Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪರೀಕ್ಷೆಯ ಒತ್ತಡ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಕುಗ್ಗದಿರಲು ಏನು ಮಾಡಬೇಕು?
ಫೆಬ್ರವರಿ 22ಕ್ಕೆ ಹಾಸನದಲ್ಲಿ ಭವಿಷ್ಯದಲ್ಲಿ ಉಜ್ವಲ ಭವಿಷ್ಯ ಕಾಣಬೇಕಾಗಿದ್ದ ಒಬ್ಬ ವಿದ್ಯಾರ್ಥಿ ತನ್ನ ಬಾಳು ಮುಗಿಸಿ ಹೊರಟಿದ್ದಾನೆ, ಅವನ ಹೆತ್ತ ಪೋಷಕರ ನೋವು ನೋಡುವಾಗ ಕರುಳು ಹಿಂಡಿದಂತಾಗುವುದು, ಮಕ್ಕಳು ಈ ರೀತಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಹೇಗೆ?
ಮಕ್ಕಳು ಇಂಥ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಗಟ್ಟಲು ಪೋಷಕರು ಮತ್ತು ಶಿಕ್ಷಕರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ, ಅಂಕ ತೆಗೆಯುವ ಒತ್ತಡಕ್ಕೆ ಮಕ್ಕಳು ಒಳಗಾಗದಂತೆ ನೋಡಿಕೊಳ್ಳುವುದು ವಿದ್ಯಾಸಂಸ್ಥೆಯ ಪ್ರಮುಖ ಜವಾಬ್ದಾರಿ ಆಗಬೇಕಾಗಿದೆ, ಪೋಷಕರು ಕೂಡ ಅಷ್ಟೇ ತಮ್ಮ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಅರಿತುಕೊಳ್ಳಬೇಕು.

ಪರೀಕ್ಷೆ ಸಮೀಪಿಸುತ್ತಿದೆ, ಒತ್ತಡ ಹೆಚ್ಚಾಗುವುದು
ಮಾರ್ಚ್‌ನಲ್ಲಿ ಪರೀಕ್ಷೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳಿಗೆ ಪರೀಕ್ಷಾ ಒತ್ತಡದ ಸಮಯ, ಮಕ್ಕಳು ಮಾತ್ರವಲ್ಲ ಪೋಷಕರು ಹಾಗೂ ಶಿಕ್ಷಕರೂ ಈ ಅವಧಿಯಲ್ಲಿ ಒತ್ತಡದಲ್ಲಿರುತ್ತಾರೆ, ಎಲ್ಲರಿಗೂ ಒಂದೇ ಒತ್ತಡ ಅಂಕ... ಅಂಕ, ಮಕ್ಕಳು ಒಳ್ಳೆಯ ಮಾರ್ಕ್ಸ್ ತೆಗೆಯಬೇಕೆಂದು ಪೋಷಕರು ಹೇಳಿದರೆ, ವಿದ್ಯಾರ್ಥಿಗಳು ಒಳ್ಳೆಯ ಮಾರ್ಕ್ಸ್ ತಗೊಂಡರೆ ನಮ್ಮ ಸ್ಕೂಲ್‌ನ ಖ್ಯಾತಿ ಹೆಚ್ಚಾಗುವುದು, ಇದರಿಂದ ಫೀಸ್ ಮತ್ತಷ್ಟು ಹೆಚ್ಚಿಸಹುದು ಎಂಬ ಲೆಕ್ಕಾಚಾರ ಶಾಲೆಗಳದ್ದು, ಈ ಒತ್ತಡಗಳಿಗೆ ಬಲಿಯಾಗುವುದು ಪಾಪ ಮಕ್ಕಳು.
ಅಂಕ ಅವಶ್ಯಕ, ಅಂಕವೇ ಎಲ್ಲವೂ ಅಲ್ಲ
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ನೂರಕ್ಕೆ 99 ಅಣಕ ತೆಗೆದರೂ ಕಡಿಮೆಯೇ, ಆದರೆ ಅಂಕ ತೆಗೆದವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬುವುದು ಭ್ರಮೆ. ತುಂಬಾ ಅಂಕ ತೆಗೆದು ಸಾಧನೆ ಮಾಡಿದವರಿಗಿಂತ ಜಸ್ಟ್ ಪಾಸಾಗಿ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆದವರು ನಮ್ಮಲ್ಲಿ ಹಲವು ಮಂದಿ ಇದ್ದಾರೆ, ಹಾಗಾಗಿ ಅಂಕ ಅವಶ್ಯಕ, ಆದರೆ ಅಂಕ ತೆಗಿಯಲೇಬೇಕೆಂದು ಒತ್ತಡ ಹಾಕುವುದು ತಪ್ಪು. ಏಕೆಂದರೆ ಕೆಲವು ಮಕ್ಕಳು ಕಲಿಕೆಯಲ್ಲಿ ತುಂಬಾನೇ ಮುಂದಿರುತ್ತಾರೆ ಹಾಗಾಗಿ ಅವರು ಒಳ್ಳೆಯ ಮಾರ್ಕ್ಸ್ ತೆಗೆಯುತ್ತಾರೆ, ಅದು ಅವರಿಗೆ ಒತ್ತಡ ಅನಿಸುವುದಿಲ್ಲ, ಆದರೆ ಇನ್ನು ಕೆಲವು ಮಕ್ಕಳಿಗೆ ನೆನಪಿನಲ್ಲಿ ಉಳಿಯುವುದು ಕಷ್ಟ ಅಂಥ ಮಕ್ಕಳಿಗೆ 100ಕ್ಕೆ ನೀನು ಪಾಸ್ ಮಾರ್ಕ್ ತೆಗಿ ಅಂದರೆ ತೆಗೆಯಲು ಪ್ರಯತ್ನಿಸುತ್ತಾರೆ ಆದರೆ ನೂರಕ್ಕೆ 99 ಮಾರ್ಕ್ಸ್ ಪಡೆಯಬೇಕು ಎಂದರೆ ಅವರು ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಈ ಸಮಯದಲ್ಲಿ ಶಿಕ್ಷಕರು ಹಾಗೂ ಪೋಷಕರು ಏನು ಮಾಡಬೇಕು?
ಪರೀಕ್ಷೆ ಸಮೀಪ ಬರುತ್ತಿದ್ದಂತೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಜಾಗ್ರತೆವಹಿಸಬೇಕು, ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು, ಮತ್ತೊಬ್ಬ ಮಕ್ಕಳ ಜೊತೆಗೆ ಹೋಲಿಕೆ ಮಾಡಲು ಹೋಗಬೇಡಿ. ಕೆಲವು ಮಕ್ಕಳಿಗೆ ಒಂದು ಸಲಕ್ಕೆ ಅರ್ಥ ಆಗುತ್ತೆ ಇನ್ನು ಮಕ್ಕಳಿಗೆ ಆ ವಿಷಯ ಅರ್ಥ ಮಾಡಿಕೊಳ್ಳಲು 10 ಬಾರಿ ಓದಬೇಕಾಗಬಹುದು. ಅದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು, ಆ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಮಾಡಬೇಡಿ. ಬದಲಿಗೆ ಅವರಿಗೆ ಆತ್ಮವಿಶ್ವಾಸ ತುಂಬಿ, ಅಲ್ಲದೆ ಅವರಿಗೆ ನೀವು ಸ್ವಲ್ಪ ಅಧಿಕ ಗಮನಕೊಡುತ್ತಿದ್ದೀರಿ ಎಂದರೆ ಅವರೇ ಆಸಕ್ತಿವಹಿಸಿ ಕಲಿಯುತ್ತಾರೆ, ಆದ್ದರಿಂದ ಈ ಟ್ರಿಕ್ಸ್ ಬಳಸಿ.
ಚೆನ್ನಾಗಿ ಓದುವ ಮಕ್ಕಳನ್ನು ಶಾಲೆಗೆ ಸೇರಿಸಿ 100% ರಿಸಲ್ಟ್ ನೀಡುವುದು ಶಾಲೆಯ ಸಾಧನೆಯಲ್ಲ
ಚೆನ್ನಾಗಿ ಕಲಿಯದೆ ಇರುವ ಮಕ್ಕಳು ಓದುವಂತೆ ಮಾಡಿ ಪಾಸ್ ಮಾಡಿದರೆ ಆ ಶಾಲೆಯನ್ನು ಹೊಗಳಬಹುದು, ಆದರೆ ಈಗೀನ ಕೆಲ ಶಾಲೆ, ಕಾಲೇಜುಗಳಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದವರಿಗೆ ಮಾತ್ರ ಸೀಟ್ ಸಿಗುತ್ತೆ, ಅಂಥ ಮಕ್ಕಳಿಂದ ಶಾಲೆಗೆ 100% ರಿಸಲ್ಟ್ ಬಂದರೆ ಇದು ದೊಡ್ಡ ವಿಷಯವೇ ಅಲ್ಲ, ಪೋಷಕರೇ ಇಂಥ ಶಾಲೆಯ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications


