ಅಮೆಜಾನ್ ಸೇಲ್: ಮಕ್ಕಳ ವಸ್ತುಗಳಿಗೆ ಶೇ. 70ರಷ್ಟು ರಿಯಾಯಿತಿ

ಮಗುವನ್ನು ಮಲಗಿಸಲು ಬೇಬಿ ಬೌನ್ಸರ್, ಹೊರಗಡೆ ಕೊಂಡೊಯ್ಯುವಾಗ ಅನುಕೂಲಕರವಾದ ಪ್ರಾಮ್, ಫೀಡಿಂಗ್ ಬಾಟಲಿ ಹೀಗೆ ಮಕ್ಕಳ ಅನೇಕ ಉತ್ಪನ್ನಗಳು ಅಮೆಜಾನ್ ಸೇಲ್‌ನಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.
ನಿಮ್ಮ ಮನೆಯಲ್ಲಿ ಒಂದು ವರ್ಷದ ಕೆಳಗಿನ ಮಗುವಿದ್ದರೆ ಈ ಉತ್ಪನ್ನಗಳು ನಿಮಗೆ ತುಂಬಾನೇ ಸಹಕಾರಿಯಾದೀತು ನೋಡಿ:
1. ಡ್ರೀಮ್ ಡಿಲೆಕ್ಸ್ ಬೇಬಿ ಬೌನ್ಸರ್
ಚಿಕ್ಕ ಮಗುವನ್ನು ಮಲಗಿಸಲು ತುಂಬಾ ಕಂಫರ್ಟ್ ಆದ ಬೇಬಿ ಬೌನ್ಸರ್ ಇದಾಗಿದೆ. ಇದು ತುಂಬಾ ಲೈಟ್‌ವೇಯ್ಟ್ ಆಗಿದೆ ಅಲ್ಲದೆ 3 ಪಾಯಿಂಟ್ ರೆಸ್ಟ್ರೈಯಂಟ್ ಇದೆ. ಇದರಲ್ಲಿ ಎರಡು ಆಟಿಕೆಗಳು ನೇತು ಹಾಕಿದ್ದು, 20 ನಿಮಿಷಕ್ಕೂ ಅಧಿಕ ಮ್ಯೂಸಿಕ್ ಕೇಳಬಹುದಾಗಿದೆ. ಇದರ ಸೀಟ್ ಬಿಚ್ಚಬಹುದಾಗಿದ್ದು ಒಣಗಿಸಲು ಸುಲಭ, ಅಲ್ಲದೆ ಮೆಷಿನ್‌ನಲ್ಲಿ ತೊಳೆಯಬಹುದಾಗಿದೆ.
2. ಸೊಳ್ಳೆ ಪರದೆ ಜೊತೆಗೆ ತೊಟ್ಟಿಲು
ಈ ತೊಟ್ಟಿಲು ನೋಡಲು ಸ್ಟೈಲಿಷ್ ಹಾಗೂ ಫ್ಯಾಷನಬಲ್ ಆಗಿದೆ. ಇದರಲ್ಲಿ ಸೊಳ್ಳೆ ಪರದೆ ಇರುವುದರಿಂದ ಸೊಳ್ಳೆ ಕಡಿತದ ಕಾಟವಿಲ್ಲದೆ ಮಗು ಆರಾಮವಾಗಿ ನಿದ್ರಿಸಬಹುದಾಗಿದೆ. ಇದರಲ್ಲಿ ಚಕ್ರ ಮತ್ತು ಬ್ರೇಕ್ ಇರುವುದರಿಂದ ಯಾವುದೇ ಕಡೆಗೆ ಸಾಗಿಸುವುದು ಸುಲಭವಾಗಿದೆ.
3. ಬೇಬಿ ಡಯಾಪರ್ ಪ್ಯಾಂಟ್ ತಿಂಗಳ ಪ್ಯಾಕ್
ನಿಮ್ಮ ಪುಟಾಣಿಯ ಮೃದುವಾದ ತ್ವಚೆಗೆ ಸೂಕ್ತವಾದ ಡಯಾಪರ್ ಇದಾಗಿದೆ. ಇದರಲ್ಲಿ ಸಾಫ್ಟ್ 3-D ಡಬಲ್ ಬೆಡ್ ಟೆಕ್ನೋಲಾಜಿ ಹೊಂದಿರುವುದರಿಂದ ಇದನ್ನು ಧರಿಸಿದಾಗ ಮಗು ತುಂಬಾ ಕಂಫರ್ಟ್ ಆಗಿರುವುದು. 12 ಗಂಟೆಗಳ ಕಾಲ ಡ್ರೈಯಾಗಿಡುತ್ತೆ. ಯಾವುದೇ ಗುಳ್ಳೆಗಳು ಬರುವುದಿಲ್ಲ. ನಿಮ್ಮ ಮಗುವಿನ ಸುಖಕರ ನಿದ್ದೆಗೆ ಇದು ಸಹಾಯ ಮಾಡುತ್ತೆ.
4. 3 ಇನ್ 1 ಬೇಬಿ ಫೀಡಿಂಗ್ ಬಾಟಲಿ
ಮಾರುಕಟ್ಟೆಯಲ್ಲಿ ಬಗೆ-ಬಗೆಯ ಫೀಡಿಂಗ್ ಬಾಟಲಿ ಲಭ್ಯವಿದೆ. ಆದರೆ ಈ ಫೀಡಿಂಗ್ ಬಾಟಲಿ ಸ್ಟೈನ್‌ಲೆಸ್ ಸ್ಟೀಲ್‌ನಿಂದ ಮಾಡಿದ್ದು, ಬ್ಯಾಕ್ಟಿರಿಯಾಗಳು ಉಂಟಾಗದಂತೆ ಸ್ವಚ್ಛವಾಗಿಡಬಹುದು. ಇದು BPA ಫ್ರೀ ಆಗಿದ್ದು ಫಾರ್ಮುಲಾ ಮಿಲ್ಕ್ ಅಥವಾ ಸಂಗ್ರಹಿಸಿಟ್ಟ ಎದೆಹಾಲನ್ನು ಇದರಲ್ಲಿ ಹಾಕಿ ನೀಡಬಹುದಾಗಿದೆ. ಪೋಷಕರು ತಮ್ಮ ಮಗುವಿಗೆ ಹಾಲು ಕುಡಿಸಲು ಆಯ್ಕೆ ಮಾಡಬಹುದಾದ ಅತ್ಯುತ್ತಮವಾದ ಪೀಡಿಂಗ್ ಬಾಟಲಿ ಇದಾಗಿದೆ.
5. ಸ್ಟ್ರೋಲರ್/ಪ್ರಾಮ್
ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಪ್ರಾಮ್ ಅಥವಾ ಸ್ಟ್ರೋಲರ್ ಇದ್ದರೆ ತುಂಬಾನೇ ಅನುಕೂಲ ಅನಿಸುವುದು. ಮಗು ಕೂಡ ಅದರಲ್ಲಿ ಕಂಫರ್ಟ್ ಆಗಿರುತ್ತದೆ. ಮಗುವಿನ ಕಂಫರ್ಟ್‌ಗೆ ತಕ್ಕಂತೆ ಸೀಟ್ ಅಡ್ಜೆಸ್ಟ್ ಮಾಡಬಹುದು. ಇದರ ಸಿಟ್ ತೆಗೆದು ತೊಳೆಯಬಹುದಾಗಿದೆ. ಟ್ರಾವೆಲ್ ಮಾಡುವಾಗ ಮಗುವಿಗೆ ಹಾಗೂ ನಿಮಗೆ ತುಂಬಾನೇ ಕಂಫರ್ಟ್ ನೀಡುತ್ತೆ.
6. ಮಗುವಿಗೆ ಫೀಡಿಂಗ್ ಚೇರ್
ಈ ಫೀಡಿಂಗ್ ಚೇರ್‌ಗೆ ಚಕ್ರ ಇರುವುದರಿಂದ ನಿಮಗೆ ಬೇಕಾದ ಕಡೆಗೆ ಇದನ್ನು ಇಡಬಹುದು. ಇದರಲ್ಲಿ ಮಗುವನ್ನು ಕೂರಿಸಿ ತಿನ್ನಕ್ಕೆ ಕೊಡಬಹುದು. ಇದರ ಎತ್ತರವನ್ನು ಕೂಡ ನಿಮಗೆ ಬೇಕಾದಂತೆ ಹೊಂದಿಸಬಹುದು. ಇದನ್ನು ಮಗುವಿಗೆ ತಿನ್ನಕ್ಕೆ ಕೊಡಲು ಬಳಸಬಹುದು, ಅದರಲ್ಲಿ ಕೂರಿಸಿ ಆಟವಾಡಲು ಬಿಡಬಹುದು.
7. ಮಗುವಿಗೆ ಸ್ನಾನ ಮಾಡಿಸಲು ಬೇಬಿ ಬಾಥೆರ್
ಚಿಕ್ಕ ಮಗುವನ್ನು ಸ್ನಾನ ಮಾಡಿಸುವಾಗ ಕೆಲವರಿಗೆ ಎಲ್ಲಿ ಜಾರಿ ಬೀಳುತ್ತೋ ಎಮಬ ಭಯ ಇರುತ್ತೆ. ಅದೇ ಈ ರೀತಿಯ ಬೇಬಿ ಬಾಥೆರ್ ಇದ್ದರೆ ಅಂಥ ಭಯ ಇರಲ್ಲ, ಆರಾಮವಾಗಿ ಸ್ನಾನ ಮಾಡಿಸಬಹುದು, ಮಗು ಕೂಡ ಅದರ ಸ್ನಾನದ ಸಮಯ ಎಂಜಾಯ್ ಮಾಡುತ್ತೆ.
8. ಮಗುವಿಗೆ ಗ್ರೂಮಿಂಗ್ ಸೆಟ್
ಉಗುರು ಕತ್ತರಿಸಲು, ಮಗುವಿನ ಕೂದಲು ಕತ್ತರಿಸಲು ಬೇಬಿ ಕತ್ತರಿ ಮುಂತಾದವುಗಳ ಸೆಟ್ ಇದಾಗಿದೆ. ಈ ಸೆಟ್ ಮಗುವಿನ ಕೈ-ಕಾಲುಗಳಿಂದ ಉಗುರನ್ನು ಕತ್ತರಿಸಲು ಸಹಕಾರಿಯಾಗಿದೆ. ಮಗುವಿಗೆ ಗಾಯವಾಗುತ್ತೆ, ನೋವಾಗುತ್ತೆ ಎಂಬ ಭಯ ಇರಲ್ಲ.
9. ಏರ್ ಬ್ಯಾಗ್ ಸೀಟ್‌ನ ಬೇಬಿ ಕ್ಯಾರಿಯರ್
ಈ ಬೇಬಿ ಕ್ಯಾರಿಯರ್ ಅನ್ನು ಯಾರು ಬೇಕಾದರೂ ಧರಿಸಬಹುದು. ಅದರಲ್ಲೂ ಸಿ ಸೆಕ್ಷನ್ ಆದ ತಾಯಂದಿರಿಗೆ ಮಗುವನ್ನು ಎತ್ತಿಕೊಂಡು ಹೊರಗಡೆ ಹೋಗುವಾಗ ತುಂಬಾನೇ ಅನುಕೂಲಕರವಾಗಿದೆ. ಇದು ತಾಯಿ ಹಾಗೂ ಮಗುವಿಗೆ ಕಂಫರ್ಟ್ ನೀಡುವುದು.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications





































