Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶಿಶುವಿನಲ್ಲಿ ಕಾಣಿಸುವ ಕಾಮಲೆ ಮತ್ತು ಪರಿಹಾರ

ಈ ರೀತಿ ಕಾಮಲೆ ಕಾಣಿಸಕೊಂಡರೆ ಯಾವುದೇ ತೊಂದರೆಯಿಲ್ಲ. ಜನನದ ಎರಡನೇ ದಿನದಲ್ಲಿ ಆರಂಭವಾಗುವ ಈ ಕಾಯಿಲೆ ಸುಮಾರು 8 ದಿನಗಳ ವರೆಗೆ (ಅವಧಿಪೂರ್ವ ಮಕ್ಕಳಲ್ಲಿ 14 ದಿನ) ಇದ್ದು ನಂತರ ಗುಣವಾಗುತ್ತದೆ.
ಕೆಂಪುರಕ್ತ ಕಣಗಳಿಂದ ಬಿಲಿರುಬಿನ್ ಎಂಬ ಹಳದಿ ವರ್ಣದ್ರವ್ಯ ಬಿಡುಗಡೆಯಾಗುತ್ತದೆ. ಇದನ್ನು ಪಿತ್ತಕೋಶ ಹಾಗೂ ಮೂತ್ರಪಿಂಡಗಳು ವಿಲೇವಾರಿ ಮಾಡುತ್ತವೆ. ಆದರೆ ಪಿತ್ತಕೋಶಗಳು ಪೂರ್ಣಪ್ರಮಾಣದಲ್ಲಿ ಬೆಳೆದಿರುವುದಿಲ್ಲವಾದ್ದರಿಂದ , ದೇಹದಲ್ಲಿ ಪಿತ್ತಕೋಶದ ಕಾರ್ಯ ಸರಿಯಾಗಿ ನಡೆಯದೇ ನವಜಾತ ಶಿಶುವಿನ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ಉಂಟಾದರೆ ಗಾಬರಿಯಾಗುವ ಅಗತ್ಯವಿಲ್ಲ.
ಈ ಕಾಮಲೆ ಕಾಯಿಲೆಯ ಲಕ್ಷಣಗಳು:
* ಹಳದಿ ಚರ್ಮ
* ಕಣ್ಣುಗಳ ಬಿಳಿ ಭಾಗದಲ್ಲಿ ಹಾಗೂ ಉಗುರಿನ ತಳಭಾಗದಲ್ಲಿ ಹಳದಿ ಬಣ್ಣ
* ಮಗು ಜಾಸ್ತಿ ಹೊತ್ತು ನಿದ್ದೆ ಮಾಡುವುದು
* ಹಳದಿ ಬಣ್ಣದಲ್ಲಿ ಮಲವಿಸರ್ಜನೆ
ಕಾಮಲೆಗೆ ಚಿಕಿತ್ಸೆ:
ಚಿಕ್ಕ ಪ್ರಮಾಣದಲ್ಲಿ ಕಾಮಾಲೆಯಾಗಿದ್ದರೆ ಅದು ತನ್ನಷ್ಟಕ್ಕೆ ತಾನೇ ಕೇವಲ 10 ದಿನಗಳಲ್ಲಿ ವಾಸಿಯಾಗುತ್ತದೆ. ಆದರೆ, ಅದರ ತೀವ್ರತೆಯನ್ನು ತಗ್ಗಿಸಲು ಈ ಕೆಳಕಂಡ ಚಿಕಿತ್ಸೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.
1. ಮಗುವಿಗೆ ಸಾಧ್ಯವಿದ್ದಷ್ಟೂ ಹೆಚ್ಚು ಬಾರಿ ಮೊಲೆಯುಣಿಸಿ
2. ಬೆಳಗ್ಗೆ ಸೂರ್ಯನ ಬೆಳಕಿಗೆ ಮಗುವನ್ನು ಸ್ವಲ್ಪ ಹೊತ್ತು ಹಿಡಿಯಿರಿ. .ತೆಳುವಾದ ಪರದೆಯನ್ನು ಕಿಟಕಿಗೆ ಹಾಕಿ ಸುರ್ಯನ ಕಿರಣಗಳು ತಾಗುವಂತೆ ಮಗುವನ್ನು ಮಲಗಿಸಬೇಕು.
3. ಪಿತ್ತಕೋಶವನ್ನು ಉತ್ತೇಜಿಸುವ ಕೆಲ ನಿರ್ದಿಷ್ಟ ಔಷಧಗಳನ್ನು ನೀಡದರೆ ಕಾಯಿಲೆ ಗುಣಮುಖವಾಗುತ್ತದೆ.



Click it and Unblock the Notifications
