Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೀ ಮೆಚ್ಯೂರ್ ಬೇಬಿಯ ಆರೈಕೆ ಹೇಗೆ?
ಪ್ರೀ ಮೆಚ್ಯೂರ್ ಬೇಬಿ ಅಂದರೆ ಅವಧಿ ತುಂಬುವ ಮುನ್ನ ಹುಟ್ಟುವ ಮಗು. ಕೆಲ ಮಕ್ಕಳು 7 ತಿಂಗಳಿಗೆ ಹುಟ್ಟಿ ಬಿಡುತ್ತವೆ. ಅಂತಹ ಮಕ್ಕಳ ಆರೈಕೆಯಲ್ಲಿ 9 ತಿಂಗಳಿನಲ್ಲಿ ಹುಟ್ಟಿದ ಮಗುವಿಗಿಂತ ಅಧಿಕ ಮುತುವರ್ಜಿಯಿಂದ ನೋಡಿ ಕೊಳ್ಳಬೇಕಾಗುತ್ತದೆ.
ಪ್ರೀ ಮೆಚ್ಯೂರ್ ಬೇಬಿಯಾದರೆ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಇಟ್ಟು ನಂತರಮನೆಗೆ ಕಳುಹಿಸುತ್ತಾರೆ. ಅಂತಹ ಮಕ್ಕಳು ಇತರ ಮಕ್ಕಳಂತೆ ಆರೋಗ್ಯವಂತರಾಗಿ ಬೆಳೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

ಎದೆ ಹಾಲು: ಪ್ರೀ ಮೆಚ್ಯೂರ್ ಬೇಬಿ ಹುಟ್ಟಿದಾಗ ವೈದ್ಯರು ಎದೆ ಹಾಲು ಕೊಡಬೇಡಿ ಎಂದು ಹೇಳುತ್ತಾರೆ. ಏಕೆಂದರೆ ಮಗುವಿಗೆ ತಾಯಿಯ ಎದೆ ಹಾಲನ್ನು ಕರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ವೈದ್ಯರು ಮಗುವಿಗೆ ಎದೆ ಹಾಲನ್ನು ಯಾವಾಗ ಕೊಡಬಹುದೆಂದು ಹೇಳುತ್ತಾರೆ ಆವಾಗಲೇ ಕೊಡಬೇಕು.
ಮಸಾಜ್: ಪ್ರೀ ಮೆಚ್ಯೂರ್ ಬೇಬಿಗೆ ಮಾಡುವಂತಹ ಮಸಾಜ್ ಮಾಡಬೇಕು. ಇದರಿಂದ ಮಗು ಚೆನ್ನಾಗಿ ನಿದ್ದೆ ಮಾಡುತ್ತದೆ. ಮಕ್ಕಳು ನಿದ್ದೆಯಲ್ಲಿ ಬೆಳೆಯುತ್ತಾರೆ.
ನಿದ್ದೆ: ಮಗು ನಿದ್ದೆ ಮಾಡುವಾಗ ತುಂಬಾ ಎಚ್ಚರವಹಿಸಬೇಕು. ಅದು ತಲೆಯನ್ನು ವಾರೆ ಮಾಡಿ ಮಲಗದಂತೆ ಎಚ್ಚರವಹಿಸಿ.
ರೋಗನಿರೋಧಕ ಶಕ್ತಿ: ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಸೋಂಕಾಣುಗಳು ತಾಗದಂತೆ ಎಚ್ಚರವಹಿಸಿ.
ಪರೀಕ್ಷೆ: ಮಗುವನ್ನು ವೈದ್ಯರು ಹೇಳಿದ ದಿನದಂದು ಕರೆದುಕೊಂಡು ಹೋಗಿ ತೋರಿಸಬೇಕು. ಮಗು ಹುಷಾರಾಗಿದ್ದರೂ ಕರೆದುಕೊಂಡು ಹೋಗಿ ತೋರಿಸಿ.
ಸರಿಯಾದ ಆರೈಕೆ ಮಾಡಿದರೆ ಮಗುವಿನ ಆರೋಗ್ಯದಲ್ಲಿ ಯಾವುದೇ ನ್ಯೂನತೆ ಕಂಡುಬರುವುದಿಲ್ಲ.



Click it and Unblock the Notifications
