Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎದೆಹಾಲುಣಿಸುವುದರ ಕುರಿತು ಇರುವ ತಪ್ಪು ಕಲ್ಪನೆಗಳಿವು
ಎದೆಹಾಲುಣಿಸುವುದರ ಬಗ್ಗೆ ಹಲವಾರು ತಪ್ಪು ಕಲ್ಪನೆ ಜನರಲ್ಲಿ ಇದೆ, ಉದಾಹರಣೆಗೆ ಮಗು ಆಗಾಗ ಹಾಲು ಕುಡಿದರೆ ಮಗುವಿಗೆ ಸರಿಯಾಗಿ ಹೊಟ್ಟೆ ತುಂಬುವಷ್ಟು ಹಾಲು ಸಿಗಲ್ಲ.
ಹೀಗೆ ಹತ್ತು ಹಲವು ತಪ್ಪು ಕಲ್ಪನೆ ಹಲವರಲ್ಲಿದೆ, ಅವುಗಳ ಕುರಿತು ಈ ಲೇಖನದಲ್ಲಿ ಒಂದೊಂದಾಗಿ ನೋಡೋಣ:

ಎದೆ ಹಾಲುಣಿಸುವಾಗ ನೋವಾಗುವುದು
ಎದೆ ಹಾಲುಣಿಸುವಾಗ ತಾಯಿಗೆ ಮಗುವಿನ ಮೇಲೆ ಮತ್ತಷ್ಟು ಅಕ್ಕರೆ ಉಂಟಾಗುವುದು, ಇದರಿಂದ ತಾಯಿ ಹಾಗೂ ಮಗುವಿನ ಬಾಂಧವ್ಯ ಗಟ್ಟಿಯಾಗುವುದು. ಎದೆ ಹಾಲುಣಿಸುವಾಗ ನೋವಾಗುವುದಿಲ್ಲ, ಆದರೆ ಹೆರಿಗೆಯಾದಾಗ ಮೊಲೆತೊಟ್ಟು ಚಿಕ್ಕದಾಗಿದ್ದರೆ ಸಿರೆಂಜ್‌ನಲ್ಲಿ ಎಳೆಯಲಾಗುವುದು, ಆಗ ನೋವಾಗುವುದು ಆದರೆ ಮಗು ಮೊಲೆ ತೊಟ್ಟಿಗೆ ಬಾಯಿಟ್ಟು ಕುಡಿಯುವಾಗ ನೋವಾಗಲ್ಲ. ಹಲ್ಲು ಬಂದಾಗ ಕಚ್ಚುತ್ತದೆ ಆಗ ನೋವಾಗುವುದು, ಇಲ್ಲದಿದ್ದರೆ ನೋವಾಗಲ್ಲ.
ಸ್ಕಿನ್ ಟು ಸ್ಕಿನ್ ಅಷ್ಟೇನು ಮುಖ್ಯವಲ್ಲ
* ಮಗುವಿನ ದೇಹದ ಉಷ್ಣತೆ ಕಾಪಾಡಲು ಸ್ಕಿನ್ ಟು ಸ್ಕಿನ್ ಕೇರ್ ಅವಶ್ಯಕ
* ಇದರಿಂದ ಮಗುವಿನಲ್ಲಿರುವ ಆತಂಕ ಕಡಿಮೆಯಾಗುವುದು
* ಬೇಗನೆ ಬೇಗನೆ ಹಾಲನ್ನು ಹೀರಿ ಕುಡಿಯಲು ಕಲಿಯುವುದು
* ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಸ್ತನ ದೊಡ್ಡದಿದ್ದರೆ ತುಂಬಾ ಹಾಲಿರುತ್ತದೆ
ದೊಡ್ಡ ಸ್ತನದಲ್ಲಿ ತುಂಬಾ ಹಾಲಿರುತ್ತದೆ, ಚಿಕ್ಕ ಸ್ತನದಲ್ಲಿ ಹಾಲು ಕಡಿಮೆ ಇರುತ್ತದೆ ಎಂಬುವುದು ತಪ್ಪು ಕಲ್ಪನೆ. ಕೆಲವರಲ್ಲಿ ಎದೆ ಹಾಲು ಅಧಿಕ ಇನ್ನು ಕೆಲವರಲ್ಲಿ ಸ್ತನ ಹಾಲು ಕಡಿಮೆ ಇರುತ್ತದೆ, ಇದಕ್ಕೂ ಸ್ತನದ ಗಾತ್ರಕ್ಕೂ ಸಂಬಂಧವಿಲ್ಲ.
ಎದೆ ಹಾಲುಣಿಸುವುದರಿಂದ ಮೈ ತೂಕ ಕಡಿಮೆಯಾಗುವುದು
ಮಗುವಿಗೆ ಎದೆ ಹಾಲುಣಿಸುವುದರಿಂದ ಮಾತ್ರ ಮೈ ತೂಕ ಕಡಿಮೆಯಾಗುವುದು ಎಂಬುವುದು ತಪ್ಪು ಕಲ್ಪನೆ, ನೀವು ಹೆರಿಗೆಯ ಬಳಿಕ ಮೈ ತೂಕ ಕಡಿಮೆಯಾಗಲು ವ್ಯಾಯಾಮ ಕೂಡ ಮಾಡಬೇಕು.
ಎದೆ ಹಾಲುಣಿಸುವಾಗ ನಾನು ಔಷಧ ತೆಗೆದುಕೊಂಡರೆ ತೊಂದರೆಯಿಲ್ಲ
ಇದು ತಪ್ಪು ಕಲ್ಪನೆ, ನಿಮಗೆ ಹುಷಾರಿಲ್ಲ ಅಂತ ವೈದ್ಯರ ಬಳಿ ಹೋದಾಗ ನೀವು ಎದೆ ಹಾಲುಣಿಸುವ ತಾಯಿ ಅಂತ ಹೇಳಿ ಅವರು ನಿಮಗೆ ಸೇಫ್ ಔಷಧ ಕೊಡುತ್ತಾರೆ.
ಆಫೀಸ್‌ಗೆ ಹೋಗಲು ಪ್ರಾರಂಭಿಸಿದ ಮೇಲೆ ಎದೆಹಾಲು ಕಡಿಮೆಯಾಗುವುದು
ಮಗು ಎದೆ ಹಾಲನ್ನು ಕುಡಿದಷ್ಟೂ ಎದೆಹಾಲು ಅಧಿಕ ಉತ್ಪತ್ತಿಯಾಗುತ್ತದೆ, ಆದರೆ ಆಫೀಸ್‌ಗೆ ಹೋಗಲು ಪ್ರಾರಂಭಿಸಿದ ಮೇಲೆ ಆಗಾಗ ಎದೆಹಾಲು ಕುಡಿಸಲು ಸಾಧ್ಯವಿಲ್ಲ. ಆಗ ನೀವು ಹಾಲ್ನು ಪಂಪ್ ಮಾಡಿ ಇಡಬಹುದು ಅಥವಾ ಪಂಪ್ ಮಾಡಿ ಚೆಲ್ಲಬೇಕಾಗುತ್ತದೆ.
ಹಾಲನ್ನು ಪಂಪ್ ಮಾಡಿಟ್ಟು ಮದ್ಯ ಸೇವಿಸಬಹುದು
ಎದೆ ಹಾಲುಣಿಸುವ ತಾಯಂದಿರು ಮದ್ಯಪಾನ ಮಾಡಲೇಬಾರದು, ಆದರೆ ಹಾಲನ್ನು ಪಂಪ್ ಮಾಡಿಟ್ಟು ಮದ್ಯಪಾನ ಮಾಡಬಹುದು ಎಂಬ ತಪ್ಪು ಕಲ್ಪನೆ ಇದೆ. ಆದರೆ ಮದ್ಯಪಾನ ಕುಡಿಯುವುದರಿಂದ ನಿಮ್ಮ ಮಗುವಿನ ಪ್ರಾಣಕ್ಕೆ ಅಪಾಯ ಉಂಟಾಗಬಹುದು.
ವ್ಯಾಯಾಮ ಮಾಡಿದರೆ ಎದೆಹಾಲಿನ ರುಚಿ ಬದಲಾಗುತ್ತೆ
ವ್ಯಾಯಾಮ ಮಾಡಿದರೆ ಎದೆಹಾಲಿನ ರುಚಿ ಕಳೆದು ಹೋಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ಎದೆಹಾಲಿನ ರುಚಿ ವ್ಯಾಯಾಮ ಮಾಡಿದರೆ ಬದಲಾಗುವುದಿಲ್ಲ, ಬದಲಿಗೆ ತಾಯಿಯ ಆರೋಗ್ಯಕ್ಕೆ ಒಳ್ಳೆಯದು.
ಎದೆಹಾಲುಣಿಸುತ್ತಿದ್ದರೆ ಗರ್ಭಧಾರಣೆಯಾಗುವುದಿಲ್ಲ
ಎದೆಹಾಲುಣಿಸುವ ಸಮಯದಲ್ಲಿ ಗರ್ಭಧಾರಣೆಯಾಗಲ್ಲ ಎಂಬ ತಪ್ಪು ಕಲ್ಪನೆ ಇದೆ, ಆದರೆ ಹೆರಿಗೆಯ ಬಳಿಕ ಮೊದಲ ಮುಟ್ಟು ಪ್ರಾರಂಭವಾಗುವ ಮುನ್ನ ಕೂಡ ಗರ್ಭಧಾರಣೆಯಾಗಬಹುದು.
ನಿಮ್ಮ ಮಗುವಿಗೆ ಎದೆಹಾಲು ಸಾಕಾಗುತ್ತದೆ ಎಂದು ಸೂಚಿಸುವ ಲಕ್ಷಣಗಳು
* ಮಗುವಿನ ಡಯಾಪರ್ ತುಂಬಿರುತ್ತದೆ.
* ನಿಮ್ಮ ಮಗು ಹೀರಿ ಕುಡಿಯುವ ಶಬ್ದ ನಿಮಗೆ ಕೇಳಿಸುತ್ತೆ
* ಮಗುವಿಗೆ 8-12 ಬಾರಿ ಹಾಲುಣಿಸಬೇಕು
* ಮಗುವಿಗೆ ಹೊಟ್ಟೆ ತುಂಬಿದ್ದರೆ ನಿದ್ದೆ ಚೆನ್ನಾಗಿ ಮಾಡುತ್ತದೆ.
* ಮಗುವಿನಲ್ಲಿ ತಿಂಗಳಿನಿಂದ ತಿಂಗಳಿಗೆ ಮೈ ತೂಕ ಹೆಚ್ಚಾಗುವುದು.
ಮಗುವಿಗೆ ಎಷ್ಟು ಸಮಯ ಹಾಲುಣಿಸಬೇಕು?
ಮಗುವಿಗೆ ಕನಿಷ್ಠ 6 ತಿಂಗಳು ಹಾಲುಣಿಸಬೇಕು, ಅದರ ಮೇಲೆ ಎಷ್ಟು ಸಮಯ ಬೇಕಾದರೂ ಕುಡಿಸಬಹುದು. ಮಗುವಿಗೆ ಅಧಿಕ ಸಮಯ ಕುಡಿದಷ್ಟು ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ.



Click it and Unblock the Notifications

