Amazon Great Indian Sale : ಅಮೆಜಾನ್ ನಲ್ಲಿ ವಾಟರ್‌ ಹೀಟರ್‌ಗಳಿಗೆ ಶೇ. 50ರಷ್ಟು ರಿಯಾಯಿತಿ

Amazon Great Indian Sale: Upto 50% Off on Water Heaters

ಇತ್ತೀಚೆಗೆ ಸಿಟಿಯಲ್ಲಿ ಮಾತ್ರವಲ್ಲ ಹಳ್ಳಿಯಲ್ಲೂ ಕೂಡಾ ವಾಟರ್‌ ಹೀಟರ್‌ ಬಳಕೆ ಹೆಚ್ಚಾಗುತ್ತಿದೆ. ಹೆಚ್ಚು ಶ್ರಮವಿಲ್ಲದೇ, ತಕ್ಷಣವೇ ಸ್ನಾನಕ್ಕೆ ನೀರು ಕಾಯಿಸಬೇಕೆಂದರೆ ಸುಲಭದ ಆಯ್ಕೆ ವಾಟರ್‌ ಹೀಟರ್‌. ನಿಮ್ಮ ಬಜೆಟ್‌ಗೆ ಸೂಕ್ತವಾದ, ಮಾಡರ್ನ್‌ ಬಾತ್‌ರೂಂಗೂ ಒಪ್ಪುವಂತಹ ವಾಟರ್‌ ಹೀಟರ್‌ಗಳು ಅಮೆಜಾನ್‌ನಲ್ಲಿ ಶೇಕಡಾ 50ರಷ್ಟು ರಿಯಾಯಿತಿಯಲ್ಲಿ ದೊರೆಯುತ್ತಿದೆ. ಈ ಹಬ್ಬದ ಸೀಸನ್‌ನಲ್ಲಿ ಮನೆಗೊಂದು ವಾಟರ್‌ ಹೀಟರ್‌ ಖರೀದಿ ಮಾಡಲು ನೀವು ಹೊರಟಿದ್ದರೆ ಈ ಲಿಸ್ಟ್‌ ಚೆಕ್ ಮಾಡಿ ನೋಡಿ.

1. ಕ್ರಾಂಪ್ಟನ್‌ ಇನ್ಸ್ಟಾಬ್ಲಿಸ್‌ 3ಲೀ ಇನ್ಸ್ಟಂಟ್‌ ವಾಟರ್‌ ಹೀಟರ್‌

ಬೇಗನೇ ನೀರು ಬಿಸಿಯಾಗುವ ಜೊತೆಗೆ ಸುರಕ್ಷತೆಗೂ ನೀವು ಗಮನಕೊಡುವುದಾದರೆ ಕ್ರಾಂಪ್ಟನ್‌ ಇನ್ಸ್ಟಾಬ್ಲಿಸ್‌ 3ಲೀ ಇನ್ಸ್ಟಂಟ್‌ ವಾಟರ್‌ ಹೀಟರ್‌ ಅಮೆಜಾನ್‌ನಲ್ಲಿದೆ ನೋಡಿ. ಇದರ ಟ್ಯಾಂಕ್‌ನ ಮೇಲೆ ಐದು ವರ್ಷಗಳ ವಾರಂಟಿ ಇದ್ದು, ಉತ್ಪನ್ನದ ಮೇಲೂ ಎರಡು ವರ್ಷಗಳ ವಾರಂಟಿ ಇದೆ. ಸ್ಟೀಮ್ ಥರ್ಮೋಸ್ಟಾಟ್, ಸ್ವಯಂಚಾಲಿತ ಥರ್ಮಲ್ ಕಟ್-ಔಟ್, ಒತ್ತಡ ಬಿಡುಗಡೆ ವಾಲ್ವ್ ಮತ್ತು ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಫ್ಯೂಸಿಬಲ್ ಪ್ಲಗ್ ಕೂಡಾ ತುಕ್ಕು ರಹಿತ PP ಬಾಡಿ ಜೊತೆಗೆ ವೆಲ್ಡ್ ರಹಿತ ಟ್ಯಾಂಕ್ ವಿನ್ಯಾಸದಲ್ಲಿರುವ ಈ ವಾಟರ್‌ ಹೀಟರ್‌ ದೀರ್ಘಕಾಲ ಬಾಳಿಕೆ ಬರುತ್ತೆ. ಇದರ ಮೂಲ ಬೆಲೆ 4,400 ಆಗಿದ್ದು ಶೇ 45%ರಷ್ಟು ರಿಯಾಯಿತಿಯಲ್ಲಿ 2,399ರೂಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬ್ರ್ಯಾಂಡ್:Crompton
ಸಾಮರ್ಥ್ಯ: 3 ಲೀಟರ್‌
ವಿದ್ಯುತ್ ಮೂಲ ತಂತಿಸಹಿತ ವಿದ್ಯುತ್
ಐಟಂನ ಆಯಾಮಗಳು: L 19 x W 18.5 x H 37.5 ಸೆಂಟಿಮೀಟರ್‌ಗಳು
ಬಣ್ಣ: ಬಿಳಿ
ಮೆಟೀರಿಯಲ್: ತುಕ್ಕು ರಹಿತ

