Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಮಗುವಿನ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳು ಮತ್ತು ಚಿಕಿತ್ಸೆಗಳು
ಇತ್ತೀಚಿಗೆ ಜನರನ್ನು ಕಾಡುವ ಕಠಿಣ ಆರೋಗ್ಯ ಸಮಸ್ಯೆಗಳಲ್ಲಿ " ಗ್ಯಾಸ್ಟ್ರೀಟೈಸ್ " ಅಥವಾ " ಗ್ಯಾಸ್ಟ್ರಿಕ್ " ಕೂಡಾ ಒಂದು. ಈಗಿನ ಪೀಳಿಗೆಯವರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ . ಬೇರೆ ಕಾಯಿಲೆಗಳಿಗೆ ಹೇಗೆ ನಾವು ಗುಳಿಗೆ ಔಷಧಗಳನ್ನು ತೆಗೆದುಕೊಳ್ಳುತ್ತೇವೆಯೋ ಈ ಗ್ಯಾಸ್ಟ್ರಿಕ್ ಸಮಸ್ಯೆಗೂ ಕೂಡಾ ನಾವು ಔಷಧಗಳ ಮೊರೆ ಹೋಗಬೇಕಾಗಿರುವುದು ಅನಿವಾರ್ಯ ವಾಗಿಬಿಟ್ಟಿದೆ .
ಹುಟ್ಟುವ ಎಳೆ ಮಕ್ಕಳಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ ಎಂದರೆ ನಂಬುತ್ತೀರಾ ? ನಾವಾದರೆ ನಮಗಾಗಬಹುದಾದ ಲಕ್ಷಣಗಳನ್ನು ಗುರುತಿಸಿ ನಮಗೆ ಗ್ಯಾಸ್ಟ್ರಿಕ್ ಆಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ . ಆದರೆ ಇನ್ನೂ ಬಾಯಿಂದ ತೊದಲು ಮಾತನ್ನೇ ಹೊರಡಿಸಲಾರದ ಪುಟ್ಟ ಮಗು ಹೇಗೆ ತಾನೇ " ಅಮ್ಮಾ ನನಗೆ ಗ್ಯಾಸ್ಟ್ರಿಕ್ ಆಗಿದೆ " ಎಂದು ಹೇಳೀತು ? ಅದನ್ನು ಪೋಷಕರಾದ ನಾವೇ ಅರ್ಥ ಮಾಡಿಕೊಳ್ಳಬೇಕು . ಮಗು ಎಲ್ಲದಕ್ಕೂ ಅಳುತ್ತದೆ . ಹೊಟ್ಟೆ ಹಸಿವಾದರೂ , ಸೊಳ್ಳೆ ಕಡಿದರೂ , ಸಣ್ಣ ನೋವಾದರೂ ಹೀಗೆ ಅದರ ಅನುಭವಕ್ಕೆ ಬರುವ ಎಲ್ಲಾ ಸಮಸ್ಯೆಗೂ ಅಳುವೇ ಉತ್ತರ . ಹಾಗಾದರೆ ನಿಮ್ಮ ಪುಟ್ಟ ಕಂದನಿಗೆ ಗ್ಯಾಸ್ಟ್ರಿಕ್ ಹೇಗೆಲ್ಲಾ ಆಗುತ್ತದೆ ? ಅದಕ್ಕೆ ಕಾರಣಗಳೇನು ? ನೋಡೋಣ ಬನ್ನಿ . ದೊಡ್ಡವರಿಗಿಂತ ಮಕ್ಕಳಿಗೆ ಬಹು ಬೇಗನೆ ಗ್ಯಾಸ್ಟ್ರಿಕ್ ಬಂದು ಬಿಡುತ್ತದೆ . ಅದರ ಪುಟ್ಟ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಮಗು ನರಕ ಯಾತನೆ ಅನುಭವಿಸುತ್ತದೆ . ಅದರ ಜೀರ್ಣಾಂಗದಲ್ಲಿ ಸಮಸ್ಯೆ ಉಂಟಾದಾಗ , ತಾಯಂದಿರು ಹಾಲು ಕುಡಿಸುವಾಗ ಮಗುವು ಬಾಯಿಯ ಮುಖೇನ ಗಾಳಿಯ ಸೇವನೆ ಮಾಡಿದಾಗ , ಬಾಟಲಿಯ ಹಾಲು ಕುಡಿಯುವಾಗ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ .

ಮಗುವಿಗೆ ಗ್ಯಾಸ್ಟ್ರಿಕ್ ಆಗಿದೆ ಎಂದು ಅರ್ಥ ಮಾಡಿಕೊಳ್ಳುವುದು ಹೇಗೆ ?
ಮಗುವಿಗೆ ಗ್ಯಾಸ್ಟ್ರಿಕ್ ಆದಾಗ ದೊಡ್ಡವರಿಗೆ ಆಗುವಂತೆ ಎಲ್ಲಾ ಲಕ್ಷಣಗಳೂ ತಲೆದೋರುತ್ತವೆ . ಆದರೆ ಮಗು ಬಾಯಿ ಬಿಟ್ಟು ಹೇಳುವುದಕ್ಕಾಗುವುದಿಲ್ಲ ಅಳುತ್ತದೆ ಅಷ್ಟೇ . ಆದರೆ ಆ ಅಳುವಿನ ಜೊತೆಗೆ ಈ ಲಕ್ಷಣಗಳೇನಾದರೂ ಕಂಡು ಬಂದರೆ ಅದು ನಿಜಕ್ಕೂ ಗ್ಯಾಸ್ಟ್ರಿಕ್ ಆಗಿದೆ ಎಂದು ಅಮ್ಮಂದಿರು ಅರ್ಥ ಮಾಡಿಕೊಳ್ಳಬಹುದು .
1 . ಮಗು ಅಳುವುದು , ಯಾರಾದರೂ ಎತ್ತಿಕೊಂಡು ಸಮಾಧಾನ ಮಾಡಿದರೆ ಅಳು ನಿಲ್ಲಿಸಿ ನಗುವುದು ಸರ್ವೇ ಸಾಮಾನ್ಯ . ಆದರೆ ಆ ರೀತಿ ಮಾಡಿದಾಗಲೂ ಅಳು ನಿಲ್ಲಿಸದೆ ಒಂದೇ ಸಮನೆ ಅಳುತ್ತಾ ಇದ್ದರೆ ಅದು ಗ್ಯಾಸ್ಟ್ರಿಕ್ ಇದ್ದರೂ ಇರಬಹುದು .
2 . ಹೊಟ್ಟೆ ಉಬ್ಬರಿಸಿಕೊಂಡಂತೆ ಕಾಣುವುದು .
3 . ಹೊಟ್ಟೆ ಹಿಸುಕಿದಾಗ ಗಟ್ಟಿಯಾದಂತೆ ಕಾಣುವುದು :
ಹೌದು . ಇದು ತಾಯಂದಿರಿಗೆ ಮಗುವಿನಲ್ಲಿ ಗ್ಯಾಸ್ಟ್ರಿಕ್ ಆಗಿದೆ ಎಂದು ಖಚಿತ ಪಡಿಸಿಕೊಳ್ಳಲು ಸುಲಭ ಉಪಾಯ . ನೀವು ಮಗುವಿನ ಹೊಟ್ಟೆಯನ್ನು ಮೃದುವಾಗಿ ಸ್ಪರ್ಶಿಸಿದಾಗ ನಿಮಗೆ ಗಟ್ಟಿಯಾದಂತೆ ಕಂಡು ಮಗು ಅಳಲು ಶುರು ಮಾಡಿದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆಯೇ ಖಂಡಿತ . ಹಾಗಾದರೆ ಮುದ್ದಾದ ಮಗುವಿಗೆ ಕಾಡುವ ಈ ಗ್ಯಾಸ್ಟ್ರಿಕ್ ಅನ್ನು ಗುಣ ಪಡಿಸುವುದು ಹೇಗೆ?

ಮಗುವಿಗೆ ಹಾಲು ಕುಡಿಸುವ ರೀತಿ
ತಾಯಂದಿರು ಗಮನಿಸಬೇಕಾದ ಬಹು ಮುಖ್ಯ ಅಂಶ ಇದು . ನಿಮ್ಮ ಮಗುವಿಗೆ ಹಾಲು ಕುಡಿಸುವಾಗ ಯಾವಾಗಲೂ ಅಷ್ಟೇ ಮಗುವಿನ ತಲೆ ಅದರ ಹೊಟ್ಟೆ ಇರುವುದಕ್ಕಿಂತ ಮೇಲೆಯೇ ಇರಬೇಕು . ಇದರಿಂದ ಮಗುವು ಕುಡಿದ ಹಾಲು ನೇರ ವಾಗಿ ಅದರ ಹೊಟ್ಟೆಗೆ ತಲುಪುತ್ತದೆ ಮತ್ತು ಅದು ಉಸಿರಾಡುವ ಗಾಳಿ ಕೂಡ ಸರಾಗವಾಗಿ ಆಚೆ ಬರುತ್ತದೆ . ಮಗು ಅದನ್ನು ಸುಲಭವಾಗಿ ಮೂಗಿನ ಮುಖಾಂತರ ಹೊರಹಾಕಲು ಸಹಾಯಕವಾಗುತ್ತದೆ . ಆದ್ದರಿಂದ ನೀವು ನಿಮ್ಮ ಮಗುವಿಗೆ ಹಾಲುಣಿಸಲು ಕುಳಿತುಕೊಂಡರೆ ಮಗುವಿನ ತಲೆಯನ್ನು ಇಟ್ಟುಕೊಳ್ಳುವ ನಿಮ್ಮ ಕಾಲು ಸ್ವಲ್ಪ ಮೇಲೆಯೇ ಇರಬೇಕು . ಇಲ್ಲವೆಂದರೆ ನಿಮ್ಮ ತೊಡೆಯ ಮೇಲೆ ಮಗುವಿನ ತಲೆಗೆ ಒಂದು ಮೆತ್ತಗಿನ ದಿಂಬನ್ನು ಇಟ್ಟು ಹಾಲು ಕುಡಿಸಿದರೆ ಇನ್ನೂ ಉತ್ತಮ .

