Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆರಿಗೆಯ ಬಳಿಕ 'ಮಾಮ್ ಗಿಲ್ಟ್' ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಆಲಿಯಾ ಭಟ್
ಬಹುತೇಕ ಸೆಲೆಬ್ರಿಟಿಗಳು ಹೆರಿಗೆಯಾದ ಒಂದೇ ವಾರದಲ್ಲಿ ಜಿಮ್, ಯೋಗ, ಪಾರ್ಟಿ ಅಂತ ಮುಖ ಮಾಡುವಾಗ ಇಷ್ಟು ಆರಾಮವಾಗಿ ಇರಲು ಹೇಗೆ ತಾನೆ ಸಾಧ್ಯ? ಎಂದು ಜನ ಸಾಮಾನ್ಯರಿಗೆ ಅನಿಸದೆ ಇರಲ್ಲ. ಅವರು ಚೆನ್ನಾಗಿ ಮೇಕಪ್ ಮಾಡಿ ಫೋಟೋಗೆ ಫೋಸ್ ಕೊಡುವಾಗ ಅವರು ತುಂಬಾ ದೊಡ್ಡ ಆಸ್ಪತ್ರೆಗೆ ಹೋಗಿ ಡೆಲಿವರಿ ಮಾಡಿಸಿಕೊಳ್ಳುತ್ತಾರೆ, ಅವರಿಗೆ ನಮ್ಮಂತೆ ಯಾವ ಸಮಸ್ಯೆ ಇರಲ್ಲ ಎಂದು ಸಾಮಾನ್ಯ ಜನರು ಮಾತನಾಡಿಕೊಳ್ಳುವುದುಂಟು.

ಆದರೆ ಹೆರಿಗೆ ಬಡವರಿಗೆ ಒಂದು ರೀತಿ, ಶ್ರೀಮಂತರಿಗೆ, ಸೆಲೆಬ್ರಿಟಿಗಳಿಗೆ ಒಂದು ರೀತಿ ಖಂಡಿತ ಇರಲ್ಲ. ಅವರಿಗೆ ಸಿಗುವ ಸೌಲಭ್ಯ ಭಿನ್ನವಾಗಿರಬಹುದು, ಆದರೆ ನಿಸರ್ಗ ನೀಡುವ ಆ ಹೆರಿಗೆ ನೋವು, ಹೆರಿಗೆಯ ಬಳಿಕ ಮನಸ್ಸಿನಲ್ಲಾಗುವ ಗೊಂದಲಗಳು ಸೆಲೆಬ್ರಿಟಿಗೆ ಒಂದು ರೀತಿ, ಜನ ಸಾಮಾನ್ಯರಿಗೆ ಒಂದು ಖಂಡಿತ ಇರಲ್ಲ. ತಾಯಿ ಅಂದರೆ ಆಕೆ ತಾಯಿಯಷ್ಟೇ...
ಅವಳು ಒಂದು ಮಗುವನ್ನು ಭೂಮಿಗೆ ತರಲು ಸಾಕಷ್ಟು ಕಷ್ಟಗಳನ್ನು ಎದುರಿಸಿರುತ್ತಾಳೆ, ಮಗುವಾದ ಬಳಿಕ ಕೂಡ ಅವಳಲ್ಲಿಯೂ ಖಿನ್ನತೆ, ಹತಾಶೆ ಎಲ್ಲಾ ಉಂಟಾಗಿರುತ್ತದೆ. ಇತ್ತೀಚೆಗೆ ಚೊಚ್ಚಲ ಮಗುವನ್ನು ಪಡೆದ ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ಹೆರಿಗೆಯ ಬಳಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುವುದರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗೆ ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಒಬ್ಬ ತಾಯಿಯಾದವಳಿಗೆ ಹೆರಿಗೆಯ ಬಳಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುವುದರ ಬಗ್ಗೆ ಹೇಳಿರುವುದು ಪ್ರತಿಯೊಬ್ಬ ಬಾಣಂತಿಗೂ ಅನ್ವಯಿಸುತ್ತದೆ.
ಆಲಿಯಾ ಭಟ್‌ಗೂ ಕಾಡಿತ್ತು ಮಾಮ್ ಗಿಲ್ಟ್
ಹೆರಿಗೆಯ ಬಳಿಕ ಕೂಡ ಅಲಿಯಾ ಭಟ್ ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ, ತಮ್ಮ ವೃತ್ತಿ ಜೀವನದ ಕಡೆ ಗಮನ ಕೊಡುತ್ತಿದ್ದಾರೆ. ಅವರು ಸೆಲೆಬ್ರಿಟಿ ಆದ್ದರಿಂದ ಮಗುವನ್ನು ಬೆಳಸುವುದು ಕೇಕ್ ವಾಕ್‌ನಷ್ಟೇ ಸುಲಭ ಎಂಬುವುದಾಗಿ ಜನ ಯೋಚಿಸುತ್ತಾರೆ. ಆದರೆ ಮಗುವನ್ನು ಬೆಳೆಸುವುದರ ಜೊತೆಗೆ ಕೆಲಸದ ಕಡೆಯೂ ಗಮನ ಕೊಡುವಾಗ ಮಾಮ್ ಗಿಲ್ಡ್ (ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಪಶ್ಚಾತಾಪ) ಕಾಡಿರುವುದಾಗಿ ಹೇಳಿದ್ದಾರೆ.