2. ಕ್ರಾಂಪ್ಟನ್‌ ಗ್ರೇಸಿ 5ಲೀ ಇನ್ಸ್ಟಂಟ್‌ ವಾಟರ್‌ ಹೀಟರ್‌

ಹೆಚ್ಚು ಸಾಮರ್ಥ್ಯ ಹಾಗೂ ದೀರ್ಘಕಾಲ ಬಾಳಿಕೆಯ ಇನ್ಸ್ಟಂಟ್‌ ವಾಟರ್‌ ಹೀಟರ್‌ಗಾಗಿ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಕ್ರಾಂಪ್ಟನ್‌ ಗ್ರೇಸಿ 5ಲೀ ಇನ್ಸ್ಟಂಟ್‌ ವಾಟರ್‌ ಹೀಟರ್‌. 3000ವ್ಯಾಟ್‌ನ, 5 ಲೀಟರ್‌ ಸಾಮರ್ಥ್ಯದ ವಾಟರ್‌ ಹೀಟರ್‌ ಇದಾಗಿದ್ದು, ಸ್ಟೀಮ್ ಥರ್ಮೋಸ್ಟಾಟ್, ಸ್ವಯಂಚಾಲಿತ ಥರ್ಮಲ್ ಕಟ್-ಔಟ್, ಒತ್ತಡ ಬಿಡುಗಡೆ ವಾಲ್ವ್ ಮತ್ತು ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಫ್ಯೂಸಿಬಲ್ ಪ್ಲಗ್ ಇದರಲ್ಲಿದೆ. ಇದರ ಮೂಲ ಬೆಲೆ 7,299 ಆಗಿದ್ದು ಶೇ 45%ರಷ್ಟು ರಿಯಾಯಿತಿಯಲ್ಲಿ 3,999ರೂಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬ್ರ್ಯಾಂಡ್:Crompton
ಸಾಮರ್ಥ್ಯ 5 ಲೀಟರ್‌
ಪ್ರಾಡಕ್ಟ್‌ನ ಆಯಾಮಗಳು L21.5 x W 25 x H 43.5 ಸೆಂಟಿಮೀಟರ್‌ಗಳು
ಬಣ್ಣ: ಕಪ್ಪು
ವೋಲ್ಟೇಜ್: 230 Volts (AC)

