Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಗರ್ಭಾವಸ್ಥೆಯಲ್ಲಿ ಚಾಕಲೇಟ್ ಸೇವನೆ ಒಳ್ಳೆಯದು

ಗರ್ಭಾವಸ್ಥೆಯಲ್ಲಿ ಚಾಕಲೇಟ್ ಸೇವನೆ ಇದ್ದರೆ, ಈ ಸಮಯದಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಏರೊತ್ತಡವನ್ನು (pre-eclampsia) ತಡೆದು, ಮಗು ಆರೋಗ್ಯವಂತವಾಗಿ ಜನಿಸುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಗರ್ಭವತಿಯಾದ ಮಹಿಳೆ ವಾರದಲ್ಲಿ ಕನಿಷ್ಟ 5 ಬಾರಿ ಚಾಕಲೇಟ್ ಸೇವಿಸಿದರೆ ಏರೊತ್ತಡ ಕಾಣಿಸಿಕೊಳ್ಳುವ ಸಾಧ್ಯತೆ ಶೇಕಡಾ 40 ರಷ್ಟು ಕಡಿಮೆಯಾಗುತ್ತದೆ, ವಾರಕ್ಕೊಂದು ಬಾರಿ ತಿನ್ನುವವರಿಗೆ ಹೋಲಿಸಿದರೆ 5 ಬಾರಿ ಚಾಕಲೇಟ್ ತಿನ್ನುವವರಲ್ಲಿ ಹೆಚ್ಚಿನ ಪ್ರಭಾವ ಬಿರುತ್ತದೆ ಎಂದೂ ಸಂಶೋಧನೆ ತಿಳಿಸಿದೆ.
ಗರ್ಭಾವಸ್ಥೆ ಸಮಯದಲ್ಲಿ ಕಾಣಿಸಿಕೊಳ್ಳುವ ಏರೊತ್ತಡದಿಂದ ರಕ್ತಕಣಗಳ ಬೆಳವಣಿಗೆ ಸಾಧ್ಯವಾಗದೆ, ರಕ್ತದೊತ್ತಡದಲ್ಲಿ ಏರಿಕೆ ಕಂಡುಬರುತ್ತದೆ ಮತ್ತು ಇದರಿಂದ ಮಗುವಿಗೆ ಆಮ್ಲಜನಕದ ಪೂರೈಕೆ ಸಾಧ್ಯವಾಗದೆ, ಮಗುವಿಗೆ ಅವಶ್ಯಕ ಪೌಷ್ಟಿಕಾಂಶಗಳು ದೊರೆಯದಂತಾಗುತ್ತದೆ. ಈ ಕಾರಣದಿಂದಾಗಿ ಅವಧಿಗೆ ಮುನ್ನವೇ ಹೆರಿಗೆಯಾಗುತ್ತದೆ ಮತ್ತು ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಆದರೆ ಚಾಕಲೇಟ್ ನಲ್ಲಿರುವ ಥಿಯೋಬ್ರೊಮೈನ್ ಎಂಬ ರಾಸಾಯನಿಕ ಅಂಶ ಏರೊತ್ತಡವನ್ನು ತಡೆಗಟ್ಟುವ ಮೂಲಕ ಸಹಾಯ ಮಾಡುತ್ತದೆ.
ಯಾಲೆ ಯೂನಿವರ್ಸಿಟಿ ವಿಜ್ಞಾನಿಗಳು 2,291 ಗರ್ಭಿಣಿಯರ ಮೇಲೆ ನಡೆಸಿದ ಅಧ್ಯಯನದಿಂದ, ಚಾಕಲೇಟ್ ಸೇವನೆ ಮಾಡುವ ಗರ್ಭಿಣಿಯರಲ್ಲಿ ಥಿಯೋಬ್ರೊಮೈನ್ ಮಟ್ಟ ಹೆಚ್ಚಿದ್ದು, ಏರೊತ್ತಡ ಇಲ್ಲದಿರುವುದು ಕಂಡುಬಂದಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.



Click it and Unblock the Notifications
