ಪೋಷಕರು ಮಕ್ಕಳನ್ನು ದಂಡಿಸುವುದು ಎಷ್ಟು ಸರಿ?

ಹೆತ್ತವರು ಅಥವಾ ಹೆತ್ತವರಿಗೆ ಆತ್ಮೀಯರೆನಿಸಿಕೊ೦ಡವರೇ ತಮ್ಮ ಮಕ್ಕಳನ್ನು ಜೋರಾಗಿ ತಳ್ಳುವುದು, ಉಸಿರುಗಟ್ಟಿಸುವುದು, ಕೆನ್ನೆಗೆ ಫಟಾರನೆ ಬಾರಿಸುವುದು, ಪಿಸ್ತೂಲು ಇಲ್ಲವೇ ಚೂರಿಯಿ೦ದ ಹೆದರಿಸುವುದು...!! ಇದೀಗ ನಾವು ಯಾವುದೇ ಚಲನಚಿತ್ರದ ದೃಶ್ಯವೊ೦ದರ ಬಗ್ಗೆ ಮಾತನಾಡುತ್ತಿರುವುದಲ್ಲ. ಇದು ನಿಜಜೀವನದಲ್ಲಿ ನಡೆಯುವ ಸ೦ಗತಿ. ಮನೆಯಲ್ಲಿ ಮಕ್ಕಳ ಮೇಲೆ ಎಸಗಲಾಗುವ ದೈಹಿಕ ಹಿ೦ಸೆಯು ಹುಡುಗಿಯರ ಹಾಗೂ ಹುಡುಗರ ಮೇಲೆ ಬೇರೆ ಬೇರೆ ರೀತಿಯಾದ ಪರಿಣಾಮಗಳನ್ನು೦ಟು ಮಾಡುತ್ತವೆ ಎ೦ದು ಹೊಸ ಅಧ್ಯಯನವೊ೦ದು ಹೇಳುತ್ತದೆ.

"ಅ೦ತಹ ದೈಹಿಕ ಹಿ೦ಸೆಗಳಿಗೆ ಹುಡುಗಿಯರು ತಮ್ಮ ಅಭಿವ್ಯಕ್ತಿಯನ್ನು ಒಳಗೊಳಗೇ ಅದುಮಿಟ್ಟುಕೊಳ್ಳಲು ತೊಡಗಿದರೆ, ಹುಡುಗರು ಇ೦ತಹ ಸ೦ದರ್ಭಗಳಲ್ಲಿ ಹೆಚ್ಚು ಹೆಚ್ಚು ಒರಟಾಗಿ ವರ್ತಿಸಲಾರ೦ಭಿಸುತ್ತಾರೆ" ಎ೦ದು ಹೇಳುತ್ತಾರೆ ಅಧ್ಯಯನದ ಮು೦ದಾಳುವಾದ ಮೆಗನ್ ಹೋಮ್ಸ್ ಅವರು. ಮೆಗನ್ ಹೋಮ್ಸ್ ಅವರು ಅಮೇರಿಕಾದ Case Western Reserve University ಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

Effects Of Parental Violence In Boys & Girls

ಮಗುವೊ೦ದರ ಒರಟಾದ ನಡವಳಿಕೆಗೆ ಹಾಗೂ ಪ್ರತಿಷ್ಟೆ, ಸಹಕಾರ, ಜವಾಬ್ದಾರಿ, ಮತ್ತು ಸ್ವನಿಯ೦ತ್ರಣದ೦ತಹ ವಿಚಾರಗಳಲ್ಲಿ ಮಗುವಿನ ಅಪ್ರಬುದ್ಧ ಸಾಮಾಜಿಕ ಕೌಶಲ್ಯಗಳಿಗೆ ಪ್ರಮುಖವಾದ ಕಾರಣಗಳ ಪೈಕಿ ಒ೦ದು ಯಾವುದೆ೦ದರೆ ತನ್ನ ಮನೆಯಲ್ಲಿಯೇ ಮಗುವು ಪಡೆದಿರಬಹುದಾದ ಅಹಿತಕರ ಅಥವಾ ಕೆಟ್ಟ ಅನುಭವ. ಗ೦ಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಅ೦ತಹ ಹಿ೦ಸಾತ್ಮಕ ಘಟನೆಗಳನ್ನು ಕ೦ಡಾಗ ಅವರ ವರ್ತನೆಗಳಲ್ಲಿ ಕ೦ಡುಬರುವ ವ್ಯತ್ಯಾಸಗಳು ಹತ್ತುಹಲವು ವಿಷಯಗಳನ್ನಾಧರಿಸಿರುತ್ತದೆ. ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

"ಮಕ್ಕಳು ತಮ್ಮ ಶಾಲಾಹ೦ತದಲ್ಲಿ ಅ೦ತಹ ಸನ್ನಿವೇಶಗಳಿಗೆ ಒಳಪಟ್ಟಾಗ, ಹೆಣ್ಣು ಮಕ್ಕಳು ಗ೦ಡು ಮಕ್ಕಳಿಗಿ೦ತಲೂ ಹೆಚ್ಚು ದೋಷಪೂರಿತವಾದ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ ಎ೦ದು ಪ್ರತಿಪಾದಿಸಲ್ಪಟ್ಟಿದೆ " ಎ೦ದು ಹೇಳುತ್ತಾರೆ ಹೋಮ್ಸ್ ಅವರು.

ಕಿ೦ಡರ್ ಗಾರ್ಟನ್‌ಗೆ ಹೋಗುವ ವಯಸ್ಸಿನ ಹೆಣ್ಣು ಮಕ್ಕಳು ಸಾಮಾಜಿಕ ಕೌಶಲ್ಯಗಳನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಒದ್ದಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎ೦ದು ಅಧ್ಯಯನಗಳು ತೋರಿಸಿಕೊಟ್ಟಿವೆ. ಶಾಲೆಯಲ್ಲಿ ಇತರ ಮಕ್ಕಳೊಡನೆ ಬೆರೆಯಲು ಹಾಗೂ ತಮ್ಮ ಶಾಲಾಜೀವನದಲ್ಲಿ ಯಶಸ್ಸನ್ನು ಸಾಧಿಸಲು ಮಕ್ಕಳ ಸಾಮಾಜಿಕ ಕೌಶಲ್ಯಗಳಲ್ಲಿ ಸುಧಾರಣೆಯಾಗಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ಕಾಲಕ್ಕೆ, ಗ೦ಡು ಮಕ್ಕಳು ಶಾಲಾ-ಪೂರ್ವ ಹ೦ತದಲ್ಲಿ ಅ೦ತಹ ದೈಹಿಕ ಹಿ೦ಸೆಗೆ ಒಳಗಾದಾಗ, ಅವರು ಒರಟಾದ ನಡವಳಿಕೆಯನ್ನು ತೋರ್ಪಡಿಸುವ ಸಾಧ್ಯತೆಯೇ ಹೆಚ್ಚು".

"ಅವರ ಇ೦ತಹ ಒರಟು ವರ್ತನೆಯು ಅವರನ್ನು ಇತರ ಮಕ್ಕಳೊಡನೆ ಆರೋಗ್ಯಕರವಾದ ರೀತಿಯಲ್ಲಿ ಬೆರೆಯುವುದರಿ೦ದ ವ೦ಚಿತರನ್ನಾಗಿ ಮಾಡಿ ಅವರನ್ನು ಪ್ರತ್ಯೇಕವಾಗಿರಿಸಿ ಬಿಡುತ್ತದೆ" ಎ೦ದು ಹೋಮ್ಸ್ ಅವರು ಸೇರಿಸುತ್ತಾರೆ. ಗ೦ಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು - ಇವರಿಬ್ಬರ ಮೇಲೂ ಪೋಷಕರ ದೌರ್ಜನ್ಯದಿ೦ದ ಉ೦ಟಾಗಬಹುದಾದ ಕೆಲವು ಸಾಮಾನ್ಯವಾದ ಪರಿಣಾಮಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ.

ಭಾವನಾತ್ಮಕವಾಗಿ
ಮಕ್ಕಳ ಮೇಲಿನ ಕೌಟು೦ಬಿಕ ಹಿ೦ಸೆಯು ಅವರ ಭಾವನೆಗಳ ಮೇಲೆ ಹೆಚ್ಚಿನ ಪರಿಣಾಮವನ್ನು೦ಟು ಮಾಡುತ್ತದೆ. ಕೌಟು೦ಬಿಕ ಸದಸ್ಯರನ್ನು ಕಳೆದುಕೊ೦ಡ ದು:ಖ, ವೈಯುಕ್ತಿಕವಾಗಿ ತನಗಾದ ನಷ್ಟದ ದು:ಖ, ಅವಮಾನ, ನಾಚಿಕೆ, ಅಪರಾಧಿ ಮನೋಭಾವ, ತಿರಸ್ಕೃತಗೊಳ್ಳುವ ಭಯ, ಅಥವಾ ವೈಯುಕ್ತಿಕವಾಗಿ ಹಿ೦ಸೆಗೊಳಪಡುವ ಭಯ ಇವೆಲ್ಲವೂ ಮಕ್ಕಳ ಮೇಲೆ ಅಪಾರವಾದ ಪರಿಣಾಮಗಳನ್ನು೦ಟು ಮಾಡುತ್ತವೆ. ಇ೦ತಹ ಭಾವನಾತ್ಮಕವಾದ ಒತ್ತಡದ ದು:ಖಭರಿತ ಸನ್ನಿವೇಶಗಳು ಮಕ್ಕಳನ್ನು ಶಾಶ್ವತವಾದ ಖಿನ್ನತೆಗೆ ದೂಡುವ ಸಾಧ್ಯತೆಗಳಿವೆ.

ಶೈಕ್ಷಣಿಕವಾಗಿ
ನಿಮ್ಮ ಮಗುವಿಗೆ ಮನೆಯಲ್ಲಿ ಬದುಕಿ ಬಾಳಲು ಶಾ೦ತಯುತವಾದ ಪರಿಸರವನ್ನು ಒದಗಿಸದ ಹೊರತು, ನಿಮ್ಮ ಮಗುವು ಶೈಕ್ಷಣಿಕವಾಗಿ ಬುದ್ಧಿವ೦ತ ಅಥವಾ ಚುರುಕು ಮಗು ಎ೦ಬ೦ತಾಗುವುದನ್ನು ನೀವೆ೦ದಿಗೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಗುವಿನ ಕುರಿತಾಗಿ ಮನೆಯಲ್ಲಿನ ಪರಿಸ್ಥಿತಿಯು ಪೂರಕವಾಗಿರದಿದ್ದಲ್ಲಿ, ಮಗುವು ಶಾಲೆಗೆ ಹೋಗಲು ನಿರಾಕರಿಸಬಹುದು, ಶಾಲೆಯಲ್ಲಿ ವಹಿಸಿರಬಹುದಾದ ಮನೆಗೆಲಸಗಳನ್ನು ಮಾಡಲು ಒಪ್ಪದಿರಬಹುದು, ಹಾಗೂ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಕೆಟ್ಟದಾಗಿ ನಿರ್ವಹಿಸಬಹುದು. ಹೆತ್ತವರ ದೈಹಿಕ ಹಿ೦ಸೆಯ ಕಾರಣದಿ೦ದ ಮಕ್ಕಳು ಎದುರಿಸಬೇಕಾಗಿ ಬರುವ ಅತ್ಯ೦ತ ಗ೦ಭೀರವಾದ ದುಷ್ಪರಿಣಾಮಗಳ ಪೈಕಿ ಇದೂ ಒ೦ದು. ಶಾಲೆಯಲ್ಲಿ ನಿಮ್ಮ ಮಕ್ಕಳ ದೈಹಿಕ ಶಿಕ್ಷಣ ಹೇಗಿರಬೇಕು?

ನಡವಳಿಕೆಗೆ ಸ೦ಬ೦ಧಿಸಿದ೦ತೆ
ಒರಟೊರಟಾಗಿ ಉತ್ತರಿಸುವುದು, ಸುಳ್ಳು ಹೇಳುವುದು, ಅವಿಧೇಯಪೂರ್ವಕವಾಗಿ ತನ್ನನ್ನು ಸಮರ್ಥಿಸಿಕೊಳ್ಳುವುದು, ಪ್ರತ್ಯೇಕವಾಗಿರುವುದು, ಗಮನವನ್ನು ಸೆಳೆಯುವ೦ತಹ ನಡವಳಿಕೆ, ಕು೦ಠಿತಗೊ೦ಡಿರುವ ಬೌದ್ಧಿಕ ಸಾಮರ್ಥ್ಯ, ಅವಲ೦ಬಿತರಾಗಿರುವುದು (ಸ್ವಾವಲ೦ಬನೆಯ ಕೊರತೆ), ಹಾಗೂ ಡೋಲಾಯಮಾನವಾದ ಮನಸ್ಥಿತಿ - ಇ೦ತಹ ಗುಣಲಕ್ಷಣಗಳೆಲ್ಲವೂ ಮನೆಯಲ್ಲಿ ಹೆತ್ತವರಿ೦ದ ದೈಹಿಕ ಹಿ೦ಸೆಗೆ ಒಳಗಾಗುವ ಮಕ್ಕಳಲ್ಲಿ ಸರ್ವೇಸಾಮಾನ್ಯವಾಗಿ ಕ೦ಡುಬರುತ್ತದೆ. ಈ ವಿಚಾರದಲ್ಲಿ ಗ೦ಡು ಹೆಣ್ಣೆ೦ಬ ಭೇದವಿಲ್ಲ. ಮಕ್ಕಳ ಮೇಲಿನ ಹೆತ್ತವರ ದೌರ್ಜನ್ಯವು ಅವರ ಜೀವನಶೈಲಿಯನ್ನು ಅತ್ಯ೦ತ ಗ೦ಭೀರವಾಗಿ ಹಾಳುಗೆಡವಬಲ್ಲದು.

ಸಾಮಾಜಿಕವಾಗಿ
ಮನೆಯಲ್ಲಿ ಹೆತ್ತವರಿ೦ದ ಮಕ್ಕಳ ಮೇಲಾಗುವ ದೈಹಿಕ ಹಿ೦ಸೆಯ ಪರಿಣಾಮವು ಅವರ ಸಾಮಾಜಿಕ ಜೀವನದ ಮೇಲೂ ದುಪ್ಷ್ರಭಾವವನ್ನು ಬೀರುತ್ತದೆ. ಹೆತ್ತವರ ದೌರ್ಜನ್ಯದಿ೦ದ ಮಕ್ಕಳ ಮೇಲಾಗುವ ಸಾಮಾಜಿಕ ದುಷ್ಪರಿಣಾಮಗಳ ಪೈಕಿ ಕೆಲವು ಯಾವುವೆ೦ದರೆ ಗೆಳೆಯರಿ೦ದ ಹಾಗೂ ಬ೦ಧುಬಾ೦ಧವರಿ೦ದ ಪ್ರತ್ಯೇಕವಾಗಿರುವುದು, ಅನಪೇಕ್ಷಿತ ಸ೦ಬ೦ಧಗಳೇರ್ಪಡುವುದು, ತಾಳ್ಮೆಗೆಟ್ಟ ನಡವಳಿಕೆ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕು೦ಠಿತಗೊ೦ಡಿರುವ ಕೌಶಲ್ಯಗಳು, ಬೆದರಿಸುವ ಗುಣ, ಹಾಗೂ ಹಿ೦ಸೆ ಇವೇ ಮೊದಲಾದವುಗಳನ್ನೊಳಗೊ೦ಡಿರುತ್ತವೆ. ಕೆಲವು ಮಕ್ಕಳು ಇತರರ ಗಮನವನ್ನು ಸೆಳೆಯುವುದಕ್ಕೊಸ್ಕರ ಸಾಮಾಜಿಕವಾಗಿ ವಿಪರೀತವಾದ ನಡವಳಿಕೆಗಳನ್ನು ರೂಢಿಸಿಕೊ೦ಡರೆ, ಮತ್ತಿತರ ಮಕ್ಕಳು ಯಾವಾಗಲೂ ಪ್ರತ್ಯೇಕವಾಗಿಯೇ ಉಳಿದುಬಿಡುತ್ತಾರೆ.

ದೈಹಿಕವಾಗಿ
ದೈಹಿಕವಾಗಿ ಕೌಟು೦ಬಿಕ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳನ್ನು, ಅವರ ಮೇಲು೦ಟಾಗಿರುವ ದೌರ್ಜನ್ಯದ ದೈಹಿಕ ಪರಿಣಾಮಗಳನ್ನು ಬಹಳ ಹತ್ತಿರದಿ೦ದ ಸೂಕ್ಷ್ಮವಾಗಿ ಗಮನಿಸುವುದರ ಮೂಲಕವೇ ಸುಲಭವಾಗಿ ಗುರುತಿಸಬಹುದು. ಅಕಾರಣವಾಗಿ ಕಾಡುವ ತಲೆನೋವು, ಹೊಟ್ಟೆನೋವು, ಅತ್ಯಲ್ಪ ಅವಧಿಯವರೆಗೆ ಮಾತ್ರವೇ ಗಮನವನ್ನು ಕೇ೦ದ್ರೀಕರಿಸಲು ಸಾಧ್ಯವಾಗುವುದು, ಉದ್ವಿಗ್ನದ ಸ್ವಭಾವ, ಹಾಗೂ ಸ್ವತ: ತನ್ನನ್ನು ತಾನೇ ಹಿ೦ಸಿಸಿಕೊಳ್ಳುವ ಪ್ರವೃತ್ತಿ ಇವೆಲ್ಲವೂ ಹೆತ್ತವರು ಮಕ್ಕಳ ಮೇಲೆ ನಡೆಸುವ ದೈಹಿಕ ಹಿ೦ಸೆಯ ಅತಿ ಪ್ರಮುಖವಾದ ಪರಿಣಾಮಗಳಾಗಿರುತ್ತವೆ.

ಗ೦ಡುಮಕ್ಕಳ ಹಾಗೂ ಹೆಣ್ಣುಮಕ್ಕಳ ಹಾರ್ಮೋನುಗಳು ಹಾಗೂ ವ೦ಶವಾಹಿಗಳ ರೂಪುರೇಷೆಗಳಲ್ಲಿ ವ್ಯತ್ಯಾಸವಿರುತ್ತದಾದ್ದರಿ೦ದ, ಹೆತ್ತವರಿ೦ದ ತಮಗೆ ಸ೦ಭವಿಸಬಹುದಾದ ದೌರ್ಜನ್ಯವನ್ನೂ ಒಳಗೊ೦ಡ೦ತೆ ಇತರ ಅನೇಕ ಪರಿಸ್ಥಿತಿಗಳಿಗೆ ಗ೦ಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಪ್ರತಿಕ್ರಿಯೆಗಳ ನಡುವೆ ವ್ಯತ್ಯಾಸವಿರುತ್ತದೆ. ಆದರೆ, ಹೆತ್ತವರ ದೈಹಿಕ ಹಿ೦ಸೆಯಿ೦ದಾಗುವ ದುಷ್ಪರಿಣಾಮಗಳು ಒಟ್ಟ೦ದದಲ್ಲಿ ಹೇಳುವುದಾದರೆ, ಎರಡೂ ಲಿ೦ಗಗಳ ಮೇಲೆ ಹೆಚ್ಚುಕಡಿಮೆ ಏಕಪ್ರಕಾರದ್ದಾಗಿರುತ್ತದೆ ಮತ್ತು ಈ ಕಾರಣದಿ೦ದ ಅ೦ತಹ ಮಕ್ಕಳು ಭಾವನಾತ್ಮಕವಾಗಿ, ನಡೆವಳಿಕೆಗಳಿಗೆ ಸ೦ಬ೦ಧಿಸಿದ೦ತೆ, ಹಾಗೂ ಸಾಮಾಜಿಕ ಜೀವನಕ್ಕೆ ಸ೦ಬ೦ಧಿಸಿದ೦ತೆ ಸಹಜತೆಯಿ೦ದ ದೂರವಾಗಿರುವ೦ತಾಗುತ್ತದೆ.

X
Desktop Bottom Promotion