ವರ್ಕಿಂಗ್ ಮದರ್‌ಗೆ ಈ ಬಗೆಯ ಪಶ್ಚಾತಾಪ ಕಾಡಿಯೇ ಕಾಡುವುದು
ತನ್ನ ಕೆಲಸ ಹಾಗೂ ಮಗು ಎರಡನ್ನು ಬ್ಯಾಲೆನ್ಸ್ ಮಾಡುವುದು ಇದೆಯೆಲ್ಲಾ ಅದು ಅಷ್ಟು ಸುಲಭವಲ್ಲ, ಅವಳಿಗೇನು ಕೈ ತುಂಬಾ ದುಡಿಯುತ್ತಾಳೆ ಮಗುವನ್ನು ಆರಾಮವಾಗಿ ಬೆಳೆಸಬಹುದು ಎಂದು ಯೋಚಿಸುತ್ತಾರೆ, ಆದರೆ ಮಗುವನ್ನು ಬಿಟ್ಟು ಕೆಲಸಕ್ಕೆ ತೆರಳುವಾಗ ಆ ತಾಯಿ ಅನುಭವಿಸುವ ಮಾನಸಿಕ ವೇತನೆ, ಗೊಂದಲ ಅವಳಿಗಷ್ಟೇ ಗೊತ್ತಿರುತ್ತದೆ. ಕೆಲಸದಲ್ಲಿ ತನ್ನ 100% ಕೊಡುವಾಗ ಅಯ್ಯೋ ನನ್ನ ಮಗುವಿಗೆ ನಾನು 100% ಕೊಡಲು ಸಾಧ್ಯವಾಗುತ್ತಿಲ್ಲ ಅಲ್ವಾ? ಎಂಬ ಗಿಲ್ಟ್ ಕಾಡಿಯೇ ಕಾಡುವುದು. ಈ ಬಗೆಯ ಗಿಲ್ಟ್ ಕೆಲ ತಾಯಿಂದಿರ ಮಾನಸಿಕ ಆರೋಗ್ಯದ ಮೇಲೂ ತುಂಬಾ ಗಂಭೀರ ಪ್ರಭಾವ ಬೀರಬಹುದು.
ತಾಯಿಂದಿರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕೆಂದು ಆಲಿಯಾ ಟಿಪ್ಸ್
ಹೆರಿಗೆಯ ಬಳಿಕ ಖಿನ್ನತೆಗೆ ಹಲವಾರು ಅಂಶಗಳು ಕಾರಣವಾಗುವುದು. ಅವಳಿಗೆ ತನ್ನ ಮಗುವಿಗೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಲಾರಂಭಿಸಿದಾಗ ಅಥವಾ ಅವಳ ಭಾವನೆಗಳಿಗೆ ಮನೆಯವರ ಸ್ಪಂದನೆ ಸಿಗದಿದ್ದಾಗ, ತನ್ನ ಸುತ್ತ-ಮುತ್ತ ನಡೆಯುತ್ತಿರುವ ಘಟನೆಗಳು ಹೀಗೆ ಅನೇಕ ವಿಷಯಗಳು ಅವಳ ಮನಸ್ಸನ್ನು ಸೇರಿಕೊಂಡು ಖಿನ್ನತೆ ಕಾಡುವುದು. ಆದ್ದರಿಂದ ಹೆರಿಗೆಯ ಬಳಿಕ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕಾದದ್ದು ತುಂಬಾನೇ ಮುಖ್ಯ ಅಂದಿದ್ದಾರೆ ಆಲಿಯಾ ಭಟ್.
ತಾಯಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ಅದನ್ನು ಮನೆಯವರು ನಿರ್ಲಕ್ಷ್ಯ ಮಾಡಲೇಬಾರದು. ಹೆರಿಗೆಯ ಬಳಿಕ ತಾಯಿ ಮಗುವಿನ ಕಡೆ ಸರಿಯಾಗಿ ಗಮನ ಹರಿಸುತ್ತಿಲ್ಲ, ತುಂಬಾ ಬೇಸರದಲ್ಲಿರುವಂತೆ ಕಾಣುತ್ತಿದ್ದಾಳೆ ಎಂದಾದರೆ ಅವಳನ್ನು ಹಾಗೇ ಬಿಡಬಾರದು, ಒಳ್ಳೆಯ ಮಾನಸಿಕ ತಜ್ಞರಿಗೆ ತೋರಿಸಬೇಕು, ಅಲ್ಲದೆ ಈ ಸಮಯದಲ್ಲಿ ಮನೆಯವರು ನೀಡುವ ಬೆಂಬಲ, ಪ್ರೀತಿ, ಸಹಕಾರದಿಂದ ಅವಳಲ್ಲಿ ಖಿನ್ನತೆ ದೂರಾಗಲು ಸಹಾಯ ಮಾಡುತ್ತದೆ.



Click it and Unblock the Notifications