ಮಗುವಿನ ಬೆನ್ನ ಮೇಲೆ ಮೆತ್ತಗೆ ತಟ್ಟುವುದು
ಇದು ಪ್ರತಿಯೊಬ್ಬ ತಾಯಿಯೂ ಪಾಲಿಸಬೇಕಾದ ನಿಯಮ ಅಂದುಕೊಂಡರೂ ಸರಿ . ನಿಮ್ಮ ಮಗುವಿಗೆ ಹಾಲು ಕುಡಿಸಿದ ಸ್ವಲ್ಪ ಸಮಯದ ನಂತರ ಅದನ್ನು ನಿಮ್ಮ ಭುಜದ ಮೇಲೆ ಎತ್ತಿಕೊಂಡು ಅದರ ಬೆನ್ನ ಮೇಲೆ ನಿಧಾನವಾಗಿ ತಟ್ಟಿ . ಇದರಿಂದ ಮಗುವಿಗೆ ಹಾಲು ಕುಡಿಯುವಾಗ ಗಾಳಿ ಒಳ ಹೋಗಿದ್ದರೆ ಬಹು ಬೇಗನೆ ಆಚೆ ಬಂದಂತಾಗುತ್ತದೆ . ಇದು ಒಂದು ವೇಳೆ ಆ ಕ್ಷಣ ಕೆಲಸ ಮಾಡದಿದ್ದರೆ ನಿಮ್ಮ ಮಗುವನ್ನು ಬೋರಲು ಮಲಗಿಸಿ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಅದೇ ತರ ಮಾಡಿ .

ಮಗುವಿನ ಹೊಟ್ಟೆಗೆ ಮೆತ್ತಗೆ ಮಸಾಜ್ ಮಾಡಿ
ಮಗುವಿನ ಹೊಟ್ಟೆಗೆ ನೀವು ಮಾಡುವ ಮಸಾಜ್ ಅದರೊಳಗಿನ ಗ್ಯಾಸ್ ಅನ್ನು ಹೊರಹಾಕುವ ಒಂದು ಸುಲಭ ಮತ್ತು ಯಶಸ್ವಿ ವಿಧಾನವಾಗಿದೆ . ನೀವು ಯಾವುದಾದರೂ ಒಂದು " ಬೇಬಿ ಆಯಿಲ್ " ಅಥವಾ " ಬೇಬಿ ಕ್ರೀಮ್ " ಅನ್ನು ಬಳಸಿ ಮಗುವಿನ ಹೊಟ್ಟೆಯ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿದರೆ ಗಾಳಿಯು ಮಗುವಿನ ಕರುಳಿಗೆ ಸುಲಭವಾಗಿ ಹೋಗುತ್ತದೆ ಮತ್ತು ಮಗುವು ಹೊಟ್ಟೆಯ ಗ್ಯಾಸ್ಟ್ರಿಕ್ ನಿಂದ ಬಳಲುವುದು ತಪ್ಪುತ್ತದೆ .

" ಗ್ರೈಪ್ ವಾಟರ್ " ಅನ್ನು ಮಗುವಿಗೆ ಕೊಡುವುದು
ಗ್ರೈಪ್ ವಾಟರ್ ಅನ್ನು ಬಹಳ ಹಿಂದಿನಿಂದಲೂ ತಂದೆ ತಾಯಂದಿರು ಮಗುವಿನ ಆರೋಗ್ಯವನ್ನು ಕಾಪಾಡಲು ಬಳಸುತ್ತಾ ಬಂದಿದ್ದಾರೆ . ಇದು ಕೇವಲ ಐದು ನಿಮಿಷಗಳಲ್ಲಿ ಕೆಲಸ ಮಾಡುತ್ತದೆ . ಇದರಲ್ಲಿ ನೀರಿನ ಜೊತೆ ಸೋಡಿಯಂ ಬೈಕಾರ್ಬೋನೇಟ್ ಮತ್ತು ಇನ್ನೂ ಅನೇಕ ಗಿಡಮೂಲಿಕೆಗಳಿದ್ದು ನಿಮ್ಮ ಮಗುವಿನ ಹೊಟ್ಟೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ . ಮಗುವಿನ ಗ್ಯಾಸ್ಟ್ರಿಕ್ ಪರಿಹಾರಕ್ಕೆ ಇದಕ್ಕಿಂತ ಸುಲಭ ಮಾರ್ಗ ಇನ್ನೊಂದಿಲ್ಲ.

