ್ಞರು ಹೇಳುವಂತೆ 300 ಮಕ್ಕಳಿರುವ ಎರಡು ತಂಡಗಳನ್ನು ರಚಿಸಿ ಅವರು ಈ ಅಧ್ಯಯನವನ್ನು ಕೈಗೊಂಡು ಸಾವಧಾನ ಆಹಾರ ಸೇವನೆ ಕ್ರಮಕ್ಕೆ ಒತ್ತು ನೀಡಿದ್ದಾರೆ.

ಒಂದು ಗುಂಪಿನ ಮಕ್ಕಳಿಗೆ ತಮಗೆ ಬೇಕಾದ್ದನ್ನು ಸೇವಿಸುವಂತೆ ತಿಳಿಸಿ ಇನ್ನೊಂದು ಗುಂಪಿನ ಮಕ್ಕಳಿಗೆ ಸಾವಧಾನ ಆಹಾರ ಅಭ್ಯಾಸಗಳನ್ನು ಮಾಡಿಸಲಾಯಿತು. ಅದರಂತೆ ಸಾವಧಾನವಾಗಿ ಊಟ ಮಾಡುವವರು ತಾವು ಸೇವಿಸುವ ಆಹಾರದ ಕಡೆಗೆ ಗಮನ ನೀಡುತ್ತಾ ತಮಗೆ ಬಡಿಸಿದ ಆಹಾರದ ಅರಿವನ್ನು ಅರಿತುಕೊಂಡರು. ಅವರಲ್ಲಿ ಜೀರ್ಣಶಕ್ತಿ ಸುಧಾರಣೆಯಾಯಿತು ಮತ್ತು ಇತರ ಗುಂಪಿಗೆ ಹೋಲಿಸಿದಾಗ ಹೆಚ್ಚಿನ ಪೋಷಕಾಂಶಗಳನ್ನು ಅವರು ಪಡೆದುಕೊಂಡರು.

ಸಾವಧಾನ ಊಟದ ಕ್ರಮವನ್ನು ರೂಢಿಸಿಕೊಂಡ ಮಕ್ಕಳು ಆರೋಗ್ಯ ಪೂರ್ಣ ಆಹಾರವನ್ನೇ ತಮ್ಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ. ಮಕ್ಕಳಿಗೆ ಆರೋಗ್ಯಕರ ಆಹಾರಕ್ಕಿಂತ ಅನಾರೋಗ್ಯಕರ ಆಹಾರವೇ ಹೆಚ್ಚು ಹಿಡಿಸುತ್ತದೆ. ಆದರೆ ಸಾವಧಾನ ಊಟದ ರೀತಿಯನ್ನು ಅವರು ಮೆಚ್ಚಿಕೊಂಡಲ್ಲಿ ಆರೋಗ್ಯಪೂರ್ಣ ಆಹಾರವನ್ನೇ ಅವರು ಮೆಚ್ಚಿಕೊಳ್ಳುತ್ತಾರೆ.

ಆದ್ದರಿಂದ ತಜ್ಞರು ಹೇಳುವಂತೆ ಮಕ್ಕಳು ಸಾವಧಾನವಾಗಿ ಆಹಾರವನ್ನು ಸೇವಿಸುವುದರಿಂದ ಪೋಷಕಾಂಶಗಳ ಕೊರತೆಯನ್ನು ಅವರು ಎದುರಿಸುವುದಿಲ್ಲ ಅಂತೆಯೇ ದೈನಂದಿನ ಚಟುವಟಿಕೆಗಳನ್ನು ಅವರು ನಿರ್ವಹಿಸಿಕೊಳ್ಳುತ್ತಾ ಕೊಬ್ಬಿಲ್ಲದ ದೇಹವನ್ನು ಪಡೆದುಕೊಳ್ಳುತ್ತಾರೆ.

English summary

How Mindful Eating Helps Kids

Nowadays, even adults have forgotten the art of healthy eating. That is why junk foods have made their way into our lives. But now, a new study revealed the benefits of mindful eating in kids.
X
Desktop Bottom Promotion