3. ಒರಿಯೆಂಟ್‌ ಇಲೆಕ್ಟ್ರಿಕ್‌ ಇವೊಕ್‌10ಲೀ ವಾಟರ್‌ ಹೀಟರ್‌

ಮನೆಯೆಂದ ಮೇಲೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡೇ ನೀಡುತ್ತೇವೆ. ನಿಮ್ಮ ಸುರಕ್ಷತೆಯ ಬಗ್ಗೆ ಇನ್ನಷ್ಟು ಗಮನವಹಿಸಿ ಒರಿಯೆಂಡ್‌ ಇಲೆಕ್ಟ್ರಿಕ್‌ ಬ್ರ್ಯಾಂಡ್‌ ಇವೊಕ್‌10ಲೀ ವಾಟರ್‌ ಹೀಟರ್‌ ತಯಾರಿಸಿದೆ ನೋಡಿ. ಅಲ್ಟ್ರಾ ಡೈಮಂಡ್ ಗ್ಲಾಸ್ ಲೈನ್ ತಂತ್ರಜ್ಞಾನದೊಂದಿಗೆ 40% ಉದ್ದವಾದ ದೀರ್ಘಾವಧಿಯವರೆಗೂ ಬಾಳಿಕೆ ಬರುವ ಗಟ್ಟಿಯಾದ ಟ್ಯಾಂಕ್‌ ಹೆಚ್ಚಿನ TDS ನೀರಿನೊಂದಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ ಮತ್ತು ತುಕ್ಕು ಹಿಡಿಯುವುದನ್ನು ತಡೆಯುತ್ತದೆ. ನಿಕ್ಕಲ್-ಲೇಪಿತ ತಾಮ್ರದ ತಾಪನ ಅಂಶವು ಅತ್ಯುತ್ತಮವಾದ ನೀರಿನ ತಾಪನವನ್ನು ಕಾಯ್ದುಕೊಳ್ಳುತ್ತದೆ. ಅಲ್ಲದೇ ಈ ವಾಟರ್‌ ಹೀಟರ್‌ ಶಾಕ್-ಪ್ರೂಫ್ ಮತ್ತು ವಾಟರ್-ಪ್ರೂಫ್ ಬಾಡಿ ಹೊಂದಿದೆ. ಟ್ಯಾಂಕ್ ಮೇಲೆ 7 ವರ್ಷ, ತಾಪನ ಅಂಶದ ಮೇಲೆ 3 ವರ್ಷದ ಜೊತೆಗೆ ಒಟ್ಟಾರೆ ಉತ್ಪನ್ನದ ಮೇಲೆ 2 ವರ್ಷಗಳ ವಾರಂಟಿಯನ್ನು ಈ ಗೀಸರ್‌ ಹೊಂದಿದೆ. ಇದರ ಮೂಲ ಬೆಲೆ 10,148 ಆಗಿದ್ದು ಶೇ 42%ರಷ್ಟು ರಿಯಾಯಿತಿಯಲ್ಲಿ 6,148ರೂಗೆ ಅಮೆಜಾನ್‌ನಲ್ಲಿ ಸಿಗುವುದು.

ಬ್ರ್ಯಾಂಡ್: Orient Electric
ಸಾಮರ್ಥ್ಯ: 10 ಲೀಟರ್‌
ವಿದ್ಯುತ್ ಮೂಲ: ತಂತಿಸಹಿತ ವಿದ್ಯುತ್
ಪ್ರಾಡಕ್ಟ್‌ನ ಆಯಾಮಗಳು : L28.1 x W28.1 x H50 ಸೆಂಟಿಮೀಟರ್‌ಗಳು
ಬಣ್ಣ: ಬೀಜ್
ವೋಲ್ಟೇಜ್: 230 Volts

4. ಕ್ರಾಂಪ್ಟನ್‌ ಸೋಲಾರಿಯಮ್ ಕ್ಯೂಬ್ 25ಲೀ ವಾಟರ್ ಹೀಟರ್

ಹೆಚ್ಚು ಸಾಮರ್ಥ್ಯದ ಜೊತೆಗೆ ಸುರಕ್ಷಿತ ವಾಟರ್‌ ಹೀಟರ್‌ಗಾಗಿ ನೀವು ತಡಕಾಡುತ್ತಿದ್ದರೆ ಅಮೆಜಾನ್‌ನಲ್ಲಿದೆ ನೋಡಿ ಬೆಸ್ಟ್‌ ಆಯ್ಕೆ.25 ಲೀ ಸಾಮರ್ಥ್ಯವಿರುವ ಕ್ರಾಂಪ್ಟನ್‌ ಬ್ರ್ಯಾಂಡ್‌ನ ಸೋಲಾರಿಯಮ್ ಕ್ಯೂಬ್ ವಾಟರ್ ಹೀಟರ್ ಕ್ಯಾಪಿಲರಿ ಥರ್ಮೋಸ್ಟಾಟ್, ಸ್ವಯಂಚಾಲಿತ ಥರ್ಮಲ್ ಕಟ್-ಔಟ್ ಮತ್ತು ಬಹು-ಕ್ರಿಯಾತ್ಮಕ ವಾಲ್ಟ್‌ ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಮೆಗ್ನೀಸಿಯಮ್ ಆನೋಡ್ ಅನ್ನು ಅಳವಡಿಸಲಾಗಿದೆ, ಇದು ಗಡಸು ನೀರಿನಿಂದಾಗಿ ತುಕ್ಕು ಹಿಡಿಯುವುದನ್ನೂ ತಡೆಗಟ್ಟುತ್ತದೆ. ಅಮೆಜಾನ್‌ನಲ್ಲಿ 5ರೇಟಿಂಗ್‌ ಇರುವ ಈ ವಾಟರ್‌ ಹೀಟರ್‌ನ ಬೆಲೆ 10,000 ಆಗಿದ್ದು ಶೇ8ರಷ್ಟು ಡಿಸ್ಕೌಂಟ್‌ನೊಂದಿಗೆ 9,189ಗೆ ಲಭ್ಯವಿದೆ.

ಬ್ರ್ಯಾಂಡ್‌: ಕ್ರಾಂಪ್ಟನ್‌
ಪ್ರಾಡಕ್ಟ್‌ನ ತೂಕ: 10 kg
ಪ್ರಾಡಕ್ಟ್‌ನ ಆಯಾಮಗಳು: L 46.5 xW 39 x H 49.5 ಸೆಂಟಿಮೀಟರ್‌ಗಳು
ಪ್ರಾಡಕ್ಟ್‌ನ ಸಾಮರ್ಥ್ಯ: 25ಲೀ

5. ಬಜಾಜ್‌ ನ್ಯೂ ಶಕ್ತಿ 15ಲೀ ವಾಟರ್ ಹೀಟರ್‌

ನಿಮ್ಮ ಮಾಡರ್ನ್ ಬಾತ್‌ರೂಮ್‌ಗೆ ಹೊಂದಿಕೆಯಾಗುವಂತಹ ವಾಟರ್‌ ಹೀಟರ್‌ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ನೋಡಿ ಬಜಾಜ್‌ ಕಂಪನಿಯ ನ್ಯೂ ಶಕ್ತಿ 15ಲೀ ವಾಟರ್ ಹೀಟರ್‌. ವಾಲ್‌ಮೌಂಟಿಂಗ್‌ ಮಾಡಬಹುದಾದ ಈ ಗೀಸರ್‌ 20%ಕ್ಕಿಂತ ಹೆಚ್ಚು ಬಿಸಿ ನೀರಿಗಾಗಿ ಸ್ವಿರ್ಲ್ ಫ್ಲೋ ತಂತ್ರಜ್ಞಾನವನ್ನು ಒಳಗೊಂಡಿದೆ. 4 ಸ್ಟಾರ್ ಬೀ ರೇಟಿಂಗ್, ತುಕ್ಕು ನಿರೋಧಕತೆಗಾಗಿ ಪೂರ್ವ ಲೇಪಿತ ಲೋಹದ ಹೊರ ಕವಚವನ್ನು ಹೊಂದಿರುವ ಈ ವಾಟರ್‌ ಹೀಟರ್‌ ಎತ್ತರದ ಕಟ್ಟಡಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುವ ಪ್ರಾಡಕ್ಟ್‌ ಆಗಿದೆ. ಈ ವಾಟರ್‌ ಹೀಟರ್‌ನ ಬೆಲೆ 11,000 ಆಗಿದ್ದು ಶೇ38ರಷ್ಟು ಡಿಸ್ಕೌಂಟ್‌ನೊಂದಿಗೆ 7,099ಗೆ ಅಮೆಜಾನ್‌ನಲ್ಲಿ ಲಭ್ಯವಿದೆ.
ಬ್ರ್ಯಾಂಡ್: ಬಜಾಜ್‌
ಸಾಮರ್ಥ್ಯ: 15ಲೀಟರ್‌
ಬಣ್ಣ: ಬಹು ವರ್ಣ
ವೋಲ್ಟೇಜ್: 230 Volts
ಮೆಟೀರಿಯಲ್: ಸ್ಟೈನ್ ಲೆಸ್ ಸ್ಟೀಲ್ ಟೈಟಾನಿಯಂ ತಾಮ್ರ

6. ವಿ-ಗಾರ್ಡ್ ಡಿವಿನೋ 15ಲೀ ವಾಟರ್ ಹೀಟರ್

ಸುಧಾರಿತ ಸುರಕ್ಷತಾ ವೈಶಿಷ್ಟ್ಯದ ಜೊತೆಗೆ ಲೇಟೆಸ್ಟ್ ಡಿಸೈನ್‌ನ ವಾಟರ್‌ ಹೀಟರ್‌ ಸರ್ಚ್‌ ಮಾಡುತ್ತಿದ್ದರೆ ವಿ-ಗಾರ್ಡ್‌ನ ಡಿವಿನೋ 15ಲೀ ವಾಟರ್ ಹೀಟರ್ ಬೆಸ್ಟ್‌. 5ಸ್ಟಾರ್‌ ರೇಟಿಂಗ್‌ ಇರುವ ಈ ವಾಟರ್‌ ಹೀಟರ್‌ ಗರಿಷ್ಠ ಶಾಖವನ್ನು ಉಳಿಸಿಕೊಳ್ಳುತ್ತೆ. ಸುಧಾರಿತ ವಿಟ್ರಿಯಸ್ ಎನಾಮೆಲ್ ಲೇಪನವು ಒಳಗಿನ ಟ್ಯಾಂಕ್ ಅನ್ನು ರಕ್ಷಿಸುತ್ತದೆ, ಸುಪೀರಿಯರ್ ಇಂಕೊಲಾಯ್ 800 ತಾಪನ ಅಂಶವು ಸುಸ್ಥಿರ ಕಾರ್ಯಕ್ಷಮತೆಯನ್ನು ನೀಡುತ್ತದೆ. ಹೆಚ್ಚುವರಿ ದಪ್ಪ ಮೆಗ್ನೀಸಿಯಮ್ ಆನೋಡ್ ಹೆಚ್ಚುವರಿ ರಕ್ಷಣೆ ನೀಡುತ್ತದೆ. ಅಮೆಜಾನ್‌ನಲ್ಲಿ ಇದು ಶೇ25 ರಷ್ಟು ರಿಯಾಯಿತಿಯಲ್ಲಿ ಕೇವಲ 6,399ರೂಗೆ ದೊರೆಯುತ್ತಿದೆ.

ಬ್ರ್ಯಾಂಡ್: V-Guard
ಸಾಮರ್ಥ್ಯ: 6ಲೀ, 10ಲೀ, 25ಲೀ, 15ಲೀ
ಪ್ರಾಡಕ್ಟ್‌ನ ಆಯಾಮಗಳು: L 34.1 xW 32.1 x H50.1 ಸೆಂಟಿಮೀಟರ್‌ಗಳು
ಬಣ್ಣ: ಬಹುವರ್ಣ
ವ್ಯಾಟೇಜ್: 2000 ವ್ಯಾಟ್ಸ್