ನಿಮ್ಮ ಮಗುವಿಗೆ ಕೊಡುವ ಆಹಾರಗಳ ಮೇಲೆ ಗಮನವಿಡಿ
ನಿಮ್ಮ ಮುದ್ದಾದ ಮಗುವನ್ನು ಬೇರೆಲ್ಲಾ ವಿಷಯದಲ್ಲಿ ಹೇಗೆ ನೋಡಿಕೊಳ್ಳುತ್ತೀರೋ ಅದರ ಆಹಾರದ ವಿಷಯದಲ್ಲೂ ಅಷ್ಟೇ ಬಹಳ ಜಾಗರೂಕರಾಗಿ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ . ಮಗುವಿಗೆ ನಿಮ್ಮ ಎದೆ ಹಾಲನ್ನು ಬಿಟ್ಟು ಬೇರೆ ಏನನ್ನೇ ಕೊಡುವುದಕ್ಕೂ ಮುಂಚೆ ಮಕ್ಕಳ ತಜ್ಞರನ್ನು ಭೇಟಿಯಾಗುವುದು ಒಳ್ಳೆಯದು . ಒಂದು ವೇಳೆ ಮಗುವಿಗೆ ಜ್ಯೂಸು ಕೊಡಲು ಬಯಸಿದರೆ ಅದು ಕಾರ್ಬೊನೇಟೆಡ್ ಅಲ್ಲದ ನೈಸರ್ಗಿಕವಾದ ತಾಜಾ ಹಣ್ಣಿನ ಜ್ಯೂಸು ಆಗಿರಬೇಕು . ಅದೂ ಸಹ ಎಷ್ಟು ಪ್ರಮಾಣದಲ್ಲಿ ನೀಡಿದರೆ ಉತ್ತಮ ಎಂಬುದನ್ನು ವೈದ್ಯರ ಬಳಿ ಖಾತ್ರಿ ಪಡಿಸಿಕೊಳ್ಳಿ . ನಿಮ್ಮ ಮಗುವಿಗೆ ಟಿವಿ ಯಲ್ಲಿ ನೋಡಿದ ಅಥವಾ ಜಾಹಿರಾತಿನಲ್ಲಿ ಕಂಡು ಬಂದ ಸಿಕ್ಕ ಸಿಕ್ಕ ಔಷಧಗಳನ್ನು ಕೊಡಲೇ ಬೇಡಿ . ಔಷಧಗಳನ್ನು ಕೊಡುವ ವಿಚಾರದಲ್ಲಂತೂ ನೀವು ಎಷ್ಟೇ ಹುಷಾರಾಗಿದ್ದರೂ ಸಾಲದು . ಏಕೆಂದರೆ ಒಂದೊಂದು ಮಗುವಿನ ದೇಹದ ಆರೋಗ್ಯ ಶೈಲಿ ಒಂದೊಂದು ತರಹ ಇರುತ್ತದೆ . ಅಡ್ಡ ಪರಿಣಾಮ ಹೊಂದುವ ಸಾಧ್ಯತೆ ಬಹಳ ಇದ್ದು ಮಗುವಿನ ಪ್ರಾಣಕ್ಕೇ ಆಪತ್ತಾಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಔಷಧಗಳನ್ನು ಕೊಡುವ ಮುಂಚೆ ಮಕ್ಕಳ ತಜ್ಞರ ಬಳಿ ಸಲಹೆ ಕೇಳುವುದು ಬಹಳ ಒಳ್ಳೆಯದು .

ನೀವು ನಿಮ್ಮ ಮಗುವಿನ ವಿಷಯದಲ್ಲಿ ಗಮನಿಸಬೇಕಾದ ಬಹಳ ಮುಖ್ಯ ಅಂಶ
ನಿಮ್ಮ ಮಗು ಸದಾ ನಿರಂತರವಾಗಿ ಅಳುತ್ತಲೇ ಇದ್ದರೆ ಮತ್ತು ಅದರಲ್ಲಿ ಅಸ್ವಸ್ಥತೆ ಏನಾದರೂ ಕಂಡು ಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ .



Click it and Unblock the Notifications