7. ಹ್ಯಾವೆಲ್ಸ್ ಮೊನ್ಜಾ ಇಸಿ 15ಲೀ ವಾಟರ್ ಹೀಟರ್

ಗೀಸರ್‌ ಎಂದರೆ ಕರೆಂಟ್‌ ಬಿಲ್‌ ಜಾಸ್ತಿ ಎನ್ನುವವರಿಗೆ ವಿದ್ಯುತ್‌ ಉಳಿತಾಯದ ಜೊತೆಗೆ ಹೆಚ್ಚಿನ ದಕ್ಷತೆಯ ವಾಟರ್‌ ಹೀಟರ್‌ ಅಮೆಜಾನ್‌ನಲ್ಲಿದೆ ನೋಡಿ. ಈ ಗೀಸರ್‌ನಲ್ಲಿರುವ ವರ್ಲ್ಫ್ಲೋ ತಂತ್ರಜ್ಞಾನವು ನೀರನ್ನು ಬೇಗ ಬಿಸಿ ಮಾಡುತ್ತದೆ ಮಾತ್ರವಲ್ಲ ತಣ್ಣನೆಯ ಮತ್ತು ಬಿಸಿನೀರಿನ ಹರಿವಿನ ನಡುವಿನ ನೇರ ಸಂಪರ್ಕವನ್ನು ತಪ್ಪಿಸುತ್ತದೆ. ಬೀ ರೇಟಿಂಗ್‌ನಲ್ಲಿ 5ಸ್ಟಾರ್‌ ಇರುವ ಈ ಪ್ರಾಡಕ್ಟ್‌ 15ಲೀ ಸಾಮರ್ಥ್ಯ ಹೊಂದಿದೆ. ಈ ವಾಟರ್‌ ಹೀಟರ್‌ ತುಕ್ಕು ನಿರೋಧಕ ಗುಣವನ್ನು ಹೊಂದಿದ್ದು, ಸ್ಟೇನ್ಲೆಸ್ ಸ್ಟೀಲ್ ಕೋರ್ ಹೊಂದಿರುವ ಆನೋಡ್ ರಾಡ್ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇದರ ಮೂಲ ಬೆಲೆ 12,810ಆಗಿದ್ದು, ಶೇ 34ರಷ್ಟು ರಿಯಾಯಿತಿಯೊಂದಿಗೆ 8,450ಗೆ ಅಮೆಜಾನ್‌ನಲ್ಲಿ ಲಭ್ಯ.

ಬ್ರ್ಯಾಂಡ್: Havells
ಸಾಮರ್ಥ್ಯ: 15 ಲೀ
ಐಟಂನ ಆಯಾಮಗಳು: L 31 x W 33.4 x H56.8 ಸೆಂಟಿಮೀಟರ್‌ಗಳು
ಬಣ್ಣ: ಬಿಳಿ
ವ್ಯಾಟೇಜ್: 2000 ವ್ಯಾಟ್ಸ್

8. AO ಸ್ಮಿತ್‌ SDS-ಗ್ರೀನ್ ಸೀರೀಸ್ 25ಲೀ ವಾಟರ್ ಹೀಟರ್

ಹೆಚ್ಚಿನ ಸಾಮರ್ಥ್ಯದ ನಿಮ್ಮ ಆಧುನಿಕ ಬಾತ್‌ರೂಂಅನ್ನು ಇನ್ನಷ್ಟು ಮಾಡರ್ನ್‌ ಆಗಿ ಕಾಣುವಂತೆ ಮಾಡಬೇಕೆಂದರೆ ಅತ್ಯುತ್ತಮ ಗುಣಮಟ್ಟದ ದೀರ್ಘಕಾಲ ಬಾಳಿಕೆ ಬರುವ, ನೀರು ಬೇಗನೆ ಬಿಸಿಯಾಗುವ ವಾಟರ್‌ ಹೀಟರ್‌ ಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ AO ಸ್ಮಿತ್‌ SDS-ಗ್ರೀನ್ ಸೀರೀಸ್ 25ಲೀ ವಾಟರ್ ಹೀಟರ್ ತಯಾರಿಸಿದೆ ನೋಡಿ. 2X ತುಕ್ಕು ನಿರೋಧಕತೆಗಾಗಿ ನೀಲಿ ಡೈಮಂಡ್ ಗ್ಲಾಸ್-ಲೇನ್ಡ್ ಟ್ಯಾಂಕ್ ಹೊಂದಿರುವ ಈ ಗೀಸರ್‌ನ ಟ್ಯಾಂಕ್‌ ಏಳು ವರ್ಷಗಳ ವಾರಂಟಿಯನ್ನೂ ಹೊಂದಿದೆ. ಇದರ ನೀರಿನ ಶೇಕರಣಾ ಸಾಮರ್ಥ್ಯ 25ಲೀ ಆಗಿದ್ದು ನಿಮ್ಮ ಫ್ಯಾಮಿಲಿಗಾಗಿ ಇದು ಬೆಸ್ಟ್ ಅಯ್ಕೆಯಾಗಬಹುದು. ಇದರ ಬೆಲೆ 16,200 ಆಗಿದ್ದು ಶೇ 35ರಷ್ಟು ಡಿಸ್ಕೌಂಟ್‌ನೊಂದಿಗೆ 10,599ರೂ ಗೆ ಅಮೆಜಾನ್‌ನಲ್ಲಿ ದೊರೆಯುತ್ತಿದೆ.

ಬ್ರ್ಯಾಂಡ್: AO Smith
ಸಾಮರ್ಥ್ಯ: 25ಲೀಟರ್‌
ಐಟಂನ ಆಯಾಮಗಳು: L 44.4 x W 44.4 x H 38.3 ಸೆಂಟಿಮೀಟರ್‌ಗಳು
ಬಣ್ಣ: ಬಿಳಿ
ವ್ಯಾಟೇಜ್: 2000 ವ್ಯಾಟ್ಸ್
https://amzn.to/3T1xNIs

9. BLOWHOT 6L ಎಲೆಕ್ಟ್ರಿಕ್ ವಾಟರ್ ಹೀಟರ್

ನಿಮ್ಮ ಅಲ್ಟ್ರಾ ಮಾಡರ್ನ್‌ ಮನೆಗಾಗಿ ಡಿಜಿಟಲ್‌ ಡಿಸ್‌ಪ್ಲೇ, ಆಂಟಿ ರಸ್ಟ್‌ ಗ್ಲಾಸ್‌ ಲೈನ್‌ ಟ್ಯಾಂಕ್‌ ಇರುವ ಅಡ್ವಾನ್ಸ್‌ಡ್‌ ಸೇಫ್ಟಿ ಫೀಚರ್ಸ್‌ ಇರುವ ವಾಟರ್‌ ಹೀಟರ್‌ BLOWHOT ಬ್ರ್ಯಾಂಡ್‌ನಲ್ಲಿದೆ. ಆರು ಲೀಟರ್‌ ಸಾಮರ್ಥ್ಯವಿರುವ ಈ ವಾಟರ್‌ ಹೀಟರ್‌ನ ಟ್ಯಾಂಕ್‌ ಮೇಲೆ 5ವರ್ಷಗಳ ವಾರಂಟಿ ಜೊತೆಗೆ ಒಂದು ವರ್ಷಗಳ ವಾರಂಟಿ ಪ್ರಾಡಕ್ಟ್‌ ಮೇಲೆ ಇದೆ. ದೀರ್ಘಕಾಲದವರೆಗೂ ತಾಪಮಾನ ಹಿಡಿದಿಟ್ಟುಕೊಳ್ಳುವ. ಗಡಸು ನೀರಿನ ವಿರುದ್ಧ ರಕ್ಷಣೆ ನೀಡುವ ಈ ವಾಟರ್‌ ಹೀಟರ್‌ ಸ್ವಯಂ ಕಟ್-ಆಫ್ ಸುರಕ್ಷತಾ ಕಾರ್ಯವನ್ನು ಹೊಂದಿದೆ. ಹಾಗಾಗಿ ಇದನ್ನು ಅತ್ಯಂತ ಸೇಫ್‌ ಎಂದೂ ಹೇಳಬಹುದು. ಇದರ ಬೆಲೆ 8,990ಆಗಿದ್ದು ಶೇ 33ರಷ್ಟು ರಿಯಾಯಿತಿಯೊಂದಿಗೆ ಕೇವಲ 6000 ರೂ ಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬ್ರ್ಯಾಂಡ್: BLOWHOT
ಸಾಮರ್ಥ್ಯ 6 ಲೀ
ವಿದ್ಯುತ್ ಮೂಲ: ತಂತಿಸಹಿತ ವಿದ್ಯುತ್
ಐಟಂನ ಆಯಾಮಗಳು: L 27 x W 24 x H 28 ಸೆಂಟಿಮೀಟರ್‌ಗಳು
ಬಣ್ಣ: ಬೂದು

10. ಕ್ರಾಂಪ್ಟನ್‌ ಸೋಲಾರಿಯಮ್ ನಿಯೋ 10ಲೀ ವಾಟರ್ ಹೀಟರ್

ಕ್ರಾಂಪ್ಟನ್‌ ಬ್ರ್ಯಾಂಡ್‌ನ ವಾಟರ್‌ ಹೀಟರ್‌ ನೀವು ಹುಡುಕುತ್ತಿದ್ದಲ್ಲಿ ಇದೇ ಬ್ರ್ಯಾಂಡ್‌ನಲ್ಲಿ ಇನ್ನೊಂದು ಬೆಸ್ಟ್‌ ಆಯ್ಕೆಯ ವಾಟರ್‌ ಹೀಟರ್ ಇದೆ.ಅದುವೇ ಸೋಲಾರಿಯಮ್ ನಿಯೋ 10ಲೀ ವಾಟರ್ ಹೀಟರ್.ಸುಧಾರಿತ 3 ಮಟ್ಟದ ಸುರಕ್ಷತೆ ಹೊಂದಿರುವ ಇದು 5ಸ್ಟಾರ್‌ ರೇಟಿಂಗ್‌ ಕೂಡಾ ಹೊಂದಿದೆ. ತುಕ್ಕು ನಿರೋಧಕ ABS ಹೊರಕವಚ ಹೊಂದಿರುವ ಇದು ದೀರ್ಘಕಾಲ ಬಾಳಿಕೆಯೂ ಬರುತ್ತದೆ. ಈ ವಾಟರ್‌ ಹೀಟರ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೆಗ್ನೀಸಿಯಮ್ ಆನೋಡ್‌ ಅಳವಡಿಸಲಾಗಿದ್ದು, ಇದು ಗಡಸು ನೀರಿನಿಂದಾಗಿ ತುಕ್ಕು ಹಿಡಿಯುವುದನ್ನು ತಡೆಯುತ್ತದೆ. ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಕ್ಯಾಪಿಲ್ಲರಿ ಥರ್ಮೋಸ್ಟಾಟ್, ಸ್ವಯಂಚಾಲಿತ ಥರ್ಮಲ್ ಕಟ್ ಔಟ್ ಮತ್ತು ಬಹು-ಕ್ರಿಯಾತ್ಮಕ ವಾಲ್ವ್ ಕೂಡಾ ಇದು ಹೊಂದಿದೆ. ಇದರ ಬೆಲೆ 12,500 ಆಗಿದ್ದು ಅಮೆಜಾನ್‌ನಲ್ಲಿ 42ರಷ್ಟು ಡಿಸ್ಕೌಂಟ್‌ನಲ್ಲಿ ಕೇವಲ 7,239 ರೂ ಗೆ ಈ ಗೀಸರ್‌ ದೊರೆಯುತ್ತದೆ.

ಬ್ರ್ಯಾಂಡ್: Crompton
ಸಾಮರ್ಥ್ಯ: 10 ಲೀಟರ್‌
ಐಟಂನ ಆಯಾಮಗಳು: L 29 x W 31 x H46 ಸೆಂಟಿಮೀಟರ್‌ಗಳು
ಬಣ್ಣ: ಬಿಳಿ
ವ್ಯಾಟೇಜ್ 2000 ವ್ಯಾಟ್ಸ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion